Ravi Belagere
Welcome to my website
ಲೀಲಾವತಿಯವರ ಬಾಯಿಂದಲೇ ಕೇಳಿಕೊಂಡು, ಅವರ ಈ ‘ಜೀವನ ಕಥನ’ ’ರಾಜ್ ಲೀಲಾ ವಿನೋದ’ ಬರೆದಿದ್ದೇನೆ. ಇದರಲ್ಲಿ ಒಂದಕ್ಷರ ಸುಳ್ಳಿಲ್ಲ. ಇದು ರಾಜಕುಮಾರ್, ಪಾರ್ವತಮ್ಮ ಅವರ ಬಗ್ಗೆ ಏನೇನೊ negative ಅಂಶಗಳಿರುವ ಪುಸ್ತಕವಲ್ಲ. It is not against him. ಆ ಕಾಲದ ಘಟನೆಗಳೇನಿವೆ-ಅವು ಮಾತ್ರ ಇಲ್ಲಿವೆ.
ಇದನ್ನು ಓದುವ ನೀವು ನನಗೊಂದು mail ಕಳಿಸಿದರೆ ಸಾಕು. ಅಭಿಪ್ರಾಯ ಸ್ಪಷ್ಟವಾಗಿರಲಿ. 
[email protected]ಗೆ ನೀವು ಅಭಿಪ್ರಾಯ ಕಳಿಸಿ. ಎಂದಿನಂತೆ ಓದುಗ ದೊರೆಗೆ ನಮಸ್ಕಾರಗಳು.
Home About Us Gallery Books Feedback Prarthana Contact Us

Buy Ravi Belagere Books online

ರೇಪಿಸ್ಟ್ ಹರತಾಳು: ಡಾನ್ಸಿಂಗ್ ಡಾರ್ಲಿಂಗ್ ರೇಣುಕಾ ಮತ್ತು ಇಲ್ಲಿನ ಅಗಾಧ ಮಳೆ!

ಒಂದು ನೆಮ್ಮದಿಯ ನಿದ್ರೆ ಬೇಕು. Just a sleep. “ಅವರಿಗೆ ಸಿಗದೆ, ಇವರಿಗೆ ಸಿಗದೆ, ಪೊಲೀಸರಿಗೆ ಸಿಗದೆ-keep running. ಓಡುತ್ತಿರುವವನನ್ನು ಹಿಡಿಯಲಾಗದು. ಒಂದೆಡೆ ಕೂತವನು, ಅದೆಷ್ಟು ಎಚ್ಚರಿಕೆಯಿಂದ ಕೂತರೂ ಒಂದೇ ಬೀಸಿನಲ್ಲಿ ಬಡಿದು ಬಿಡಬಹುದು!" ಅಂತ ಬಿನ್-ಲಾಡೆನ್ ಬಗ್ಗೆ ಹೇಳಿದ್ದು ನೆನಪಾಗುತ್ತಿದೆ. They want to find me. I am just a jumping Jack. ಯೌವನದಲ್ಲಾಗಿದ್ದಿದ್ದರೆ ಆ ಮಾತು ಬೇರೆ ಇತ್ತು. ಅರವತ್ತಕ್ಕೆ ಹತ್ತಿರವಿದ್ದೇನೆ. ಶಿಕ್ಷೆ ಒಂದು ವರ್ಷ: ದಂಡ ಹತ್ತು ಸಾವಿರ. ಹಿರಿಯ ಮಿತ್ರ ಮಾಜಿ ಮುಖ್ಯಮಂತ್ರಿ ಶೆಟ್ಟರ್ ಸಿಕ್ಕಿದ್ದರು. ತುಸುವೇ ಹೊತ್ತಿಗೆ ಪ್ರಕಾಶ್ ರೈ ಜೋಗಿಯೊಂದಿಗೆ ಬಂದ. ಅವನದು ಅಪ್ಪಟ ತಾಯಿಯ ಪ್ರೀತಿ. ಕೆನ್ನೆ ಸವರುತ್ತಲೇ ಇದ್ದ: ಇದ್ದಷ್ಟು ಹೊತ್ತು. ನಾವೇನೂ ಪ್ರತಿನಿತ್ಯ ಸಿಗುವವರಲ್ಲ. ಸಿಕ್ಕೆವು ಅಂದ ಮೇಲೆ ಅಷ್ಟು ಸರಳವಾಗಿ ಬಿಡುವವರಲ್ಲ. ನನಗೆ ಮರಣದಂಡನೆಯೇನೂ ಆಗಿಲ್ಲ. But one year is not a period of negligence.

ನಿಮಗೆ ಗೊತ್ತಿದೆ. ರೇಣುಕಾಚಾರ್ಯನ-ನರ್ಸ್ ಜಯಲಕ್ಷ್ಮಿಯ ಕಥನ-ಕವನ with number of proofs ಈಚೆಗೆಳೆದದ್ದು ನಾನು. ಅದಾದ ಮೇಲೆ ಹರತಾಳು ಹಾಲಪ್ಪನ milk and milk shake ಬಂತು. ಪರಮ ಪೆದ್ದ ಮೂಡಿಗೆರೆ ಶಾಸಕ ಕುಮಾರ ಸ್ವಾಮಿ, ಸೀದ ನಡೆದು ಬಂದು ನಮ್ಮೆದುರಿಗೇ ಕೆಸೆಟ್ ಸಮೇತ ಸಿಕ್ಕ. ಇವು ಅನೇಕವಿವೆ.

ನನಗೆ ಕೆ.ಬಿ. ಕೋಳಿವಾಡರ ಪರಿಚಯವಿಲ್ಲ. ತೀರ ಬೆನ್ನತ್ತಿ ಅವರ ವಿರುದ್ಧ ನಾನು ಬರೆದೂ ಇಲ್ಲ. ಅವರಾದರೂ ‘ಪತ್ರಿಕೆ’ಯ ನಜರು ಬೀಳುವಂಥವರಲ್ಲ. Experienced and seasoned person he is. ಸಾಮಾನ್ಯವಾಗಿ ಹಕ್ಕು ಚ್ಯುತಿ ಸಂಭವಿಸಿದಾಗ ಆ ಸಮಿತಿ “ನಮಗೆ ಖುದ್ದು ಬಂದು ಕಂಡು ಹಾಜರಾಗಿರಿ" ಎಂದು ಪತ್ರ ಬರೆಯುತ್ತದೆ. ಒಂದಲ್ಲ ಮೂರು ಸಲ ಬರೆಯುತ್ತದೆ. ಅದು neglect ಮಾಡುವಂಥದಲ್ಲ. ಆದರೆ ನೋಡಿ: ಈ ಲೋಪ ಎಲ್ಲಿ ಸಂಭವಿಸಿದೆಯೋ, ಕಾಣೆ. ಮೂರು ಸಲ ಪತ್ರ ಕಳಿಸಿದ್ದೇವೆ ಅನ್ನುತ್ತಾರೆ. ಆದರೆ, ನನಗೆ ಒಂದೇ ಒಂದು ಪತ್ರ ಬಂದಿಲ್ಲ. ಇಂಥ ವಿಷಯಗಳಲ್ಲಿ ನಾನು neglect ಮಾಡೋ ಅಹಂಕಾರಕ್ಕೆ ಬೀಳುವುದಿಲ್ಲ. “ನೋಡಿ ಸರ್ ಹೀಗಾಗಿದೆಯಂತೆ" ಅಂತ ಸಚಿವ ಎಚ್ಕೆ ಪಾಟೀಲರಿಗೆ ಹೇಳಿದೆ. ಅವರಿಗೆ ಕೋಳಿವಾಡರ ಪರಿಚಯವಿದೆ ಅನ್ನಿಸಿತ್ತು. ಆ ನಂತರ ಎಚ್ಕೆ ಪಾಟೀಲರ ಜವಾಬು ಬರಲಿಲ್ಲ. ಹಾಗಾದರೆ ಎಚ್ಕೆ ಪಾಟೀಲರು ಮಾತನಾಡಿ ಶಮನ ಮಾಡಿರಬೇಕು ಬಿಡು ಅಂದುಕೊಂಡೆ. ಮೊನ್ನೆ ಬೆಳಿಗ್ಗೆ ಪತ್ರಿಕೆಗಳನ್ನು ನೋಡಿದಾಗಲೇ ಗೊತ್ತಾದದ್ದು: seriousness of it.

ಜೈಲು ಶಿಕ್ಷೆ ವಿಧಿಸಿದ ಮೇಲೆ ಪೊಲೀಸರ entry ಆಗುತ್ತದೆ. ಆದರೆ ಪೊಲೀಸರು ಬರಲಿಲ್ಲ. ಬಂದದ್ದು ಚಡಪಡಿಕೆ. ಆದರೂ ಅವರಿಗೆ ಶರಣಾಗಿ ಬಿಡೋಣ: ಜಾಮೀನು ಪಡೆಯೋಣ ಅಂದರೆ ರಮಜಾನ್ ಸೇರಿದಂತೆ ಸಾಲು ಸಾಲು ರಜೆ. ಅಲ್ಲಿ ಜೋಯಿಡಾದಲ್ಲಿ ಒಂದು construction ನಡೆದಿದೆ. ಎಂದಿನಂತೆ ಅದಕ್ಕೆ ತಾಯಿ ನೆರಳು ಕರ್ನಾಟಕ ಬ್ಯಾಂಕ್: ಅಲ್ಲೀಗ ಹಿರಿಯರಾದ ಮಹಾಬಲೇಶ್ವರ ಭಟ್ಟರಿದ್ದಾರೆ. ಈ ತನಕ ಅಷ್ಟು ಸಭ್ಯ, ಸಮಾಜಮುಖಿ ಹಿರಿಯರನ್ನ ನಾನು ನೋಡಿಯೇ ಇಲ್ಲ. ಇನ್ನೇನು, ಮಂಗಳೂರಿಗೆ ಹೋಗಿ ಅವರನ್ನು ಕಾಣೋಣ ಅಂದುಕೊಂಡೆ. ಅಲ್ಲಿನ್ನೂ ದೊಡ್ಡ ಮಟ್ಟದ ಮಳೆಗಾಲ ಆರಂಭವಾಗಿಲ್ಲ. But ಕೆಲವೇ ದಿನಗಳಲ್ಲಿ ಅದು ಆಗಲಿದೆ. ಆ ಹೊತ್ತಿಗೆ ನನ್ನ project ಆರಂಭಿಸಿ ಒಂದು ಹಂತಕ್ಕೆ ಬಂದು ಬಿಟ್ಟರೆ I am safe. ಇಡೀ ಕಟ್ಟುವಿಕೆಯನ್ನು ನಾನು ಲಿಂಗ ಮೂರ್ತಿಯವರಿಗೆ ವಹಿಸಿದ್ದೇನೆ. ಲಿಂಗಮೂರ್ತಿ ನನ್ನ ಪಾಲಿಗೆ ಆತ್ಮೀಯ ಗೆಳೆಯರು. Contractor ಅಷ್ಟೇ ಆಗಿದ್ದರೆ ಬೇರೆ ಮಾತು. He is my dearest friend. ಮೊಟ್ಟ ಮೊದಲ ದಿನ, ಅಲ್ಲೇ estateನಲ್ಲಿ ಲಿಂಗಮೂರ್ತಿಯವರಿಗೆ as a guesture of love ಎರಡು ರುಪಾಯಿಗಳ ‘ಸಂಚಕಾರ’ ಕೊಟ್ಟೆ. ಹೆಚ್ಚಿನ ಸಲ ದನದ ಸಂತೆಯಲ್ಲಿ ಸಂಚಕಾರ ಎಂಬ ಶಬ್ದ ಕೇಳಿ ಬರುತ್ತದೆ. It's a sort of advance payment.

ಅಷ್ಟೇ ಶ್ರದ್ಧೆಯಿಂದ ಅವರು ಸಂಚಕಾರ ಪಡೆದು ಕೆಲಸ ಆರಂಭಿಸಿದರು. It's just a guesture. ಅಲ್ಲಿಂದ ಹಿಂತಿರುಗುವಾಗ ಹುಬ್ಬಳ್ಳಿಗೆ ಬಂದೆ. I don't know. ದೇಹದಲ್ಲಿ ಸೋಡಿಯಂ ಅಂತ ಇರುತ್ತದೆಯಂತೆ. ಅದೇನು ಅಂತ ಗೊತ್ತಿಲ್ಲ. ಅನಾಯಾಸ ಸಿಕ್ಕಿದ ಹಳೆಯ ಮಿತ್ರರಾದ ಡಾ.ಸತ್ತೂರ ಅವರು “ರವೀ, immediately ಬಾ" ಅಂದವರೇ ಹುಬ್ಬಳ್ಳಿಯ ಒಂದು corner of hell ಎಂಬಂತಿರುವ ಕೆ.ಎಂ.ಸಿ. ಆಸ್ಪತ್ರೆಗೆ ಸೇರಿಸಿಯೇ ಬಿಟ್ಟರು. Sodium level drop ಆದರೆ ಆರೋಗ್ಯದಲ್ಲಿ ತುಂಬ ಏರುಪೇರಾಗುತ್ತದೆ ಅಂತ ಮೊದಲು ಗೊತ್ತಾದದ್ದು ನನ್ನ ಸಂಬಂಧಿಯೊಬ್ಬರಿಗೆ ಆದಾಗ. ಅದು ನಂಗೇ ಆಗಿದೆಯಾ? ತುಂಬ ಭಯವಾಯ್ತು. Check ಮಾಡೋಣ ಅಂದ್ರೆ ಕೈಲಿ medical dictionary ಇಲ್ಲ. ಆದರೂ ಆಸ್ಪತ್ರೆಗೆ ಬಂದೇ ಬಿಟ್ಟೆ. ಇಲ್ಲಿನ ICUನಲ್ಲಿ ದಾಖಲಾದೆ. It's like a general ward. ಅದೇನು ನಿದ್ದೆಯೋ? ಸುಸ್ತೋ-ಗೊತ್ತಿಲ್ಲ. I slept very well. ಮಧ್ಯದಲ್ಲಿ ಬಲಗಿವಿಯ ಪಕ್ಕ ಒಂದೇನೋ ಕರಪರ ಶಬ್ದವಾಯಿತು. But not very disturbing. ಇರಲಿ ಬಿಡು ಅಂತ ಮಲಗಿ ಬಿಟ್ಟೆ. ಎಚ್ಚರವಾದ ಮೇಲೆ ಅಭ್ಯಾಸ ಬಲದಿಂದ ಗಡ್ಡ ಸವರಿಕೊಂಡೆ. ಎಲ್ಲಿದೆ ಗಡ್ಡ? ಮೀಸೆಯೊಂದನ್ನು ಬಿಟ್ಟು the whole ಕೆನ್ನೆ is shaved. ಅಲ್ರೀ ಬೇರೇನಿಲ್ಲ, ಮನೆಗೆ ಹೋದರೆ ಅಕಸ್ಮಾತ್ ನನ್ನ ನಾಯಿ ಮತ್ತು ಹೆಂಡತಿ ಗುರುತು ಹಿಡಿಯದಿದ್ದರೆ? ನಿಜಕ್ಕೂ ಚಿಂತಾಕ್ರಾಂತನಾಗಿದ್ದೇನೆ.

ಈ ಸುಂದರ ಗಡ್ಡ ಬಹುಕಾಲದಿಂದ ಇತ್ತು. ಆದರೆ ಮದುವೆ ಸಮಯದಲ್ಲಿ ತೆಗೆದಿದ್ದೆ: ಅಮ್ಮನ ಒತ್ತಾಯದಿಂದ. ಆನಂತರ ಬಿಂದಾಸ್! ಅಸಲು ಬ್ಲೇಡೇ ತಾಕದ ಹುಲುಸು ಗಡ್ಡ from ೧೯೭೯ to ೨೦೧೭: ಎಷ್ಟು ಜತನಾಗಿ ನೋಡಿಕೊಂಡೆ. ಕ್ಷೌರಿಕ ರಮೇಶ್ ತುಂಬ ಆತಂಕಭರಿತನಾಗಿ trim ಮಾಡುತ್ತಿದ್ದ. ನಡುಗಾಲದ ಗೆಳತಿಯರಂತೂ “ಬಿದ್ದಿದ್ದೇ" ಆ ಗಡ್ಡಕ್ಕಾಗಿ. ನೀವು ನಂಬ್ತೀರಾ? ಈ ವಯಸ್ಸಿನಲ್ಲೂ ನನಗೆ ಬರುತ್ತವೆ: letters of love.

ಗಡ್ಡದ ಆ ಹುಲುಸಿನಲ್ಲಿ ಅವರು ಬೆರಳಾಡಿ ಸುತ್ತಾ ಎದೆಗೊತ್ತಿ ವಕ್ಷಸ್ಥಲದ ಮೇಲೆ ವಾಲಿಕೊಂಡರೆ... ಯಾಕೆ ಸುಳ್ಳು ಹೇಳಲಿ? ಅವರಿಗದು ಒಂಥರದ orgasm. I was proud of the ಗಡ್ಡ. ಒಂಥರಾ ಮತ್ತಿನಲ್ಲಿ ಮಲಗಿದ್ದೋನ ಗಡ್ಡ ಹಿಡಿದು, ಒಂಥರಾ ಚರಚರ ಸದ್ದು. ಎಚ್ಚರವಾದ ನಂತರ ನೋಡಿಕೊಂಡರೇ ಏನಿದೆ? ಚಾಕೊಲೇಟು ಮಾರಿ ಸುಸ್ತಾಗಿ ಬಂದು ಮರದ ಕೆಳಗೆ ಕುಳಿತ ಮಾರವಾಡಿ ಬಾಲಕನಂತಾಗಿದ್ದೆ.

With all these, ಕೆಲವು ಕಸ ಕಡ್ಡಿ ಸಮಸ್ಯೆಗಳಿಗೆ ದೇಹ ಸಂಬಂಧಿ ಸಮಸ್ಯೆಗಳಿಗೆ treatment ಪಡೆದದ್ದೂ ಆಯಿತು. ನನ್ನ ಜೋಯಿಡಾ ಬಂಗ ಲೆಗೆ ದೂರವೇ ನಿಲ್ಲ. ಹೋದೇನು. ಆಗಲೇ ಮಳೆ ಚಿಗಿತಿದೆ. ಹೋದರೆ ಮೂರು ತಿಂಗಳ ಮುಸಲಧಾರೆ. ಅಲ್ಲಿನ ಕ್ಯಾಸಲಾಕ್, ಧುಮ್ಮಿಕ್ಕುವ ದೂಧ್ಸಾಗರ್, ಉಳವಿ ದೇವಳ, ಸಿಂಥೇರಿ ಲೇಕ್ಸ್ -ವಾಹ್! ಆ ಮಜಾನೇ ಬೇರೆ. ಗುಡ್ಡಾ ಗುಡ್ಡಾ ಸ್ಥಾವರ ಲಿಂಗಾ- ಅಂವಕೇ ಅಭ್ಯಂಗ!" ಅಂದರು ಬೇಂದ್ರೆ. ಮಳೆ, ಮುಸಲ ಧಾರೆ, unending echo of rain ಇಲ್ಲೇ ಬದುಕ ಬೇಕು, it destined.

ಆದರೆ ನೀವೆಲ್ಲ ನೆನಪಾಗ್ತೀರಿ. ನಾವು ಕೆಲ ಪತ್ರಕರ್ತರು, ಕೆಲ ಸಂಘಟನೆಗಳು ಈ ಬಾರಿ ಸಿದ್ರಾಮಯ್ಯನ ಪಂಚೆ ಪೀಕಲು ನಿರ್ಧರಿಸಿದ್ದೇವೆ. ಆತನ ಕಥೆ ಮುಗಿಸ್ತೇವೆ. “Killing the messenger" ಎಂಬ ಮಾತಿದೆ: ದೂತನನ್ನು ಕೊಂದು ಬಿಡು ಅಂತ. ಪತ್ರಕರ್ತ ಒಬ್ಬ ನಿರಪರಾಧಿ ದೂತ. ಅವನನ್ನೇ ಕೊಂದು ಬಿಟ್ಟಿದ್ದಾರೆ? ಬಿಂದಾಸ್ ಬರೀತಾ ಕೂತವನಿಗೆ ಈ ಶಿಕ್ಷೆ. ನಾನು ಸಿದ್ರಾಮಯ್ಯನ ಬಗ್ಗೆ ತುಂಬ respect and hopes ಇಟ್ಟುಕೊಂಡಿದ್ದೆ. ಪತ್ರಕರ್ತರನ್ನೇ ವಧಾಸ್ಥಾನಕ್ಕೆ ಎಳೆದಾನು ಎಂಬ ನಿರೀಕ್ಷೆ ಇರಲಿಲ್ಲ. ಇನ್ನು ಆತನಿಗಿದೆ-ನಮಗಿದೆ! ಅಮೀನ್ ಮಟ್ಟು ಏನು advice ಕೊಡ್ತಾರೋ? ಇದು ಅವರು ಕೊಟ್ಟ advice ಆಗಿದ್ದರೆ dear Mattoo, we will take a toll.. ಸರ್ಕಾರದೊಂದಿಗೆ ಇದು ಮೊದಲ He will suffer. ಪಂಚೆ ಪೀಕದೆ ದಾರಿಯಿಲ್ಲ.

ನಮಗೆ ನಿಮ್ಮ advice ಬೇಕು.
Please lead us.

ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 01 July, 2017
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books