Ravi Belagere
Welcome to my website
ಹೆಂಡತಿ ಮನೆಯಲ್ಲಿ ಇಲ್ಲದಿದ್ದರೆ ಅದೊಂದು ದಿವ್ಯ ಸಂತೋಷವಲ್ಲವೆ? ಆ ಸಂತೋಷವನ್ನು ಇಲ್ಲಿ ದಾಖಲಿಸಿ, ಓದುಗರೊಂದಿಗೆ ಹಂಚಿಕೊಳ್ಳಿ. ನನಗೆ ಥಾನುಗಟ್ಟಲೆ ಬರಹಗಳು ಬೇಕಾಗಿಲ್ಲ. ಇಡೀ ಕಾದಂಬರಿ ಬರೆದು ಕಳಿಸಬೇಡಿ. Just ಒಂದು in land letterನಲ್ಲಿ ಹಿಡಿಸುವಷ್ಟು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದರೆ ಸಾಕು. Emailನಲ್ಲಿ ಕಳುಹಿಸುವವರು [email protected] ಕಳುಹಿಸಿ. ನಿಮ್ಮ ಹಾಗೂ ನಿಮ್ಮ ಪತ್ನಿಯ ಫೊಟೋ (ಇಬ್ಬರೂ ಜೊತೆಗಿರುವಂಥದ್ದು) ರೆಡಿ ಇದ್ದರೆ ತಪ್ಪದೆ ಪತ್ರದೊಂದಿಗೆ ಕಳಿಸಿ ಕೊಡಿ. ಓದುಗರಾದ ನೀವು ಬರಹಗಾರರೂ ಆದರೆ, ಅದು ಬೇರೆಯದೇ ಸಂತೋಷ.
Home About Us Gallery Books Feedback Prarthana Contact Us
ಕಾಪ್ ವೆಂಕಟೇಶ್, ಬೆಂಗಳೂರು
ಇಲ್ಲೊಬ್ಬ, ಱಅಣ್ಣಾ ಅವಳಂದ್ರೆ ನಂಗಿಷ್ಟ ೞ ಅಂತಾವ್ನೆ?
ಹಂಗಂದ ಗೊರೂರು ನಾಗ ನಷ್ಟದ ಲೆಕ್ಕವನ್ನು ಬರೆದಿಟ್ಟಿದ್ದಾನಂತೆ.


ಹರಳಹಳ್ಳಿ ಪುಟ್ಟರಾಜು, 9632838088
ಮೊದಲ ರಾತ್ರಿಯೇ ಹೆಣ್ಣು ನಾಚಿಕೆ ಪಟ್ಟುಕೊಂಡರೆ ಗಂಡಿನ ಗತಿ?
ದಿಂಡುರುಳು ಸೇವೆ ಮೂಲಕ ದೇಹ ದಂಡನೆ ಅಂದ ನಿತ್ಯಾನಂದ.


ವೇದಾವತಿ ಬಿ.ಎಸ್, ಅಮೃತಹಳ್ಳಿ
ಎಣ್ಣೆ ರೇಟು ಕೇಳಿಯೇ ಜನ ಟೈಟಾಗುತ್ತಿದ್ದಾರೆ?
ಕಿಕ್ ಏರಿ ಎಲೆಕ್ಷನ್‌ನಲ್ಲಿ ಱಕೈೞಗೆ ಕೊಡ್ತೀವಿ ಅಂತಾನು ಅಂತಿದ್ರಪ್ಪ.


ಚಿಕ್ಕಣ್ಣ, ಪಾವಗಡ
ಗೆಳೆತನಾ ವಜ್ರಕ್ಕಿಂತ ಬೆಲೆಯುಳ್ಳದ್ದಾ?
ಗಟ್ಟಿಯಾದರೆ ಅದಕ್ಕಿಂತಲೂ ಕಠೋರ ಮಾರಾಯ.


ಶಶಾಂಕ್ ಪ್ರಿಯಾ ಪೆನ್ನುವಳ್ಳಿ, ಪಾವಗಡ
ಪ್ರತ್ಯಕ್ಷ ನೋಡಿದರೂ ಪ್ರಮಾಣಿಸಲೇಬೇಕಾ?
ರಮ್ಯಾ ವಿಷಯದಲ್ಲಿ ಹಾಗೇನಿಲ್ಲ ಬಿಡಿ ಅಂದ್ರಪ್ಪ ಸಿದ್ರಾಮಯ್ಯ.


ಎನ್.ಸೀತಾರಾಮ್ ಕುಮಾರ್, 9481804754
ಯಡ್ಡಿಯ ಇಂದಿನ ಸ್ಥಿತಿಗೆ ಹೆಣ್ಣೇ ಕಾರಣವಂತೆ?
ಪಾಪ! ಹಾಗಂತ ಕಿವಿಗೆ ಹೂ ಇಡಲು ಹೋದ ಕಾಪು ಈಗ ಧವಳಗಿರಿಯಿಂದ ದೂರಾ... ದೂರಾ...


ಪಿ.ಜೆ.ರಾಘವೇಂದ್ರ, ಮೈಸೂರು
ರಮ್ಯಾ ವಿರುದ್ಧ ರಾಧಿಕೆ ರೋಡಿಗಿಳಿದ್ರೆ ಹೇಗಿರುತ್ತೆ?
ಅಂಕೆ ಇಲ್ಲದ ಜಿಂಕೆಮರಿ ಲಂಕೆ ದಾಟ್ತು ಅಂತ ಮಂಡ್ಯದ ಜನ ಮಾತಾಡ್ತಿದ್ರಪ್ಪ.


ಬಿ.ಚಂದ್ರೇಗೌಡ, ಬೆಂಗಳೂರು- 43
ಸ್ವರ್ಗದ ಬಾಗಿಲು ತಟ್ಟೋದು ಅಂದ್ರೆ?
ವೃದ್ಧಾಪ್ಯವಿಲ್ಲದ ಬದುಕು ಸಿಗುತ್ತದೆ ಎಂಬ ಭ್ರಮೆ ಗೆಳೆಯಾ.


ಪಿ.ಜೆ. ರಾಘವೇಂದ್ರ, ಮೈಸೂರು
ತಲೆ ಬೋಳಾದ್ರೆ ಸಿದ್ದು ಕೂಡ ದೇವು ತರಾ ಕಾಣ್ತಾರಲ್ವ?
ದೇವೆಗೌಡ ಈಸ್ ದೇವೆಗೌಡ; ಅದೇಗ್ರಿ ಸಿದ್ದು ದೊಡ್ಡಗೌಡರಾಗೋಕೆ ಸಾಧ್ಯ ಅಂತಿದ್ರು ಇಬ್ರಾಹಿಂ.


ವೇದಾವತಿ ಬಿ.ಎಸ್, ಅಮೃತಹಳ್ಳಿ
ಕಡ್ಡಿಪುಡಿ ನೋಡಿದವರಿಗೆ ಚಟ್ನಿಪುಡಿ ಉಚಿತವಾ?
ಚಟ್ನಿಪುಡಿ ಕೊಡೋಕೆ ಅದೇನು ಕಿತ್ತೋದ ಓಂಪ್ರಕಾಶನ ಸಿನೆಮಾವಾ ಅಂತಿದ್ರು ಸೂರಿ.


1 | 2 | 3 | 4 | 5 | 6 | 7 | 8 | 9 | 10 | 11 | .. 38 | Next
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books