Ravi Belagere
Welcome to my website
ಆ ಮೇಷ್ಟ್ರು ನೆನಪಾದರೆ ನಿಮಗೂ ಹಾಗನ್ನಿಸುತ್ತಾ? ನನಗೆ ಮೇಷ್ಟ್ರುಗಳೆಂದರೆ ತುಂಬ ಪ್ರೀತಿ, ಭಯ, ಹಿಂಜರಿಕೆ. ಅವರನ್ನು ನೆನಪು ಮಾಡಿಕೊಂಡರೆ ಸಾಕು. ಅವರೆಲ್ಲಿದ್ದಾರೋ ಅಲ್ಲಿಗೇ ಹೋಗಿ ಕಾಲಿಗೆ ಬಿದ್ದು ನಮಸ್ಕರಿಸೋಣ ಅನ್ನಿಸುತ್ತದೆ. ಅಂಥ ಮೇಷ್ಟ್ರುಗಳು ಎಲ್ಲರಿಗೂ ಇದ್ದೇ ಇರುತ್ತಾರೆ. ಒಮ್ಮೆ ಹಾಗೆ ನೆನಪಿಸಿಕೊಂಡು ನಿಮ್ಮದೇ ಆದ ‘ದಿಲ್ ನೆ ಫಿರ್ ಯಾದ್ ಕಿಯಾ’ಗೆ ಬರೆಯುತ್ತೀರಾ? Emailನಲ್ಲಿ ಕಳುಹಿಸುವವರು [email protected] ಕಳುಹಿಸಿ. ಪ್ಲೀಸ್.
Home About Us Gallery Books Feedback Prarthana Contact Us
ಬಿ.ಎಂ.ಪರಶಿವಮೂರ್ತಿ, ಬೆಂಗಳೂರು - 40
ಹೆಣ್ಣು ಮಕ್ಕಳೇಕೆ ಕಣ್ಣಲ್ಲಿ ಬರೋದು ನೀರಲ್ಲ; ರಕ್ತ ಅಂತಾರೆ?
ಬಾರದ ಕಣ್ಣೀರ ಸುರಿಸಲು ಅವರು ಅನುಭವಿಸಿದ ಕಷ್ಟ ಅಂತಹುದು ಗೆಳೆಯಾ.


ಕಾಪ್ ವೆಂಕಟೇಶ್, ಬೆಂಗಳೂರು
ಗೌಡರಿಗೆ ಹಿಂದಿಯಲ್ಲಿ ಬೈಯ್ಯೋಕ್ಕೂ ಬರುತ್ತಂತೆ?
ಅದಕ್ಕೇ ಹಿಂದಿ ಟೀಚರ್ ಬಳಿ ಹೋದ ರೇವು ‘ಬಾಸ್ಟರ್ಡ್’ ಯಾವ ಸಂಧಿ ಅಂತ ಕೇಳಿದನಂತೆ.


ಬೇತಾಳ ರಾಜು, ಹೊಳೆನರಸೀಪುರ
ದೇವೆಗೌಡರು ಮೊನ್ನೆ ‘ಬಿಬಿಸಿ’ಗೆ ಬಂದಿದ್ದರಂತೆ?
ಹೊರಗೆ ಬಂದವರೇ ಬಂದಿದ್ದು ‘ಬೀಗತನ’ ಮಾಡುವುದಕ್ಕಲ್ಲಾ ಅಂತ ಸ್ಪಷ್ಟಪಡಿಸಿದ್ದಾರೆ.


ಗೊರೂರು ನಾಗ, 9880783803
‘ಕೇಳಿ’ಯಲ್ಲಿ ಕುಂಚ ಹಿಡಿದು ಬಣ್ಣ ತುಂಬುವ ಕಲಾವಿದರೂ ಇದ್ದಾರಲ್ವಾ?
ಮಂಚವೇರಿ ಕುಂಚಹಿಡಿದು ಕುಳಿತರೆ ಆಕೆ ಮಿಂಚುಳ್ಳಿಯಂತೆ ಮಾಯವಾಗಿರ‍್ತಾಳೆ.


ಎಂ.ಜಿ.ಆರ್., ಬಳ್ಳಾರಿ
ನಿನ್ನೆ ಪೋಸ್ಟ್ ಕಾರ್ಡ್ ಲವ್, ಇವತ್ತು ಸಿಮ್ ಕಾರ್ಡ್ ಲವ್, ನಾಳೆ?
ಕಾರ್ಡ್‌ಲೆಸ್ ಲವ್.


ಬಿ.ಚಂದ್ರೇಗೌಡ, ಬೆಂಗಳೂರು
ತ್ರಿಶಂಕು ಸ್ಥಿತಿ ಅಂದರೇನು?
ಬಸು ಬೊಮ್ಮಾಯಿ, ನಿರಾಣಿ, ನರ್ಸ್ ರೇಣುವನ್ನು ಕೇಳಿದರೆ ಥಟ್ಟ ಅಂತ ಉತ್ತರ ಕೊಡುತ್ತಾರೆ.


ಮಧು, ಹಾಸನ
ಉಕ್ಕಿ ಹರಿಯುವ ಪ್ರೀತಿಯನ್ನು ಹಿಡಿದು ನಿಲ್ಲಿಸುವುದು ಹೇಗೆ?
ಮೊದಲು ದಿಡ್ಡಿ ಬಾಗಿಲಿಗೆ ಹೋಗಿ ಒಡ್ಡು ಹಾಕುವುದನ್ನು ಕಲಿ ಮಾರಾಯ.


ಎಸ್.ಎಲ್.ಎನ್.ಸಿಂಹ, ಸಿಆರ್ ನಗರ
ಹೊರೆ ಹೊತ್ತು ಸುಸ್ತಾದ ಪೂಜಾ ಈಗ ಫ್ಯಾನ್ ಕೆಳಗೆ ನಿಂತಿರುವುದೇಕೆ?
ಉತ್ತರಹಳ್ಳಿಯಲ್ಲಿರುವ ಕರಡಿ ಮತ್ತೆಲ್ಲಿ ದಾಳಿ ಮಾಡುವುದೋ ಎಂಬ ಭಯದಿಂದ.


ವೇದಾವತಿ; ಅಮೃತಹಳ್ಳಿ
ನನ್ನ ಪ್ರಶ್ನೆಗೆ ಉತ್ತರಿಸಲು ದೇವೆಗೌಡರ ಮುಖ ಮಾಡ್ಕೋತಿಯಂತೆ?
ಪತ್ರದೊಳಗೆ ನೀನು ಚೆನ್ನಮ್ಮನ ಥರ ಕಂಡರೆ ನಾನೇನು ಮಾಡಲಿ.


ಬಿ.ಚಂದ್ರೇಗೌಡ, ಬೆಂಗಳೂರು
ಸತ್ಯಕ್ಕಿಂತ ಸುಳ್ಳೇ ಹೆಚ್ಚು ಆಕರ್ಷಕ ಯಾಕೆ?
ಅದು ಕ್ಷಣಿಕ; ಸತ್ಯವೇ ಎಂದೆಂದಿಗೂ ನಿತ್ಯ.


1 | 2 | 3 | 4 | 5 | 6 | 7 | 8 | 9 | 10 | 11 | .. 38 | Next
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books