Ravi Belagere
Welcome to my website
ಲೀಲಾವತಿಯವರ ಬಾಯಿಂದಲೇ ಕೇಳಿಕೊಂಡು, ಅವರ ಈ ‘ಜೀವನ ಕಥನ’ ’ರಾಜ್ ಲೀಲಾ ವಿನೋದ’ ಬರೆದಿದ್ದೇನೆ. ಇದರಲ್ಲಿ ಒಂದಕ್ಷರ ಸುಳ್ಳಿಲ್ಲ. ಇದು ರಾಜಕುಮಾರ್, ಪಾರ್ವತಮ್ಮ ಅವರ ಬಗ್ಗೆ ಏನೇನೊ negative ಅಂಶಗಳಿರುವ ಪುಸ್ತಕವಲ್ಲ. It is not against him. ಆ ಕಾಲದ ಘಟನೆಗಳೇನಿವೆ-ಅವು ಮಾತ್ರ ಇಲ್ಲಿವೆ.
ಇದನ್ನು ಓದುವ ನೀವು ನನಗೊಂದು mail ಕಳಿಸಿದರೆ ಸಾಕು. ಅಭಿಪ್ರಾಯ ಸ್ಪಷ್ಟವಾಗಿರಲಿ. 
[email protected]ಗೆ ನೀವು ಅಭಿಪ್ರಾಯ ಕಳಿಸಿ. ಎಂದಿನಂತೆ ಓದುಗ ದೊರೆಗೆ ನಮಸ್ಕಾರಗಳು.
Home About Us Gallery Books Feedback Prarthana Contact Us

Buy Ravi Belagere Books online

ನನ್ನನ್ನು ನೋಡಲೆಂದೇ ಅದು ಬದುಕಿತ್ತಾ?

ಒಂದು ಅಳುಕು ಇದ್ದೇ ಇತ್ತು.

ಬಂಗಲೆಯ ಮುಂದೆ ಕಾರು ನಿಂತ ಕೂಡಲೆ ಸುತ್ತಲೂ ಕಣ್ಣಾಡಿಸಿದೆ. ಮೊದಲಾಗಿದ್ದರೆ ಚಿನ್ನು-ಮುನ್ನು ಇಬ್ಬರೂ ಓಡಿ ಬಂದು ಕಾಲುಗಳಿಗೆ ಮುತ್ತಿಗೆ ಹಾಕುತ್ತಿದ್ದವು. ಈ ಸಲ ಅದಿಲ್ಲ. `ನೀವು ನಿಮ್ಮ ರೂಮಿನಲ್ಲಿ ಕೂತುಕೊಳ್ಳಿ. ಅವಳನ್ನು ಕರೆದುಕೊಂಡು ಬರ್‍ತೀನಿ' ಅಂದ ನಮ್ಮ ಸೂಪರ್‌ವೈಸರ್ ಚಂದ್ರ ಕಾಂತ್. ಹೋಗಿ ರೂಮಿನಲ್ಲಿ ಬಟ್ಟೆ ಬದಲಿಸಿ ಕುಳಿತೆ. ಬಂತಲ್ಲ ನಾಯಿ ಮರಿ. ನಿಧಾನವಾಗಿ ಬಂತು. ಕೊರಳಿಗೆ ಬ್ಯಾಂಡೇಜ್ ಹಾಕಿದ್ದರು. ಒಳಗೆ ಬಂದವನೇ ನನ್ನ ಪಾದಗಳ ಮೇಲೆ ಮುಖವಿಟ್ಟು ಮಲಗಿತು.

ಅದಕ್ಕಿನ್ನೂ ಜ್ವರಬಿಟ್ಟಿರಲಿಲ್ಲ.
ಬೆಚ್ಚಗಿತ್ತು ಕಂದ. ನಾನು ನಿಧಾನವಾಗಿ ಮೈ ಸವರಿದೆ. ಅರ್ಥವಾಯ್ತೇನೋ ಎಂಬಂತೆ ನನ್ನತ್ತ ನೋಡಿತು. ಹಾಗೆ ಕೊಂಚ ಹೊತ್ತು ಕಾಲ ಮಧ್ಯೆ ಮುಖವಿಕ್ಕಿ ಮಲಗಿ ಒಮ್ಮೆ ದೀನನೇತ್ರಳಾಗಿ ನನ್ನನ್ನೇ ನೋಡಿತು. ಕೊಂಚ ಹಾಲು ಕುಡಿಸಿ ಮತ್ತೆ ಮೈದಡವಿ ಕಳಿಸಿ ಕೊಟ್ಟೆ. ಚಂದ್ರಕಾಂತ್ ಕರೆದೊಯ್ದ.

ಇಲ್ಲಿಂದ ಪ್ರಯಾಣ ಮಾಡಿದ್ದೆನಲ್ಲ. ಐದು ನೂರ ಐವತ್ತೆಂಟು ಕಿಲೋ ಮೀಟರಿನಷ್ಟು ದೂರ? ಮೈ ಕೈ ಕೊಡವಿಕೊಂಡು ನೇರ ನನ್ನ ಕೋಣೆಗೆ ಹೋದೆ. ಮಲಗಿದ ಹತ್ತೇ ನಿಮಿಷಕ್ಕೆ ನಿದ್ರೆ. ಬೆಳಗ್ಗೆ ಏಳಾಗಿರಬೇಕು: ಚಂದ್ರಕಾಂತ್ ಬಂದವನೇ ``ಸಾಬ್, ಕುತ್ತ ಮರ್‌ಗಯಾ" ಅಂದವನೇ ಅಳತೊಡಗಿದ. ನನಗದು ಚೆನ್ನಾಗಿ ಅರ್ಥವಾಗುತ್ತದೆ. ನಾಯಿ ಮರಿಗಳು ಬೆಳೀತಾ ಬೆಳೀತಾ ನಮ್ಮ ಮಕ್ಕಳಷ್ಟೇ ಆತ್ಮೀಯವಾಗಿ ಬಿಡುತ್ತವೆ. ನಾನು ಬೇರೆ ಟಿ-ಷರ್ಟ್ ಹಾಕಿ ಕೊಂಡು ನೋಡಲು ಹೋದೆ. ಅಲ್ಲಿ ನೌಕರರ ಕ್ವಾರ್ಟರ್ಸ್ ಹತ್ತಿರವೇ ನಿಶ್ಚಲವಾಗಿ ಮಲಗಿತ್ತು ನಾಯಿ.She was dead..

ಚಿರತೆ ಅದನ್ನು ಅಟ್ಟಿಸಿಕೊಂಡು, ಬೆರಸ್ಯಾಡಿ ಅದರ ಕತ್ತಿಗೆ ಬಾಯಿ ಹಾಕಿತ್ತು. ಅದರ ಹಲ್ಲು ಕತ್ತಿನ ಮೇಲೆ ನಿಚ್ಚಳವಾಗಿ ಗುರುತು ಮಾಡಿತ್ತು. ಎರಡು ನಾಯಿಗಳು ತಂತಾವೇ ಆಡುತ್ತಾ ಕೊಂಚ ಗಾಯ ಮಾಡಿಕೊಂಡರೂ ಓ.ಕೆ. ಆದರೆ ಚಿರತೆ, ತೋಳ, ಹುಲಿ ಮುಂತಾದವು ಕಚ್ಚಿದರೆ ಮುಗೀತು. ಅದರ ಹಲ್ಲು ವಿಪರೀತ ನಂಜು. ಚಿರತೆ ನಾಯಿಯ ಕೊರಳಿಗೆ ಗಾಯ ಮಾಡಿ ಕೊಂಚ ಹೊತ್ತು ರಕ್ತ ಹೀರುತ್ತದೆ. ನಿರುಮ್ಮಳವಾಗಿ ಅದು ತನ್ನ ಬೇಟೆಯನ್ನು ಜರಜರ ಎಳೆದುಕೊಂಡು ಹೋಗಿ ಬಿಡುತ್ತದೆ. ಇಲ್ಲಿ ಅಷ್ಟೆಲ್ಲ ಆಗಿರ ಲಿಲ್ಲ. ಆದರೆ ಚಿರತೆ ಕತ್ತಿನ ಭಾಗಕ್ಕೆ ಹಲ್ಲಿನ ನಂಜು ತಾಕಿಸಿತ್ತು. ನನ್ನನ್ನೇ ಎದುರು ನೋಡುತ್ತಿದ್ದಂತಿದ್ದ ನಾಯಿ ಮರಿ, ನನ್ನ ಕಾಲುಗಳ ಮಧ್ಯೆ ಮುಖ ವಿಕ್ಕಿ ಕೊಂಚ ಹೊತ್ತು ಮಲಗಿತ್ತು. ನೋಡಿದ್ದಾಯ್ತಲ್ಲ? ರಾತ್ರಿ ತನ್ನ ಗೂಡಿಗೆ ಹೋಗಿ ರಾತ್ರಿಯ ಯಾವ ಜಾವದಲ್ಲೋ ಉಸಿರು ಚೆಲ್ಲಿ ಬಿಟ್ಟಿತ್ತು.

ಇನ್ನೂ ನಾಲ್ಕೈದು ತಿಂಗಳ ಮರಿ ಅದು. ನನ್ನ ಸಿಬ್ಬಂದಿಯವರು ಚೆನ್ನಾಗಿ ನೋಡಿ ಕೊಳ್ಳುತ್ತಿದ್ದರು. ಹಗಲಿಡೀ ಗೂಡಿನಲ್ಲಿ ಬಿಟ್ಟು ರಾತ್ರಿ ನಾಯಿಗಳನ್ನು ಆಡಲು ಬಿಟ್ಟು ಬಿಡುತ್ತಾರೆ. ಮರು ದಿನ ಬೆಳಿಗ್ಗೆ ಹಾಲು ಕುಡಿಸಿ ಗೂಡಿಗೆ ಬಿಟ್ಟು ಬಿಡುತ್ತಾರೆ. ನನ್ನ ನಾಯಿಗಳ ಪೈಕಿ ಈಗ ಚಿರತೆ ಬಾಯಿಗೆ ಸಿಕ್ಕಿದ್ದು ಹೆಣ್ಣು ಮರಿ. ಅವರ ಪೈಕಿ ಗಂಡು ಮರಿಗಿಂತ ಇವಳು ಪೊಗದಸ್ತು. ವಿಪರೀತ ಚುರುಕು. ಹಿಂದೆ ಮಳಗಾಂವಕರ್ ಅವರು ಒಂದು ಜರ್ಮನ್ ಷಫರ್ಡ್, ಒಂದು ಬೆರಕೆ ಪೊಮೇರಿಯನ್ ಇಟ್ಟುಕೊಂಡಿದ್ದರು. ಈಗ ಎರಡೂ ಬದು ಕಿಲ್ಲ. ಆದರೆ ಏಳೆಂಟು ವರ್ಷ ಬದುಕು ನೋಡಿದ್ದವು. ನನ್ನ ಈ ಮರಿಗಳು ಇನ್ನೂ ಆರು ತಿಂಗಳು ಮುಗಿಸಿರಲಿಲ್ಲ. ನನ್ನ ನವಿರು, ಪ್ರೀತಿಗಳನ್ನೆಲ್ಲ ಅದ್ಯಾವುದೋ ಚಿರತೆಗೆ ಹ್ಯಾಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಿತ್ತು? ಸುಮ್ಮನೆ ಹಲ್ಲು ತಾಕಿಸಿದರೂ ಈ ಸಾಕು ಪ್ರಾಣಿಗಳಿಗೆ ನಂಜು ಶುರುವಾಗುತ್ತೆ. ನೀವು ಅದೇನೇ ಮಾಡಿದರೂ ಅವು ಉಳಿಯುವುದಿಲ್ಲ. ಅದು ನಾನಂದು ಕೊಂಡಂತೆಯೇ ನಂಜಿಗೆ ಬಲಿಯಾಗಿತ್ತು. ಎಲ್ಲೋ ಸುಖವಾಗಿತ್ತೇನೋ? ನಾನು ಇಲ್ಲಿಂದ ಒಯ್ದು ಚಿರತೆಯ ಬಾಯಿಗೆ ಕೊಟ್ಟು ಬಿಟ್ಟೆನಾ? I was guilty.

ಆಮೇಲೆ ಕೊಂಚ ಹೊತ್ತಿಗೆ ಗಂಡು ಮರಿ ಬಂತು. ಅದರ ಕಣ್ಣುಗಳಲ್ಲಿ ಏನೋ ಭಯ. ಎತ್ತಿಕೊಂಡು ಮೈ ಸವರಿ, ಇಲ್ಲಿಂದ ಒಯ್ದಿದ್ದ ಬಿಸ್ಕತ್ತು ತಿನ್ನಿಸಿದೆ. ಅದು ಬಂಗಲೆಯಿಂದ ಹೊರಕ್ಕೆ ಹೋಗಲಿಕ್ಕೂ ಸಿದ್ಧವಿರಲಿಲ್ಲ. ಚೆನ್ನಾಗಿ ಮುದ್ದು ಮಾಡಿ ಅದರ ಗೂಡಿಗೆ ಬಿಟ್ಟು ಬಂದೆ. ನಾವು ಇವುಗಳನ್ನೆಲ್ಲ ಸಾಕುತ್ತೇವಲ್ಲ. ವಿಪರೀತ ಹಚ್ಚಿಕೊಂಡು ಬಿಡುತ್ತೇವೆ. ನನಗೆ ನನ್ನ ಅಕ್ವೇರಿಯಂನಲ್ಲಿನ ಒಂದು ಮೀನು ಸತ್ತರೂ ಬೇಸರವಾಗಿ ಖಿನ್ನನಾಗಿ ಬಿಡುತ್ತೇನೆ. ಬೆಕ್ಕು ನನಗೆ ಅಷ್ಟಾಗಿ ಸೇರುವುದಿಲ್ಲ. But a pet dog? ಒಂದು ನಂಬಬಲ್ಲ ನಂಟು ಅದರೊಂದಿಗೆ ಬೆಳೆಸಿಕೊಂಡು ಬಿಡುತ್ತೇನೆ. ಈ ಬಾರಿ ಜೊಯಿಡಾದಲ್ಲಿ ಅಂದು ಕೊಂಡದ್ದಕ್ಕಿಂತ ಹೆಚ್ಚು ಕಾಲ ಕಳೆದೆ. ಒಂದು ಮೊಳಕೈ ಗಾತ್ರದ ಪುಸ್ತಕ ಓದಿ, ಸಾಕಷ್ಟು Notes ಮಾಡಿಕೊಂಡೇ ಹೊರಟು ಬಂದೆ. ನನ್ನ ನಾಯಿ ಮರಿಯನ್ನು ಕಳೆದುಕೊಂಡ ದುಃಖ ಹಾಗೆಲ್ಲ ಸುಲಭಕ್ಕೆ ಮುಗಿಯುವುದಿಲ್ಲ. ಬೇಸರವನ್ನೆತ್ತಿಕೊಂಡೇ ವಾಪಸು ಬಂದಿದ್ದೇನೆ.

ನಿಮಗೆ ಹೇಳಿಕೊಳ್ಳಬೇಕೆನ್ನಿಸಿತ್ತು.

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 27 February, 2017
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books