Ravi Belagere
Welcome to my website
ಪದ್ಮನಾಭ ನಗರದ ಬಸ್ ಸ್ಟಾಪ್ ಬಳಿ ವಾಜಪೇಯಿ ಬಯಲು ಸಭಾಂಗಣ ಇದೆ. ೨೫ ಡಿಸೆಂಬರ್ ೨೦೧೬ ರಂದು ಸಂಜೆ ೬ ಗಂಟೆಗೆ ಅಲ್ಲಿ ಸರ್ದಾರ ಭಗತ್ ಸಿಂಗ್ ಅವರ ಸಹೋದರನ ಮಗ ಸರ್ದಾರಪೊಫೆಸರ್ ಚಮನ್ಲಾಲ್ ಸಿಂಗ್ ಅವರ ಭಾಷಣ ಇದೆ. ಅದೊಂದು ಮಹತ್ತರ, ಅವಿಸ್ಮರಣೀಯ ಸಮಾರಂಭವಾಗಲಿದೆ. ಅದೇ ಸಂದರ್ಭದಲ್ಲಿ ತುಂಬಾ ನಿರೀಕ್ಷಿತ " ರಾಜ್ ಲೀಲಾ ವಿನೋದ" ಪುಸ್ತಕ ಬಿಡುಗಡೆಯಾಗಲಿದೆ. ಜೊತೆಗೆ ಒಂದಷ್ಟು ಕೃತಿಗಳು ಬಿಡುಗಡೆಯಾಗಲಿವೆ. ಓದುಗರಿಗೆ, ಕೇಳುಗರಿಗೆ ಹಬ್ಬ. ಪ್ಲೀಸ್ ಬನ್ನಿ.
Home About Us Gallery Books Feedback Prarthana Contact Us

Buy Ravi Belagere Books online

ಗರ್ಭ ಕಟ್ಟಿದ ಸುದ್ದಿ ಕೇಳಿ ಬೆಚ್ಚಿದ ಶೂರ!

ನಾನು ಕೇವಲ ಜೀವನ ಚರಿತ್ರೆಗಳನ್ನೇ ಬರೆದವನಲ್ಲ: not a biographist.. ಇಂದಿರಾಗಾಂಧಿಯದನ್ನು ಅದೊಂದು ಬೀಸಿನಲ್ಲಿ ಬರೆದುಬಿಟ್ಟೆ. ಇಂದಿರಾ, ಸಂಜಯ್, ಹತ್ಯೆಯ ವಿಷಯಕ್ಕೆ ಬಂದಾಗ ರಾಜೀವ್ ಗಾಂಧಿ, ಮಹಾತ್ಮ ಗಾಂಧಿ, ಕೊಂಚ ಪಂಡಿತ ನಾಥೂರಾಮ ಗೋಡ್ಸೆ ಇವರೆಲ್ಲರ ಬದುಕಿನ ಕತೆಗಳಲ್ಲಿ ಅಲೆದೆ. ನೆಹರೂದು ಬಾಕಿ ಇದೆ. ನಂದಂತೂ `ಖಾಸ್‌ಬಾತ್'. ಪ್ರತೀವಾರದ ಆಲಾಪನೆ.

ಆದರೆ ಈಗ ಲೀಲಾವತಿಯವರ ಜೀವನ ಚಿತ್ರ ಬರೆದಿದ್ದೇನೆ. ಅದೇನೋ great ಅನ್ನಲಾರೆ. ಆದರೆ ಅದು useless ಕೂಡ ಅಲ್ಲ. `ತೀರ ಸಪ್ಪೆ' ಅಲ್ಲ. ಅದು... ನಿನ್ನಂತರಂಗ ಮಧುರಂಗ...! ಬದುಕು ಚೆನ್ನಾಗಿಯೇ ಇದೆ. ಆಕೆಯೂ ಚೆನ್ನಾಗಿ ಹೇಳಿಕೊಂಡಿದ್ದಾರೆ. ತಮಾಷೆಗೆ ಕೊರತೆಯಿಲ್ಲ. ಕಣ್ಣೀರಿಗೆ ಬರವಿಲ್ಲ. ಆಕೆ ಥಟ್ಟನೆ ``ನಾನು ಗರ್ಭವತಿ ಕಣ್ರೀ..." ಅಂದಕೂಡ್ಲೆ ಜಗತ್ತಿನ ಅನೇಕ ಗಂಡಸರಂತೆ, ಹಾವು ತುಳಿದರೇನೋ ಎಂಬಂತೆ ಬೆಚ್ಚಿ ಅಣ್ಣಾವ್ರು ಹಿಂದಕ್ಕೆ ಸರಿದುಕೊಂಡು ಬಿಡುತ್ತಾರೆ. ತೀರಾ ಮಾತೇ ಇಲ್ಲ. ಎಷ್ಟೋ ವರ್ಷಗಳಾದರೂ ಮಗೂನ ಕರೆದು ತಲೆ ಸವರೋದೂ ಇಲ್ಲ. ಅಂಥ ನಿರ್ದಯತೆ ಏಕೋ?

ಹಾಗೆ ನೋಡಿದರೆ ಪಾರ್ವತಮ್ಮ ವಾಸಿ. ಎಷ್ಟು ಹೇಳಿದರೂ ಅದು ಸವತಿ ಸಂಬಂಧ. ಅಂಥದರಲ್ಲಿ ಕಡೇಪಕ್ಷ ಲೀಲಾವತಿಯವರನ್ನು ಆಗೊಮ್ಮೆ ಈಗೊಮ್ಮೆ ಮನೆಯೊಳಕ್ಕಾದರೂ ಬಿಟ್ಟು ಕೊಳ್ತಾರೆ. ಗರ್ಭ ಧರಿಸಿದ ಸುದ್ದಿ ಹರಡುವ ಮುನ್ನ ಲೀಲಾವತಿ-ಪಾರ್ವತಮ್ಮ ತುಂಬ ಆಪ್ತ ಸ್ನೇಹಿತೆಯರಂತೆ. ದೊಡ್ಡೋರಿಗೆ ಈ ಔದಾರ್ಯವೂ ಇರಲಿಲ್ಲ. ತೀರ ಮೊನ್ನೆ ಆಹ್ವಾನ ಪತ್ರಿಕೆ ನೀಡಲು ಸ್ವಂತ: ಶಿವರಾಜ್‌ಕುಮಾರ್ ಸೋಲ ದೇವನ ಹಳ್ಳಿ ತೋಟದ ಮನೆಗೆ ಹೋಗಿ, ವಿನೋದ್ ಹಾಗೂ ಲೀಲಮ್ಮನೋರ ಮಧ್ಯದಲ್ಲಿ ನಿಂತು ಕೊಂಡು ಫೊಟೋ ತೆಗೆಸಿಕೊಂಡರು. ಅದು good gesture.

ಸೆಲೆಬ್ರಿಟಿಗಳ ಜೀವನದಲ್ಲಿ ಏನೇನೋ ನಡೆಯುತ್ತವೆ. ರಾಜಕುಮಾರ್-ಲೀಲಾವತಿ ಕೊಲ್ಹಾಪುರಕ್ಕೆ ಹೋಗಿ ಅಲ್ಲಿನ ಅರಸರ ಪ್ಯಾಲೇಸ್‌ನಲ್ಲಿ ಉಳಿಯುತ್ತಾರೆ. ಮೀನು ಬೇಯಿಸಿಕೊಂಡು ನಿಲ್ಲುತ್ತಾರೆ. ತೀರಾ ಮದ್ರಾಸಿಗೆ ವಾಪಸು ಬಂದು ಸಾವ್ಕಾರ್ ಜಾನಕಿಯೊಂದಿಗೆ ದರ್ಜಿ ಅಂಗಡಿಗೆ ಹೋದಾಗ ಲೀಲಾವತಿಗೆ ತಾವು ಬಸಿರಾಗಿರುವ ವಿಷಯ ಗೊತ್ತಾಗುತ್ತದೆ. ಯಾಕೆ, ಲೀಲಾವತಿಯವರಿಗಿಂತ ಹಿರಿಯರಾದ, ಅನುಭವಿಯಾದ `ದೊಡ್ಡೋರಿ'ಗೆ ಗಂಡು-ಹೆಣ್ಣು ಹತ್ತಿರಾದರೆ ಗರ್ಭ ಕಟ್ಟುತ್ತದೆ ಎಂಬುದು ಗೊತ್ತಾಗಲಿಲ್ಲವೆ?

ನಂತರ ನಡೆದದ್ದು ಘೋರ.

ನೀವು `ರಾಜ್ ಲೀಲಾ ವಿನೋದ' ಓದಿ.

ಡಿಸೆಂಬರ್ 25, 2016 ರಂದು ಸಂಜೆ ಬೆಂಗಳೂರಿನ ಪದ್ಮನಾಭನಗರದ ಬಸ್‌ಸ್ಟ್ಯಾಪ್‌ನ ಹಿಂದೆಯೇ ಇರುವ ವಾಜಪೇಯಿ ಸ್ಮಾರಕ ಮೈದಾನದಲ್ಲಿ ಬೃಹತ್ ಸಭೆ ಇದೆ. ತಪ್ಪದೆ ಬನ್ನಿ.

ಕಾಯ್ತಿರ್‍ತೀನಿ. ಪ್ಲೀಸ್...

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 10 December, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books