Ravi Belagere
Welcome to my website
ಪದ್ಮನಾಭ ನಗರದ ಬಸ್ ಸ್ಟಾಪ್ ಬಳಿ ವಾಜಪೇಯಿ ಬಯಲು ಸಭಾಂಗಣ ಇದೆ. ೨೫ ಡಿಸೆಂಬರ್ ೨೦೧೬ ರಂದು ಸಂಜೆ ೬ ಗಂಟೆಗೆ ಅಲ್ಲಿ ಸರ್ದಾರ ಭಗತ್ ಸಿಂಗ್ ಅವರ ಸಹೋದರನ ಮಗ ಸರ್ದಾರಪೊಫೆಸರ್ ಚಮನ್ಲಾಲ್ ಸಿಂಗ್ ಅವರ ಭಾಷಣ ಇದೆ. ಅದೊಂದು ಮಹತ್ತರ, ಅವಿಸ್ಮರಣೀಯ ಸಮಾರಂಭವಾಗಲಿದೆ. ಅದೇ ಸಂದರ್ಭದಲ್ಲಿ ತುಂಬಾ ನಿರೀಕ್ಷಿತ " ರಾಜ್ ಲೀಲಾ ವಿನೋದ" ಪುಸ್ತಕ ಬಿಡುಗಡೆಯಾಗಲಿದೆ. ಜೊತೆಗೆ ಒಂದಷ್ಟು ಕೃತಿಗಳು ಬಿಡುಗಡೆಯಾಗಲಿವೆ. ಓದುಗರಿಗೆ, ಕೇಳುಗರಿಗೆ ಹಬ್ಬ. ಪ್ಲೀಸ್ ಬನ್ನಿ.
Home About Us Gallery Books Feedback Prarthana Contact Us
ಪುಣ್ಯವಂತ, ತುಂಗಾತೀರ
ಬಿಜೆಪಿಯ ಟ್ರಾನ್ಸ್ ಫಾರ್ಮರ್ರೇ ಸರಿಯಿಲ್ಲ ಅಂತಾವ್ರೆ ಶೋಭಕ್ಕ?
ಕೀಲಿ ಕೈ ತಮ್ಮ ಸೊಂಟದಲ್ಲಿದ್ದುದನ್ನು ಅವರು ಮರೆತಿದ್ರಂತೆ.


ಆರ್ಟಿಸ್ಟ್ ಮೋಹನ್, ಹಾಸನ
ಹರುಷದ ಕೂಳಿಗಾಗಿ ವರುಷದ ಕೂಳು ಕಳೆದುಕೊಂಡವರೂ ಇದ್ದಾರಾ?
ನನ್ನ ವಿರುದ್ಧ ವಿನಾಕಾರಣ ಕತ್ತಿ ಮಸೆದು ಏನಾದ ಅಂತ ಗೊತ್ತೇ ಇದೆಯಲ್ಲಾ ಗೆಳೆಯಾ.


ರಾಮು ಮಲ್ಲಿಕಟ್ಟೆ, ಕೋಣಂದೂರು
ಹುಡುಗಿಯರಂತೆ ಹುಡುಗರೂ ಸುಳ್ಳು ಹೇಳ್ತಾರಲ್ಲಾ?
ವರಾಹಮುಖಿಯ ಮಾತು ಕೇಳಿದ ನಂತರ ಸಹವಾಸ ದೋಷ ಅಂತಿದ್ರು.


ಪಾಪಿ, ತೀರ್ಥಹಳ್ಳಿ
ಜಗ್ಗೇಶ್ ‘ನೀರ್‌ದೋಸೆ’ ಅಂದ್ರೆ ಸಾಧು ‘ಮಸಾಲೆ ದೋಸೆ’ ಅಂದ್ನಂತೆ!
ಇಬ್ಬರ ಕಾಟದಿಂದ ಬೇಸತ್ತ ರಮ್ಯಾ ‘ನಿಮ್ ಯಾಸಕ್ ನನ್ ದೋಸೆ ಉಯ್ಯಾ’ ಅಂದುಬಿಡೋದೆ!


ನಾಗು, ಹೇಮಾವತಿ ಡ್ಯಾಂ
ಮಾತು ಮಾತಿಗೂ ‘ಹಮ್ ಆಪ್ ಕೆ ಹೈ ಕೌನ್’ ಅಂತ ಕೆಣಕ್ತಿದ್ದಾಳೆ?
ಅದಕ್ಕೇ ‘ಜಾನಿ ಮೇರಾ ನಾಮ್’ ಎಂದವನು ಮೋರಿಯೊಳಗೆ ಜಾರಿ ಬಿದ್ದು ಗಲೀಜುಗೊಂಡಿದ್ದು.


ಮೆಡಿಕಲ್ ಚಂದ್ರು, ತುಮಕೂರು
ನೀನು ಖಡ್ಗ ಹಿಡಿದರೆ ಸಂಗೊಳ್ಳಿ ರಾಯಣ್ಣನಂತೆ ಕಾಣ್ತೀಯಂತೆ?
ಅರವತ್ತು ತುಂಬಿಲ್ಲ, ಹಾಗಾಗಿ ಹುತಾತ್ಮನಾಗುವ ಬಯಕೆ ಇಲ್ಲ ಚಂದ್ರಣ್ಣ.


ಶ್ರೀಧರ್ ಡಿ. ರಾಮಚಂದ್ರಪ್ಪ, ತುರುವನೂರು
ಮಹಾಕಾವ್ಯಗಳ ಕುರಿತು ನಾಸ್ತಿಕರಾದ ನಿಮ್ಮ ಅಭಿಪ್ರಾಯ?
ಕಾವ್ಯವೆಂಬುದು ಅಲಂಕಾರಗಳಿಂದ ಕಟ್ಟಿದ ನುಡಿಹಾರವೆಂಬುವುದಷ್ಟೇ ನನ್ನ ನಿಲುವು.


ದೀಪಕ್ ಅಸೋದೆ, ಚಿಂಚಲಿ ಸ್ಟೇಷನ್
ಕೇಳಿ ಅಂಕಣಕ್ಕೆ ಮಠಾಧೀಶರು ಪತ್ರ ಬರೆದಿದ್ದಾರಾ?
ಕಾಳೀ ಸ್ವಾಮಿಯ ‘ಕೇಳಿ’ ಚರಿತ್ರೆ ಬಯಲಾದ ಮೇಲೆ ಎಲ್ಲರೂ ಹೆದರಿದ್ದಾರೆ.


ನಾಗ್ ಗುತ್ತೇದಾರ್, ದೋರನಹಳ್ಳಿ
ರವಿ ಕಾಣದನ್ನ ಕವಿ ಕಾಣ್ತಾನೆ, ಕವಿ ಕಾಣದನ್ನ ಕುಡುಕ ಕಾಣ್ತಾನೆ, ಕುಡುಕ ಕಾಣದ್ದನ್ನ?
ಕಾವಿಯುಟ್ಟು ಭಂಗಿ ಎಳೆಯುವ ವರಹಾಮುಖಿ ಕಾಣ್ತಾನೆ ಅಂತಿದ್ರು ಗಾಂಧಿನಗರದ ಮಂದಿ.


ನೇತ್ರಾವತಿ, ಶಿವಮೊಗ್ಗ
ಈ ಪಾಪಿ ದುನಿಯಾದಲ್ಲಿ ಕಡೆಗೆ ಎರಡು ಟೊಮ್ಯಾಟೋ ಮಾತ್ರ ಉಳಿಯಿತಲ್ಲ?
ಆದರೆ ಕಿಸೆಯಲ್ಲಿರುವುದು ಕೊಳೆತ ಟೊಮ್ಯಾಟೋ ಅಂತ ಅವನಿಗೆ ಗೊತ್ತಿರಲೇ ಇಲ್ಲ.


1 | 2 | 3 | 4 | 5 | 6 | 7 | 8 | 9 | 10 | 11 | .. 38 | Next
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books