Ravi Belagere
Welcome to my website
ಆ ಮೇಷ್ಟ್ರು ನೆನಪಾದರೆ ನಿಮಗೂ ಹಾಗನ್ನಿಸುತ್ತಾ? ನನಗೆ ಮೇಷ್ಟ್ರುಗಳೆಂದರೆ ತುಂಬ ಪ್ರೀತಿ, ಭಯ, ಹಿಂಜರಿಕೆ. ಅವರನ್ನು ನೆನಪು ಮಾಡಿಕೊಂಡರೆ ಸಾಕು. ಅವರೆಲ್ಲಿದ್ದಾರೋ ಅಲ್ಲಿಗೇ ಹೋಗಿ ಕಾಲಿಗೆ ಬಿದ್ದು ನಮಸ್ಕರಿಸೋಣ ಅನ್ನಿಸುತ್ತದೆ. ಅಂಥ ಮೇಷ್ಟ್ರುಗಳು ಎಲ್ಲರಿಗೂ ಇದ್ದೇ ಇರುತ್ತಾರೆ. ಒಮ್ಮೆ ಹಾಗೆ ನೆನಪಿಸಿಕೊಂಡು ನಿಮ್ಮದೇ ಆದ ‘ದಿಲ್ ನೆ ಫಿರ್ ಯಾದ್ ಕಿಯಾ’ಗೆ ಬರೆಯುತ್ತೀರಾ? Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ಪ್ಲೀಸ್.
Home About Us Gallery Books Feedback Prarthana Contact Us
ಬಿ.ಎನ್.ಪರಶಿವಮೂರ್ತಿ, ಬೆಂಗಳೂರು-40
ತೀರ್ಥಯಾತ್ರೆಗೂ, ಪಾದಯಾತ್ರೆಗೂ ವ್ಯತ್ಯಾಸವೇನು?
ಎರಡೂ ಗೊತ್ತಿಲ್ಲ; ನನ್ನದೇನಿದ್ದರೂ ಪಾನಯಾತ್ರೆ ಅಂತಿದ್ದ ನರ್ಸ್ ರೇಣುಕಾ.


ಆರ್.ಮಧುಸೂಧನ್, 99457-37427
ಹೆಣ್ಣಿನ ಮನಸೇಕೆ ‘ಟಚ್ ಸ್ಕ್ರೀನ್’ನಂತೆ ಮುಟ್ಟಿದ ಕೂಡಲೇ ತೆರೆದುಕೊಳ್ಳುವುದಿಲ್ಲ?
ಮುಟ್ಟಿದ ಕೂಡಲೇ ಬಟಾ ಬಯಲಾದರೆ ಪ್ರೀತಿ ಎಂಬ ಪದಕ್ಕೆ ಅರ್ಥವಿರುತ್ತಿರಲಿಲ್ಲ.


ಬಿ.ಎಂ.ಪರಶಿವಮೂರ್ತಿ, ಬೆಂಗಳೂರು-40
ಹುಡುಗಿಯರ ಕಾಲೇಜಿನ ಮುಂದೆ ವಾಹನಗಳೇಕೆ ನಿಧಾನವಾಗಿ ಚಲಿಸುತ್ತವೆ.
ಅಲ್ಲಿ ಉಬ್ಬು-ತಗ್ಗುಗಳಿವೆ ಎಂಬ ಕವಿವಾಣಿಯ ಪ್ರೇರಣೆಯಿಂದ.


ರಾಜೇಂದ್ರಕುಮಾರ್, ದೊಡ್ಡಬಳ್ಳಾಪುರ
ಸೀರೆಯ ಬಗ್ಗೆ ತಾರೆಯರಿಗೆ ಅಲರ್ಜಿ; ಆದರೂ ಹೊಸ ಅಂಗಡಿ ಉದ್ಘಾಟನೆಗೆ ಅವರೇ ಬರುತ್ತಾರೆ.
ಬದನೆಕಾಯಿ ಇರೋದೆ ತಿನ್ನೋಕೆ ಅಂತ ಅವರಿಗೆ ಗೊತ್ತಿದೆ.


ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ಈಗೀಗ ಹುಡುಗಿಯರ‍್ಯಾಕೋ ಜಡೆ ಹಾಕೋಕೇ ಇಷ್ಟಪಡಲ್ಲ?
ಜಡೆ ಹಾಕಿ ಹೊರಟ ಹುಡುಗಿಗೆ ನೋಡಿ ಜೋಗಿ ಪ್ರೇಮ್ ‘ಅಘೋರಿ’ ಎಂದು ಅಬ್ಬರಿಸಿದ್ದರಿಂದ.


ಭವಾನಿ, 573120
ಮುನಿಸಿಕೊಂಡು ಕುಳಿತರೆ ನೀನು ಜಮದಗ್ನಿಯಂತೆ?
ಕೆಲವೊಮ್ಮೆ ನಮ್ಮ ಬಾಸ್ ದೂರ್ವಾಸ ಮುನಿ ಅಂತಾರೆ ಕಚೇರಿಯ ಹುಡುಗರು.


ನಾಗು, ಹೇಮಾವತಿ ಡ್ಯಾಂ
ಅತ್ತೆ ಮನೆಗೆ ಅಳಿಯ ಅಪರೂಪಕ್ಕೆ ಬಂದರೆ ಚಂದ ಅಲ್ವಾ?
ಅದ್ಯಾಕೋ ಕೋಪಗೊಂಡ ಅತ್ತೆ ಶಾವಿಗೆ ಹೊತ್ತಲು ಅಳಿಯನನ್ನೇ ಕರೆದಿದ್ದಳು.


ಗೊರೂರು ನಾಗ, 9480783803
ಲವ್‌ಲವಿಕೆಯಲ್ಲಿ ನವಿಲು ಗರಿ ಇಟ್ಟರೆ ಮರಿ ಹಾಕುತ್ತಾ ಸಾರ್?
ಗೊರೂರಿನ ಹೊಲ-ಗದ್ದೆಯಲ್ಲಿ ನಾಗ ಮರಿ ಹುಡುಕುವ ಕೆಲಸದಲ್ಲಿ ಬಿಜಿಯಾಗಿದ್ದಾನೆ ಅಂತಿದ್ದ ಮೆಡಿಕಲ್ ಚಂದ್ರು.


ಎಂ.ಜೆ. ರಾಜಶೇಖರ ಶೆಟ್ಟಿ, ದೊಡ್ಡಬಳ್ಳಾಪುರ
ಯಡ್ಡಿಗೆ ಪಾದಯಾತ್ರೆಯ ಬಗೆಗೆ ತುಂಬಾ ಪ್ರೀತಿಯಿದೆಯಲ್ಲವೇ?
ಅದ್ಯಾಕೋ ಮೊನ್ನೆ ಮೈಸೂರಿನಿಂದ ಹೊರಟ ಕಾವೇರಿ ಯಾತ್ರೆ ಮದ್ದೂರಿನ ಬಳಿಯೇ ಮೊಟಕುಗೊಂಡಿತು.


ಎಸ್.ಎಲ್.ಎನ್.ಸಿಂಹ, ಸಿ.ಆರ್.ನಗರ
ಕೆಜೆಪಿಗೆ ಬಂದ ಶೋಭಕ್ಕನನ್ನ ಯಡ್ಡಿಯೇ ಹಾರ ಹಾಕಿ ಬರಮಾಡಿಕೊಂಡರಲ್ಲ?
ಕೊರಳಲ್ಲಿ ಹಾರ ಧರಿಸಿ ನಿಂತ ಕರಂದ್ಲಾಜೆಯನ್ನ ನೋಡಿ ಧನಂಜಯ ಉಕುಮಾರ್ ಹರಕೆಯ ಕುರಿ ಅಂತಿದ್ರಪ್ಪ.


1 | 2 | 3 | 4 | 5 | 6 | 7 | 8 | 9 | 10 | 11 | .. 38 | Next
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books