Ravi Belagere
Welcome to my website
ಪದ್ಮನಾಭ ನಗರದ ಬಸ್ ಸ್ಟಾಪ್ ಬಳಿ ವಾಜಪೇಯಿ ಬಯಲು ಸಭಾಂಗಣ ಇದೆ. ೨೫ ಡಿಸೆಂಬರ್ ೨೦೧೬ ರಂದು ಸಂಜೆ ೬ ಗಂಟೆಗೆ ಅಲ್ಲಿ ಸರ್ದಾರ ಭಗತ್ ಸಿಂಗ್ ಅವರ ಸಹೋದರನ ಮಗ ಸರ್ದಾರಪೊಫೆಸರ್ ಚಮನ್ಲಾಲ್ ಸಿಂಗ್ ಅವರ ಭಾಷಣ ಇದೆ. ಅದೊಂದು ಮಹತ್ತರ, ಅವಿಸ್ಮರಣೀಯ ಸಮಾರಂಭವಾಗಲಿದೆ. ಅದೇ ಸಂದರ್ಭದಲ್ಲಿ ತುಂಬಾ ನಿರೀಕ್ಷಿತ " ರಾಜ್ ಲೀಲಾ ವಿನೋದ" ಪುಸ್ತಕ ಬಿಡುಗಡೆಯಾಗಲಿದೆ. ಜೊತೆಗೆ ಒಂದಷ್ಟು ಕೃತಿಗಳು ಬಿಡುಗಡೆಯಾಗಲಿವೆ. ಓದುಗರಿಗೆ, ಕೇಳುಗರಿಗೆ ಹಬ್ಬ. ಪ್ಲೀಸ್ ಬನ್ನಿ.
Home About Us Gallery Books Feedback Prarthana Contact Us
ಜಾಫರ್ ಸಾದಿಕ್, 9980659993
ಪದೇಪದೇ ಬರುವ ಫೆಬ್ರವರಿ ಹದಿನಾಲ್ಕರಂದು ಅವಳನ್ನ ನಾನು ಏನೆಂದು ಕರೆಯಲಿ?
ಒಮ್ಮೆ ಪ್ರೇಮ ನಿವೇದನೆಯಾದ ಮೇಲೆ ಪದೇಪದೇ ಕರೆಯುವ ಮಾತೆಲ್ಲಿಂದ ಬರುತ್ತೆ.


ಎಸ್.ಲಕ್ಷ್ಮೀನರಸಿಂಹ, ಚಾಮರಾಜನಗರ
ಸುಳ್ಳು ನ್ಯೂಸ್ 24x7 ಪ್ರಾರಂಭಿಸಬೇಕೆಂದಿದ್ದೇನೆ, ಯಾರ ಸಲಹೆ ಕೇಳಲಿ?
ಮಲ್ಲಿಗೆ ಆಸ್ಪತ್ರೆಯ ಮೂಲೆಯಲ್ಲಿ ನಿಂತರೆ ಐಡಿಯಾ ಕೊಡುವವರಿಗೇನು ಕೊರತೆ ಇಲ್ಲ ಗೆಳೆಯ.


ರಂಜಿತಾ ಎಸ್., ರಣಸಿಂಗೆ 8123679919
ರಾಜಕಾರಣಿಗಳ ಬಾಯ್ಮಿಚ್ಚಿಸಲು ನಿಮ್ಮ ಬಳಿ ದಿವ್ಯಾಸ್ತ್ರವಿದೆಯಾ?
ಹದಿನೆಂಟು ವರ್ಷದಿಂದ ಲೇಖನಿಯೆಂಬ ಬ್ರಹ್ಮಾಸ್ತ್ರವನ್ನೇ ನಾನು ಪ್ರಯೋಗಿಸಿದ್ದು.


ಹನಿ, ಹಾಸನ
ಕೆಲವು ಬಾರಿ ಮನಸಿನ ಮಾತುಗಳನ್ನ ಕಣ್ಣುಗಳೇ ಹೇಳಿಬಿಡುತ್ತವಂತೆ?
ಕವಿಯೊಬ್ಬರು ಕಣ್ಣಿನಲ್ಲಿ ಕೆಂಡಸಂಪಿಗೆಯೂ ಇದೆ ಎಂದಿದ್ದಾರಲ್ವಾ.


ಬಿ.ಎಸ್.ವೇದಾವತಿ, ಅಮೃತಹಳ್ಳಿ
ಅಕ್ಕರೆಯಿಲ್ಲದವನನ್ನು ಸಹಿಸಿಕೊಳ್ಳಬಹುದು ಆದರೆ ಅಕ್ಷರವಿಲ್ಲದವನನ್ನ?
ಅಕ್ಷರ ಕಲಿತವನಲ್ಲಿ ಅಕ್ಕರೆ ಇಲ್ಲದಿದ್ದರೆ ಏನು ಮಾಡುತ್ತೀಯಾ ತಂಗಿ.


ಮಂಚಾಲಿ ಗುರುರಾಜಾಚಾರು, ಬಳ್ಳಾರಿ
ಹೆಣ್ಣಿನ ಕಾಲ್ಗುಣ ನೋಡುತ್ತಾರೆ, ಗಂಡಸರದು? .
ದೃಷ್ಟಿದೋಷವಿಲ್ಲದಿದ್ದರೆ ಸಾಕು ಅನ್ನುತ್ತಿದ್ದಳು ಶುಭಾ ಪೂಂಜಾ


ಆರ್ಟಿಸ್ಟ್ ಮೋಹನ, ಹಾಸನ
ಪಾಲಿಗೆ ಬಂದದ್ದೆಲ್ಲವೂ ಪಂಚಾಮೃತವೇ?
ಡಿಶುಂ ಡಿಶುಂ ಸೋಮಣ್ಣ ಒದೆ ಕೊಟ್ಟಾಗಲೂ ಅವರು ಹಾಗೇ ಅಂದುಕೊಂಡಿದ್ದರು.


ರಾಮು ಮಲ್ಲಿಕಟ್ಟೆ, ಕೋಣಂದೂರು
ಬೆಣ್ಣೆ ಕರಗುತ್ತೆ, ಎಣ್ಣೆ ಕುದಿಯುತ್ತೆ ಇದ್ಯಾವ ನಿಯಮ?
ಕುದಿಯುವ ಎಣ್ಣೆಯಲ್ಲಿ ಕೈಯ್ದಲು ಹೋಗೇ ಯಡ್ಡಿ ಸಿಕ್ಕಿಬಿದ್ದಿದ್ದು.


ಎನ್.ಸೀತಾರಾಮ್‌ಕುಮಾರ್, 9738600728
ಯಡ್ಡಿಯ ಜೀವನಚರಿತ್ರೆಯನ್ನ ಸಿನೆಮಾ ಮಾಡಿದ್ರೆ ಹೀರೋ ಯಾರಾಗಬಹುದು?
ನಾನೊಮ್ಮೆ ಟ್ರೈ ಮಾಡಿ ನೋಡ್ಲಾ ಅಂತಿದ್ದ ವರಹಾಮುಖಿ.


ಸಂತೆಬೆನ್ನೂರು, ಫೈಜ್ನಟ್ರಾಜ್
ಕಾಮಕ್ಕೆ ಕಣ್ಣಿಲ್ಲ, ಪ್ರೇಮ ಕುರುಡು ಅಂತಾರೆ ಹಂಗಾದ್ರೆ ನೆಟ್ಟಗಿರೋದು ಯಾವುದು?
ಪತ್ನಿಯ ದೃಷ್ಟಿ ಸರಿಯಾಗಿದ್ದುದಕ್ಕೆ ಗೊಬ್ರಾ ವಿಜಿಯ ನಾಲ್ಕನೇ ಪ್ರೇಮ ಸಿಕ್ಕಿಬಿದ್ದಿದ್ದು.


1 | 2 | 3 | 4 | 5 | 6 | 7 | 8 | 9 | 10 | 11 | .. 38 | Next
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books