Ravi Belagere
Welcome to my website
ಆ ಮೇಷ್ಟ್ರು ನೆನಪಾದರೆ ನಿಮಗೂ ಹಾಗನ್ನಿಸುತ್ತಾ? ನನಗೆ ಮೇಷ್ಟ್ರುಗಳೆಂದರೆ ತುಂಬ ಪ್ರೀತಿ, ಭಯ, ಹಿಂಜರಿಕೆ. ಅವರನ್ನು ನೆನಪು ಮಾಡಿಕೊಂಡರೆ ಸಾಕು. ಅವರೆಲ್ಲಿದ್ದಾರೋ ಅಲ್ಲಿಗೇ ಹೋಗಿ ಕಾಲಿಗೆ ಬಿದ್ದು ನಮಸ್ಕರಿಸೋಣ ಅನ್ನಿಸುತ್ತದೆ. ಅಂಥ ಮೇಷ್ಟ್ರುಗಳು ಎಲ್ಲರಿಗೂ ಇದ್ದೇ ಇರುತ್ತಾರೆ. ಒಮ್ಮೆ ಹಾಗೆ ನೆನಪಿಸಿಕೊಂಡು ನಿಮ್ಮದೇ ಆದ ‘ದಿಲ್ ನೆ ಫಿರ್ ಯಾದ್ ಕಿಯಾ’ಗೆ ಬರೆಯುತ್ತೀರಾ? Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ಪ್ಲೀಸ್.
Home About Us Gallery Books Feedback Prarthana Contact Us

Buy Ravi Belagere Books online

ಗೌರಿ ಎಂಬ ಮುಕ್ತ ಮನಸಿನ ಗೆಳತಿಯೊಬ್ಬಳ ಬಗ್ಗೆ

GOWRI.

ಅಲ್ಲಪ್ಪ, I am Gowri ಅಂತ ಮೊನ್ನೆ ಮೊನ್ನೆ message ಮಾಡಿದ್ದಳು. ಇವತ್ತಾಗಲೇ she is dead. ಅದೇನ್ರೀ, ಗುಂಡು ಹಾರಿಸಿ ಕೊಲ್ಲೋದಾದರೂ ತೀರಾ ೭ ಬುಲ್ಲೆಟ್ಸ್! ಒಂದು ಚಿಕ್ಕ ರೀಪರ್ನಲ್ಲಿ ಬೆನ್ನಿಗೆ ಹೊಡೆದರೆ ಸತ್ತು ಹೋಗುವ ಪೇಲವ ದೇಹದೊಳಕ್ಕೆ ಅಷ್ಟು ಕಾಡತೂಸಾ? It is not the job of a trained killer. ಕೊಲ್ಲೋದನ್ನ ಚೆನ್ನಾಗಿ ಅರಿತ, ಪಕ್ಕಾ ಕಿಲ್ಲರ್ ಮಾಡಿದ ಕೆಲಸ ಇದಲ್ಲ. Sharp shooterಗಳು ದೇಹದ ಆಯಕ್ಕೆ ಗುಂಡು ತಾಕಿಸಿ ಕೆಲಸ ಮುಗೀತು ಅಂತ ಗೊತ್ತಾದ ಕೂಡಲೆ ಎದ್ದು ಬಿಡುತ್ತಾನೆ. Finish. ಭೂಗತ ಲೋಕದಲ್ಲಿ ಕೊಲ್ಲೋರು ಹತ್ತು ಹನ್ನೆರಡು ಜನ ಹೋಗಿ, ಆ ಪೈಕಿ ನಾಲ್ವರೋ ಐವರೋ ಎದುರಾಳಿಯನ್ನು attack ಮಾಡಿ ಕೊಲ್ಲುತ್ತಾರೆ. ಆ ನಂತರ ಸತ್ತದ್ದು ಖಚಿತವಾಯಿತು ಎಂಬಂತೆ, ಬಿದ್ದ ಶತ್ರುವಿನ ಹಣೆ, ಹೊಟ್ಟೆ, ಎದೆ ಮುಂತಾದವುಗಳಿಗೆ ಸುಮ್ಮನೆ ಒರಟಾಗಿ ಹತ್ತಿಪ್ಪತ್ತು ಗುಂಡು ಹಾರಿಸುತ್ತಾರೆ. ಇನ್ನೂ ಒಂದು ವೆರೈಟಿಯವರು ಹೆಂಡತಿಯನ್ನು ಕೊಂದು ಇನ್ನಿಬ್ಬರು ಸೇರಿ ಆಕೆಯನ್ನು roofಗೆ ನೇತು ಹಾಕೋ ವೆರೈಟಿ. ಅದು ಆತ್ಮಹತ್ಯೆಯಾ? ಅಂತ ಕೇಳೋದೇ ಬೇಡ. ಇಳಿಸಿದರೆ ಸಾಕು ಶವ ಕಥೆ ಹೇಳುತ್ತದೆ. ಮುಖ್ಯವಾಗಿ ಕತ್ತು ಹಿಸುಕಿ ಕೊಂದಾಗ ಕುತ್ತಿಗೆ ಮೇಲೆ round ಆಗಿ ಮಾರ್ಕ್ ಬೀಳುತ್ತದೆ. ತಾನಾಗೇ ನೇಣು ಹಾಕಿಕೊಂಡಾಗ ಕತ್ತಿನ ಸುತ್ತ ಒಂದು "V' ಮಾರ್ಕಿನ ಗುರುತು ಬೀಳುತ್ತದೆ. ಆ ವ್ಯಕ್ತಿಯ ವಿಸರ್ಜನೆ ಬಿದ್ದಿರುತ್ತದೆ. ಅದೆಲ್ಲಕ್ಕಿಂತ ಹೆಚ್ಚಿನದೆಂದರೆ ಶವದ ಬಾಯಿಂದ ಕೊಂಚ ಹೊತ್ತಿನ ನಂತರ ಶವದ ಜೊಲ್ಲು ಸುರಿಯಲಾರಂಭಿಸುತ್ತದೆ. ಅದನ್ನೆಲ್ಲ ಪುಟ ಗಟ್ಟಲೆ ಬರೆಯಬಹುದು. But Gowri? ಯಾವ ಪಾಪವನ್ನೂ ಮಾಡದ ಆಕೆ ಈ ಪರಿ ಗುಂಡೇಟು ತಿಂದು ಸಾಯೋದಾ?

ಅದೊಮ್ಮೆ ಪ್ರೆಸ್ಕ್ಲಬ್ನಿಂದ ನಾನು ಹೊರಬಿದ್ದೆ, ಎದುರಿಗೆ ಅವಳು ಮತ್ತು ಅವಳ ಗೆಳತಿ ಕ್ಲಬ್ ಕಡೆಗೆ ನಡೆದರು. “ಏನಪ್ಪಾ ರವಿ, ನಿಂದು-ನಮ್ಮಪ್ಪಂದು ಜಗಳ ಮುಗೀತಾ? ಆಯಪ್ಪ ಬಯ್ಯೋದು ನಿಲ್ಲಿಸಲ್ಲ. ಈಯಪ್ಪ ತಿರಿಕ್ಕೊಂಡು ಬಯ್ಯೋದನ್ನು ಬಿಡೋದಿಲ್ಲ" ಅಂದು ನಗುತ್ತ ಹೊರಟು ಹೋದಳು. ಆಗ-ನನಗೂ ಲಂಕೇಶ್ಗೂ ಘೋರ ಯುದ್ಧ ನಡೆದು ಹೋಗುತ್ತಿತ್ತು. But she remained a friend. ನಾವಿಬ್ಬರೂ ಮೊದಲ ದಿನದಿಂದಲೇ ಸಿಗರೇಟು ಸಮಾ ಹಂಚಿಕೊಂಡೆವು. ಆನಂತರ ‘ನಿಂಗೆ ಬೇಕಾ?’ ಅಂತ ಕೇಳುತ್ತಲೇ ಇರಲಿಲ್ಲ. ಅವಳ ಪ್ಯಾಕೆಟ್ ಖಾಲಿಯಾದರೆ ಅವಳು ಇನ್ನೊಂದು ದಿನ ನನ್ನ ಕಿಸೆಗೆ ಕೈ ಹಾಕುತ್ತಿದ್ದಳು.

“ಅವೆಲ್ಲ ಸರಿ, ನೀನು-ನಾನು ಸಿಕ್ಕು ಅದೆಷ್ಟು ಕಾಲವಾಯ್ತಮ್ಮ? ಈ ಪತ್ರಿಕೋದ್ಯಮ ಒಂದ್ಕಡೆ ಇರ್ಲಿ. Lets have a drink. ನನ್ನ ಆಫೀಸಿಗೆ ನೀನು ಬಾ" ಅಂದೆ.
“ಜೊತೇಲಿ ಬಿಳಿದಾಳೆ ಈಶ ಇದಾರೆ ಪರ್ವಾಗಿಲ್ವಾ?" ಅಂದಳು.
“ಅದಕ್ಕೇನಂತೆ? ಒಂದು ತೊಟ್ಟು ಅವರೂ ಕುಡಿತಾರೆ" ಅಂದೆ.
ಇಬ್ಬರೂ ಬಂದರು. ಆಗ ನಾನು ಜಾನಿವಾಕರ್ ವಿಸ್ಕಿ ಕುಡೀತಿದ್ದೆ. “ಅಯ್ಯಯ್ಯೋ... ಇದೇನಿದೂ... ನಾವು ಸ್ಕಾಚ್ಗೀಚೆಲ್ಲಾ ಕುಡಿಯೋದಿಲ್ಲ. ನಮಗೆ ರಮ್ ಬೇಕು. Just Khoday's Rum" ಅಂದಳು ಗೌರಿ. ಸರಿ ಬಿಡು, ರಮ್ ತರಿಸಿ ಕೊಟ್ಟೆ. ಗೌರಿ ಅಂಥಾಪರಿಯೇನೂ ಕುಡಿಯಲಿಲ್ಲ. ಅವತ್ತಿನ ಮಾತಿನಲ್ಲಿ “ತುಂಬ ಹಣದ ತೊಂದರೆ ಇದೆ ರವೀ, ನಿನ್ ಥರ ಮೆರೆಯೋಕಾಗಲ್ಲ" ಅಂದಳು.

ಗೌರೀ ಈಗ ಮಾರ್ಕೆಟ್ನಲ್ಲಿ ಮಾರ್ತಾ ಇರೋದು, ಉದ್ಯೋಗ ವಾರ್ತೆ, ಸ್ಪರ್ಧಿ ಥರದ ಪೇಪರು. ಅಂಥದ್ದೊಂದು ಮಾಡಿ ನೋಡು. ದುಡ್ಡು ಕೈ ಸೇರುತ್ತೆ. ನೀನು ಈ ಪೇಜಾವರ ಸ್ವಾಮೀನೋ, ರಂಭಾಪುರಿ ಸ್ವಾಮೀನೋ ಬೈತಾ ಕೂತ್ರೆ ನಡೆಯಲ್ಲ. ಅವುಗಳಿಗೆ ಕಮರ್ಷಿಯಲ್ touch ಕೂಡ ಇರಲಿಲ್ಲ. ಗೆಲ್ಲುವ symptoms ಕೂಡ ಇರಲಿಲ್ಲ. She was number two in the list. ನಮ್ಮ ಪ್ರಸಾರಕ್ಕೆ ಹೋಗೋ ಛಾನ್ಸೇ ಇರಲಿಲ್ಲ. ಆ ಪರಿ leftism ಅವಳದು. ಮುಂದೆ ಏಜೆಂಟರೆಲ್ಲ “ಗಂಡ್ ಲಂಕೇಶಾ? ಹೆಣ್ಲಂಕೇಶಾ?" ಅಂತ ಕೇಳತೊಡಗಿದರು.

ಲಂಕೇಶ್ ಆ ವಾರದ ಸಂಚಿಕೆ ಮುಗಿಸಿ, ಮೆಟ್ಟಿಲಿಳಿದು ಮನೆಗೆ ಹೋದವರು ಬೆಳಿಗ್ಗೆ ಎದ್ದೇಳಲಿಲ್ಲ. ಬಹುಶಃ ಮನೇಲಿ ಒಬ್ಬರೇ ಇದ್ದರೇನೋ? ಕೊಸರಾಡಿದಂತೆ ಹೊದಿಕೆ ಇತ್ತು. ಮಲಗಿದಲ್ಲೇ ಅವರು ಮುಗಿದು ಹೋಗಿದ್ದರು.

ಆನಂತರ ಶುರುವಾದದ್ದು ತಮ್ಮ-ಅಕ್ಕ-ತಂಗೀರ ಯುದ್ಧ. ಗೌರಿಯ ಸೋದರ ಇಂದ್ರಜಿತ್ ತೀರ nasty ಅನ್ನಿಸಿಕೊಂಡ. ಲಂಕೇಶ್ ಕಟ್ಟಿದ ಮನೆಗಳನ್ನ ಆಕ್ರಮಿಸಿಕೊಂಡರು. ಆ ಮನೆಯ ಎದುರಿನ ಪಾಳು ಗುಡಿಸಲಿನಂತಹ ಮನೆಯಲ್ಲಿ ಲಂಕೇಶ್ ಪತ್ನಿ ಇಂದಿರಮ್ಮ ಕೆಲಕಾಲ ಇದ್ದರು. ಮುಂದೆ ಆ ಮನೆ-ಈ ಮನೆ ಅಂತ ಅಕ್ಕ-ತಂಗಿಯರು ಎರಡು ಮನೆ ಹಂಚಿಕೊಂಡರು.

“ಅಲ್ರೀ ಬೆಳಗೆರೆಯವರೇ, ಏನೇನೋ ಬರೀತೀರಿ, ಈಕೆ ಇಟ್ಕೊಂಡಿರೋ sexual life ಬಗ್ಗೆ ಬರಿಯಲ್ವಲ್ಲಾ? "ಅಂದ ಅವನು. I was really irritated. ಯಾರಾದರೂ ತಮ್ಮದೇ ಅಕ್ಕ-ತಂಗಿಯರ ವಿರುದ್ಧ ಅವರ sex life ಕುರಿತು ಬರಿ ಅಂತಾರಾ? ಎಂಥ ಅಸಹ್ಯ. ಮುಂದೆ ಅತ್ತ-ಇತ್ತ ಅದು ಬೆಳೆದು ‘ರಾಜಿ’ ಆಯಿತು. ಇಂಥ ಸಮಯದಲ್ಲಿ ತಾಯಿಯ ಬೆನ್ನಿಗೆ ನಿಲ್ಲೋದಲ್ವಾ? ಮಗ, ತನ್ನ ತಂದೆ ಲಂಕೇಶ್ ಕೊಂಡ ತೋಟ ತನ್ನದು ಅಂತ ಒಂದಷ್ಟು ಮೊಂಡತನಕ್ಕೆ ಬಿದ್ದ. ಗೌರಿ-ಕವಿತಾ ಒಂದಾದರು. “ಆಯ್ತು ನೀನೇ ಇಟ್ಕೋ. ಆದರೆ ನಿಮ್ಮ ಅಪ್ಪನ ಸಮಾಧಿ ಅಲ್ಲಿದೆ. ಅದಾದರೂ ಉಳಿಸು." ಇಂದ್ರಜಿತ್, ಅಪ್ಪನ ಸಮಾಧಿಯನ್ನೂ ಮಾರಿಬಿಟ್ಟ. ನೀವು ನಂಬಲಿಕ್ಕಿಲ್ಲ. ಲಂಕೇಶ್ ಪತ್ನಿ ಇಂದಿರಮ್ಮನವರು ಆ ಸಮಾಧಿಯ ಮಣ್ಣನ್ನು ಸೆರಗಿನಲ್ಲಿ ಒಯ್ದು ಅಲ್ಲಿದ್ದ ತೋಟದಲ್ಲಿ ಸಮಾಧಿಗೆ ಆ ಮಣ್ಣು ಬೆರೆಸಿ ಬಂದರು. ಆಕೆ ನಿಜವಾದ ಗಟ್ಟಿಗಿತ್ತಿ. ಇವನು ಶುದ್ಧ ಬೋಳು ಶಿಂಗಳೀಕ.

ತನ್ನ ಗಂಡ್ಲಂಕೇಶ್ಗೆ ಬರೆದು ಬೋರೆದ್ದು ಹೋಗಿರುವ ಕುಷ್ಠಗಿ ಕೈಲಿ ಬರೆಸುತ್ತಾನೆ. ‘ಹಾಯ್ ಬೆಂಗಳೂರ್!’ನಿಂದ ಹೊರಬಿದ್ದ ಸ್ವಾಮಿಗೌಡ, ಚಂ.ಚೂ (ಚೂತ್ಮಾರೀಕೆ), ಇನ್ಯಾವನೋ ಚಂಚೂ- ಇವರೇ! ಇವರಿಗಿಂತ ಬುದ್ಧಿವಂತರು ಯಾರೂ ಇಲ್ಲ. ಯಾರಾದರೂ ಮುಕಳಿಯೂರಿ ‘ಲಂಕೇಶ್ ಪತ್ರಿಕೆ’ (ಗಂಡು) ಪೂರ್ತಿ ಓದಿ ಬಿಡಲಿ ನೋಡೋಣ?

ಇಲ್ಲಿ ಗೌರಿ ಬಗ್ಗೆ ಒಂದು ಮಾತು ಹೇಳಬೇಕು. She was a good english journalist. ಮುಂದೆ ಆ ದಿಕ್ಕಿನಲ್ಲೇ ನಡೆದಿದ್ದರೆ ಇಂಗ್ಲಿಷ್ ಪತ್ರಿಕಾರಂಗದಲ್ಲಿ ಮುಗುಳ್ನಗುತ್ತಿದ್ದಳು. ಆದರೆ ಅಪ್ಪನ ಮೇಲಿನ ಪ್ರೀತಿಗೆ ಕನ್ನಡ ಪತ್ರಿಕೆಗೆ ಬಂದಳು. ಆದರೆ repeated ಆಗಿ ಒಂದು ತಪ್ಪು ಮಾಡುತ್ತಾ ಬಂದಳು: ಅದರ ಹೆಸರು ಬಿಜೆಪಿ-ಆರೆಸ್ಸೆಸ್-ಭಜರಂಗದಳ. ಕೊಂಚ ಅತೀ ಅನ್ನಿಸೋಷ್ಟು ಬರೆದಳು. ಅದು ಬೇಕಾಗಿರಲಿಲ್ಲ. ನಕ್ಸಲೀಯರನ್ನು ಸಂಪೂರ್ಣ ಬೆಂಬಲಿಸುತ್ತಿದ್ದಳು. ದಿಲ್ಲಿಯ ಜೆ.ಎನ್.ಯು ಗಲಾಟೆಯಾದಾಗ, ಅದರ ಹಿಂದು ಮುಂದು ನೋಡದೆ ಆ ಹುಡುಗ ಕನ್ಹಯ್ಯ ಕುಮಾರ್ನನ್ನು ಬೆಂಬಲಿಸುತ್ತಿದ್ದಳು. ಅವನನ್ನು ‘ನನ್ನ ಮಗ’ ಅನ್ನುತ್ತಿದ್ದಳು. ಕರೆಸಿ ಮನೇಲಿಟ್ಟುಕೊಂಡು ಬೆಂಬಲ ಸೂಚಿಸುತ್ತಿದ್ದಳು. ಅದನ್ನು ಭಜರಂಗಿಗಳು ವ್ಯಗ್ರರಾಗಿ ನೋಡುವಂತಾಯಿತು.

ನೋಡಿ, ಇವರೆಲ್ಲ ‘ಅಯ್ಯೋ’ ಅನ್ನುವ ಕಲಬುರ್ಗಿ, ಗೋವಿಂದ ಪನ್ಸಾರೆ, ದಾಭೋಲ್ಕರ್ ಮುಂತಾದವರಿದ್ದಾರೆ. We pity for them. ಆದರೆ ಹೀಗೆ ಸತ್ತವರನ್ನು ನೆನೆಯುತ್ತಾ ಕುಳಿತರೆ ಅಲ್ಲಿ detect ಆಗೋದನ್ನ ಗಮನಿಸೋರು ಯಾರೂ ಇರಲಾರರು.
ನೋಡಿ, ಪ್ರೊ. ಕಲಬುರ್ಗಿ ತೀರಿಕೊಂಡಾಗ, ಆ ಕೊಲೆಯ ತನಿಖೆಯನ್ನು ಸರಿಯಾದ ಅಧಿಕಾರಿಗೆ ವಹಿಸೋದು ಬಿಟ್ಟು ಡಿ.ಸಿ. ರಾಜಪ್ಪನನ್ನು ನೇಮಿಸಿ ಬಿಟ್ಟರು. ಅದು professionally ಒಂದು blender. ಈಗ ಈ ಚೆಡ್ಡಿಗಳ ಕೇಸರೀಕರಣ ತಡೆಯಲು ಯಾರಿದ್ದಾರೋ?

ಗೌರಿಯದು ಕೊನೆಯ ಬಲಿಯಾಗಬೇಕು. ಅವರೆಲ್ಲಿ ಮುತಾಲಿಕ್? ಕೊಂಚ ಅವರತ್ತ ನೋಡಬೇಕು. ಕಳೆದ ವಾರ ನಾನೊಂದು recorded ಭಾಷಣ ಕೇಳಿದೆ.
“ಮೊದಲೆಲ್ಲ ಪತ್ರಿಕೋದ್ಯಮ ತೆಲುಗು ಬ್ರಾಹ್ಮಣರ ಕೈಯಲ್ಲಿತ್ತು. ಈಗ ಅದು ಸಂಪೂರ್ಣವಾಗಿ ಹವ್ಯಕರ ಕೈಲಿದೆ. ಆದರೆ ಇಷ್ಟು ಚಿಕ್ಕ ಸಂಖ್ಯೆ ಸಾಲದು. ದೊಡ್ಡ ಮಟ್ಟದಲ್ಲಿ ಬೆಳೆಯಬೇಕು. ಪತ್ರಿಕೋದ್ಯಮ ಅಂದ್ರೆ ಹವ್ಯಕರದು ಅನ್ನುವಂತಾಗಬೇಕು. ಒಂದು ದೊಡ್ಡ ಮಟ್ಟದಲ್ಲಿ ಹವ್ಯಕ ಪತ್ರಕರ್ತರ ಸಮೂಹವಾಗಿ ಮೆರೆಯಬೇಕು..." ಅಂತೆಲ್ಲ ಮಾತನಾಡುತ್ತಿದ್ದರು. ಅದು ಪಕ್ಕಾ ರಾಮಚಂದ್ರಾಪುರ ಮಠದ ಸ್ವಾಮಿ bottom ಒರೆಸಿದ ಹವ್ಯಕ ಮಾಣಿಯ ಪಲುಕು. I mean ವಿಶ್ವೇಶ್ವರ ಭಟ್ಟರೆಂಬ ‘ಗಿಂಡಿ ಮಾಣಿ’ಯ ವಾಕ್ಕು.

ಇದೆಲ್ಲ ನೋಡಿದರೆ ಅಸಹ್ಯವಾಗುತ್ತದೆ. ಆ ಗೆಳತಿ ಗೌರಿಗೆ ‘ಆತ್ಮ’ದ ಮೇಲೆ ವಿಶ್ವಾಸವಿರಲಿಲ್ಲ. ಅವಳ ‘ಆತ್ಮಕ್ಕೆ ಶಾಂತಿ ಸಿಗಲಿ’ ಅಂತೆಲ್ಲ ನಾನು ಅನ್ನುವುದೂ ಇಲ್ಲ. ಗೌರಿಯ ಹಂತಕರು ನೇಣಿಗೇರಬೇಕು. ಅದಷ್ಟೆ ನನ್ನ ವಿನಂತಿ.

ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 12 September, 2017
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books