Ravi Belagere
Welcome to my website
ಹೆಂಡತಿ ಮನೆಯಲ್ಲಿ ಇಲ್ಲದಿದ್ದರೆ ಅದೊಂದು ದಿವ್ಯ ಸಂತೋಷವಲ್ಲವೆ? ಆ ಸಂತೋಷವನ್ನು ಇಲ್ಲಿ ದಾಖಲಿಸಿ, ಓದುಗರೊಂದಿಗೆ ಹಂಚಿಕೊಳ್ಳಿ. ನನಗೆ ಥಾನುಗಟ್ಟಲೆ ಬರಹಗಳು ಬೇಕಾಗಿಲ್ಲ. ಇಡೀ ಕಾದಂಬರಿ ಬರೆದು ಕಳಿಸಬೇಡಿ. Just ಒಂದು in land letterನಲ್ಲಿ ಹಿಡಿಸುವಷ್ಟು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದರೆ ಸಾಕು. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ನಿಮ್ಮ ಹಾಗೂ ನಿಮ್ಮ ಪತ್ನಿಯ ಫೊಟೋ (ಇಬ್ಬರೂ ಜೊತೆಗಿರುವಂಥದ್ದು) ರೆಡಿ ಇದ್ದರೆ ತಪ್ಪದೆ ಪತ್ರದೊಂದಿಗೆ ಕಳಿಸಿ ಕೊಡಿ. ಓದುಗರಾದ ನೀವು ಬರಹಗಾರರೂ ಆದರೆ, ಅದು ಬೇರೆಯದೇ ಸಂತೋಷ.
Home About Us Gallery Books Feedback Prarthana Contact Us

Buy Ravi Belagere Books online

ಸಮಾಧಾನ!

ನುಡಿಯಲು ಸುಲಭ. ಆದರೆ ಅದು ಯಾರಿಗಿದೆ? ‘ಓ ಮನಸೇ’ ಪತ್ರಿಕೆಯಲ್ಲಿ ‘ಸಮಾಧಾನ’ ಅಂಕಣ ಆರಂಭದಿಂದಲೂ ಹಿಟ್. ನೌಕರಿ ಇಲ್ಲದ ಹುಡುಗರ ಅಳಲಿನಿಂದ ಹಿಡಿದು, ಪ್ರಿಯತಮನ ವಂಚನೆಗೆ ಒಳಗಾದ ಹುಡುಗಿಯರ ತನಕ ಎಲ್ಲರಿಗೂ ‘ಸಮಾಧಾನ’ ಹೇಳಿದವನು ನಾನು. ವಯಸ್ಸಾದ ಹೆಣ್ಣು ಮಕ್ಕಳು ತಮ್ಮದೇ ಮಕ್ಕಳ ವಂಚನೆಗೆ, ಅಸಡ್ಡೆಗೆ, ತಿರಸ್ಕಾರಕ್ಕೆ ಒಳಗಾದಾಗ ಅವರಿಗೆ ಸಿಕ್ಕ ಮಗ ನಾನು.

ಇದು ನನ್ನ ಅಹಂಕಾರವಲ್ಲ. ಮತ್ತೊಬ್ಬರಿಗೆ ‘ಸಮಾಧಾನ’ ಹೇಳುವುದು ನನ್ನ ಪ್ರವೃತ್ತಿ. ಎಂದೋ ಸಿಕ್ಕ ಇಬ್ಬರು ಗೆಳೆಯರು ಆತ್ಮೀಯವಾಗಿ ಒಂದು ಚಿಕ್ಕ ಟೀ ಅಂಗಡಿಯಲ್ಲಿ ಕುಳಿತು ಮಾತನಾಡುತ್ತಾರಲ್ಲ? ಹಾಗೆ, ನಾನು ಯಾರೊಂದಿಗೆ ಬೇಕಾದರೂ ಮಾತಾಡಬಲ್ಲೆ. ಸಮಾಧಾನ ಹೇಳಬಲ್ಲೆ. ಕೌನ್ಸೆಲಿಂಗ್ ನನಗೆ ಹುಟ್ತಾ ಬಂದ ವಿದ್ಯೆ. ಇದು ಅಹಂಕಾರದ ಮಾತಲ್ಲ.

ಸಮಸ್ಯೆ ಯಾರಿಗೂ ಬರಬಹುದು. ಈ ಬೆದರಿಕೆಗೆ ನಾನೂ ಒಳಪಟ್ಟಿದ್ದೇನೆ. ಅನೇಕ ಸಲ ಸಮಾಧಾನವನ್ನು ಮತ್ತೊಬ್ಬರಿಂದ ಪಡೆದಿದ್ದೇನೆ. ಅದೇನು ದೊಡ್ಡ ಮಾತಲ್ಲ. ಆ ಕ್ಷಣಕ್ಕೆ ನಮಗೆ ತೋಚದೆ ಇದ್ದುದು ಇನ್ನೊಬ್ಬರಿಗೆ ತೋಚುತ್ತದೆ.

“ನನ್ನ ದೊಡ್ಡ ಅಣ್ಣನಿಂದ ಹಿಡಿದು ಕೊನೇ ಅಣ್ಣನ ತನಕ ಒಬ್ಬರಾದ ಮೇಲೊಬ್ಬರು ಎಳೆದೊಯ್ದು ನನ್ನನ್ನ ರೇಪ್ ಮಾಡುತ್ತಾರೆ. ನಾನು ಏನು ಮಾಡಲಿ?" ಎಂದು ಬರೆಯುವ ನೊಂದ-ಅಮಾಯಕ-ನಿಸ್ಸಹಾಯಕ ಮಗುವಿಗೆ ಏನು ಸಮಾಧಾನ ಹೇಳಲಿ?
ಆದರೂ ಹೇಳಿದ್ದೇನೆ.

-ರವಿ ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 21 September, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books