Ravi Belagere
Welcome to my website
ಆ ಮೇಷ್ಟ್ರು ನೆನಪಾದರೆ ನಿಮಗೂ ಹಾಗನ್ನಿಸುತ್ತಾ? ನನಗೆ ಮೇಷ್ಟ್ರುಗಳೆಂದರೆ ತುಂಬ ಪ್ರೀತಿ, ಭಯ, ಹಿಂಜರಿಕೆ. ಅವರನ್ನು ನೆನಪು ಮಾಡಿಕೊಂಡರೆ ಸಾಕು. ಅವರೆಲ್ಲಿದ್ದಾರೋ ಅಲ್ಲಿಗೇ ಹೋಗಿ ಕಾಲಿಗೆ ಬಿದ್ದು ನಮಸ್ಕರಿಸೋಣ ಅನ್ನಿಸುತ್ತದೆ. ಅಂಥ ಮೇಷ್ಟ್ರುಗಳು ಎಲ್ಲರಿಗೂ ಇದ್ದೇ ಇರುತ್ತಾರೆ. ಒಮ್ಮೆ ಹಾಗೆ ನೆನಪಿಸಿಕೊಂಡು ನಿಮ್ಮದೇ ಆದ ‘ದಿಲ್ ನೆ ಫಿರ್ ಯಾದ್ ಕಿಯಾ’ಗೆ ಬರೆಯುತ್ತೀರಾ? Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ಪ್ಲೀಸ್.
Home About Us Gallery Books Feedback Prarthana Contact Us

Buy Ravi Belagere Books online

ಬೃಂದಾವನವದು ಒಬ್ಬನದೇ ಅಲ್ಲವಲ್ಲ

ಬೃಂದಾವನ ಮದಿ ಅಂದರಿದೀ
ಗೋವಿಂದುಡು ಅಂದರಿವಾಡೇಲೆ....

ಈ ಹಾಡು ಕನ್ನಡ ಚಿತ್ರವೊಂದರಲ್ಲಿ ಬಳಸಲಾಗಿತ್ತು ಅಂತ ನನ್ನ ಅನುಮಾನ. “ಈ ಬೃಂದಾವನವಿದು ಎಲ್ಲರದೂ... ಗೋವಿಂದನು ಎಲ್ಲರವನೇ ಕಣೆ... ಎಂಬ ಸಾಲು ತುಂಬ ಮಂದಿಗೆ fit ಆಗುತ್ತದೆ. ಬಂದಿರುವುದು ಎಲ್ಲರದು ಬಾಲೆ... ಇಲ್ಲಿ ಗೋವಿಂದ(ನು) ಎಲ್ಲರಿಗೂ ಸೇರಿದವನೇ ಕಣೆ ಎಂಬ ಅರ್ಥ. ಅದು ಭಯಂಕರ ರೊಚ್ಚಿನ, ಹಟದ ಹುಡುಗಿಗೆ ಹೇಳುವ ಸಮಾಧಾನ. ಅವಳು ಹಟ ಮಾರಿ, ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿ, she is jealous, ಹೆಣ್ಣನ್ನು ಎಲ್ಲ ರೀತಿಯಲ್ಲಿ ಕಾಣಬಲ್ಲೆ, ಗಮನಿಸಬಲ್ಲೆ, ಸಹಿಸಬಲ್ಲೆ-ಆದರೆ, possessiveness! My God: ಅದೆಷ್ಟು ಸಹನೆಯಿಂದ ಅದನ್ನು ಸಹಿಸಿಕೊಳ್ಳೋದಕ್ಕೆ ಅದೆಷ್ಟು ಈ ತೆರನಾದ ಹಾಡುಗಳನ್ನು ಬರೆಯುತ್ತಾರೋ? ನನ್ನ ಮಾನಸ ಪಟ್ಟಿಯಲ್ಲಿ.

ಸದ್ಯಕ್ಕೆ ಒಂದು subject ತನ್ನೊಳಗೊಂದು ಅದ್ಭುತ ‘ಗೀತೆ’ ಅಡಗಿಸಿಕೊಂಡು ಕುಳಿತಿದೆಯೋ? ನನ್ನ ಸಮಸ್ಯೆಯೆಂದರೆ I am basically not jealous. ತೀರ ಪಕ್ಕದಲ್ಲಿ ಕುಳಿತು, ಸಿಂಬಳ ಸೀಟುವ ಜೋಬದ್ರ ಗೇಡಿಗೆ ನೊಬೆಲ್ ಪಾರಿತೋಷಕ ಬಂದರೂ ನಂಗೆ ಹೊಟ್ಟೆಕಿಚ್ಚಾಗದು. ಯಾವುದೋ ಶಕ್ತನಿಗೆ ಬಂದರಂತೂ I will be damn happy.

ಅಂದ್ಹಾಗೆ, ಒಂದು ಮಾತು. ನೀವು ಯಾರನ್ನಾದರೂ ಪ್ರೀತಿಸುತ್ತೀರಾ? ಅವರಿಗಾಗಿ ಜೀವ ಹಿಂಡಿಕೊಳ್ಳುವ ಸ್ಥಿತಿಯಲ್ಲಿದ್ದೀರಾ? Sorry. ನಿಮಗೆ ಸಮಾಧಾನ ಹೇಳಬೇಕು. ಹೇಳ್ತಿರ್ತೀನಲ್ಲ, ನನ್ನ ಹಸಿರು ಲಂಗದ ಹುಡುಗಿ, ಅವನ್ಯಾವನನ್ನೋ ಮದುವೆಯಾದಾಗ ಎದೆಯಲ್ಲಿ ಉಕ್ಕುವ ಬಡಬಾಗ್ನಿಯಂತೆ ವೇದನೆಯಾಗುತ್ತಿತ್ತು. ಹಾಗಾಗಿಯೇ ಊರು ಬಿಟ್ಟು ಹಿಮಾಲಯಕ್ಕೆ ಹೋದೆ. ಜೀವ ನಿಲ್ಲಲಿಲ್ಲ. ವಾಪಸು ಬಂದು lover's spot ಅಂತಲೇ ಕರೆಸಿಕೊಳ್ಳುವ ಜಾಗಕ್ಕೆ ಹೋದೆ. ಅಲ್ಲಿ ಮೆಟ್ಟಿಲುಗಳ ಪಕ್ಕದಲ್ಲಿ ಸಿಗರೇಟು ಪ್ಯಾಕ್ ಹಿಡಿದು ಸುಮ್ಮನೆ ಕುಳಿತೆ. ಅಷ್ಟರಲ್ಲಿ, ಇಬ್ಬರು ಆ ಎಲೆ ಮಲ್ಲೇಶನ ಗುಡಿಯ ಮೇಲಿಂದ ಮೆಟ್ಟಿಲಿಳಿದು ಬರೋದು ಕಾಣಿಸಿತು. ಅರೆ! ಅವಳೇ. ಜೊತೆಯಲ್ಲಿ ಅವಳ ಗಂಡ. ಅವರಿಬ್ಬರನ್ನೂ ಗಮನಿಸಿದೆ. Yes, ಅವಳ ಹೊಟ್ಟೆ ಕೊಂಚ ಉಬ್ಬಿತ್ತು. ಆ ದಂತವರ್ಣದ ಮೈಗೆ ನವಿಲು ಗರಿ ಬಣ್ಣದ ಸೀರೆ. ಹೊಟ್ಟೆ ಕೊಂಚ ಕಾಣುತ್ತಿತ್ತು. She was pregnant.

ನನ್ನ ಎದೆಯಲ್ಲಿ ಅಸಹನೆಯ ಹೊರಳಾಟ! ನಂಗೊತ್ತು, ಈ ತೊಳಲಾಟ ಸುಮ್ಮನೆ ಹೋಗದು. ಹಿಮಾಲಯಕ್ಕೆ ನೆಮ್ಮದಿಯಾಗಿ ಹೋಗಿ, ಇಳಿಯುತ್ತಿದ್ದಂತೆಯೇ ಮತ್ತೆ ಬಡಬಾಗ್ನಿ ಉದ್ಭವವಾಯಿತೆಂದ ಮೇಲೆ, ಇನ್ನೆಲ್ಲಿ ದೊರಕೀತು ನೆಮ್ಮದಿ? ನನ್ನ ಕಣ್ಣು ತುಂಬಿದ್ದವು. ಇಂತಹುದೊಂದು ಅನುಭವ ಇನ್ಯಾವಾಗಲೂ ಆಗಿರಲಿಲ್ಲ. ಅದು terrible feeling. ಯಾರಿಗೂ ಆ ಅನುಭವ ಆಗಲಾರದು. ಚೇತರಿಸಿಕೊಳ್ಳಲಿಕ್ಕೆ ವರ್ಷಗಳೇ ಹಿಡಿದವು.

ಈಗ ಹೇಳಿ!
ನಿಮಗೂ ಅಂಥ ತಳಮಳದ ಅನುಭವ ಆಗಿದೆಯಾ? ಆಗಿರಬಹುದು. ಬರೆದು ಕಳಿಸುತ್ತೀರಾ? ಇನ್ನೂ ಟೈಮಿದೆ. ದಿಲ್ ನೆ ಫಿರ್ ಯಾದ್ ಕಿಯಾ ಅಂಕಣಕ್ಕೆ ದಯವಿಟ್ಟು ಕಳಿಸಿಕೊಡಿ. ಇದರ ಜೊತೆಗೆ ನಿಮ್ಮ ಇತ್ತೀಚಿನ ಭಾವಚಿತ್ರವಿದ್ದರೆ ಲಗತ್ತಿಸಿ.

Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 11 October, 2017
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books