Ravi Belagere
Welcome to my website
ಲೀಲಾವತಿಯವರ ಬಾಯಿಂದಲೇ ಕೇಳಿಕೊಂಡು, ಅವರ ಈ ‘ಜೀವನ ಕಥನ’ ’ರಾಜ್ ಲೀಲಾ ವಿನೋದ’ ಬರೆದಿದ್ದೇನೆ. ಇದರಲ್ಲಿ ಒಂದಕ್ಷರ ಸುಳ್ಳಿಲ್ಲ. ಇದು ರಾಜಕುಮಾರ್, ಪಾರ್ವತಮ್ಮ ಅವರ ಬಗ್ಗೆ ಏನೇನೊ negative ಅಂಶಗಳಿರುವ ಪುಸ್ತಕವಲ್ಲ. It is not against him. ಆ ಕಾಲದ ಘಟನೆಗಳೇನಿವೆ-ಅವು ಮಾತ್ರ ಇಲ್ಲಿವೆ.
ಇದನ್ನು ಓದುವ ನೀವು ನನಗೊಂದು mail ಕಳಿಸಿದರೆ ಸಾಕು. ಅಭಿಪ್ರಾಯ ಸ್ಪಷ್ಟವಾಗಿರಲಿ. 
[email protected]ಗೆ ನೀವು ಅಭಿಪ್ರಾಯ ಕಳಿಸಿ. ಎಂದಿನಂತೆ ಓದುಗ ದೊರೆಗೆ ನಮಸ್ಕಾರಗಳು.
Home About Us Gallery Books Feedback Prarthana Contact Us

Buy Ravi Belagere Books online

ಅವನು ಸೈಕಲ್ ಹತ್ತಿ ಹೋಗಿ ನಾಮಪತ್ರ ಸಲ್ಲಿಸಿದ್ದ

``ಯಾರೋ ಪಾಪ ಹಿರಿಯರು: ಮಧ್ಯಾಹ್ನ ಹೋದರಂತೆ" ಎಂಬಂಥ ಮಾತು-ಕೇಳುತ್ತಿರುತ್ತೇವೆ. ತೀರಾ ವಯಸ್ಸಾದವರು ಹೋದರೆಂಬ ಸುದ್ದಿ ತುಂಬ disturb ಮಾಡೋದಿಲ್ಲ. ಆದರೆ ಅವನು? ಛೆ, ನನಗಿಂತ ಕೊಂಚ ಹಿರಿಯ. ಹೆಸರು ಯು.ಭೂಪತಿ. ಅದೊಂದು ಇಳಿ ಮಧ್ಯಾಹ್ನ ನಾನು ಬಳ್ಳಾರಿಯ ಅಶೋಕ ಹೊಟೇಲಿನಲ್ಲಿ ಕುಳಿತಿದ್ದೆ. ಭೂಪತಿ ಸೈಕಲ್ ಮೇಲೆ ಹೋಗುತ್ತಿದ್ದ:alone. ಕರೆದು ನಿಲ್ಲಿಸಿದೆ. ``ಯತ್ಲಾಗ ಹೋಗಿದ್ದೀ?" ಅಂದೆ. ``ಅದೇ ಮಾರಾಯ, ಎಲೆಕ್ಷನ್ನು ಬಂತು. ಸುಮ್ನೆ ಹೋಗಿ ಸಂಡೂರು ಕ್ಷೇತ್ರಕ್ಕೆ ನಾಮಿನೇಷನ್ ಸಲ್ಲಿಸಿ ಬಂದೆ" ಅಂದ. ಇವನಿಗೇನಾದರೂ ತಲೆ ಕೆಟ್ಟಿದೆಯಾ? ಇರೋದು ಬಳ್ಳಾರಿ-ಹೊಸಪೇಟೆ ಮಧ್ಯದ ತೋರಣಗಲ್ಲಿನಲ್ಲಿ. ಕಮ್ಯೂನಿಸ್ಟ್ ಚಳವಳಿಯಲ್ಲಿದ್ದಾನೆ. ಪುಣ್ಯಾತ್ಮನ ಹೆಸರು ಮೂರೂ ಮುಕ್ಕಾಲು ಜನಕ್ಕೆ ಗೊತ್ತಿರಬಹುದಷ್ಟೆ. ಸೈಕಲ್ ಮೇಲೆ ಹೋಗಿ ಸಂಡೂರು ಮತ ಕ್ಷೇತ್ರಕ್ಕೆ nomination ಸಲ್ಲಿಸಿ ಬಂದಿದ್ದಾನೆ: ಒಬ್ಬನೇ! ಸಂಡೂರು ರಾಜರಾದ ಘೋರ್ಪಡೆಗಳ ಕ್ಷೇತ್ರ ಅದು. ಇವನು ಯಾವ ಗೂಟಕ್ಕೆ ಕಟ್ಟಿದ ಹೋರಿ?

``ಆಯ್ತು, ಮನೇಗೆ ಹೋಗೋಣ. ಊಟ ಮಾಡೀಯಂತೆ" ಅಂದೆ. ಭೂಪತಿ ಬದಲು ಮಾತಾಡದೆ ಬಂದು ಊಟ ಮಾಡಿದ. ಅಲ್ಲೇ ಒಂದು ರೂಮಿನಲ್ಲಿ ಅಡ್ಡಾಗಿ ಕೊಂಚ ನಿದ್ದೆ ಮಾಡಿದ. ನಮ್ಮ ಮನೆಯ ಉಪ್ಪಿನ ಕಾಯಿ ಅವನಿಗೆ ಇಷ್ಟ. ಕಡೆಗೆ ಚುನಾವಣೆ ನಡೆಯಿತು. Surprisingly, ಹತ್ತು ಸಾವಿರ ಲೀಡ್‌ನೊಂದಿಗೆ ಗೆದ್ದೇ ಬಿಟ್ಟ. ಅದು ಎಂ.ವೈ. ಘೋರ್ಪಡೆಯ ಅಗೋಚರ ಆಶೀರ್ವಾದ! ಬೆಂಗಳೂರಿಗೆ ಬಂದು ಶಾಸಕರ ಭವನದ ಕೋಣೆಯಲ್ಲಿ ಸ್ಥಾಪಿತನಾದ. ಅವನ ಮನೆಯಾಕೆ ವಸುಂಧರ ವೃತ್ತಿಯಿಂದ ವೈದ್ಯೆ. ವೈಯುಕ್ತಿಕವಾಗಿ ನನ್ನ ಮನೆಯವರಿಗೆಲ್ಲ ಆತ್ಮೀಯರು.

ವಿಧಾನ ಮಂಡಲದಲ್ಲಿ ಭೂಪತಿ ಮಾತನಾಡಿದ. ಅವನ ದನಿ ಕಂಚು. ತುಂಬ ಒಳ್ಳೆಯ ಮಾತುಗಾರ. ಕಪ್ಪಗಿದ್ದರೂ ಅವನು ಲಕ್ಷಣ. ಅವನ ಮಾತಿಗೆ ಎಲ್ಲರೂ ತಲೆದೂಗಿದರು. ಈ ಮಧ್ಯೆ ನಾನು ಪರಮನೆಂಟಾಗಿ ಬಳ್ಳಾರಿ ಬಿಟ್ಟೆನಲ್ಲ? ಅವತ್ತು ಲಾರಿಯಿಂದ ನನ್ನ ಸುಝಕಿ ಇಳಿಸಿಕೊಂಡು ಬೆಂಗಳೂರಿಗೆ ನೇರವಾಗಿ ಬಂದವನು, ಶಾಸಕರ ಭವನದಲ್ಲಿನ ಭೂಪತಿಯ ರೂಮಿಗೆ ಹೋದೆ. ಕ್ಯಾನ್ಸರ್ ಪೀಡಿತನಾದ ಅವನ ತಂದೆ ಅಲ್ಲೇ ಇದ್ದರು. ಡಾ.ವಸುಂಧರ ಕೂಡ ಇದ್ದರು. ಕೆಲವು ದಿನ ನಾನು ಅಲ್ಲೇ ಇದ್ದೆ. ಸಂಜೆಯಾದರೆ ಸಾಕು ನೆಲಮಂಗಲದ ಆಗಿನ ಶಾಸಕ ಗುರುಪ್ರಸಾದ್, ಭೂಪತಿ, ನಾನು `ದೇವರ್‍ಸ್' ಬಾರ್‌ಗೆ ಹೋಗುತ್ತಿದ್ದೆವು. ಮದ್ಯಾರಾಧನೆ ಮಸ್ತ್! ಭೂಪತಿ ಶಾಸಕನಾಗಿ ದುಡ್ಡು ಮಾಡಲಿಲ್ಲ. ಕಮ್ಯುನಿಸ್ಟ್ ಪಕ್ಷದಲ್ಲೇ ಅವನಿಗೆ ಶತ್ರುಗಳಿದ್ದರು. ಅದೊಂದು ದಿನ ಕಾಂಗ್ರೆಸ್‌ಗೆ migrate ಆಗಿ ಬಿಟ್ಟ.

ಶಾಸಕತ್ವ ಮುಗಿದ ಮೇಲೆ ಅವನು ಮುಖ್ಯಮಂತ್ರಿ ಚಂದ್ರು ಕೊಟ್ಟ ಮನೆಯಲ್ಲಿ ಉಳಿದುಕೊಂಡ. ನಯಾಪೈಸೆ ಬಾಡಿಗೆ ಇಲ್ಲ. ವೈದ್ಯರಾಗಿ ವಸುಂಧರ ಒಂದಷ್ಟು earn ಮಾಡುತ್ತಿದ್ದರು. ಒಮ್ಮೆ ಭೂಪತಿ ಫೋನ್ ಮಾಡಿ ``ಕೊಂಚ ಹಣ ಕಳಿಸು" ಅಂದ. ಅಪರೂಪಕ್ಕೊಮ್ಮೆ ಅವನು ಕೇಳಿದಾಗ ಕಳಿಸುತ್ತಿದ್ದೆ. ಕೆಲಬಾರಿ ಅವನಲ್ಲಿಗೇ ಹೋಗಿ ಅವನ ತಾಯಿ ಮಾಡಿ ಬಡಿಸುತ್ತಿದ್ದ ಮಟನ್ನು ತಿಂದು ಬರುತ್ತಿದ್ದೆ.

All was good. ಮೊನ್ನೆ ಗೋವೆಯ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರಕ್ಕೆ ಹೋದನಂತೆ. ಅವನಿಗೆ ಅಂಥ ಖಾಯಿಲೆ-ಪಾಯಿಲೆ ಇರಲಿಲ್ಲ. ನಡೆಯುತ್ತ ಹೋಗುವಾಗ ಎಡವಿ ಬಿದ್ದನಂತೆ. ಅದಾದ ಕೆಲವೇ ನಿಮಿಷಗಳಿಗೆ ತೀವ್ರ ಹೃದಯಾಘಾತವಾಗಿ, ಸುತ್ತಲಿನವರು ನೋಡುತ್ತಿದ್ದ ಹಾಗೆಯೇ ಸತ್ತು ಹೋಗಿದ್ದಾನೆ.

ಇನ್ನೇನು ಹೇಳುವುದಿದ್ದೀತು. ಮನಸ್ಸನ್ನು ವಿಷಾದ ಮುಚ್ಚಿಕೊಂಡಿದೆ. `ನಿಮ್ಮ ನೋವಿನಲ್ಲಿ ನಾನು ಭಾಗಿ' ಅಂತ ಡಾ. ವಸುಂಧರ ಅವರಿಗೆ ಮೆಸೇಜ್ ಕಳಿಸಿದೆ. ಸಮ ವಯಸ್ಸಿನ, ಸಮ ಮನಸ್ಕ ಗೆಳೆಯ ಗತಿಸಿ ಹೋದ. I am hurt.

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 07 February, 2017
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books