Ravi Belagere
Welcome to my website
ಪದ್ಮನಾಭ ನಗರದ ಬಸ್ ಸ್ಟಾಪ್ ಬಳಿ ವಾಜಪೇಯಿ ಬಯಲು ಸಭಾಂಗಣ ಇದೆ. ೨೫ ಡಿಸೆಂಬರ್ ೨೦೧೬ ರಂದು ಸಂಜೆ ೬ ಗಂಟೆಗೆ ಅಲ್ಲಿ ಸರ್ದಾರ ಭಗತ್ ಸಿಂಗ್ ಅವರ ಸಹೋದರನ ಮಗ ಸರ್ದಾರಪೊಫೆಸರ್ ಚಮನ್ಲಾಲ್ ಸಿಂಗ್ ಅವರ ಭಾಷಣ ಇದೆ. ಅದೊಂದು ಮಹತ್ತರ, ಅವಿಸ್ಮರಣೀಯ ಸಮಾರಂಭವಾಗಲಿದೆ. ಅದೇ ಸಂದರ್ಭದಲ್ಲಿ ತುಂಬಾ ನಿರೀಕ್ಷಿತ " ರಾಜ್ ಲೀಲಾ ವಿನೋದ" ಪುಸ್ತಕ ಬಿಡುಗಡೆಯಾಗಲಿದೆ. ಜೊತೆಗೆ ಒಂದಷ್ಟು ಕೃತಿಗಳು ಬಿಡುಗಡೆಯಾಗಲಿವೆ. ಓದುಗರಿಗೆ, ಕೇಳುಗರಿಗೆ ಹಬ್ಬ. ಪ್ಲೀಸ್ ಬನ್ನಿ.
Home About Us Gallery Books Feedback Prarthana Contact Us
ಎಸ್.ಎಲ್.ನರಸಿಂಹ, ಎಡತೊರೆ
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾದ್ರೆ ನಾನೇ ಸಿ.ಎಂ ಅಂದ್ರಂತೆ ಕತ್ತಿ?
ಗುರಾಣಿ ಹಿಡಿದ ನಿರಾಣಿ ಅದು ಕನಸು ಕಣ್ರೀ ಅಂತಿದ್ದ.


ಕೆಂಕೆರೆ ಶಿವಶಂಕರ್, ಹುಳಿಯಾರು
ಮುಖ್ಯಮಂತ್ರಿಗೆ ಪತ್ರ ಬರೆಯುವ ಬದಲು ಚೆನ್ನಮ್ಮನವರಿಗೆ ಬರೆದರಂತೆ?
ಮಿಸ್ಸಾಗಿ ಅದು ರೇವು ಕೈಗೆ ಸಿಕ್ಕು ಮನೆಯಲ್ಲಿ ರಾದ್ಧಾಂತವಾಯ್ತಂತೆ.


ಮೆಡಿಕಲ್ ಚಂದ್ರು, ತುಮಕೂರು
ಸಾವಿಗೆ ಹತ್ತಿರದಲ್ಲಿದ್ದ ನಿನಗೆ ಮೊದಲು ನೆನಪಾದವರು ಯಾರು?
ನನ್ನ ಓದುಗ ದೊರೆಯಲ್ಲದೆ ಮತ್ತ್ಯಾರು ಗೆಳೆಯಾ.


ದೀಪಕ್ ಅಸೋದೆ, ಚಿಂಚಲಿ ಸ್ಟೇಶನ್
ಮಕ್ಕಳಿಗೆ ಹಾಲು ಕೊಡಿ ಅಂದ್ರೆ ಮುದ್ದೆ ಕೊಡಿ ಅಂದ್ರಂತೆ ಗೌಡ್ರು?
ಅದಕ್ಕೆ ಸಿದ್ದು ಅದು ತಿಥಿಯೂಟ ಅಲ್ಲ ಅಂತ ಗುಟುರು ಹಾಕಿದ್ದು.


ಆರೆನ್ನಾರ್, 252498
ರಸಿಕತೆಯ ಪರಮಾವಧಿಗೊಂದು ಉದಾಹರಣೆ ಕೊಡಿ.
ಸಿಕ್ಕ-ಸಿಕ್ಕವರಿಗೆ ಗೊತ್ತು ಗುರಿ ಇಲ್ಲದೆ ಮೆಸೇಜು ಕಳಿಸೋದು.


ಬಿ.ಎಂ.ಪರಶಿವಮೂರ್ತಿ, ಬೆಂಗಳೂರು -40
ಇಲ್ಲೊಬ್ಬ ಹೆಣ್ಣು ಮಕ್ಕಳನ್ನು ಹೆರುವ ಯಂತ್ರ ಅಂತಾನೆ?
ಹಾಗಾದ್ರೆ ಅವನು ಱಮೇಡ್ ಇನ್ ಫಿಮೇಲ್‌ೞ ಅಂತ ಮೆಡಿಕಲ್ ಚಂದ್ರು ಮೆಸೇಜು ಕಳಿಸವ್ನೆ.


ಬಸವರಾಜ್ ಕನಕಗಿರಿ, ಹೊಸಪೇಟೆ
ಬಿಜೆಪಿ-ಕೆಜೆಪಿ ಒಂದಾಗ್ಬೇಕು ಅಂತ ಬರೆದಾಗಿದೆ ಅಂತಾರೆ ಬೊಮ್ಮಾಯಿ ಬಸು!
ಕಡೆ ಗಳಿಗೆಯಲ್ಲಿ ಕೈಕೊಟ್ಟ ಇವನೆಂತಹ ಶಿಷ್ಯ ಅಂತಿದ್ರಪ್ಪ ಯಡ್ಡಿ.


ಎಸ್.ಲಕ್ಷ್ಮೀನರಸಿಂಹ, ಚಾಮರಾಜನಗರ
ಪಂಚೆ ಉಟ್ಟರೂ ರೇವಣ್ಣನ ಕಚ್ಚೆ ಭದ್ರವಾಗಿದೆಯಲ್ವಾ?
ಛಿದ್ರವಾಗೋಕೆ ಭದ್ರಕಾಳಿಯಂತಹ ಭವಾನಿ ಮೇಡಮ್ಮು ಬಿಡೋದೇ ಇಲ್ವಂತೆ.


ದಿಲ್, 8105869369
ಭಾವಗಳ ಅಭಾವದಿಂದ ಕಾಣೆಯಾದವಳು ಮತ್ತೆ ಸಂಪರ್ಕದಲ್ಲಿದ್ದಾಳೆ ಏನ್ಮಾಡ್ಲೀ?
ಯೋಚಿಸುತ್ತಾ ಕುಳಿತರೇ ಮತ್ತೆ ನಾಟ್‌ರೀಚಬಲ್ ಆಗುವ ಲಕ್ಷಣವಿದೆ ಎಚ್ಚರ!


ಬಡಕನಹಳ್ಳಿ ತಿಪ್ಪೇಶ್, 9738888195
ತಡೆದ ಮಳೆ ಖಂಡಿತ ಜಡಿದು ಬರುತ್ತೆ ಅಂತಿಯಾ?
ಧೋ... ಎಂದು ಸುರಿವ ಅದನ್ನು ತಡೆಯುವ ಧೀ ಶಕ್ತಿ ಇದೆಯಾ ನೋಡಿಕೋ.


1 | 2 | 3 | 4 | 5 | 6 | 7 | 8 | 9 | 10 | 11 | .. 38 | Next
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books