Ravi Belagere
Welcome to my website
ಲೀಲಾವತಿಯವರ ಬಾಯಿಂದಲೇ ಕೇಳಿಕೊಂಡು, ಅವರ ಈ ‘ಜೀವನ ಕಥನ’ ’ರಾಜ್ ಲೀಲಾ ವಿನೋದ’ ಬರೆದಿದ್ದೇನೆ. ಇದರಲ್ಲಿ ಒಂದಕ್ಷರ ಸುಳ್ಳಿಲ್ಲ. ಇದು ರಾಜಕುಮಾರ್, ಪಾರ್ವತಮ್ಮ ಅವರ ಬಗ್ಗೆ ಏನೇನೊ negative ಅಂಶಗಳಿರುವ ಪುಸ್ತಕವಲ್ಲ. It is not against him. ಆ ಕಾಲದ ಘಟನೆಗಳೇನಿವೆ-ಅವು ಮಾತ್ರ ಇಲ್ಲಿವೆ.
ಇದನ್ನು ಓದುವ ನೀವು ನನಗೊಂದು mail ಕಳಿಸಿದರೆ ಸಾಕು. ಅಭಿಪ್ರಾಯ ಸ್ಪಷ್ಟವಾಗಿರಲಿ. 
[email protected]ಗೆ ನೀವು ಅಭಿಪ್ರಾಯ ಕಳಿಸಿ. ಎಂದಿನಂತೆ ಓದುಗ ದೊರೆಗೆ ನಮಸ್ಕಾರಗಳು.
Home About Us Gallery Books Feedback Prarthana Contact Us

Buy Ravi Belagere Books online

ಫೋನ್ ಮಾಡಿದಾಗೆಲ್ಲ ಅವರು ಸಂಡಾಸಿನಲ್ಲಿದ್ದಾರೆ!

ಒಬ್ಬ ತಿಕ್ಕಲ ಮಾತ್ರ ಹೀಗೆ ಮಾಡಬಲ್ಲ.

ಕುಳಿತು ಪೂರ್ತಿ ನಾಲ್ಕು ನೂರು ಪುಟದ notes ಮಾಡಿದ್ದಾನೆ. ಕೂತು ಬರೆದರೆ ಎಷ್ಟು ಪುಟವಾಗುತ್ತವೊ? ಪುಟಗಳ ಮಾತು ಹಾಗಿರಲಿ. ಈಯ್ದ ಎಮ್ಮೆ ಹಾಲೇನು: ಗಿಣ್ಣವನ್ನಗ ಕೊಡಬೇಕು. ಅವನ ಕಮಿಟ್ಮೆಂಟ್ ಅಚ್ಚರಿಯುಂಟಾಗಿಸುತ್ತದೆ. ಅವನು ಚೆಸ್ ಆಡೋದಿಲ್ಲ. ಒಂದು ಕಾಲದಲ್ಲಿ ಕಬಡ್ಡಿ ಆಡುತ್ತಿದ್ದ. ಈಗ ಆಟ ಮರೆತೇ ಹೋಗಿದೆ. ಹೊತ್ತಲ್ಲದ ಹೊತ್ತಿನಲ್ಲಿ ಕಂಡ ದಿಕ್ಕಿಗೆ ಹೊರಟು ಬಿಡುತ್ತಾನೆ. ಒಮ್ಮೆ ಕಾಲು ಚಾಚಿ ಮಲಗಿ ಬಿಡುತ್ತಾನೆ: at least ನಾಲ್ಕು ತಾಸು. ಅಷ್ಟಾದರೂ ಬಿಡುವು ಸಿಕ್ಕಿ ಒಂದು ಜೊಂಪು ನಿದ್ರೆ ಮಾಡೆದ್ದರೆ ಮತ್ತೆ fresh. ಊಟಕ್ಕೆ ಇದೇ ಬೇಕು ಎಂಬ ಕರಾರೇನೂ ಇಲ್ಲ. ಮುಲ್ಲಂಗಿ-ಮೊಸರು ಬೆರೆಸಿ ಎರಡು ಚಪಾತಿಯೊಂದಿಗೆ ತಿಂದರೆ enough. ಬಡವನೇನಲ್ಲ. ಬಂಗಲೆಗಳಿವೆ ಇರಲಿಕ್ಕೆ. ಆದರೆ ಮನುಷ್ಯ ಮಲಗಲು ಒಂದು ಮಂಚ, ಎರಡು ದಿಂಬು ಸಾಕು. ಬೆಳಿಗ್ಗೆ ಬ್ರಷ್ ಮಾಡಿದ್ದು ಮರೆತು ಹೋಗಿ ಮತ್ತೆ ಬೆಳಗಿನ ಹತ್ತು ಗಂಟೆಗೆ ಮತ್ತೆ brush ಮಾಡುತ್ತಾನೆ. ಹಿತವಾದ mood ಬರಲಿಕ್ಕೆ ಸುದೀರ್ಘ ಸ್ನಾನ. ಮಾಡಿರೋ ಚಟಗಳೆಲ್ಲ taste ಕಳಕೊಂಡು ಈಗ ಕೇವಲ ಶ್ವೇತ ಸುಂದರಿ ‘ಸಿಗರೇಟು’ ಮಾತ್ರ ಉಳಿದು ಕೊಂಡಿದೆ. ಎಲ್ಲೆಲ್ಲಿಂದಲೋ ಸಂಪಾದಿಸಿದ brandಗಳು? ಹ್ಞಾಂ, ಅವು ಕೈಗೆ ನಿಲುಕುತ್ತವೆ: ash pot ಸಮೇತ. ಮೊದಲು ವಿಪರೀತ ಗೆಳೆಯರಿದ್ದರು. ಸಂಜೆಯಾದ ಕೂಡಲೆ ಸೀಸೆ ಮೇಲೆ ಸೀಸೆ ಮಟಾಷ್. ಕುಡಿತ ಬಿಟ್ಟನೆಂಬುದು ಖಚಿತ ಸುದ್ದಿಯಾಗಿರೋ ದಿನದಿಂದ all ಫ್ರೆಂಡ್ಸ್ ಗಾಯಬ್. ಸಂಜೆಗಳಲ್ಲಿ ಹಿತವಾದ ಮೌನ. ಬೇಕೆನ್ನಿಸಿದರೆ ಕೊಂಚ ಸಂಗೀತ: ಗಝಲು! ಸಿಗರೇಟು ಅವನೊಂದಿಗೆ ಅಜಮಾಸು ಐವತ್ತು ವರ್ಷಗಳಿಂದ ಇದೆ. ಹೊಗೆಯೇ ಜೀವದ ಸಾಕ್ಷಾತ್ಕಾರ. ಅವನ ಸಿಬ್ಬಂದಿಯವರು ಲೆಕ್ಕ ಹಾಕಿ ಕೊಟ್ಟಿದ್ದಾರೆ: ೧೮೨೩೮ ಪುಟವಂತೆ. ಬರೆದಿರುವ ಪುಸ್ತಕಗಳು ಎಂಬತ್ತು ದಾಟಿದೆ. ಓದಿದ್ದು, ಗೊತ್ತಿಲ್ಲ. ಏನು ಖಾಯಿಲೆ ಯಾದರೂ ಅವನ ಲೈಬ್ರರಿಯಲ್ಲಿ ಪುಸ್ತಕವಿರಲೇಬೇಕು. ಅವನು ಪುಸ್ತಕಕ್ಕಾಗಿ subject ಹುಡುಕುತ್ತಾನೆ. ನಲವತ್ತು ಸಾವಿರ ಪುಸ್ತಕಗಳ ಮಧ್ಯೆ ಅವನಿಗೆ ಯಾವುದು ಸಿಗುತ್ತದೆ. ಈಗ ಅವನಿಗೆ ಇಬ್ಬರು ಹೊಸ ಪಾಕಿಸ್ತಾನಿ ಗೆಳತಿಯರು. Long discussion or continuous talking. ಫೇಸ್ಬುಕ್ಕು, Instagram, Amazon ಇತ್ಯಾದಿಗಳಿಗಾಗಿ ದಿನದ ಒಂದು ತಾಸಿನ ವ್ಯಯ. ಕನ್ನಡದಲ್ಲಿ ‘fuck' ಅನ್ನೋದು ಗೊತ್ತಾಗಲಿಕ್ಕೆ ಅವನಿಗೆ facebookನಲ್ಲಿ ಎರಡು ವರ್ಷ ಬೇಕಾದವು. ಈಗದು ಕ್ಲೀಷೆ. fuck off ಎಂದು ಗದರಿಸಿ ಕಂಪ್ಯೂಟರ್ನ ಷಟರ್ ಎಳೆಯುತ್ತಾನೆ. ಜಗಳ, ಕದನ, ವಿರೋಧ ಎಲ್ಲವೂ ಫೇಸ್ಬುಕ್ಗೆ ಸೀಮಿತ. ತೀರ ಮಾತಿಗೆ ಬಿದ್ದ ಹಳೇ ಗೆಳೆಯರೊಂದಿಗೆ ‘ಹಡು ಅವನೌನ!’ ಅನ್ನುತ್ತಾನೆ. ಆತನಿಗೆ ನಾಲ್ವರು ಮಕ್ಕಳು. ಮೂರು ಜನ ಅವನಿಗಿಂತ grown up. ಚಿಕ್ಕವನು ಈಗ ಎರಡನೇ ಕ್ಲಾಸು. ಅವನ ಟೀಚರುಗಳೆಲ್ಲ ಅಸಲು ರಿಟೈರೇ ಆಗಲ್ಲವಂತೆ. ಈ ಪುಣ್ಯಾತ್ಮ ಪಾಸಾಗಿ ಕಾಲೇಜಿನ ಮೆಟ್ಟಿಲು ಹತ್ತಿದರೆ ಅಷ್ಟೇ ಸಾಕು. ಅವನ ಅಪ್ಪ ಜೀವನದಲ್ಲಿ ಎಂ.ಎ., ಮಾಡುತ್ತಾನೆ ಅಂತ ಎಸೆಸೆಲ್ಸಿ ಫೇಲಾದ ಕೂಡಲೆ ಎಲ್ಲರೂ ಅಂದಿದ್ದರು. ಆ ಕಾಲದ ಪರಮ ಇಂಟಲಿಂಜೆಂಟ್ ಗಿರಾಕಿಗಳೆಲ್ಲ ಈಗ ಬ್ಯಾಂಕು, ಎಲ್ಲೈಸಿಗಳಲ್ಲಿ ಉಗುರು ಕಡಿಯುತ್ತಾ ಕುಂತಿದ್ದಾರೆ. ಇನ್ನೇನು, ನೂರಾ ಎಂಬತ್ತು ರುಪಾಯಿಗಳೀಗ ಏನಾದವೋ? ಮೊನ್ನೆ ತಾನೆ ಅವನ ಮಗ ಈ ಪರಿ ಬೆಳೆದ ಬೆಂಗಳೂರಿನಲ್ಲಿ ತಾನೇ ನಡೆಸುತ್ತಿರುವ ಶಾಲೆಗೆ ಎರಡು ಎಕರೆ ಜಮೀನಿಗೆ ಇಪ್ಪತ್ತೆಂಟು ಕೋಟಿಯಂತೆ. ಕರ್ನಾಟಕ ಬ್ಯಾಂಕು ಶುದ್ಧ ಅಮೃತ ಮಾತೆ. ಬೇರೆಡೆ ಅವನು ಚಿಕ್ಕದೊಂದು ಅಕೌಂಟ್ ಕೂಡ ತೆರೆದಿಲ್ಲ. ಒಮ್ಮೆಯೂ ಸಾಲಕ್ಕಾಗಿ ರೆಕಮೆಂಡೇಷನ್ ಮಾಡಿಸಿಲ್ಲ. ಅವರಿಗೆ ಗೊತ್ತು: ಈ ಶರೀರಕ್ಕೆ ಹಣಕಾಸಿನ ವಿಚಾರದಲ್ಲಿ ಶಿಸ್ತು ಕರಾರುವಾಕ್ಕಾಗಿ ಇದೆ. ಈಗ ಮುಖ್ಯಸ್ಥರಾದ ಮಹಾಬಲೇಶ್ವರ ಭಟ್ಟರು ಗೌರವಾನ್ವಿತರು, ಶಿಸ್ತು ತಪ್ಪರು. ಅಲ್ಲಿ ಮೊದಲಿಂದಲೂ faceless banking ಇಲ್ಲ. ಮ್ಯಾನೇಜರ್ರಿಂದ ಹಿಡಿದು head office ತನಕ ಎಲ್ಲರೂ ಪರಸ್ಪರ ಸ್ನೇಹಿತರು.

ಅಂದ್ಹಾಗೆ, ಬರುವ ಮಾರ್ಚ್ ೧೫ಕ್ಕೆ ಈ ಭಡವನಿಗೆ ರಿಟೈರ್ಮೆಂಟು. ಆಮೇಲೇನು? ಏನೇ ಪ್ಲಾನ್ ಮಾಡಿಟ್ಟುಕೊಂಡರೂ ಎಲ್ಲಾ ‘ಅವನಿಚ್ಛೆ’. ಅವನೆಂದರೆ ಯಾರು? ಒಂದು ಸಲವೂ ಫೋನ್ ಮಾಡಿಲ್ಲ. ಇವನು ಫೋನ್ ಮಾಡಿದಾಗೆಲ್ಲ ಆ ಗ್ರಾಹಕರು ಸಂಡಾಸಿಗೆ ಹೋಗಿದ್ದಾರೆ ಅಂತ ಉತ್ತರ ಬರುತ್ತೆ. ಅದಿನ್ನೆಂಥ ಸಂಡಾಸೋ? ಅವನಿಗೆ ಮನುಷ್ಯರಾದರೂ get up ಅನ್ನಬೇಕು. ಇವನು get lost ಅಂದು ಕಾಲವೇ ಆಗಿದೆ. ಅಂದ್ಹಾಗೆ ಇವನಿಗೆ ಅರ ವತ್ತು ವರ್ಷ. ಎಷ್ಟು ಕತ್ತೆ?

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 07 June, 2017
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books