Ravi Belagere
Welcome to my website
ಹೆಂಡತಿ ಮನೆಯಲ್ಲಿ ಇಲ್ಲದಿದ್ದರೆ ಅದೊಂದು ದಿವ್ಯ ಸಂತೋಷವಲ್ಲವೆ? ಆ ಸಂತೋಷವನ್ನು ಇಲ್ಲಿ ದಾಖಲಿಸಿ, ಓದುಗರೊಂದಿಗೆ ಹಂಚಿಕೊಳ್ಳಿ. ನನಗೆ ಥಾನುಗಟ್ಟಲೆ ಬರಹಗಳು ಬೇಕಾಗಿಲ್ಲ. ಇಡೀ ಕಾದಂಬರಿ ಬರೆದು ಕಳಿಸಬೇಡಿ. Just ಒಂದು in land letterನಲ್ಲಿ ಹಿಡಿಸುವಷ್ಟು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದರೆ ಸಾಕು. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ನಿಮ್ಮ ಹಾಗೂ ನಿಮ್ಮ ಪತ್ನಿಯ ಫೊಟೋ (ಇಬ್ಬರೂ ಜೊತೆಗಿರುವಂಥದ್ದು) ರೆಡಿ ಇದ್ದರೆ ತಪ್ಪದೆ ಪತ್ರದೊಂದಿಗೆ ಕಳಿಸಿ ಕೊಡಿ. ಓದುಗರಾದ ನೀವು ಬರಹಗಾರರೂ ಆದರೆ, ಅದು ಬೇರೆಯದೇ ಸಂತೋಷ.
Home About Us Gallery Books Feedback Prarthana Contact Us

Buy Ravi Belagere Books online

ಆನೆ ಅಂತಿಮವಾಗಿ ಹುಡುಕಿಕೊಳ್ಳುವ ಒಂದು ಜಾಗ!

Happy sister's day.

ರಾಖಿ ಹಬ್ಬದ ಶುಭಾಶಯಗಳು. ಈ ಬಾರಿ ಹಬ್ಬಕ್ಕೆ ನಾನು ಊರಲ್ಲಿ ಇರಲಿಲ್ಲ. ಮತ್ತೆ ಕೊಂಚ ಚಿಗಿತುಕೊಂಡೆನಾ? ನನ್ನ ಜೊಯಿಡಾ ಯಾತ್ರೆ ಶುರುವಾಗಿದೆ: up and down. ಅದೇನು ಇಲ್ಲೇ ನೆಲಮಂಗಲದ ಪಕ್ಕದಲ್ಲಿ ಇಲ್ಲ. ಬರೋಬ್ಬರಿ 558 ಕಿಲೋ ಮೀಟರು. ಹೋಗಿ ಬರೋ ಹೊತ್ತಿಗೆ ನಟ್ಟು-ಬೋಲ್ಟು ಲಡ ಲಡಾ ಅಂದು ಬಿಟ್ಟಿರುತ್ತವೆ. ಆದರೆ ಒಮ್ಮೆ ಹೊಕ್ಕೆನಾ? ಮನಸ್ಸಿಗೆ ಶಾಂತಿಃ ಶಾಂತಿಃ ಶಾಂತಿಃ.

ಕೆಲವರು ಹೇಳುತ್ತಾರೆ. ಆನೆ ಎಂಬ ದೈತ್ಯ ಪ್ರಾಣಿ ಬೇರೆ ನಾಯಿ- ನರಿಯಂತೆ ಲಾರಿಗೆ-ಬಸ್ಸಿಗೆ ಬಿದ್ದು ಸಾಯುವುದಿಲ್ಲವಂತೆ. ಅದು ಕಾಡನ್ನು explore ಮಾಡುತ್ತದೆ. ಸಿಕ್ಕಲ್ಲೆಲ್ಲ ತನಗಿಷ್ಟವಾದದ್ದನ್ನು ಮೇಯುತ್ತದೆ. ಕಾಡಿನ ಆಳಕ್ಕೆ, ಆಳಕ್ಕೆ, ಸೂರ್ಯನ ಕಿರಣಗಳೂ ದಕ್ಕದಷ್ಟು ಆಳಕ್ಕೆ ನಡೆದು ಹೋಗುತ್ತದೆ. ಅಲ್ಲೂ ಕೆಲವು ದಿನ ಸೊಪ್ಪು ಸೊದೆ ತಿಂದು ಬದುಕಿರುತ್ತದೆ. ನಂತರ ಅದಕ್ಕೆ ಚುಟುಕಾಗಿ ಎದ್ದು ನಿಲ್ಲಲು ಆಗುವುದಿಲ್ಲ. ಆ ಶಕ್ತಿ ಮೈಯಲ್ಲಿ ಉಳಿದಿರುವುದಿಲ್ಲ. ಅಲ್ಲದೆ, ಅದು ದೈತ್ಯಾಕಾರದ ಪ್ರಾಣಿ. ಎದ್ದು ನಿಲ್ಲಲು ಹೊರಟರೆ ಮೈ ಮೂಳೆಗಳು ಲಟ ಲಟ ಲಟ ಎಂದು ಬಿಡುತ್ತವೆ.

ಹಾಗೆ ನೆಲ ಹಿಡಿದ ಆನೆ, ಕಡೆಗೆ ಅಕ್ಕಪಕ್ಕದ ಮೇವನ್ನೂ ತಿನ್ನಲಾರದಷ್ಟು ಬಲಹೀನಗೊಂಡು ಬಿಡುತ್ತದೆ. ನೀರು ಅರಸಿ ಹೋಗಲಾಗುವುದಿಲ್ಲ. ಇದೆಲ್ಲ ಪ್ರಾಸೆಸ್ ತಿಂಗಳುಗಳೇ ಸವೆಯಬಹುದು. ಒಂದು ಶುಭ್ರ ಮುಂಜಾವಿನಂದು ನಾಲ್ಕು ಕಾಲು ಚಾಚಿ, ತಲೆ ನೆಲಕ್ಕಿಟ್ಟು ಮಲಗಿ ಬಿಡುತ್ತದೆ. ಅದು ಅಂತಿಮ ಶಾಂತಿ. ಮನುಷ್ಯ ಹೀಗೆ ಮಾಡೋದು ಕಷ್ಟ. ಅವನು ಮಾಡಲಾರ. ಈ ಮಾತ್ರೆ ನುಂಗಬೇಕು. ಆ ಇಂಜಕ್ಷನ್ ನೋಡ್ರೀ, ಅದು ರಾಮಬಾಣ! ಅಷ್ಟೇಕೆ, ಮದ್ರಾಸಿಗೋ, ಸಿಂಗಪುರಕ್ಕೋ ಹೋಗಿ ಅಡ್ಮಿಟ್ ಆಗಿ ಬಂದರೆ ಆರೋಗ್ಯ ಲಕಲಕ. ಇದೇನು-ಸಾಯೋ ವಯಸ್ಸಾ? ಅಪೋಲೋ ಆಸ್ಪತ್ರೆ ಸೇರಿದರೆ ಸುಖವೇ ಸುಖ ಅಂತಾರೆ. ಅವನ್ಯಾವನೋ ಮಂತ್ರಿಸಿ ಕೊಟ್ಟ ನೀರು ಕುಡಿದರೆ ಎಂಥ ಖಾಯಿಲೆಯೂ ವಾಸಿಯಂತೆ! All the bull shit.

ಅಜ್ಜ ಮಳಗಾಂವಕರ್ ಕೆಲವು ದಶಕಗಳ ತನಕ no pills, no powder ಎಂಬಂತೆ ದಿವಿನಾಗಿ ಬದುಕಿಬಿಟ್ಟರು. ಸಾಯುವುದು ಕೂಡ ವಯೋ ಸಹಜ ಕಾರಣಗಳಿಂದಾಗಿ ಸತ್ತರು. ಅವರಿಗೆ ದೇವರಿಲ್ಲ, ದಿಂಡರಿಲ್ಲ. ಚಿಕ್ಕವರಾಗಿದ್ದಾಗ ಕಲಿತ ಸಂಸ್ಕೃತ ಶ್ಲೋಕ verses ಮುಂತಾದವುಗಳನ್ನು ಸ್ಮರಿಸಿಕೊಳ್ಳುತ್ತಿದ್ದರು. ಕಂಠಪಾಠ ಮಾಡಿದ ಹುಡುಗನಂತೆ. Then one day he passed away.

ನನಗೆ ಗೊತ್ತಿಲ್ಲ. ಅದು ನನ್ನದೇ ಮನೆ ಎನ್ನಿಸುತ್ತದೆ. ಒಳಕ್ಕೆ ಹೋದರೆ ಏನೋ ಶಾಂತಿ. ಅದು ಆನೆಯ ಅಂತಿಮ ಜಾಗವಿರಲಿಕ್ಕಿಲ್ಲ. ಆದರೆ ಅದು ಆನೆ ಅಂತ್ಯವನ್ನು ಸ್ಮರಿಸುತ್ತಾ, ಹುಡುಕುತ್ತಾ ಹೋದ ಹಾದಿಯಂತೂ ಹೌದು. ಅವರ ಅಳಿಯ ಆಂದ್ರೆ ಕಪೂರ್ ಮೊನ್ನೆ ಬಂದಿದ್ದರು. We just missed meeting. ತೊಂದರೆಯಿಲ್ಲ. ಮುಂಬಯಿಗೆ ಹೋಗಿ ಭೇಟಿಯಾಗುತ್ತೇನೆ. ವ್ಯವಹಾರ ಮುಗಿಸಬೇಕಿದೆ. ಅವರಿಗಾದರೂ ವಿಪರೀತ ಖಾಯಿಲೆ. ಆ ಹಿರಿಯ ಚೆನ್ನಾಗಿ ಬದುಕಲೆಂಬ ಆಸೆ.

ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 29 August, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books