Ravi Belagere
Welcome to my website
ಹೆಂಡತಿ ಮನೆಯಲ್ಲಿ ಇಲ್ಲದಿದ್ದರೆ ಅದೊಂದು ದಿವ್ಯ ಸಂತೋಷವಲ್ಲವೆ? ಆ ಸಂತೋಷವನ್ನು ಇಲ್ಲಿ ದಾಖಲಿಸಿ, ಓದುಗರೊಂದಿಗೆ ಹಂಚಿಕೊಳ್ಳಿ. ನನಗೆ ಥಾನುಗಟ್ಟಲೆ ಬರಹಗಳು ಬೇಕಾಗಿಲ್ಲ. ಇಡೀ ಕಾದಂಬರಿ ಬರೆದು ಕಳಿಸಬೇಡಿ. Just ಒಂದು in land letterನಲ್ಲಿ ಹಿಡಿಸುವಷ್ಟು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದರೆ ಸಾಕು. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ನಿಮ್ಮ ಹಾಗೂ ನಿಮ್ಮ ಪತ್ನಿಯ ಫೊಟೋ (ಇಬ್ಬರೂ ಜೊತೆಗಿರುವಂಥದ್ದು) ರೆಡಿ ಇದ್ದರೆ ತಪ್ಪದೆ ಪತ್ರದೊಂದಿಗೆ ಕಳಿಸಿ ಕೊಡಿ. ಓದುಗರಾದ ನೀವು ಬರಹಗಾರರೂ ಆದರೆ, ಅದು ಬೇರೆಯದೇ ಸಂತೋಷ.
Home About Us Gallery Books Feedback Prarthana Contact Us

Buy Ravi Belagere Books online

ಮತ್ತೆ ಮುಂದೂಡುವ ಅನಿವಾರ್ಯತೆ

ನನ್ನ ಶ್ರದ್ಧೆ ಯಾವತ್ತೂ, ಕೊಂಚ ಮಾತ್ರವೂ ಕಡಿಮೆಯಾಗುವುದಿಲ್ಲ. `ರಾಜ್ ಲೀಲಾ ವಿನೋದ' ಸುದ್ದಿ ಫೇಸ್‌ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಹೊರಳಾಡಾಗಿತ್ತು. ಅದರಲ್ಲಿ ತುಂಬ positive ಆದ ಕೆಲವು ಕಾಮೆಂಟ್ ಗಳಿದ್ದವು. ಪುಸ್ತಕ ಓದಲಿಕ್ಕೆ ನಮಗೆ ತುಂಬ ಉತ್ಸಾಹವಿದೆ: ಬೇಗನೆ ಕೊಡಿ ಎಂಬ ಒತ್ತಡಗಳೂ ಇದ್ದವು. ಮತ್ತೆ ಕೆಲವು Be careful ರಾಜ್ ವಿರುದ್ಧ ಬರೆದರೆ ಹುಶಾರ್. ಅವರು ಎಂದೋ ತೀರಿಕೊಂಡಿದ್ದಾರೆ. ಈಗ್ಯಾಕೆ ಅವರ ವಿಷಯ?" ಎಂಬಂಥ ಡರಾವುಗಳಿದ್ದವು.

ಅರೆ, ನಾನು ಬರೆಯುತ್ತಿರೋದು ಲೀಲಾವತಿಯವರ ಜೀವನ ಕಥನ ಸ್ವಾಮಿ. ಇಂಗ್ಲಿಷಿನಲ್ಲಿ ಅದಕ್ಕೆ biography ಅನ್ನುತ್ತಾರೆ. ನನ್ನ ಬಯಾಗ್ರಫಿ ಬರೆದರೆ ಅದರಲ್ಲಿ ಲಲಿತೆ, ನಿವೇದಿತಾ, ನನ್ನ ಗೆಳೆಯರು-ಗೆಳತಿಯರು ಎಲ್ಲ ಬರುತ್ತಾರೆ: ರಾಜ್‌ಕುಮಾರ್ ಕೂಡ. ಹಾಗಿರುವಾಗ ``ನಮ್ಮ ರಾಜ್‌ಕುಮಾರ್ ಬಗ್ಗೆ ಬರೆದರೆ ಹುಶಾರ್!" ಅಂತ ಹೂಸು ಬಿಡೋದೇಕೋ?

ಈಗ ಒಂದು ಸಮಸ್ಯೆ ಆಗಿದೆ. ಸೆಪ್ಟಂಬರ್ 25 ನಮ್ಮ `ಹಾಯ್ ಬೆಂಗಳೂರ್!' ಹುಟ್ಟುಹಬ್ಬ. ನಾವು ಸೆಪ್ಟಂಬರ್ 18ರಂದೇ ರವೀಂದ್ರ ಕಲಾಕ್ಷೇತ್ರ ಕಾಯ್ದಿರಿಸಿದ್ದೆವು. ಕಲಾಕ್ಷೇತ್ರಕ್ಕಿಂತ ಪ್ರಶಸ್ತವಾದ ಜಾಗವಿಲ್ಲ. ಭಾನುವಾರಗಳು ಅತ್ಯಂತ ಸೂಕ್ತ ಹಾಗೂ ಪ್ರಶಸ್ತ. ಈಗ ನೋಡಿದರೆ ಯಡವಟ್ಟಾಗಿದೆ. ದಿಲ್ಲಿಯ ನನ್ನ ಅತಿ ಮುಖ್ಯ ಅತಿಥಿಗಳೊಬ್ಬರು ಸೆಪ್ಟಂಬರ್ ಹದಿನೆಂಟಕ್ಕೆ ಬರಲಾಗುತ್ತಿಲ್ಲ ಅಂದಿದ್ದಾರೆ. ಇದೆಲ್ಲದರ ಮಧ್ಯೆ ಕಾವೇರಿ ಗಲಾಟೆ ಭುಗಿಲೆದ್ದಿದೆ. ಅದು ನಿಲ್ಲುವುದೋ, ಮುಂದುವರೆಯುವುದೋ ಗೊತ್ತಿಲ್ಲ. `ರಾಜ್-ಲೀಲಾ' ಜೊತೆಗೆ ಮತ್ತೂ ಒಂದು ರೋಚಕ ಕೃತಿ ಬಿಡುಗಡೆಯಾಗುವುದಿದೆ. ಇದಲ್ಲದೆ ಅವಸರದಲ್ಲಿ ಮಾಡಿ ಮುಗಿಸುವ ಕೆಲಸ ಅಲ್ಲ ಇದು.

ಅನಿವಾರ್ಯವಾಗಿ ಸೆಪ್ಟಂಬರ್ 18ರ ಕಾರ್ಯಕ್ರಮವನ್ನು ಅಕ್ಟೋಬರ್ 23ಕ್ಕೆ ಮುಂದೂಡುತ್ತಿದ್ದೇನೆ. ನೀವು ಬಯ್ಯುತ್ತೀರಿ: ನನಗೆ ಗೊತ್ತಿದೆ. ಆದರೆ ಅನಿವಾರ್ಯವಿದ್ದಾಗ ನಾನಾದರೂ ಏನು ಮಾಡಲಿ? ನಿಸ್ಸಹಾಯಕ. ದಯವಿಟ್ಟು ನನಗೆ ಕೊಂಚ space ಕೊಡಿ.
ನಾನು ಯಾವತ್ತಿದ್ದರೂ ನಿಮಗೆ ವಿಧೇಯ.

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 16 September, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books