Ravi Belagere
Welcome to my website
ಹೆಂಡತಿ ಮನೆಯಲ್ಲಿ ಇಲ್ಲದಿದ್ದರೆ ಅದೊಂದು ದಿವ್ಯ ಸಂತೋಷವಲ್ಲವೆ? ಆ ಸಂತೋಷವನ್ನು ಇಲ್ಲಿ ದಾಖಲಿಸಿ, ಓದುಗರೊಂದಿಗೆ ಹಂಚಿಕೊಳ್ಳಿ. ನನಗೆ ಥಾನುಗಟ್ಟಲೆ ಬರಹಗಳು ಬೇಕಾಗಿಲ್ಲ. ಇಡೀ ಕಾದಂಬರಿ ಬರೆದು ಕಳಿಸಬೇಡಿ. Just ಒಂದು in land letterನಲ್ಲಿ ಹಿಡಿಸುವಷ್ಟು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದರೆ ಸಾಕು. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ನಿಮ್ಮ ಹಾಗೂ ನಿಮ್ಮ ಪತ್ನಿಯ ಫೊಟೋ (ಇಬ್ಬರೂ ಜೊತೆಗಿರುವಂಥದ್ದು) ರೆಡಿ ಇದ್ದರೆ ತಪ್ಪದೆ ಪತ್ರದೊಂದಿಗೆ ಕಳಿಸಿ ಕೊಡಿ. ಓದುಗರಾದ ನೀವು ಬರಹಗಾರರೂ ಆದರೆ, ಅದು ಬೇರೆಯದೇ ಸಂತೋಷ.
Home About Us Gallery Books Feedback Prarthana Contact Us

Buy Ravi Belagere Books online

ಬಾಟಮ್ ಐಟಮ್ : ಅವರ ಬೆದರಿಕೆಗೆ ಖಂಡಿತ ಮಣಿಯಬೇಡಿ!

''ಹ್ಯಾಗೆ ಬದುಕ್ತೀಯೋ ನಾನೂ ನೋಡ್ತೀನಿ! I will destroy you. ಸುಮ್ನೆ ಬಿಡ್ತೀನಾ ನಿನ್ನನ್ನ? ಅನುಭವಿಸ್ತೀಯ ಹೋಗು... ನಿಂಗೊಂದು ಗತಿ ಕಾಣಿಸದಿದ್ರೆ ಕೇಳು!''
ಆತ ಕೂಗುತ್ತಿದ್ದರೆ ಎದೆ ಢವಗುಟ್ಟುತ್ತದೆ. ಬದುಕು ಇದ್ದಕ್ಕಿದ್ದಂತೆ hopeless ಅನ್ನಿಸಿಬಿಡುತ್ತದೆ. ಇಲ್ಲಿಗೆ ಎಲ್ಲವೂ ಮುಗಿದು ಹೋಯಿತು; ಎಂಥ ಕೆಲಸ ಮಾಡಿಕೊಂಡೆ? ಎಂಥವನನ್ನು ಎದುರು ಹಾಕಿಕೊಂಡೆ! ಅವನು ಪರಮ ಬಲಿಷ್ಠ. ಏನು ಬೇಕಾದರೂ ಮಾಡಿಬಿಡುತ್ತಾನೆ. He will destroy me. ಬದುಕೋಕೆ ಬಿಡ್ತಾನಾ?
ಆ ಕ್ಷಣದಿಂದಲೇ ಭಯ ಶುರುವಾಗುತ್ತದೆ. ನಾಶವಾಗುವ ಭಯ. ಬದುಕು ಛಿದ್ರವಾಗುವ ಭಯ. ಏನೇನು ಅನುಭವಿಸಲಿಕ್ಕಿದೆಯೋ ಎಂಬ ಭಯ. ಯಾವಾಗ ಏನಾಗುತ್ತದೆಯೋ ಎಂಬ ಭಯ. The fear. Fear of destruction!

ನಿಜ ಹೇಳಿ: ಅಂಥ ಭಯಗಳನ್ನು ನೀವು ನಿಮ್ಮ ಬದುಕಿನಲ್ಲಿ ಎಷ್ಟು ಸಲ ಅನುಭವಿಸಿದ್ದೀರಿ? ಯಾರಿಂದ ಅನುಭವಿಸಿದ್ದೀರಿ? ಎಷ್ಟು ದಿನ ಅನುಭವಿಸಿದ್ದೀರಿ? ನಂಗೊತ್ತು; ನಿಮ್ಮಲ್ಲಿ ಹೆಚ್ಚಿನವರು ತೀರ private persons. ನಿಮ್ಮ ವಲಯ ಪುಟ್ಟಗೆ ಮಟ್ಟಸವಾಗಿರುವಂತಹುದು. ಪ್ರೀತಿಸೋರು, ಹೆದರಿಸೋರು, ರಕ್ಷಿ ಸೋರುಎಲ್ಲರೂ ಪರಿಚಿತರೇ. ನಿಮ್ಮವರೇ. ಹೆಂಡತಿ ಯನ್ನು ಗಂಡ ಹೆದರಿಸುತ್ತಾನೆ: ೞನಿನ್ನನ್ನ ಬಿಟ್ಟುಬಿಡ್ತೀನಿ ನೋಡು! ಆಕೆಗೆ ತಕ್ಷಣ ಶುರುವಾಗುತ್ತದೆ, ನಾಶ ವಾಗುವ ಭಯ. ೞಮನೆಯಿಂದ ಹೊರಗೆ ಹಾಕ್ತೀನಿೞ ಅಂತ ಮಗಳನ್ನು ತಂದೆ ಹೆದರಿಸು ತ್ತಾನೆ. ಮನೆಯ ಯಜಮಾನ ಬಾಡಿಗೆ ಯವನನ್ನು ಹೆದರಿಸುತ್ತಾನೆ. ನೌಕರನನ್ನು ಬಾಸ್ ಭಯಪಡಿಸುತ್ತಾನೆ. ದುಷ್ಟನೊಬ್ಬ ಬೀದಿಯಲ್ಲಿ ನಿಂತು `ನಿನ್ನನ್ನುdestroy ಮಾಡಿಬಿಡ್ತೀನಿ' ಅಂತ ಅಬ್ಬರಿಸುತ್ತಾನೆ. ಆಗ ತಕ್ಷಣ ಹೇಳಿಕೊಳ್ಳಿ:
`ನನ್ನ ಬದುಕು create ಮಾಡಿದವನು ನೀನಲ್ಲ. ನೀನು ಏನು ಪ್ರಯತ್ನ ಮಾಡಿದರೂ destroy ಮಾಡಲಾರೆ!'

ನಿಮಗೆ ಕೊಂಚ ಸಮಾಧಾನವಾಗುತ್ತದೆ. ಮನೆಯಿಂದ ಹೊರಹಾಕಲ್ಪಟ್ಟರೆ, ಅದು ಡಿಸ್ಟ್ರಕ್ಷನ್ ಅಲ್ಲ. ಕೆಲದಿನದ ಮಟ್ಟಿಗೆ ನೆಲೆ ತಪ್ಪಿದಂತಾಗಬಹುದು. ನೌಕರಿಯೂ ಅಷ್ಟೆ. ದಾಂಪತ್ಯವಾದರೂ ಅಷ್ಟೇ! ಅವನು ಕೇವಲ ಹೊರಹಾಕುತ್ತೇನೆಂದು ಹೆದರಿಸುತ್ತಿದ್ದಾನೆ. ಖಂಡಿತ ಹೆದರಬೇಡಿ. ಅಂಥವನ ಜೊತೆಗಿದ್ದರೇನೇ destroy ಆಗುವ ಅಪಾಯ ಜಾಸ್ತಿ. ಹೊರಬಿದ್ದರೆ ಅಲ್ಲ! ತೀರ ಸಹನೆಯ ಕಟ್ಟೆ ಒಡೆದಾಗ ಒಮ್ಮೆ ಹೊರಬಿದ್ದು ನೋಡಿ. ಇಷ್ಟು ದಿನ ಅದೆಂಥ ನರಕ ದಲ್ಲಿದ್ದೆನಯ್ಯಾ ಅಂತ ನಿಮಗೇ ಅನ್ನಿಸುತ್ತದೆ. ಎಷ್ಟೋ ಸಲ ನಾವು ಕೆಟ್ಟ ನೌಕರಿಗಳನ್ನ, ಕೆಟ್ಟ ಗೆಳೆಯರನ್ನ, ಕೆಟ್ಟ ಸಂಬಂಧಗಳನ್ನ, ಕೆಟ್ಟ ವಾತಾವರಣಗಳನ್ನ ಕೇವಲ ಅಭದ್ರತೆಯಿಂದಾಗಿಯೇ ಸಹಿಸಿಕೊಂಡಿರುತ್ತೇವೆ. ಸಹಿಸಿ ಸಹಿಸಿ destroy ಆಗುತ್ತಿರುತ್ತೇವೆ. ಅಕಸ್ಮಾತ್ ಹೊರ ಹಾಕಲ್ಪಟ್ಟರೆ ಏನು ಗತಿ ಎಂಬ ಒಂದೇ ಒಂದು ಭಯ ನಮ್ಮನ್ನು ಅಲ್ಲೇ ಉಳಿಯುವಂತೆ, ಅಲ್ಲಿಗೇ ಕಚ್ಚಿಕೊಳ್ಳುವಂತೆ, ಅದನ್ನೇ ಸಹಿಸುವಂತೆ ಮಾಡಿಬಿಟ್ಟಿರುತ್ತದೆ. ಹೀಗೆ ಬದುಕುವುದು ನಿಜಕ್ಕೂworth ಅಂತೀಯಾ? ನಿಮ್ಮನ್ನು ನೀವೇ ಕೇಳಿಕೊಳ್ಳಿ. ಹೊರ ಬಿದ್ದರೆ ಇದಕ್ಕಿಂತ ಕೆಟ್ಟದಾಗಬಹುದೇನೋ ಎಂಬುದು ಕೇವಲ ನಿಮ್ಮ ಭಯವಾ? ಕೂತು ಆಲೋಚಿಸಿ. destroy ಆಗಿ ಬಿಡುವುದಕ್ಕಿಂತಲೂ destructionನ ಭಯ ನಮ್ಮನ್ನು ಹೆಚ್ಚು destroy ಮಾಡುತ್ತಿರುತ್ತದೆ. ನಮಗದು ಗೊತ್ತೇ ಆಗುವುದಿಲ್ಲ.

`ಈ ಮನೆಯಿಂದ, ಈ ಗೆಳೆಯನಿಂದ, ಈ ನೌಕರಿಯಿಂದ ಹೊರಬಿದ್ದು ಬಿಟ್ಟರೆ ಮುಂದೆ ಏನಿದೆ? ಬರೀ blank ಅಂತ ಭಯಪಡುತ್ತಿರುತ್ತೇವೆ. ನೆನಪಿರಲಿ, ಈ ಮನೆ, ಈ ಗೆಳೆಯ, ಈ ನೌಕರಿಗಿಂತ ಮುಂಚೆಯೂ ಒಂದು blankness ಇತ್ತು. ಅದೆಷ್ಟು ಚೆಂದಗಿತ್ತು! ಪ್ರತಿ ಮನುಷ್ಯನ ಬದುಕೂ ಆರಂಭದಲ್ಲಿ ಬ್ಲ್ಯಾಂಕೇ. ವಿಶಾಲವಾದ ಖಾಲಿ ಕ್ಯಾನ್ವಾಸೇ. ಈಗ ಮತ್ತೆ ಖಾಲಿ ಖಾಲಿ ಆಗುತ್ತಿದೆ. ಹಾಗಾದಾಗ ಬದುಕೇ hopeless ಅನ್ನಿಸಿಬಿಡುತ್ತದೆ. ಅದು ನಿಜವೂ ಹೌದು. Blank ಆದ ಬದುಕಿನೆದುರು ಪ್ರತಿಯೊಬ್ಬನ ಬದುಕೂ ಹೋಪ್‌ಲೆಸ್ ಆದುದೇ. ಅದು ಏನೂ ಇಲ್ಲದ, ಯಾರೂ ಇಲ್ಲದ, ದಿಕ್ಕೇ ಗೊತ್ತಾಗದ, ದಾರಿಯೇ ಕಾಣದ, ನೀರಸ ಶೂನ್ಯ. ಖಾಲಿ ಕ್ಯಾನ್ವಾಸ್!

ನನ್ನ ಬದುಕೂ ಹಾಗೇ ಇತ್ತು. ಆದ್ದರಿಂದಲೇ ಇದು ಇಂಟರೆಸ್ಟಿಂಗ್ ಅನ್ನಿಸತೊಡಗಿತು. ಅಕಸ್ಮಾತ್ ನನ್ನ ಬದುಕಿನ ಕ್ಯಾನ್ವಾಸಿನ ಮೇಲೆ ಮೊದಲೇ ಯಾರೋ ಒಂದು ಚಿತ್ರ ಬರೆದಿಟ್ಟು ಬಿಟ್ಟಿದ್ದಿದ್ದರೆಮಾಡಲು ನನಗೇನು ಉಳಿಯುತ್ತಿತ್ತು ಹೇಳಿ? ಅಪ್ಪ ಮೊದಲೇ ಅಂಗಡಿಮನೆ ಮಾಡಿಟ್ಟು ಬಿಟ್ಟಿದ್ದರೆ, ತನಗೆ ಒಲ್ಲದಿದ್ದರೂ ಮಗ ಅದರಲ್ಲೇ ಬದುಕುತ್ತಾನೆ. ನನ್ನದು ಹಾಗಲ್ಲ. ಬದುಕಿನ ಅಂಗಳ ಖಾಲಿಯಿತ್ತು. ನಾನೇ ತಳಿರು ಹಾಕಿದೆ. ರಂಗೋಲಿ ಬರೆದು ಕೊಂಡೆ. ನನ್ನದೇ ಸಂಭ್ರಮ. ಇದನ್ನು ಕಟ್ಟಿ ಕೊಂಡವನೇ ನಾನು. ಬೇರೆ ಯಾರಾದರೂdestroy ಮಾಡಲು ಬಂದರೆ, ಎಷ್ಟು ತಾನೆ destroy ಮಾಡಿ ಯಾರು? ಅದನ್ನು ಮತ್ತೆ ಸರಿಪಡಿಸಿಕೊಳ್ಳುವ ಕಲೆ ನನಗೆ ಗೊತ್ತು.

ಹೆದರಿಸಿದಾಗ, ಗಂಡ ತುಂಬ ಬಲಿಷ್ಠನೆನ್ನಿಸುತ್ತಿರುತ್ತಾನೆ. ಧಿಕ್ಕರಿಸಿ ಈಚೆಗೆ ಬಂದ ಹೆಣ್ಣು ಮಗಳು ಎಲ್ಲೋ ನೆಲೆ ನಿಂತು ತನ್ನದೇ ಕ್ಯಾನ್ವಾಸ್ ಚಿತ್ರಿಸಿಕೊಳ್ಳುತ್ತಾಳೆ. ತಿರುಗಿ ನೋಡಿದರೆ, ಆ ಗಂಡ ಎಷ್ಟೊಂದು ಬಲಹೀನ ನಾಗಿದ್ದ ಅಲ್ವಾ ಅನ್ನಿಸತೊಡಗುತ್ತದೆ. ಬೆದರಿಸುವ ಮಿತ್ರ, ಅಬ್ಬರಿಸುವ ಶತ್ರು, ಕೂಗುವ ಬಾಸ್, ರೇಗುವ ಒಡೆಯಎಲ್ಲರೂ ಅಷ್ಟೆ. ಅವರ ಪರಿಯಿಂದ ಈಚೆಗೆ ನಾವು ಬಂದುಬಿಟ್ಟರೆ ತೀರ ಬಲಹೀನ ಅನ್ನಿಸಿಬಿಡು ತ್ತಾರೆ. ಅಪ್ರಸ್ತುತವಾಗಿಬಿಡುತ್ತಾರೆ. ಅವರ ಬೆದರಿಕೆಗೆ ಖಂಡಿತ ಮಣಿಯಬೇಡಿ.

ಆದರೆ ನೀವು ಹೆದರಲೇಬೇಕಾದ ಅಂಶವೊಂದಿದೆ. ಅದು ಖಾಲಿ ಕ್ಯಾನ್ವಾಸಿನದು. ಇದ್ದಕ್ಕಿದ್ದಂತೆ ಎದ್ದು ನಿಲ್ಲುವ blank ಕ್ಯಾನ್ವಾಸಿನ ಮೇಲೆ ಏನು ಚಿತ್ರಿಸುತ್ತೀರಿ? ನೀವು ಚಿತ್ರಿಸಲೇಬೇಕು. ಇಲ್ಲದಿದ್ದರೆ ಬದುಕು hope-less ಆಗುತ್ತೆ. ಹಾಗಂತ, ಕೆಟ್ಟದಾಗಿ ಚಿತ್ರಿಸಿಕೊಂಡರೆ ಬದುಕು miserable ಆಗುತ್ತದೆ. ಎಷ್ಟೋ ಜನ ಗಂಡ ನಿಂದ ಹೊರಬಿದ್ದವರು, ಹೊರ ಹಾಕಿಸಿಕೊಂಡವರು, ತಿರಸ್ಕೃತರು, ಮನೆ ಬಿಟ್ಟು ಓಡಿ ಬಂದವರು, ನೌಕರಿಯಿಂದ ಕಳಚಿಕೊಂಡವರು, destructionನ ಬೆದರಿಕೆ ಯಿಂದ ಸಿಡಿದು ಬಂದವರು ತಂತಮ್ಮblank ಕ್ಯಾನ್ವಾಸುಗಳನ್ನು ತಾವೇ ಅತ್ಯಂತ ಮಟ್ಟಸವಾಗಿ ಚಿತ್ರಿಸಿ ಕೊಂಡಿದ್ದಾರೆ. ಅವರಿಗೆ ಚೆನ್ನಾಗಿ ಗೊತ್ತು. ಬದುಕು ಪದೇಪದೆ ಖಾಲಿ ಕ್ಯಾನ್ವಾಸ್ ಆಗಿ ಎದುರು ನಿಲ್ಲುವುದಿಲ್ಲ. ನಾವೇ ಬರೆದುಕೊಂಡ ಚಿತ್ರಗಳು ನಮಗೇ ಅಸಹ್ಯವಾದರೂ ಅದನ್ನು ಅಳಿಸಲಾಗುವುದಿಲ್ಲ. ಏಕೆಂದರೆ, ಅವು ನಾವೇ ಬರೆದದ್ದು.

ನೆನಪಿರಲಿ; ನಮ್ಮನ್ನು ಯಾರೂ ನಾಶ ಮಾಡ ಲಾರರು. ಅಂತೆಯೇ, ಯಾರೂ ನಮ್ಮನ್ನು ಉದ್ಧರಿಸ ಲಾರರು. ಅವರು ಹೆಚ್ಚೆಂದರೆ ನೆರವಾಗಬಹುದು: ಉದ್ಧಾರಕ್ಕೂನಾಶಕ್ಕೂ!
ಅವರ ಮರ್ಜಿ ಯಾಕೆ?
-ರವೀ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 03 August, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books