Ravi Belagere
Welcome to my website
ಹೆಂಡತಿ ಮನೆಯಲ್ಲಿ ಇಲ್ಲದಿದ್ದರೆ ಅದೊಂದು ದಿವ್ಯ ಸಂತೋಷವಲ್ಲವೆ? ಆ ಸಂತೋಷವನ್ನು ಇಲ್ಲಿ ದಾಖಲಿಸಿ, ಓದುಗರೊಂದಿಗೆ ಹಂಚಿಕೊಳ್ಳಿ. ನನಗೆ ಥಾನುಗಟ್ಟಲೆ ಬರಹಗಳು ಬೇಕಾಗಿಲ್ಲ. ಇಡೀ ಕಾದಂಬರಿ ಬರೆದು ಕಳಿಸಬೇಡಿ. Just ಒಂದು in land letterನಲ್ಲಿ ಹಿಡಿಸುವಷ್ಟು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದರೆ ಸಾಕು. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ನಿಮ್ಮ ಹಾಗೂ ನಿಮ್ಮ ಪತ್ನಿಯ ಫೊಟೋ (ಇಬ್ಬರೂ ಜೊತೆಗಿರುವಂಥದ್ದು) ರೆಡಿ ಇದ್ದರೆ ತಪ್ಪದೆ ಪತ್ರದೊಂದಿಗೆ ಕಳಿಸಿ ಕೊಡಿ. ಓದುಗರಾದ ನೀವು ಬರಹಗಾರರೂ ಆದರೆ, ಅದು ಬೇರೆಯದೇ ಸಂತೋಷ.
Home About Us Gallery Books Feedback Prarthana Contact Us

Buy Ravi Belagere Books online

ಶಾಲೆ ಪೂರ್ತಿ ಅವರಿಗೆ : ಹೊಸ ತಿಕ್ಕಲು ನನಗೆ

ಒಂದು ಮನವಿ. ಕಷ್ಟಪಟ್ಟು, ಒದ್ದಾಡಿ, ಖರ್ಚೂ ಮಾಡಿ ಎರಡನೇ ಮುದ್ರಣ ಮಾಡಿಸಿದ ನನ್ನ ಪುಸ್ತಕ ‘ಉಡುಗೊರೆ’ ಒಂದೇ ಏಟಿಗೆ ಉಡೀಸ್. ಬಹುಶಃ record ಮಟ್ಟಿಗೆ ಅಂತ ಆಫೀಸಿನವರು ಹತ್ತು ಪ್ರತಿ ಉಳಿಸಿಕೊಂಡಿದ್ದಾರೆ. ನಾನೇ ಹಟಕ್ಕೆ ಬಿದ್ದು, ಜಗಳವಾಡಿ, ನನ್ನ ಪುಸ್ತಕ ಮಳಿಗೆ B.B.C.ಯಲ್ಲಿ ಒಂದಷ್ಟು ಪ್ರತಿ ತೆಗೆದಿರಿಸಿದ್ದೇನೆ. ಇನ್ನು ಮಾರುಕಟ್ಟೆಯಲ್ಲಿ ಏನಾದರೂ ಕೊಸರು ಉಳಿದಿದ್ದರೆ, ಅದೇ ಪುಣ್ಯ. ಮದು ಮಕ್ಕಳಿಂದ ಹಿಡಿದು ಪರೀಕ್ಷೆ ಪಾಸಾದವರ ತನಕ ಯಾರಿಗೆ ಬೇಕಾದರೂ, as a gift ಕೊಡಬಹುದಾದ ಅಪರೂಪದ ಪುಸ್ತಕ ಅದು. Please purchase soon. ಆ ನಂತರ ತಕರಾರು ಬೇಡ. ಖರೀದಿ ಮಾಡಿ ಇಟ್ಟು ಬಿಡಿ. ಕೆಲಸಕ್ಕೆ ಬರುತ್ತೆ.

ಉಳಿದಂತೆ ಎಲ್ಲವೂ ಯೋಗ ಕ್ಷೇಮಂ ವಹಾಮಯ್ಯಹಮ್. ಒಂದು ಶವಸಂಸ್ಕಾರಕ್ಕೆ ಇಂಧನವಾಗಬಲ್ಲಷ್ಟು ಪುಸ್ತಕ ತರಿಸಿಕೊಂಡಿದ್ದೇನೆ. ಮುಪ್ಪಿನ ತನಕ ಸಾಕು. ಜೊತೆಗೆ ನನ್ನ ಕಂಪ್ಯೂಟರಿನ kindle ವಿಭಾಗದಲ್ಲಿ ನೂರಾರು ಪುಸ್ತಕ ಇವೆ. ಸತ್ತರೆ ಯಾರಿಗೆ ದಾನವೋ? ತಿಳೀವಲ್ಲದು. ಕರ್ಣನಿಗೆ ಅವು ಮುಟ್ಟಿ ನೋಡಲು ಸಾಕು. ಭಾವನಾಗೆ ಪುಸ್ತಕಗಳು ತಲೆದಿಂಬಿಗೆ ಆದಾವು. ಸ್ವಲ್ಪ ಮಟ್ಟಿಗೆ ಚೇತನಾ ಬಳಸಿಕೊಳ್ಳಬಹುದು. ಅದೆಲ್ಲ ನನ್ನ ನಿರ್ಗಮನದ ನಂತರದ ಮಾತು.

ಈಗ ಶಾಲೆಯ ಪೂರ್ತಿ ಜವಾಬ್ದಾರಿಯನ್ನು ಕರ್ಣ ಮತ್ತು ಲಕ್ಷ್ಮಿಯರಿಗೆ ಒಪ್ಪಿಸುತ್ತಿದ್ದೇನೆ. Very capable kids they are. ಮಾರ್ಗದರ್ಶನಕ್ಕೆ ಉಮೇಶ್ ಹೆಗಡೆ ಇದ್ದಾನೆ. ಸ್ಕೂಲ್ ಆಫ್ ಜರ್ನಲಿಸಂ ಥರದ್ದು ಮಾಡಬೇಕು. ಅಂತೆಯೇ ಮನೋವೈಕಲ್ಯದ ಮಕ್ಕಳಿಗೊಂದು ಶಾಲೆ. ಫೇಲಾದವರಿಗೊಂದು ಸ್ಕೂಲು. ಇವೆಲ್ಲ ಕನಸುಗಳು. ಮುಖ್ಯವಾಗಿ ಜಾಗಬೇಕು. ಬೆಂಗಳೂರಿನಲ್ಲಿ ಹೆಣ ಹುಗಿಯಲಿಕ್ಕೂ ಜಾಗ ಸಿಗದು. ಪ್ರಾರ್ಥನಾದ್ದೇ ಒಂದು ಕ್ಯಾಂಪಸ್ ಮಾಡಬೇಕು. ಅಷ್ಟಿಷ್ಟು ದುಡ್ಡಿದೆ. ಆದರೆ ಜಾಗ?

ನನ್ನ ತಲೆಯಲ್ಲಿ projectಗಳ ರೈಲು ಓಡುತ್ತಲೇ ಇರುತ್ತದೆ. ಆ ಪೈಕಿ realise ಆಗೋವು ಅಷ್ಟೋ ಇಷ್ಟೋ. ಅದಕ್ಕಾಗಿ ಒದ್ದಾಡುವುದಂತೂ ಅನಿವಾರ್ಯ. I do that.

ಅಂದ್ಹಾಗೆ, ನಿಮ್ಮ ಕಡೆ ಮಳೆ ಪಸಂದಾಗಿ ಆಯ್ತೆ? ಬೆಂಗಳೂರಿನ ಕೆಲ ಭಾಗಗಳಲ್ಲಿ ಕುಂಭದ್ರೋಣ. ರಸ್ತೆ ರಸ್ತೆಯೇ ನದಿ. ನೀರು ನಿಂತಲ್ಲಿ ಕೆರೆ. ಪದ್ಮನಾಭನಗರದಲ್ಲಿ ಅಷ್ಟಿಲ್ಲ. ನಾನು ಮತ್ತು ದೇವೆಗೌಡರು ವಾಸವಿರುವಾಗ ತುಂತುರು ಬಿದ್ದರೆ ಅಷ್ಟೇ ಪುಣ್ಯ!

ನಿಮಗೆಲ್ಲ happy monsoon.

ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 09 August, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books