Ravi Belagere
Welcome to my website
ಕೆಲಸಕ್ಕೆ ಬಾರದ ವಿಗ್ರಹ, ವಾಲ್‌ಕ್ಲಾಕು, ಫ್ಲವರ್‌ವಾಸು, ಫೊಟೋ ಫ್ರೇಮು, ಬೊಕೆ ಇತ್ಯಾದಿಗಳಿಗಿಂತ “ಉಡುಗೊರೆ"ಯಂತಹ ಅರ್ಥ ಪೂರ್ಣ ಪುಸ್ತಕ ಕೊಟ್ಟರೆ ಮರುದಿನ ನೂತನ ದಂಪತಿಗಳು ಎಷ್ಟು ಖುಷಿಯಿಂದ ಪುಟ ತಿರುವುತ್ತಾರಲ್ಲವಾ? ಆ ಪುಸ್ತಕ ಅವರೊಂದಿಗೆ ಬಹುಕಾಲ ಇರುತ್ತದೆ. ಎಲ್ಲಿಂದಲಾದರೂ ಓದಲಾರಂಭಿಸಿ, ಎಲ್ಲಿಗೆ ಬೇಕಾದರೂ ಮುಗಿಸಿ ಮುಚ್ಚಿಡಬಲ್ಲ, ಬದುಕಿನ ಸಾರ ಅರಿಯಲು ನೆರವಾ ಗುವಂಥ ಪುಸ್ತಕ. ನಿಮ್ಮ ಗೆಳೆಯರ‍್ಯಾರಾದರೂ ಮದುವೆಯಾಗುತ್ತಿದ್ದರೆ, ಅವರಿಗೆ ಏನು ಕೊಡಲಿ ಅಂತ ತಡಕಾಡ ಬೇಡಿ. ‘ಉಡುಗೊರೆ’ ಪುಸ್ತಕ ನಿಮ್ಮೂರಿ ನಲ್ಲೂ ಸಿಗುತ್ತದೆ.
Home About Us Gallery Books Feedback Prarthana Contact Us

About Ravi Belagere

ಹೆಸರು ರವಿ ಬೆಳಗೆರೆ. ವಯಸ್ಸು, ಈಗಷ್ಟೆ ಐವತ್ನಾಲ್ಕು. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದೇನೆ. ಪತ್ರಿಕೋದ್ಯಮ ನನ್ನ ಹೊಟ್ಟೆ ತುಂಬಿಸುತ್ತಿದೆ. `ಪ್ರಾರ್ಥನಾ` ನಾನು ಕಟ್ಟಿದ ಶಾಲೆ. ಎರಡು ಬಾರಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಬಂದಿವೆ.

ಹಿರಿಯರಾದ ಶಿವರಾಮ ಕಾರಂತರ ಹೆಸರಿನ ಎರಡು ಪ್ರಶಸ್ತಿಗಳನ್ನು ಪಡೆದಿದ್ದೇನೆ. ಕರ್ನಾಟಕ ಮಾಧ್ಯಮ ಅಕಾಡೆಮಿಯವರು ಪತ್ರಿಕೋದ್ಯಮದಲ್ಲಿ ನಾನು ಮಾಡಿದ್ದು ಸಾಧನೆ ಅಂದುಕೊಂಡು ಪ್ರಶಸ್ತಿ ನೀಡಿದ್ದಾರೆ. ಅಂತೆಯೇ ರಾಜ್ಯ ಸರ್ಕಾರ ನನಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಓದು, ತಿರುಗಾಟ ನನ್ನ ಹವ್ಯಾಸಗಳು. ಬರವಣಿಗೆ ನನ್ನ ಆತ್ಮ ಸಮಾಧಾನದ ಸಂಗತಿ. ಎಡಪಂಥೀಯ ವಿಚಾರಧಾರೆ ನನ್ನನ್ನು ಆಕರ್ಷಿಸಿದೆ. ಚಳವಳಿಗಳಿಂದ ನಿರಾಶನಾಗಿ ದೂರ ಸರಿದಿದ್ದೇನೆ. ಪ್ರತಿಭಟನೆಗೆ ಬೇರೆ ವಿಧಾನಗಳೂ ಇವೆ ಎಂಬ ನಂಬಿಕೆ ಉಳಿದುಕೊಂಡಿದೆ, ನಲವತ್ತು ವರ್ಷದಿಂದ ನನ್ನೊಂದಿಗೆ ಸಿಗರೇಟು ಉಳಿದುಕೊಂಡಂತೆ. ನನ್ನ ಬಗೆಗಿನ ಉಳಿದ ವಿವರಗಳು ಅಂಥ ಕುತೂಹಲಕಾರಿಯಲ್ಲ.

ಇತ್ತೀಚೆಗಷ್ಟೇ ಗಾಂಧಿ ಬಜಾರಿನಲ್ಲಿ ಹೊಸದೊಂದು ಪುಸ್ತಕದ ಅಂಗಡಿ ಮಾಡಿದ್ದೇನೆ. ಅದರ ಹೆಸರು ’ಬೆಳಗೆರೆ ಬುಕ್ಸ್ ಅಂಡ್ ಕಾಫಿ’ (ಬಿಬಿಸಿ).

ನಾ ಬರೆದ ಪುಸ್ತಕಗಳು...

Books Category Year Rate
ದಾರಿ ಕಥಾ ಸಂಕಲನ 1980 7
ಅಗ್ನಿಕಾವ್ಯ ಕವನ ಸಂಕಲನ 1983 8
ಗೋಲಿಬಾರ್ ಕಾದಂಬರಿ 1983 5
ವಿವಾಹ ಅನುವಾದ 1983 40
ನಕ್ಷತ್ರ ಜಾರಿದಾಗ ಅನುವಾದ 1984  
ಅರ್ತಿ ಕಾದಂಬರಿ 1990  
ಪ್ಯಾಸಾ ಜೀವನ ಚರಿತ್ರೆ 1991  
ರಾಜೀವ್ ಹತ್ಯೆ ಏಕಾಯಿತು? ಹೇಗಾಯಿತು? ಇತಿಹಾಸ 1991  
ಪಾ.ವೆಂ. ಹೇಳಿದ ಕಥೆ ಕಥಾ ಸಂಕಲನ 1995 40
ಪಾಪಿಗಳ ಲೋಕದಲ್ಲಿ ಭಾಗ -1 ಭೂಗತ ಇತಿಹಾಸ 1995 200
ಮಾಂಡೋವಿ ಕಾದಂಬರಿ ಸೆಪ್ಟಂಬರ್ 1996 125
ಖಾಸ್‌ಬಾತ್ 96 ಜೀವನ ಕಥನ 1997 75
ಪಾಪಿಗಳ ಲೋಕದಲ್ಲಿ ಭಾಗ 2 ಭೂಗತ ಇತಿಹಾಸ ಸೆಪ್ಟಂಬರ್ 1997 75
ಖಾಸ್‌ಬಾತ್ 97 ಜೀವನ ಕಥನ ಸೆಪ್ಟಂಬರ್ 1997 100
ಖಾಸ್‌ಬಾತ್ 98 ಜೀವನ ಕಥನ ಸೆಪ್ಟಂಬರ್ 1998 100
ಲವ್‌ಲವಿಕೆ 1 ಪ್ರೇಮಾಂಕಣ ಡಿಸೆಂಬರ್ 1998 75
ಮಾಟಗಾತಿ ಕಾದಂಬರಿ 1998 175
ಮೈಸೂರಿನ ಸೀರಿಯಲ್ ಕಿಲ್ಲರ್ ರವೀಂದ್ರ ಪ್ರಸಾದ್ ಹತ್ಯಾಕಥನ 1998 60
ಒಮರ್ಟಾ ಕಾದಂಬರಿ ಜನವರಿ 1999 100
ಹಿಮಾಲಯನ್ ಬ್ಲಂಡರ್ ಅನುವಾದ ಸೆಪ್ಟಂಬರ್1999 125
ಕಾರ್ಗಿಲ್‌ನಲ್ಲಿ ಹದಿನೇಳು ದಿನ ಯುದ್ಧ ಕಥನ ಸೆಪ್ಟಂಬರ್ 1999 40
ಕಂಪನಿ ಆಫ್ ವಿಮೆನ್ ಅನುವಾದ ಜನವರಿ 2000 125
ಸರ್ಪ ಸಂಬಂಧ ಕಾದಂಬರಿ ಜೂನ್ 2000 175
ಸಂಜಯ ಜೀವನ ಕಥನ 2000 -
ಒಟ್ಟಾರೆ ಕಥೆಗಳು ಕಥಾ ಸಂಕಲನ 2001 75
ಟೈಂಪಾಸ್ ಅನುವಾದ ಜನವರಿ 2001 150
ಭೀಮಾ ತೀರದ ಹಂತಕರು ಭೂಗತ ಇತಿಹಾಸ ಮೇ 2001 150
ಕೇಳಿ ಅಂಕಣ ಸಂಗ್ರಹ ಜೂನ್ 2001 75
ಪಾಪದ ಹೂವು ಫೂಲನ್ ಜೀವನ ಚರಿತ್ರೆ ಆಗಸ್ಟ್2001 75
ಮುಸ್ಲಿಂ ಯುದ್ಧ ಕಥನ ಜನವರಿ 2002 125
ಬಾಟಮ್ ಐಟಮ್ ಭಾಗ 1 ಅಂಕಣ ಬರಹ ಫೆಬ್ರವರಿ 2002 100
ಇಂದಿರೆಯ ಮಗ ಸಂಜಯ ಜೀವನ ಕಥನ ಸೆಪ್ಟಂಬರ್ 2002 125
ರಾಜ ರಹಸ್ಯ ಅನುವಾದ ನವಂಬರ್ 2002 120
ಹೇಳಿ ಹೋಗು ಕಾರಣ ಕಾದಂಬರಿ ಸೆಪ್ಟಂಬರ್ 2003 150
ಗಾಂಧೀ ಹತ್ಯೆ ಮತ್ತು ಗೋಡ್ಸೆ ಜೀವನ ಕಥನ ಸೆಪ್ಟಂಬರ್ 2003 150
ನೀ ಹಿಂಗ ನೋಡಬ್ಯಾಡ ನನ್ನ ಕಾದಂಬರಿ ಸೆಪ್ಟಂಬರ್ 2003 160
ಖಾಸ್‌ಬಾತ್ 99 ಜೀವನ ಕಥನ ಅಕ್ಟೋಬರ್ 2003 125
ಖಾಸ್‌ಬಾತ್ 2000 ಜೀವನ ಕಥನ ಅಕ್ಟೋಬರ್ 2003 125
ಬಾಟಮ್ ಐಟಮ್ 2 ಅಂಕಣ ಬರಹ ಅಕ್ಟೋಬರ್2003 125
ಲವ್‌ಲವಿಕೆ ಭಾಗ 2 ಪ್ರೇಮಾಂಕಣ ಸೆಪ್ಟಂಬರ್ 2004 100
ಗಾಡ್‌ಫಾದರ್ ಅನುವಾದ ಮಾರ್ಚ್ 2005 150
ಬ್ಲ್ಯಾಕ್ ಫ್ರೈಡೆ ಅನುವಾದ ಆಗಸ್ಟ್ 2005 125
ಪಾಪಿಗಳ ಲೋಕದಲ್ಲಿ ಭೂಗತ ಇತಿಹಾಸ 2005 200
ಬಾಟಮ್ ಐಟಮ್ ಭಾಗ 3 ಅಂಕಣ ಬರಹ ಡಿಸೆಂಬರ್ 2006 125
ಡಯಾನಾ ಜೀವನ ಕಥನ ಜನವರಿ 2007 75
ಹಂತಕಿ ಐ ಲವ್ ಯೂ ಅನುವಾದ ಜನವರಿ 2007 75
ಬಾಬಾ ಬೆಡ್‌ರೂಂ ಹತ್ಯಾಕಾಂಡ ತನಿಖಾ ವರದಿ ಜನವರಿ 2007 100
ಖಾಸ್‌ಬಾತ್ 2001 ಜೀವನ ಕಥನ ಜನವರಿ 2007 125
ರೇಷ್ಮೆ ರುಮಾಲು ಅನುವಾದ ಆಗಸ್ಟ್ 2007 150
ಖಾಸ್‌ಬಾತ್ 2002 ಜೀವನ ಕಥನ ಜನವರಿ 2008 125
ಚಲಂ ಜೀವನ ಕಥನ ಅನುವಾದ ಮಾರ್ಚ್ 2008 100
ದಂಗೆಯ ದಿನಗಳು ಅನುವಾದ ಮಾರ್ಚ್ 2008 150
ಮನಸೇ ಆಡಿಯೋ ಸಿಡಿ ಜನವರಿ 2007 50
ಡಿ ಕಂಪನಿ ಭೂಗತ ಇತಿಹಾಸ ಅಕ್ಟೋಬರ್ 2008 250
ನೀನಾ ಪಾಕಿಸ್ತಾನ ಯುದ್ಧ ಜನವರಿ 2009 150
ಅವನೊಬ್ಬನಿದ್ದ ಗೋಡ್ಸೆ ಇತಿಹಾಸ ಮಾರ್ಚ್ 2009 150
ಮೇಜರ್ ಸಂದೀಪ್ ಹತ್ಯೆ ಯುದ್ಧ ಮಾರ್ಚ್ 2009 125
ಲವಲವಿಕೆ -3ಪ್ರೇಮಾಂಕಣ ಮಾರ್ಚ್ 2009 125
ಬಾಟಂ ಐಟಮ್ 4 ಅಂಕಣ ಬರಹ ಮಾರ್ಚ್ 2009 150
ಫಸ್ಟ್ ಹಾಫ್- ಮಾರ್ಚ್ 2009 500
ಕಾಮರಾಜ ಮಾರ್ಗ ಕಾದಂಬರಿ ನವೆಂಬರ್ 2010 250
ಅನಿಲ್ ಲಾಡ್ ಮತ್ತು ನಲವತ್ತು ಕಳ್ಳರು ಕಾದಂಬರಿ ಅಕ್ಟೋಬರ್ 2010 100
ಬಾಟಂ ಐಟಮ್ 5 ಅಂಕಣ ಬರಹ ಮಾರ್ಚ್ 2011 150
ಲವಲವಿಕೆ -4ಪ್ರೇಮಾಂಕಣ ಮಾರ್ಚ್ 2011 150
ಖಾಸ್‌ಬಾತ್ 2003 ಜೀವನ ಕಥನ ಮಾರ್ಚ್ 2011 125
ಖಾಸ್‍ಬಾತ್ 2004 ಜೀವನ ಕಥನ ಡಿಸೆಂಬರ್ 2011 150
ಬಾಟಂ ಐಟಮ್ 6 ಅಂಕಣ ಬರಹ ಡಿಸೆಂಬರ್ 2011 150
ಕನಸೇ ಆಡಿಯೋ ಸಿಡಿ ಜನವರಿ 2012 60
ಉಡುಗೊರೆ ಆಯ್ದ ಬರಹ ಫೆಬ್ರವರಿ 2012 250
ಹಿಮಾಗ್ನಿ ಕಾದಂಬರಿ ಫೆಬ್ರವರಿ 2012 350
ಒಲವೇ ಆಡಿಯೋ ಸಿಡಿ ಫೆಬ್ರವರಿ 2012 60
ಅಮ್ಮ ಸಿಕ್ಕಿದ್ಲು ಕಾದಂಬರಿ ಫೆಬ್ರವರಿ 2012 100
ಕಲ್ಪನಾ ವಿಲಾಸ ಜೀವನ ಕಥನ   100
ಖಾಸ್‍ಬಾತ್ 2005 ಜೀವನ ಕಥನ ಜುಲೈ 2012 150
ರಂಗವಿಲಾಸ ಬಂಗಲೆಯ ಕೊಲೆಗಳು ಅಪರಾದ ಲೋಕ ಜುಲೈ 2012 100
ಇದು ಜೀವ ಇದುವೇ ಜೀವನ ಜೀವನ ಕಥನ ಸೆಪ್ಟಂಬರ್ 2012 250
ಪ್ರಮೋದ್ ಮಹಾಜನ್ ಹತ್ಯೆ ಅನುವಾದ ಅಕ್ಟೋಬರ್ 2012 125
ಏನಾಯ್ತು ಮಗಳೇ ಜೀವನ ಕಥನ ಡಿಸೆಂಬರ್ 2013 100

ಪ್ರಶಸ್ತಿಗಳು

  • 1984 ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿವಾಹ (ಸೃಜನೇತರ)
  • 1990 ಮಾಸ್ತಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ವಂಧ್ಯ (ಕತೆ)
  • 1997 ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಾ.ವೆಂ. ಹೇಳಿದ ಕತೆ (ಸಣ್ಣ ಕತೆ)
  • 2004 ಶಿವರಾಮ ಕಾರಂತ ಪುರಸ್ಕಾರ ನೀ ಹಿಂಗ ನೋಡಬ್ಯಾಡ ನನ್ನ (ಕಾದಂಬರಿ)
  • 2005 ಕಂಪ್ಯೂಟರ್ ಎಕ್ಸಲೆನ್ಸಿ ಅವಾರ್ಡ್ ಪ್ರಾರ್ಥನಾ ಶಾಲೆ (ಕೇಂದ್ರ ಸರ್ಕಾರ)
  • 2008 ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಜೀವಮಾನದ ಸಾಧನೆ
  • 2010 ರಾಜ್ಯೋತ್ಸವ ಪ್ರಶಸ್ತಿ
  • 2011 ಕೆಂಪೇಗೌಡ ಪ್ರಶಸ್ತಿ
Kaamaraja Maarga Book
See for all books
TV Shows
 
Books & Coffee
 
Prathana School Prathana School
Photo Gallery
Photo Gallery

© Ravi Belagere.

My Books