Ravi Belagere
Welcome to my website
ಲೀಲಾವತಿಯವರ ಬಾಯಿಂದಲೇ ಕೇಳಿಕೊಂಡು, ಅವರ ಈ ‘ಜೀವನ ಕಥನ’ ’ರಾಜ್ ಲೀಲಾ ವಿನೋದ’ ಬರೆದಿದ್ದೇನೆ. ಇದರಲ್ಲಿ ಒಂದಕ್ಷರ ಸುಳ್ಳಿಲ್ಲ. ಇದು ರಾಜಕುಮಾರ್, ಪಾರ್ವತಮ್ಮ ಅವರ ಬಗ್ಗೆ ಏನೇನೊ negative ಅಂಶಗಳಿರುವ ಪುಸ್ತಕವಲ್ಲ. It is not against him. ಆ ಕಾಲದ ಘಟನೆಗಳೇನಿವೆ-ಅವು ಮಾತ್ರ ಇಲ್ಲಿವೆ.
ಇದನ್ನು ಓದುವ ನೀವು ನನಗೊಂದು mail ಕಳಿಸಿದರೆ ಸಾಕು. ಅಭಿಪ್ರಾಯ ಸ್ಪಷ್ಟವಾಗಿರಲಿ. 
belagereravi@gmail.comಗೆ ನೀವು ಅಭಿಪ್ರಾಯ ಕಳಿಸಿ. ಎಂದಿನಂತೆ ಓದುಗ ದೊರೆಗೆ ನಮಸ್ಕಾರಗಳು.
Home About Us Gallery Books Feedback Prarthana Contact Us
ರವೀಂದ್ರನಾಥ ಶಿ.ಯಡಹಳ್ಳಿ, ಬೀಳಗಿ
ಸಾವಿರ ದಾರಿಗೂ; ಸಾವಿರ ಮೆಟ್ಟಿಲಿಗೂ ವ್ಯತ್ಯಾಸ?
ದಾರಿಯಲ್ಲಿ ಸಾಗಿದರೆ ಜೀವನ ಸಲೀಸು ; ಮೆಟ್ಟಿಲು ಹತ್ತಿದರೆ ಏದುಸಿರು ನಿಕ್ಕಿ.


ನಾಗು, ಹೇಮಾವತಿ ಡ್ಯಾಂ
ಛೇ! ಮಲಗೋ ಜಾಗ ಬದಲಿಸಿದ್ರೂ ಕನಸಿಗೆ ಅವಳೇ ಬರ‍್ತಾಳೆ?
ಕಟ್ಟಿಕೊಂಡ ಮೇಲೆ ಅನುಭವಿಸಲೇ ಬೇಕೆಂಬುದು ಹಿರಿಯರ ಮಾತು!


ಆರ್ಟಿಸ್ಟ್ ಮೋಹನ್, ಹಾಸನ
ಪ್ರಮಾಣ ಕಡಿಮೆಯಾದಷ್ಟೂ ನಾವು ಪರಿಪೂರ್ಣರಾಗ್ತೀವಾ?
ಪರಿಪೂರ್ಣನಾಗಲು ನೀನು ಮಹಾವೀರನಂತೆ ನಿರ್ವಾಣವಾಗಬೇಕು.


ಹರಳಹಳ್ಳಿ ಪುಟ್ಟರಾಜು; ಪಾಂಡವಪುರ
ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ಯಡ್ಡಿಗೆ ನಿಮ್ಮ ಕಿವಿ ಮಾತು?
ಮಾತು ಕೇಳದಂತೆ ಅವರ ಕಿವಿಗಾಗಲೇ ಕಾಂಗ್ರೆಸ್ ‘ಸೀಸ’ ತುಂಬಿಯಾಗಿದೆ.


ಎನ್.ಸೀತಾರಾಮ್‌ಕುಮಾರ್, 9738600728
ಅಣ್ಣನ ಬರ್ತ್‌ಡೇಗೆ ಹೋಗ್ತೀನಿ ಅಂತ ಐಶೂ ಹಟ ಹಿಡಿದಿದ್ದಾಳಂತೆ?
ಶ್! ಹಳೆಯ ಗೆಳೆಯನ ಬರ್ತ್‌ಡೇ ಅಂದಿದ್ದು! ಸರಿಯಾಗಿ ವಿಚಾರಿಸು.


ವೇದಾವತಿ ಬಿ.ಎಸ್, ಅಮೃತಹಳ್ಳಿ
ವರಾನ್ವೇಷಣೆಯನ್ನು ಟೆಂಡರ್ ಮೂಲಕವೂ ಮಾಡಬಹುದಾ?
ಮೊಹರು ಹೊಡೆದರೆ ಡಬ್ಬಿ ತುಂಬಾ ವರಾಹರೂಪಿಯ ಅರ್ಜಿಯೇ ಇದ್ದವಂತೆ.


ಕಲಾವಿದ, ಹಾಸನ
ಅವನೆಲ್ಲೋ ಇವಳಲ್ಲೇ ಯಾಕೆ ಈ ಥರ?
ಅವರಿಬ್ಬರದು ಬಿಡಿಸಲಾಗದ ಬೆಸುಗೆ; ಪಕ್ಕದಲ್ಲಿದ್ದರೇ ಇವರು ಶೋಭಾಯಮಾನ.


ಗೊರೂರು ನಾಗ, 9480783803
‘ಲವ್‌ಲವಿಕೆ’ಯಲ್ಲಿ ನವಿಲುಗರಿ ಇಟ್ಟು ಪ್ರಪೋಸ್ ಮಾಡಬಹುದಾ?
ನೆರಿಗೆ ಲಂಗದ ಹುಡುಗಿ ಸಿಕ್ಕರೆ ಟ್ರೈ ಮಾಡಿ ನೋಡು.


ಎಸ್.ಲಕ್ಷ್ಮೀನರಸಿಂಹ, ಚಾಮರಾಜನಗರ
ಯಡ್ಡಿ ಅರ್ಜುನನಾದರೆ, ಬಭ್ರುವಾಹನ ಯಾರಿರಬಹುದು?
ಹೊನ್ನಾಳಿ ಕಡೆಯಿಂದ “ಯಾರು ತಿಳಿಯರು ನಿನ್ನ..." ಹಾಡು ಕೇಳಿ ಬರ‍್ತಿತ್ತು.


ರಂಜಿತ್ ಎಸ್.ರಣಸಿಂಗೆ
ಅವನು ಮಾತು-ಮಾತಿಗೂ ಬದುಕು ಬಂಗಾರ, ನನ್ನವಳು ಸಿಂಗಾರ ಅಂತಿದ್ದ?
ಹಳೇ ಪೇಪರ್, ಹಳೇ ಪಾತ್ರೆ ಅಂತಾನೂ ಕೂಗ್ತಿದ್ದ.


1 | 2 | 3 | 4 | 5 | 6 | 7 | 8 | 9 | 10 | 11 | .. 38 | Next
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books