Ravi Belagere
Welcome to my website
ಲೀಲಾವತಿಯವರ ಬಾಯಿಂದಲೇ ಕೇಳಿಕೊಂಡು, ಅವರ ಈ ‘ಜೀವನ ಕಥನ’ ’ರಾಜ್ ಲೀಲಾ ವಿನೋದ’ ಬರೆದಿದ್ದೇನೆ. ಇದರಲ್ಲಿ ಒಂದಕ್ಷರ ಸುಳ್ಳಿಲ್ಲ. ಇದು ರಾಜಕುಮಾರ್, ಪಾರ್ವತಮ್ಮ ಅವರ ಬಗ್ಗೆ ಏನೇನೊ negative ಅಂಶಗಳಿರುವ ಪುಸ್ತಕವಲ್ಲ. It is not against him. ಆ ಕಾಲದ ಘಟನೆಗಳೇನಿವೆ-ಅವು ಮಾತ್ರ ಇಲ್ಲಿವೆ.
ಇದನ್ನು ಓದುವ ನೀವು ನನಗೊಂದು mail ಕಳಿಸಿದರೆ ಸಾಕು. ಅಭಿಪ್ರಾಯ ಸ್ಪಷ್ಟವಾಗಿರಲಿ. 
[email protected] ನೀವು ಅಭಿಪ್ರಾಯ ಕಳಿಸಿ. ಎಂದಿನಂತೆ ಓದುಗ ದೊರೆಗೆ ನಮಸ್ಕಾರಗಳು.
Home About Us Gallery Books Feedback Prarthana Contact Us
ಶ್ರೀಧರ್ ಡಿ.ರಾಮಚಂದ್ರಪ್ಪ, ತುರುವನೂರು
ಬಡತನ ಮತ್ತು ಸೋಲು ಮನುಷ್ಯನನ್ನು ಪರಿಪಕ್ವಗೊಳಿಸುತ್ತದಾ?
ಪಕ್ವಗೊಂಡರೂ ದಕ್ಕಿದ ಗೆಲುವು ಅವನನ್ನು ಅಡ್ಡದಾರಿ ಹಿಡಿಸುವ ಸಂಭವವೇ ಹೆಚ್ಚಿದೆ.


ಜಿ.ಗುರುಮೂರ್ತಿ, ತುಂಗಾತೀರ
ಮುನಿಸುಗಳನ್ನು ಎಣಿಸಿ, ಗುಣಿಸಿ ಲೆಕ್ಕ ಹಾಕುತ್ತಾ ಕುಳಿತರೆ ಒಲವು ಚಿಗುರುತ್ತದಾ?
ಲೆಕ್ಕ ಮುಗಿಯುವುದರೊಳಗೆ ಅವನ ಬದುಕೇ ಚುಕ್ತಾ ಆಗಿರುತ್ತದೆ.


ಹನಿ, ಹಾಸನ
ವಿಧಾನಸೌಧದಲ್ಲೂ ಉಮಾಶ್ರೀ ಕಿಲ... ಕಿಲ... ಅಯ್ಯಯ್ಯಪ್ಪೋ ಅಂದುಬಿಟ್ಟರೆ ಶಾಸಕರ ಗತಿ ಏನು?
ಎನ್.ಎಸ್.ರಾವ್‌ನಂತೆ ಕೈಯಲ್ಲಿ ಬಾಟಲಿ ಹಿಡಿದು ಪಕ್ಕದಲ್ಲಿ ಉಪ್ಪಿನಕಾಯಿಯ ಪೊಟ್ಟಣವಿಟ್ಟುಕೊಂಡಿರುತ್ತಾರೆ.


ಹೊಸ ಗಿರಾಕಿ, 9060666020
ಚಂದ್ರುವಿನ ಔಷಧಿ ಸತ್ತವರನ್ನೂ ಬದುಕಿಸು ತ್ತಿದೆಯಂತೇ?
ಅದಕ್ಕೆ ಅವನ ಅಂಗಡಿಯ ಮುಂದೆ ಪ್ರೇತಾತ್ಮಗಳು ಕ್ಯೂ ನಿಂತು ನಮಗೂ ಔಷಧಿ ಕೊಡು ಎಂದು ಪೀಡಿಸುತ್ತಿವೆಯಂತೆ.


ಅಂಬುಜ, ಶೇಷಾದ್ರಿಪುರಂ
ಆಳುವವರು, ಆಡುವವರು, ಸಿನೆಮಾದವರು, ಎಲ್ಲ ಜೈಲಿಗೆ ಹೋದರೆ?
ನೋಡುವವರು ನಿಟ್ಟುಸಿರು ಬಿಟ್ಟು ಎದ್ದು ಬಂದಾರು.


ಎಸ್.ರಾವ್, ಬೆಂಗಳೂರು
ಶ್ರೀರಾಮ ಕಾಡಿಗೆ ಹೋಗುವ ಬದಲು ರೆಸಾರ್ಟ್‌ಗೆ ಹೋಗಿದ್ದಿದ್ದರೆ?
ಲಕ್ಷ್ಮಣ ಚೆಲ್ಲಪಲ್ಲಿ ಪಾರ್ಕಿನಲ್ಲಿ ಡಿಂಗ್‌ಡಾಂಗ್ ನಡೆಸುತ್ತಿದ್ದ.


ಸುರೇಶ್, ಆನೇಕಲ್
ಪ್ರೇಯಸಿಯರ ಕೊಲೆಗಳು ಹೆಚ್ಚಾಗಿ ಆಗುತ್ತಿವೆಯಲ್ಲ?
ಥತ್. ಅದರಲ್ಲೂ ಪ್ರಿಯಕರರು ಹಿಂದುಳಿದವರೇ.


ಅಭಿಷೇಕ್, ಬೆಂಗಳೂರು
ಸಿದ್ರಾಮಯ್ಯ ಆಗಾಗ ಕಣ್ಮರೆಯಾಗುತ್ತಾರಂತೆ? ಹೌದೆ?
ಈ ಸಲ ಕಣ್ಮರೆಯಾದರೆ ಸ್ವತಃ ಶ್ರೀಕೃಷ್ಣ ಪರಮಾತ್ಮನೂ ಹುಡುಕಿ ತರಲಾರ.


ಸೀತಾ, ಬೆಂಗಳೂರು
ಅನ್ನಕ್ಕೂ-ಆಹಾರಕ್ಕೂ ಏನು ವ್ಯತ್ಯಾಸ?
ಚಿತ್ರಾನ್ನಕ್ಕೂ, ಬಿರಿಯಾನಿಗೂ ವ್ಯತ್ಯಾಸ ಉಂಟೆ ಸೀತಾ?


ಎಸ್.ಶಿವಶಂಕರ, ಗಾಂಧಿನಗರ
ಸಿನೆಮಾ ಫೇಲ್ ಆದಾಗ ಪುನೀತ್ ರಾಜ್‌ಕುಮಾರ್ ಏನು ಮಾಡುತ್ತಾರೆ?.
ಹಾವಿನ ದ್ವೇಷ : ಇನ್ನೆರಡು ವರ್ಷ ಅಂತ ಹಾಡುತ್ತಾ ಅವರಪ್ಪನ ಸ್ಮರಣೆಯಲ್ಲಿ ತೊಡಗುತ್ತಾರೆ


1 | 2 | 3 | 4 | 5 | 6 | 7 | 8 | 9 | 10 | 11 | .. 38 | Next
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books