Ravi Belagere
Welcome to my website
ಆ ಮೇಷ್ಟ್ರು ನೆನಪಾದರೆ ನಿಮಗೂ ಹಾಗನ್ನಿಸುತ್ತಾ? ನನಗೆ ಮೇಷ್ಟ್ರುಗಳೆಂದರೆ ತುಂಬ ಪ್ರೀತಿ, ಭಯ, ಹಿಂಜರಿಕೆ. ಅವರನ್ನು ನೆನಪು ಮಾಡಿಕೊಂಡರೆ ಸಾಕು. ಅವರೆಲ್ಲಿದ್ದಾರೋ ಅಲ್ಲಿಗೇ ಹೋಗಿ ಕಾಲಿಗೆ ಬಿದ್ದು ನಮಸ್ಕರಿಸೋಣ ಅನ್ನಿಸುತ್ತದೆ. ಅಂಥ ಮೇಷ್ಟ್ರುಗಳು ಎಲ್ಲರಿಗೂ ಇದ್ದೇ ಇರುತ್ತಾರೆ. ಒಮ್ಮೆ ಹಾಗೆ ನೆನಪಿಸಿಕೊಂಡು ನಿಮ್ಮದೇ ಆದ ‘ದಿಲ್ ನೆ ಫಿರ್ ಯಾದ್ ಕಿಯಾ’ಗೆ ಬರೆಯುತ್ತೀರಾ? Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ಪ್ಲೀಸ್.
Home About Us Gallery Books Feedback Prarthana Contact Us

Buy Ravi Belagere Books online

ಆ ಮೇಷ್ಟ್ರು ನೆನಪಾದರೆ ನಿಮಗೂ ಹಾಗನ್ನಿಸುತ್ತಾ?

“ಹಮ್ನೇ ಅಪನಾ ಸಬ್ ಕುಛ್ ಖೋಯಾ
ಪ್ಯಾರ್ ತೇರಾ ಪಾನೇಕೋ..."

ಬೆಳಿಗ್ಗೆಯಿಂದ ಕೇಳ್ತಾನೆ ಇದ್ದೇನೆ. ಒಂದು full CD ಇದೊಂದೇ ಹಾಡು record ಮಾಡಿಸಿಟ್ಟುಕೊಂಡಿದ್ದೇನೆ. ಕಾರ್ನಲ್ಲಿ ಮಲಗಿದರೆ ಒಂದಿಡೀ journeyಗೆ ಈ ಹಾಡು ಸಾಕು. ಒಮ್ಮೊಮ್ಮೆ ಏನೋ ನೆನಪಾಗಿ, ಯಾರದೋ ನೆನಪಾಗಿ quiet ಆಗಿ ಅಳುತ್ತೇನೆ. ಏನುಪಯೋಗ? ಹದಿನಾಲ್ಕರಲ್ಲಿ ಕಳೆದುಕೊಂಡಿದ್ದೇನೆ. ಈಗ ಅರವತ್ತರ ಆಸುಪಾಸಿನಲ್ಲಿ ನೆನಪಿಸಿಕೊಂಡರೆ, ಹಂಬಲಿಸಿದರೆ ಏನುಪಯೋಗ? ಆ ಹುಡುಗಿ ದೂರವಾದದ್ದಿದೆಯಲ್ಲ? ಅದು ನನ್ನ ಬದುಕಿನ biggest curse. ನನ್ನೊಂದಿಗೇ ಸಾಯಬೇಕು ಅದು.

ಬಿಡಿ. ನಾನು ಟೀಚರ್ಳ ಮಗ ಎಂಬುದಕ್ಕೋ ಏನೋ, ನನಗೆ ಮೇಷ್ಟ್ರುಗಳೆಂದರೆ ತುಂಬ ಪ್ರೀತಿ, ಭಯ, ಹಿಂಜರಿಕೆ. ನಾನು ದೈವವೇನೋ ಎಂಬಂತೆ ಪ್ರೀತಿಸಿದ್ದು ಎಸೆಸೆಲ್ಸಿ ದಾಟಿಸಿದ ಬಹದ್ದೂರ್ ಶೇಷಗಿರಿ ರಾಯರನ್ನ. ಅವರ ಕೈಲಿ ತಿಂದಷ್ಟು ಒದೆಯನ್ನ, ನನ್ನ ಅಮ್ಮ ಬಡಿಸಿದ ಇಡ್ಲಿಗಳನ್ನೂ ತಿಂದಿರಲಿಕ್ಕಿಲ್ಲ. ತುಂಬ ಶಿಸ್ತಿನ, strict ಆದ, ಕೆಟ್ಟ ಸಿಟ್ಟಿನ, ಕಟ್ಟುಮಸ್ತು ದೇಹದ ಹಿರಿಯರು. ಅವರಿಗೆ ಏನನ್ನು ಸಂದಾಯ ಮಾಡಬಹುದಿತ್ತೋ, ಅದನ್ನು ಮಾಡಿದ್ದೇನೆ.
ಇನ್ನೊಬ್ಬ ಗುರುಗಳು ಪ್ರೊ.ಬಿ. ಶೇಷಾದ್ರಿಯವರು. ನನಗವರು ಎಕನಾಮಿಕ್ಸ್ ಲೆಕ್ಚರರ್. ಅವರದು ದೊಡ್ಡ ಪ್ರತಿಭೆ. ಮುಂದೆ ಅದೇ ಕಾಲೇಜಿ ನಲ್ಲಿ ನಾನು ಲೆಕ್ಚರರ್ ಆಗಿ ಶೇಷಾದ್ರಿಯವರೊಂದಿಗೆ ಕೆಲಸ ಮಾಡಿದೆ.

ಅವರನ್ನು ನೆನಪು ಮಾಡಿಕೊಂಡರೆ ಸಾಕು. ಅವರೆಲ್ಲಿದ್ದಾರೋ ಅಲ್ಲಿಗೇ ಹೋಗಿ ಕಾಲಿಗೆ ಬಿದ್ದು ನಮಸ್ಕರಿಸೋಣ ಅನ್ನಿಸುತ್ತದೆ. ಅಂಥ ಮೇಷ್ಟ್ರುಗಳು ಎಲ್ಲರಿಗೂ ಇದ್ದೇ ಇರುತ್ತಾರೆ. ಒಮ್ಮೆ ಹಾಗೆ ನೆನಪಿಸಿಕೊಂಡು ನಿಮ್ಮದೇ ಆದ ‘ದಿಲ್ ನೆ ಫಿರ್ ಯಾದ್ ಕಿಯಾ’ಗೆ ಬರೆಯುತ್ತೀರಾ? ಇದರ ಜೊತೆಗೆ ನಿಮ್ಮ ಇತ್ತೀಚಿನ ಭಾವಚಿತ್ರವಿದ್ದರೆ ಲಗತ್ತಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
ಪ್ಲೀಸ್.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 17 July, 2017
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books