Ravi Belagere
Welcome to my website
ಪದ್ಮನಾಭ ನಗರದ ಬಸ್ ಸ್ಟಾಪ್ ಬಳಿ ವಾಜಪೇಯಿ ಬಯಲು ಸಭಾಂಗಣ ಇದೆ. ೨೫ ಡಿಸೆಂಬರ್ ೨೦೧೬ ರಂದು ಸಂಜೆ ೬ ಗಂಟೆಗೆ ಅಲ್ಲಿ ಸರ್ದಾರ ಭಗತ್ ಸಿಂಗ್ ಅವರ ಸಹೋದರನ ಮಗ ಸರ್ದಾರಪೊಫೆಸರ್ ಚಮನ್ಲಾಲ್ ಸಿಂಗ್ ಅವರ ಭಾಷಣ ಇದೆ. ಅದೊಂದು ಮಹತ್ತರ, ಅವಿಸ್ಮರಣೀಯ ಸಮಾರಂಭವಾಗಲಿದೆ. ಅದೇ ಸಂದರ್ಭದಲ್ಲಿ ತುಂಬಾ ನಿರೀಕ್ಷಿತ " ರಾಜ್ ಲೀಲಾ ವಿನೋದ" ಪುಸ್ತಕ ಬಿಡುಗಡೆಯಾಗಲಿದೆ. ಜೊತೆಗೆ ಒಂದಷ್ಟು ಕೃತಿಗಳು ಬಿಡುಗಡೆಯಾಗಲಿವೆ. ಓದುಗರಿಗೆ, ಕೇಳುಗರಿಗೆ ಹಬ್ಬ. ಪ್ಲೀಸ್ ಬನ್ನಿ.
Home About Us Gallery Books Feedback Prarthana Contact Us
ಎಸ್. ಲಕ್ಷ್ಮೀನರಸಿಂಹ, ಚಾಮರಾಜನಗರ
ನಿದ್ದೆ ಮಾಡುತ್ತಿದ್ದರೆ ಸಿದ್ದರಾಮಯ್ಯ ದೇವೆಗೌಡರಂತೆಯೇ ಕಾಣುತ್ತಾರೆ?
ಸಿದ್ದು ಸಿ.ಎಂ ಕುರ್ಚಿಗೆ ಬರುತ್ತಿದ್ದಂತೆ ಅಪ್ಪ ನಿದ್ದೆ ಮಾಡೋದನ್ನೇ ಬಿಟ್ಟಿದ್ದಾರೆ ಅಂತಿದ್ನಪ್ಪ ರೇವು.


ಮಂಚಾಲಿ ನೇಹ,ಬಳ್ಳಾರಿ
ತಾಳಕ್ಕೆ ತಕ್ಕಂತೆ ಕುಣಿಯುವವರು ಯಾರು ಸಾರ್?
ಆರ್‌ಎಸ್‌ಎಸ್ ತಾಳಕ್ಕೆ ಹೆಜ್ಜೆ ಹಾಕಿದ ಅಡ್ವಾಣಿಗಿಂತ ಬೇರೆ ಉದಾಹರಣೆ ಬೇಕೆ.


ವಂಡರ್‌ವೆಂಕಿ, 963235722
ಟೈಂಪಾಸ್ ಓದಿದ ಸಂಜನಾ ಅಬ್ಬಾ ಹೀಗೂ ಉಂಟೇ ಅಂದ್ಲಂತೆ?
ಆಕೆಯ ರೌಡಿ ಗೆಟಪ್ಪು ನೋಡಿದ ಗಾಂಧಿನಗರದವರು ಈಕೆ ಇರೋದೆ ಹೀಗೆ ಅಂತಿದ್ರಪ್ಪ.


ಶ್ರೀಧರ್ ಡಿ ರಾಮಚಂದ್ರಪ್ಪ, ತುರುವನೂರು
ಸಿದ್ದು ಮತ್ತೊಬ್ಬ ದೇವರಾಜ ಅರಸು ಅಗುತ್ತಾರಾ?
ಅರಸು ಆಗದಿದ್ದರೂ ಈಗ ಅರಸನಂತೂ ಆಗಿದ್ದಾರೆ.


ಕೆಂಕೆರೆ ಶಿವಶಂಕರ್, ಹುಳಿಯಾರು
ಕೇಳಿಯಲ್ಲಿ ಮೆಡಿಕಲ್ ಚಂದ್ರು ಕಾಣಿಸುತ್ತಲೇ ಇಲ್ಲ?
ಅದು ಬಹಿರಂಗವಾದರೆ ಮೈಮೇಲೆ ಕೇಸು ಬೀಳುವ ಹೆದರಿಕೆಯಿಂದ.


ಶಿಕ್ಷಕ ಪುಟ್ಟರಾಜು, ಪಾಂಡವಪುರ
ಈಚೀಚೆಗೆ ನಿನಗೆ ಸಾನಿಯಾ ಮತ್ತು ಐಶು ಮೇಲೆ ಪ್ರೀತಿ ಕಡಿಮೆಯಾಗಿರುವಂತಿದೆ?
ಇಬ್ಬರೂ ಕದ್ದು ಮುಚ್ಚಿ ನನ್ನ ಸಂಪರ್ಕದಲ್ಲಿರುವುದು ನಿನಗಿನ್ನು ಗೊತ್ತೇ ಆಗಿಲ್ವಾ.


ಮೆಡಿಕಲ್ ಚಂದ್ರು, ತುಮಕೂರು
ದಾಕ್ಷಿಣ್ಯಕ್ಕೆ ಬಸಿರೇ ಆಗಬೇಕಾ?
ಹಾಗಾದರೆ ಹೆರಿಗೆ ಕೊಂಚ ತ್ರಾಸು ಚಂದ್ರಣ್ಣ.


ಪಿ.ಎಸ್ ಮೂರ್ತಿ, ವಿಜಯನಗರ
ಗಂಡನಿಗೆ ಗಂಟು ತೋರಿಸಬಾರದಂತೆ ಏಕೆ?
ಗಂಟು ಸಿಕ್ಕರೆ ಕಟ್ಟಿಕೊಂಡವಳ ನಂಟೇ ಕಳಚಿ ಬೀಳುವ ಭಯದಿಂದ.


ಬಸವರಾಜ್, ಕನಕಗಿರಿ
ರಾಜಕೀಯದಲ್ಲಿ ಪೂಜಾಗಾಂಧಿಗಿಂತ ರಕ್ಷಿತಾ ಒಂದು ಹೆಜ್ಜೆ ಹಿಂದಿದ್ದಾಳಲ್ವಾ?
ಪಕ್ಷದಿಂದ ಪಕ್ಷಕ್ಕೆ ವಲಸೆ ಹೋಗುವುದರಲ್ಲಿ ಇಬ್ಬರದೂ ಒಂದೇ ಚಾಳಿ ಮಿತ್ರ.


ದಿಲ್ , ಮಹೇಂದ್ರಗಿರಿ
ಬರೆದ ಕವಿತೆ ಅರ್ಥ ಮಾಡಿಕೊಳ್ಳದೆ ಬಾಯಿ ಮಾತಿನಲ್ಲಿ ಹೊಗಳೋದು ಸರಿಯಾ?
ಅಕ್ಷರ ಗೊತ್ತಿಲ್ಲದವನಿಗೆ ಕವಿತೆಯ ಗಂಧವಾದರೂ ಹೇಗೆ ಗೊತ್ತಿರುತ್ತೆ.


1 | 2 | 3 | 4 | 5 | 6 | 7 | 8 | 9 | 10 | 11 | .. 38 | Next
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books