Ravi Belagere
Welcome to my website
ಆ ಮೇಷ್ಟ್ರು ನೆನಪಾದರೆ ನಿಮಗೂ ಹಾಗನ್ನಿಸುತ್ತಾ? ನನಗೆ ಮೇಷ್ಟ್ರುಗಳೆಂದರೆ ತುಂಬ ಪ್ರೀತಿ, ಭಯ, ಹಿಂಜರಿಕೆ. ಅವರನ್ನು ನೆನಪು ಮಾಡಿಕೊಂಡರೆ ಸಾಕು. ಅವರೆಲ್ಲಿದ್ದಾರೋ ಅಲ್ಲಿಗೇ ಹೋಗಿ ಕಾಲಿಗೆ ಬಿದ್ದು ನಮಸ್ಕರಿಸೋಣ ಅನ್ನಿಸುತ್ತದೆ. ಅಂಥ ಮೇಷ್ಟ್ರುಗಳು ಎಲ್ಲರಿಗೂ ಇದ್ದೇ ಇರುತ್ತಾರೆ. ಒಮ್ಮೆ ಹಾಗೆ ನೆನಪಿಸಿಕೊಂಡು ನಿಮ್ಮದೇ ಆದ ‘ದಿಲ್ ನೆ ಫಿರ್ ಯಾದ್ ಕಿಯಾ’ಗೆ ಬರೆಯುತ್ತೀರಾ? Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ಪ್ಲೀಸ್.
Home About Us Gallery Books Feedback Prarthana Contact Us

Buy Ravi Belagere Books online

ಒಬ್ಬೊಬ್ಬರಾಗಿ ವೆಂಟಿಲೇಟರ್ ಹತ್ತಿದ ಮೇಲೆ!

ಇದು ಯಾಕೆ ಹೀಗಾಗ್ತಿದೆ? ಗೊತ್ತಾಗವಲ್ಲದು. ನಿಮಗೆ ಉದಯ ಗೊತ್ತು. ಉದಯ ಮರಕಿಣಿ. ಆರಾಮಾಗಿ ಓಡಾಡಿಕೊಂಡಿದ್ದವನಿಗೆ ರಪ್ಪನೆ ಬಡಿಯಿತು ಲಕ್ವ. ಆ ಊರಲ್ಲಿ ಔಷಧಿ ಕೊಡ್ತಾರೆ, ಇನ್ನೆಲ್ಲೋ ನೀರು ಮಂತ್ರಿಸಿ ಕೊಡ್ತಾರೆ... ನಾನು ಅಲ್ಲಿಗೆ ಆ ವಿಷಯ ಬದಲಿಸಿ ಬೇರೇನೋ ಮಾತನಾಡತೊಡಗುತ್ತೇನೆ. ನೆಲಕ್ಕೆ ಬಿದ್ದ ಕ್ಷಣದಿಂದ ಸ್ಮಶಾನದಲ್ಲಿ ಮಲಗಿಸಿ ಬೆಂಕಿ ಕೊಡುವ ತನಕ ಹದಿನೆಂಟು ವರ್ಷ ನಾನು ಇದೇ ಪೆರಾಲಿಸಿಸ್ನ ನೋಡ್ತಾ ಬಂದಿದ್ದೇನೆ: ನನ್ನ ಅಮ್ಮನಿಗೆ ಬಡಿದಿದ್ದ ಪಾರ್ಶ್ವವಾಯಿಯನ್ನ. ಎಲ್ಲೆಲ್ಲೋ ಔಷಧಿ ಕೊಡಿಸಿ ಸುಮ್ಮನೆ ಕುಳಿತು, ಹದಿನೆಂಟು ವರ್ಷಗಳಾದ ಮೇಲೆ ಆಕೆಯ ಪಾರ್ಥಿವ ಶರೀರಕ್ಕೆ ಬೆಂಕಿ ಕೊಡುವ ತನಕ. ಅರ್ಧ ದೇಹ ಸತ್ತು ಹೋದ ನಂತರ ಹದಿನೆಂಟು ವರ್ಷ. Difficult enemy ಅದು.

ಕೆಲವೇ ವರ್ಷಗಳ ಹಿಂದೆ ಗೆಳೆಯ ಸೇತು ಮಾಧವ ಜೋಡಿದಾರ್ ಅಲ್ಲೆಲ್ಲೋ ನಾಗರ ಮಲೆಯಲ್ಲಿ ಕುಳಿತವನು ‘ಆಹ್’ ಅಂತ ಬೆನ್ನು ತಾಕಿಸಿದ್ದಾನೆ. ಅಷ್ಟೆ, ಮಾಧು ಮತ್ತೆ ಏಳಲೇ ಇಲ್ಲ. ಅವನ ಹೆಂಡತಿ ವಿಜಯಲಕ್ಷ್ಮಿ. ದೂರದರ್ಶನದಲ್ಲಿ ಆಫೀಸರ್ ಆಗಿದ್ದಳು. ಒಂದೇ ಒಂದು ತಕರಾರಿಲ್ಲದ ಗಟ್ಟಿ ಹೆಣ್ಣು ಮಗಳು. ಅವಳು ಈಡಿಗ. ಮಾಧು ಬ್ರಾಹ್ಮಣ. ಅವರಿಬ್ಬರ ಕಂದ ಕಾರ್ತಿಕ್: ನನ್ನ ಪ್ರೀತಿಯ ಕಂದ. ಈಗವನು ಇಂಜಿನೀರ್. ಅದೆಂಥದೋ ಹೊಟ್ಟೇ ನೋವು ಅಂದಳಂತೆ. ತಕ್ಷಣವೇ ಅಡ್ಮಿಟ್ ಮಾಡಿಕೊಂಡಿದ್ದರು. ನನ್ನ ಗಮನಕ್ಕೆ ಬರೋ ಹೊತ್ತಿಗೆ ಆಕೆಯನ್ನು I.C.Uಗೆ ಸಾಗಿಸಿದ್ದರು. She was on Ventilator.

ವೆಂಟಿಲೇಟರ್ಗೆ ಹೋದವರು ಜೀವಂತ ಹಿಂತಿ ರುಗಿದ್ದನ್ನು ನಾನು ನೋಡಿದ್ದು ತೀರ ವಿರಳ. ಸ್ವಲ್ಪೇ ಹೊತ್ತಿಗೆ ಉದಯನ ಅತ್ತಿಗೆ ಸರಸ್ವತಿ ಫೋನ್ ಮಾಡಿದ್ದಳು. “ವಿಜಯಲಕ್ಷ್ಮಿ ಹೋದ್ಲು ಕಣೋ! ನಾವೆಲ್ಲ ಎಲ್ಲೋ ಒಂದು ಬಳ್ಳಿಯ branches. ನೆಂಟರೋ? ಬಳಗವೋ? God knows. ಒಬ್ಬೊಬ್ಬರೂ ವೆಂಟಿ ಲೇಟರ್ ಹತ್ತಿದರು: they never returned.
ಉಳಿದವರಿಗೆ?
ಬರೀ ಮೌನ, ದುಃಖ.

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 08 August, 2017
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books