Ravi Belagere
Welcome to my website
ಹೆಂಡತಿ ಮನೆಯಲ್ಲಿ ಇಲ್ಲದಿದ್ದರೆ ಅದೊಂದು ದಿವ್ಯ ಸಂತೋಷವಲ್ಲವೆ? ಆ ಸಂತೋಷವನ್ನು ಇಲ್ಲಿ ದಾಖಲಿಸಿ, ಓದುಗರೊಂದಿಗೆ ಹಂಚಿಕೊಳ್ಳಿ. ನನಗೆ ಥಾನುಗಟ್ಟಲೆ ಬರಹಗಳು ಬೇಕಾಗಿಲ್ಲ. ಇಡೀ ಕಾದಂಬರಿ ಬರೆದು ಕಳಿಸಬೇಡಿ. Just ಒಂದು in land letterನಲ್ಲಿ ಹಿಡಿಸುವಷ್ಟು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದರೆ ಸಾಕು. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ನಿಮ್ಮ ಹಾಗೂ ನಿಮ್ಮ ಪತ್ನಿಯ ಫೊಟೋ (ಇಬ್ಬರೂ ಜೊತೆಗಿರುವಂಥದ್ದು) ರೆಡಿ ಇದ್ದರೆ ತಪ್ಪದೆ ಪತ್ರದೊಂದಿಗೆ ಕಳಿಸಿ ಕೊಡಿ. ಓದುಗರಾದ ನೀವು ಬರಹಗಾರರೂ ಆದರೆ, ಅದು ಬೇರೆಯದೇ ಸಂತೋಷ.
Home About Us Gallery Books Feedback Prarthana Contact Us

Buy Ravi Belagere Books online

ಛಾರ್ಜ್ ಇಟ್ಕೊಂಡು ಹೋಗಿ ಬಾಟಮ್ ಐಟಂ ಹರಿಯುವಂಗೆ

ಮೇರೇ ದುಷ್ಮನ್ ತೂ ಮೇರಿ
ದೋಸ್ತೀ ಕೋ ತರಸೇ...

ಎಂಬ ದುಃಖದ ಹಾಡು ರಫಿಯ ಬಾಯಲ್ಲಿ ಕೇಳುತ್ತಾ ಬಂದೆ. ದುಃಖದ ಹಾಡು ಕೇಳಿದೆನಲ್ಲ? ಕೇಳೋ ತನಕ ದುಃಖ ಅಷ್ಟೆ. ಮುಂದಿನ ಹಾಡಿಗಾಗಲೇ ಈ ತುಡುಗು ಮನಸು ಇನ್ನೆಲ್ಲೋ ದಂಟು ಕಡಿಯುತ್ತಿರುತ್ತದೆ.

ಮತ್ತೇನಿಲ್ಲ: ಅಜಮಾಸು ಎರಡೂ ಮುಕ್ಕಾಲು ವರ್ಷಗಳಿಂದ ನನ್ನ ಜೋಯಿಡಾ ಕಾಡುಗಳಿಗೆ ಹೋಗಿರಲಿಲ್ಲ, ಹೋಗಿ ಬಂದೆ. ಕೊಂಚ ದುಬಾರಿ ಅನ್ನಿಸಿದರೂ, ನಿಮಗೆ ಅಚ್ಚರಿ ಮೂಡಿಸಿದರೂ-ಒಂದು ಥಳ್ ಥಕ್ ವಸ್ತುವನ್ನು ನೋಡಿ ಬಂದೆ. ಸ್ವಲ್ಪ wait ಮಾಡಿ: ಒಂತಮಾಷಿ ಸುದ್ದಿ ಕೇಳಿಸುತ್ತೇನೆ. You will say “ಶಭಾಷ್ ಮಗನೇ!"

ಅವರ್ಣನೀಯ ಪ್ರೇಮದ ತಮ್ಮ ನನ್ನ ನರಸಿಂಹ ಛಾಪಖಂಡ. ದಾಂಡೇಲಿಯ ಕಾಡುಗಳ ಹುಚ್ಚು ತಂದು ತಗುಲಿಸಿದವನೇ ನರಸಿಂಹ. ‘ಕಾಡುಮನೆ’ ಅಂತೊಂದು home stay ಮಾಡಿದ್ದಾನೆ. He is an expert. ಅವನು ಓಡಾಡುವುದೇ ಇಲ್ಲ. ಈಗಷ್ಟೆ ಜಿಂಕೆ ತಿಂದಿದ್ದಾನೇನೋ ಎಂಬಂತೆ ಛಂಗ ಛಂಗ್ ಓಡುತ್ತಿರುತ್ತಾನೆ. ಹಾಗಾಗಿಯೇ ‘ಭಾಡ್ಯಾ’ ಇನ್ನೂ ಯುವಕನಂತೆ ಓಡಾಡುತ್ತಾನೆ. ಉಳಿದದ್ದೆಲ್ಲ ಆಯ್ತು: ನರಸಿಂಹನ ಹೆಂಡತಿ ಕಾವ್ಯ ಮಾಡಿಕೊಡುವ ಒಂದೆಲಗದ ತಂಬುಳಿ ಕುಡೀಲಿಲ್ಲ. Miss ಆಯ್ತು. ಕಾಡು ಅಲೆಯುವಾಗ ಜಾರೋ ಚಪ್ಪಲಿ, ಟಪಕ್ ಅಂತ ಬಿದ್ದು ಸಿಗರೇಟಿನ ಕೆಂಡಕ್ಕೆ ಸ್ನಾನ ಮಾಡಿಸೋ ಮಳೆಯ ಹನಿ... ಏ... best ಇತ್ತು ನೋಡ್ರಿ. ಬೇಕೆಂತಲೇ ಈ ಬಾರಿ ಪಾಂಡುರಂಗಿ ಡಾಕ್ಟರರ ಬಳಿಗೆ ಹೋಗಲಿಲ್ಲ. ಇಷ್ಟರಲ್ಲೇ ಇದೆಯಲ್ಲ next trip. One side journey 540 ಕಿಲೋ ಮೀಟರಿನಷ್ಟಾಗುತ್ತದೆ. ಬದಲಿಗೆ, ರೈಲು ಹತ್ತಿದರೆ ಒಂದು ರಾತ್ರಿಯಲ್ಲಿ ಲೊಂಡಾ junction. ಅಲ್ಲಿಳಿದರೆ ಮೂವತ್ತೇ ಕಿಲೋ ಮೀಟರಿಗೆ ಜೋಯಿಡಾ. ಹಾಗೆ ಅಳ್ನಾವರದಲ್ಲೂ ಇಳೀಬಹುದು. ಬೇಡವಾ, ಇಲ್ಲಿಂದ ಬೆಳಗಾವಿಗೆ ವಿಮಾನದಲ್ಲಿ ಹಾರಿಂಗ್! ಅಲ್ಲಿಂದ ಅರವತ್ತೇ ಕಿ.ಮೀ. ದೂರದಲ್ಲಿ ನನ್ನ ಅರಮನೆ. ವಿಮಾನ ಹುಬ್ಬಳ್ಳಿಗೂ ಬರುತ್ತದೆ. ನಂಬೋದು ಕಷ್ಟ.

ರಾಜಕುಮಾರ್ ಬದುಕಿನ ಜೀವನ ರಹಸ್ಯದ ಪುಸ್ತಕ ಮುಗಿದಿದೆ. Final touchesಗೆ ಒಂದು ವಾರ. ಜೊತೆಗೆ ಒಂದು C.D. ಬಿಡುಗಡೆ ಮಾಡುತ್ತೇನೆ. ಅದನ್ನ ಕದ್ದರೆ, net workಗೆ upload ಮಾಡಿದರೆ, ಬೇರೇನೇ ಚೇಷ್ಟೆ ಮಾಡಿದರೂ ಪೊಲೀಸರನ್ನು ಬೆನ್ನತ್ತಿಸೋದಲ್ಲದೆ, ರಾಜ್ಯದ ಯಾವ ಮೂಲೆಯಲ್ಲಿದ್ದರೂ charge ಕೊಟ್ಟು ಹೋಗಿ ಬಾಟಮ್ ಐಟಮ್ ಹರಿಯುವಂತೆ ಬಡಿಯುತ್ತೇನೆ. ನಿಮ್ಮ ನೆರವಿರಲಿ.

ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 22 August, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books