Ravi Belagere
Welcome to my website
ಹೆಂಡತಿ ಮನೆಯಲ್ಲಿ ಇಲ್ಲದಿದ್ದರೆ ಅದೊಂದು ದಿವ್ಯ ಸಂತೋಷವಲ್ಲವೆ? ಆ ಸಂತೋಷವನ್ನು ಇಲ್ಲಿ ದಾಖಲಿಸಿ, ಓದುಗರೊಂದಿಗೆ ಹಂಚಿಕೊಳ್ಳಿ. ನನಗೆ ಥಾನುಗಟ್ಟಲೆ ಬರಹಗಳು ಬೇಕಾಗಿಲ್ಲ. ಇಡೀ ಕಾದಂಬರಿ ಬರೆದು ಕಳಿಸಬೇಡಿ. Just ಒಂದು in land letterನಲ್ಲಿ ಹಿಡಿಸುವಷ್ಟು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದರೆ ಸಾಕು. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ನಿಮ್ಮ ಹಾಗೂ ನಿಮ್ಮ ಪತ್ನಿಯ ಫೊಟೋ (ಇಬ್ಬರೂ ಜೊತೆಗಿರುವಂಥದ್ದು) ರೆಡಿ ಇದ್ದರೆ ತಪ್ಪದೆ ಪತ್ರದೊಂದಿಗೆ ಕಳಿಸಿ ಕೊಡಿ. ಓದುಗರಾದ ನೀವು ಬರಹಗಾರರೂ ಆದರೆ, ಅದು ಬೇರೆಯದೇ ಸಂತೋಷ.
Home About Us Gallery Books Feedback Prarthana Contact Us

Buy Ravi Belagere Books online

ನಮ್ಮ ಕೈಗೆ ಸಿಕ್ಕೇ ಸಿಗುತ್ತವೆ ಇಂಥ ದೇವರ ಕಥೆಯ ವಿಡಿಯೋಗಳು

ಇದನ್ನ ಅಥವಾ ಇದಕ್ಕೆ ಸಂಬಂಧಿಸಿದುದನ್ನ ತುಂಬ ಹೊತ್ತು ನೋಡಲು ನನಗೆ ಸಾಧ್ಯವಿಲ್ಲ. ಸುತ್ತಲೂ ಸುಮಾರು ಒಂದು ನೂರು ಪೆನ್ ಡ್ರೈವ್‌ಗಳನ್ನು ಹರವಿಕೊಂಡು ಕುಳಿತಿದ್ದೇನೆ.
ಇದಕ್ಕೊಂದು ಉಪಕಥೆ ಹೇಳಬೇಕು ನಿಮಗೆ. ಸರಿಯಾಗಿ ಐದು ವರ್ಷಗಳ ಹಿಂದೆ ನಾನು ನನ್ನ ಸಹಾಯಕ ಸೀನನನ್ನು ಕರೆದುಕೊಂಡು ವಾರಾಣಸಿಗೆ ಹೋಗಿದ್ದೆ. ಅಲ್ಲಿಗೊಂದು ಸಾವಿರ ಸಲ ಹೋಗಲಿ: ಅಲ್ಲಿರುವ ಮಣಿಕರ್ಣಿಕಾ ಘಟ್ಟದ ಬಗ್ಗೆ ನನಗಿರುವ ಸೆಳೆತ ಸಾಲದು. ಅಲ್ಲೊಬ್ಬ ಸಾಧು ಮಹರಾಜ್ ನನ್ನ ಗೆಳೆಯನಾಗಿದ್ದ. ಅವನನ್ನು ಕರೆದು ಕೊಂಡು ಗಂಗಾನದಿಯ ಉದ್ಗಲಕ್ಕೆ walk ಮಾಡುತ್ತಿದ್ದೆ. ಅವನಲ್ಲಿ ಅಂಥ ವಿಶೇಷ `ಶಕ್ತಿ'ಗಳೇನಿರಲಿಲ್ಲ. ಆದರೆ ಅವನಿಗೆ ಅಘೋರ, ನಾಗಾಸಾಧು, ನಾಥ ಪಂಥಿ ಬಾಬಾಗಳೂ ಸೇರಿದಂತೆ ಅನೇಕರ ಕಾಂಟಾಕ್ಟ್ ಗಳಿದ್ದವು. ಅವತ್ತು ಸಂಜೆ ಅವನು ಎಲ್ಲಿಗೋ ಹೋಗಿದ್ದ. ಸೀನನನ್ನು ಕರೆದುಕೊಂಡು ತಿರುಗಾಟಕ್ಕೆ ಹೊರಟೆ. ಅಲ್ಲೇ ಸನಿಹದಲ್ಲಿ ಇನ್ನೊಂದು ಆಶ್ರಮ. ಅದು ಜಾಸ್ತಿ ನೀಟಾಗಿತ್ತು. ವಿದ್ಯುತ್‌ನ ಬೆಳಕಿತ್ತು. ಕೂಡಲು ಬಂಡೆಯ ಹಾಸುಗಳಿದ್ದವು. ಹೆಚ್ಚು ಜನರೂ ಇರಲಿಲ್ಲ. ಇಂಟರೆಸ್ಟಿಂಗ್ ಅಂದ್ರೆ, ಆಶ್ರಮದೊಳಗೆ ಕುಳಿತಿದ್ದ ಗುರುವಿನ ಹೆಸರು ಲಾಲಿ ಬಾಬಾ. ಆ ತನಕ ಲಾಲಿ ಬಾಬಾ ಎಂಬ ಹೆಸರನ್ನೇ ನಾನು ಕೇಳಿರಲಿಲ್ಲ. ಅವನು ಎತ್ತರವಾಗಿದ್ದ. ದಪ್ಪ ಕನ್ನಡಕ. ಜಟಾ ಜೂಟಗಳಿದ್ದವು. ತಮಾಷಿಯೆಂದರೆ ಲಾಲಿ ಬಾಬಾ ಅದೆಲ್ಲ ಜಟಾ ಜೂಟ, ಬೂದಿ ಮೈ, ಏಕೈಕ ಲಂಗೋಟಿಯ ನಡುವೆ ಬುಸ್ಸ ಬುಸ್ಸನೆ ಇಂಡಿಯಾ ಕಿಂಗ್ಸ್ ಸಿಗರೇಟು ಸೇದುತ್ತಿದ್ದ. ವಿಪರೀತ ಮಾತು. ಫೊಟೋಗಳ ಶೋಕಿ. ಪತ್ರಕರ್ತರು ಅಂದ್ರೆ ಖಲಾಸ್. ನಾನು ಅವನ ಕೆಲವು ಫೊಟೋ ಕೇಳಿದೆ. ಅವು ಅವನ ಸಂಗ್ರಹದಲ್ಲಿದ್ದವು. ಎಲ್ಲಾ ತೆಗೆದು ತೋರಿಸಿದ. ಕೊಡು ಮತ್ತೆ? ಅಂದೆ.

``ತುಮ್ಹಾರೆ ಪಾಸ್ ಡ್ರೈವರ್ ಹೈ ಕ್ಯಾ?" ಅಂದ.
ಇಲ್ದೆ ಏನು? ನಾನು ಟ್ಯಾಕ್ಸಿಯಲ್ಲೇ ಹೋಗಿದ್ದೆ. ಅನತಿ ದೂರದಲ್ಲಿ ಕಾರು ನಿಲ್ಲಿಸಿಕೊಂಡು ನನ್ನ ಡ್ರೈವರ್ ನಿಂತಿದ್ದ. ಲಾಲಿ ಬಾಬಾಗೆ ಅದನ್ನೇ ಹೇಳಿದೆ.
``ಓ ಡ್ರೈವರ್ ನಹೀ...ಇಸ್ಮೆ ಘುಸಾತೇನಾ? ಡ್ರೈವರ್?" ಅಂದ.
ಹಾಳು ಸೂಳೆ ಮಗ. ಇವನು ಕೇಳ್ತಿರೋದು ಕಂಪ್ಯೂಟರ್‌ಗಳಿಗೆ ಹಾಕೋ Pen Drive . ಅದನ್ನೇ Driver ಅಂತಾನೆ ಅನ್ನಿಸಿ ನಕ್ಕೆ.
ಮೊನ್ನೆ ಅದೇ ಆಯಿತು.

ಒಂದಷ್ಟು ಪೆನ್ ಡ್ರೈವ್ ತಂದುಕೊಟ್ಟರು. ಆ ಪೈಕಿ ಮೊದಲನೇದನ್ನು ನೋಡುತ್ತಿದಂತೆಯೇ ಗೊತ್ತಾಗಿ ಹೋಯಿತು: ಇದು `ದೇವರ ವಿಡಿಯೋ' ಅಂತ. ಸಾಮಾನ್ಯವಾಗಿ ಪೋಲಿ ಪುಸ್ತಕಗಳಿಗೆ ನಾವು `ದೇವರ ಪುಸ್ತಕ' ಅನ್ನುತ್ತೇವೆ. ಅದು ನಮ್ಮ ತುಂಟ ಏಜೆಂಟರು ಇಟ್ಟ ಹೆಸರು. ಈ ಪೋಲಿ ವಿಡಿಯೋಗಳಿಗೆ `ದೇವರ ಪಿಚ್ಚರ್' ಅನ್ನುತ್ತೇವೆ. ಈ ಹಿಂದೆಯೂ ನಾನು ಬರೆದಿದ್ದೇನೆ. ಬ್ಲೂ ಫಿಲ್ಮ್ ನೋಡೋದೆಂದರೆ ನನ್ನ ದೃಷ್ಟಿಯಲ್ಲಿ ಯಾರದೋ ಶೌಚಕ್ರಿಯೆ ಅಥವಾ ಊಟ ಮಾಡುತ್ತಿರುವಿಕೆ ಅಥವಾ ವಾಂತಿ ಮಾಡಿಕೊಳ್ಳೋದನ್ನು ನೋಡಿದ ಹಾಗೆ. ಅದು ವಿಪರೀತ ಕೆಟ್ಟ taste ಉಂಟು ಮಾಡುತ್ತೆ. ನೋಡಿಯೇ ಇಲ್ಲ ವೆಂದಲ್ಲ, ನಾನು ಒಂದೆರಡು ಅಂಥ ವಿಡಿಯೋಗಳನ್ನ ನೋಡಿದ್ದೇನೆ. ಅದರಲ್ಲೂ ಬ್ಲೂ ಫಿಲ್ಮ್ ಹೆಸರಿನಲ್ಲಿ `ಕ್ಯಾಲಿಗುಲಾ' ಅಂತ ಒಂದು ಸಿನೆಮಾ ಬಂತು. ತುಂಬ ಅರ್ಥಪೂರ್ಣ, ಐತಿಹಾಸಿಕ ಸಿನೆಮಾ ಅದು. ಅದರಲ್ಲಿ ಈ ಲೈಂಗಿಕ ದೃಶ್ಯಗಳಿವೆಯಲ್ಲ? ಅವು ಡೈರೆಕ್ಟರ್‌ನ ಇಚ್ಛೆಯಿಂದಾಗಿ ಮೂಡಿ ಬಂದಂಥವಲ್ಲ. ಸಿನೆಮಾ ನಿರ್ಮಾಣ ಮುಗಿದ ಮೇಲೆ ಪ್ರೊಡ್ಯೂಸರುಗಳು ಸೇರಿಸಿದಂಥವು. ಅದೇ ಕಾರಣಕ್ಕೆ ನಿರ್ದೇಶಕರಿಗೂ-ನಿರ್ಮಾಪಕರಿಗೂ ಜಗಳವಾಗಿ ಆ ಗುಂಪು ಸಿಡಿದೇ ಹೋಯಿತು. ಅದಿರಲಿ, ಸಿನೆಮಾ ಮಾತ್ರ ಅದ್ಭುತ. ಅದು ರೋಮ್ ಚಕ್ರವರ್ತಿಯೊಬ್ಬನ ಕಥೆ. ನಿಜ, ಅದರಲ್ಲಿ ವಿಕಾರವಿದೆ. ವಿಕೃತಿಯಿದೆ. ಅವನು ದೊರೆ. ಸ್ವಂತ ತಂಗಿಯನ್ನು ಮದುವೆಯಾಗುತ್ತಾನೆ. ಕುದುರೆಯೊಂದಿಗೆ ಭೋಗ. ಸೂತ್ರ ಸಂಬಂಧ ಇಲ್ಲದೇನೇ ದಂಪತಿಗಳ ಲೈಂಗಿಕ ಸಾಮರ್ಥ್ಯ ತೆಗೆದು ಹಾಕುವಿಕೆ: ಇಂಥವೇ. ಆದರೆ ಇಡೀ ಸಿನೆಮಾ ಇಂಥವು ಗಳ ಮೇಲೆ ನಿಂತಿಲ್ಲ. You must see that.

ಇದು ಆ ಜಾತಿಗೆ ಸೇರಿದ್ದೇ ಅಲ್ಲ. ಇಲ್ಲಿರೋದು ನಿಜಕ್ಕೂ ಕುರುಡು ಕಾಮ. ಅವರಿಬ್ಬರೇ ಐ- ಫೋನ್‌ನಲ್ಲಿ ಚಿತ್ರೀಕರಿಸಿಕೊಂಡಿರುವ ವಿಡಿಯೋ ಅದು. ಅದರಲ್ಲಿ ಒಂದು ಮುಖ ತೀರ ಸುಂದರ ಮತ್ತು ಸುಪರಿಚಿತ. ಅದು ಆಕೆಯದು. She is drunk. ಸಾಕಷ್ಟು ಕುಡಿದಿದ್ದಾಳೆ. ಆತ active ಆಗಿದ್ದಾನೆ. ಆಕೆ ಅದೇನನ್ನೋ ಮಣ ಮಣಿಸುತ್ತಾಳೆ. ಅಸ್ಪಷ್ಟ ಮಾತು. ಭಂಗಿ ನೋಡಿದರೆ ತಿಳಿಯುತ್ತದೆ: She is not new to sex. ಆಕೆಗೆ ಎಲ್ಲವೂ ರೂಢಿಯಲ್ಲಿದೆ. She can take anything. ದೇಹ, ಮುಖ ಕೊಂಚ ಚೆಂದಗಿವೆ ಎಂಬುದು ಬಿಟ್ಟರೆ ಆ ಮೈಯಲ್ಲಿ ಮತ್ತೇನೂ ಉಳಿದಿಲ್ಲ.

ಈ ಸುರ-ಸುಂದರಿಯರ ಮೊದಲ clipping ಬಂತು. ಬೆನ್ನಲ್ಲೇ ಈಗ ಇಡೀ ವಾತ್ಸಾಯನ ಬಂದಂತಾಗಿದೆ. ನನ್ನ system ನಲ್ಲಿ ಒಮ್ಮೆ ಹಾಕಿಕೊಂಡು ನೋಡಿದೆ. ಹೇಳಿದೆನಲ್ಲ? ಅದು ಯಾರದೋ ಶೌಚಕ್ರಿಯೆ ನೋಡಿದಂತೆ. ಪೆನ್ ಡ್ರೈವ್ ಎತ್ತಿಟ್ಟೆ. ಅವನು ಪೆನ್ ಡ್ರೈವರ್ ತನ್ನ ಗಾಡಿಯ ಸಮೇತ ಊರು ಬಿಟ್ಟಂತಿದೆ.

ಇಂಥವು ಪತ್ರಿಕೋದ್ಯಮಕ್ಕೆ ಹೊಸತಲ್ಲ. ಹಿಂದೆ ಇದ್ದಕ್ಕಿದ್ದಂತೆ ನಿತ್ಯಾನಂದನ ಲಗಾಟಿ ದೃಶ್ಯ ಟಿವಿಗಳಲ್ಲಿ ಹೊರಬಿದ್ದುದು ನಿಮಗೆ ಗೊತ್ತಿದೆ. ಆರಂಭದಲ್ಲಿ ನಾನು ನಿಮ್ಮಂತೆಯೇ ಆ ಎರಡು ನಿಮಿಷಗಳ (ಟೀವಿಗಳು ತೋರಿಸಿದ) bit ನೋಡಿದ್ದೆ. ಅದರಲ್ಲಿ ರಂಜಿತಾ ಶತ ಪ್ರಯತ್ನ ಮಾಡುತ್ತಾಳೆ: ನಿತ್ಯಾನಂದನನ್ನು ಜಾಗೃತಗೊಳಿಸಲಿಕ್ಕೆ. ಅದು ಒಂದೇ ದಿನದಲ್ಲಿ, ಅಂದರೆ ಒಂದೇ sitting (sorry, sleeping)ನಲ್ಲಿ ಚಿತ್ರೀಕರಿಸಿದ್ದಲ್ಲ. ಎರಡು ದಿನ shoot ಮಾಡಲಾಗಿದೆ. ಅದು ಏನೇನೂ ಅಲ್ಲ. ತಮಿಳುನಾಡಿನಲ್ಲಿ ನಿತ್ಯಾನಂದ ಪರಿಚಿತ. ಆಕೆ ರಂಜಿತಾ ಕೂಡ ಅಷ್ಟೇ. ಹೀಗಾಗಿ ಅಲ್ಲಿ ಜಾಸ್ತಿ ಸಂಚಲನ ಉಂಟಾಯಿತು. ಕರ್ನಾಟಕಕ್ಕೆ ಅದು ಚಿಕ್ಕ entertainment ಆದರೆ ನಿತ್ಯಾನಂದನ ಕಾವು ಇನ್ನೂ ಇರುವಂತೆಯೇ ನನಗೆ ಇನ್ನೊಂದು ವಿಡಿಯೋ ಸಿಕ್ಕಿತು. ಅದಕ್ಕಾಗಿ ನಾನು ಅಂಥ ಪ್ರಯತ್ನವನ್ನೇನೂ ಮಾಡಿರಲಿಲ್ಲ. ಒಟ್ಟಿನಲ್ಲಿ ಅದು ಬಂತು. ಸುದ್ದಿ ಪ್ರಪಂಚಕ್ಕೆ ಹಾಗೆ ಸಿ.ಡಿ.ಗಳು, ಪತ್ರಗಳು ತುಂಬ ಮುಖ್ಯವಾದ ಎವಿಡೆನ್ಸ್ಗಳು ಬರುವುದು ತುಂಬ ಸಹಜ. ಕೆಲವು ಅನೂಹ್ಯ ಹತ್ಯೆಗಳು ಇದೇ ಕಾರಣಕ್ಕೆ ಬಯಲಾಗಿವೆ. ಕೋಟ್ಯಂತರ ರುಪಾಯಿಗಳ ಕರ್ಮಕಾಂಡಗಳು ಹೊರಬಿದ್ದಿವೆ. ಒಬ್ಬ ಮಂತ್ರಿಯ ಹೆಂಡತಿ ಲಂಚದ ಹಣ ಪಡೆಯುತ್ತಿರುವುದನ್ನು ಯಾರೋ ವಿಡಿಯೋ ಮಾಡುತ್ತಾರೆ. ಅದನ್ನು ತುಂಬ ನಂಬಿಕೆಯಿಂದ ಅವರು ತಂದು ಟಿ.ವಿ. ಛಾನಲ್ಲೊಂದಕ್ಕೆ ಒಪ್ಪಿಸುತ್ತಾರೆ. ಆ ಛಾನಲ್‌ನವರು ``ಇದು ನಾವೇ ಹೊರ ತೆಗೆದ ಭಾರೀ ರಹಸ್ಯ!" ಎಂದು ಹೇಳಿಕೊಳ್ಳುತ್ತಾರೆ. Fine . ಇಂಥವು ಸುದ್ದಿ ಮನೆಗಳಲ್ಲಿ ತುಂಬ ನಡೆಯುತ್ತವೆ.

ನನ್ನದೇ ಒಂದು ಉದಾಹರಣೆ ಇದೆ ನೋಡಿ. ಬಳ್ಳಾರಿಯ ನನ್ನ ಮನೆಯ ಹಿತ್ತಿಲಲ್ಲೇ ಇತ್ತು ಒಂದು ಬಂದೂಕು ಫ್ಯಾಕ್ಟರಿ. ರಾಜಕೀಯವಾಗಿ ತುಂಬ ಪ್ರಬಲನಾದ ಜೈಲ್ ಸಿಂಗ್ ಜೊತೆ ನೇರ ಸಂಪರ್ಕವಿದ್ದ, ಎಂಥ ಸಹಿಯನ್ನಾದರೂ ರಾಮಕೃಷ್ಣ ಹೆಗಡೆ ಕೈ ಹಿಡಿದು ಮಾಡಿಸಿಕೊಂಡು ಬರಬಲ್ಲ ಮಹಾಶಕ್ತನ ಫ್ಯಾಕ್ಟರಿಯದು. ಅದರಲ್ಲಿ ನಕಲಿ ಆಯುಧಗಳು ತಯಾರಾಗಲಿವೆ ಎಂಬ ವರ್ತಮಾನ. ತಕ್ಷಣ ಜಿಲ್ಲಾಕಾರಿ ಸುರ್ಕುಮಾರ್ ಮತ್ತು ಎಸ್.ಪಿ.ಶ್ರೀಕುಮಾರ್ ಅದರ ಮೇಲೆ ರೇಡು ಹಾಕಿದರು. Deadly it was. ಒಂದೆರಡು as a witness and ಗಳಿಗೆ ಅವರೊಂದಿಗೆ ನಾನೂ ಹೋಗಿ ಬಂದೆ:as a witness and ಸರಪಂಚ. ಮೊದಲು ಅವರೊಬ್ಬ ಗನ್ ಫ್ಯಾಕ್ಟರಿಯ ನೌಕರನ ಮನೆ ಬಾಗಿಲು ತಟ್ಟಿದರು. ಒಳಗಿದ್ದವನು ಕಿರಿ ವಯಸ್ಸಿನ ಸರ್ದಾರ್. ``ನೀನು ಬಂದೂಕು ಫ್ಯಾಕ್ಟರೀಲಿ ಏನು ಕೆಲಸ ಮಾಡ್ತೀಯ ಅಂತ ಕೇಳಿದರು. ತಯಾರಾದ ಬಂದೂಕುಗಳಿಗೆ wood oil ಬಳಿದು, ಮಸಾಜ್ ಮಾಡ್ತೀನಿ" ಅಂದ. ಆ ಹೊತ್ತಿಗೆ ಶ್ರೀಕುಮಾರ್ ಅವನ ಕೈಗೆ ಷೇಕ್ ಹ್ಯಾಂಡ್ ಕೊಟ್ಟು ಅವನ ಒಂದು ಹಸ್ತವನ್ನು ತಮ್ಮ ಎರಡು ಕೈಗಳ ಮಧ್ಯೆಯೇ ಉಳಿಸಿಕೊಂಡಿದ್ದರು.
``ನೀನು ಸುಳ್ಳು ಯಾಕೆ ಹೇಳ್ತೀಯ?" ಅಂದವರೇ ಅವನ ಕೆನ್ನೆಗೊಂದು ಛಟೀರ್ ಬಿಗಿದರು. ಅವನು ತಕ್ಷಣ ಒಪ್ಪಿಕೊಂಡು ಬಿಟ್ಟ. ``ಹಮ್ ಫ್ಯಾಕ್ಟರೀಮೆ ತೋಪಡಾ ಮಾರ್‍ತಾ ಹೈ ಸಾಹಬ್" ಅಂದು ಬಿಟ್ಟ. ನೀವು ಒಂದೇ ಕೈಲಿ ತೂತು ಕೊರೆಯುವ ಕೆಲಸ ಮಾಡೋನನ್ನ ಕೈ ಪರೀಕ್ಷಿಸಿ ನೋಡಿ: ಅವನ ಅಂಗೈ ತನ್ನದೇ ಆದ ರೀತಿಯಲ್ಲಿ, ಒಂದು ನಿಗದಿತ ಜಾಗದಲ್ಲಿ hard ಆಗಿರುತ್ತದೆ. ಅದನ್ನು `ದಡ್ಡಿಗೆ ಬೀಳೋದು' ಅಂತಾರೆ ನಮ್ಮ ಕಡೆ. ಸೈಕಲ್ ತುಳಿಯುವರನ್ನು ನೋಡಿ. ಅವರ ಕೈ ಬೆರಳುಗಳು solid ಆಗಿ ದಡ್ಡಿಗೆ ಬಿದ್ದಿ (hard ಆಗಿ)ರುತ್ತದೆ. ಶ್ರೀಕುಮಾರ್ ಅತ್ಯಂತ ಕಸುಬುದಾರರ ಹಾಗೆ ಅವನ ಅಂಗೈ ಅಂಗಳ ಹಿಡಿದು ಅದರಲ್ಲಿ ಉಂಟಾಗಿದ್ದ `ದಡ್ಡಿ'ನ ಗುರುತು ಹುಡುಕಿ ತೆಗೆದಿದ್ದರು. ಇಂತಹ tricks ಕಲಿಯದಿದ್ದರೆ ಪೊಲೀಸರು ದಡ್ಡರೆನ್ನಿಸಿಕೊಳ್ಳುತ್ತಾರೆ. ಪತ್ರಿಕೋದ್ಯಮ ದಲ್ಲಿ ಬಿಡಿ: ನಮ್ಮಲ್ಲಿ ದಡ್ಡ ಪ್ಯಾದೆಗಳು ಪ್ರತೀ ಆಫೀಸಿನಲ್ಲೂ ಕೇ.ಜಿ.ಲೆಕ್ಕದಲ್ಲಿ ಸಿಗುತ್ತಾರೆ.

ಯಾಕೆ ಹೇಳಿದೆ ಅಂದರೆ, ಈಗ ಸಿಕ್ಕಿರುವ clippingsಗಳು ನೋಡಿದರೆ, ಒಂದೇ ಉಸುರಿಗೆ ಹೇಳಬಹುದು. ಇವಳು ವಾತ್ಸಾಯನನ ಎಷ್ಟನೇ ಮಗಳು ಅಂತ. ಅಂದು ನಾನು ನಿತ್ಯಾನಂದನ ಸಿ.ಡಿ.ಹಾಕಿಕೊಂಡು ಕುಳಿತೆ. ಅದು exactly ೨೪ ನಿಮಿಷಗಳ ಸಿ.ಡಿ. ಪತ್ರಿಕೆ ಮತ್ತು ಟೀವಿಗಳಿಗೆ ಬಿಡುಗಡೆಯಾದದ್ದು ಕೇವಲ ಎರಡೂ ಚಿಲ್ರೆ ನಿಮಿಷಗಳ clipping. ನೋಡುತ್ತಾ ಹೋದಂತೆ ನಿಮಗೆ ನಿತ್ಯಾನಂದ ಒಬ್ಬ `ಹೇಳಿ ಮಾಡಿಸಿದ' ನಪುಂಸಕ ಎಂಬುದು ಗೊತ್ತಾಗುತ್ತದೆ. ಅಥವಾ ಅವನೊಬ್ಬ delayed player. ಅಂಥವರಿಗೆ ಹಲವು ಕಾಲ ಪುರುಷಾಂಗ ಆಕ್ಟೀವ್ ಆಗುವುದಿಲ್ಲ. ಕಡೆಗೆ ರಂಜಿತಾ ಅವನಿಗೆ ಬಾಯಿ ಹಚ್ಚುತ್ತಾಳೆ. ಅದರರ್ಥ blow job ಕೊಡುತ್ತಾಳೆ. ಉಹುಂ! ಆದರೂ ನಿತ್ಯಾನಂದನಲ್ಲಿ ಕದಲಿಕೆ ಇರುವುದಿಲ್ಲ. ಅವನೊಂಥರ ಅಡ್ಡಡ್ಡ ಮಲಗಿದ ಜಾಲಿ ಮರದ ಬೊಡ್ಡೆಯ ಹಾಗೆ. ಎಷ್ಟು ಹೊತ್ತು ನೋಡಿದರೂ ಹರನ ತಂದೆ ಅಥವಾ ಶಿವನ daddy ಉಸುಕುವುದಿಲ್ಲ.

ಇಂಥ ದೇವರ ಚಿತ್ರಗಳು ಬಂದ ತಕ್ಷಣ ನಾನು ಆಫೀಸಿನ ಜವಾಬ್ದಾರಿಯುತ ಹುಡುಗರಿಗೆ instruct ಮಾಡುತ್ತೇನೆ. ಹೆಣ್ಣು ಮಕ್ಕಳು ಹೊರಕ್ಕೆ ಹೋಗುವ ತನಕ ಅದನ್ನು ಈಚೆಗೆ ತೆಗೆಯುವಂತೆಯೇ ಇಲ್ಲ. ಎಲ್ಲರೂ ಹೋದ ಮೇಲೆ systemಗೆ ಹಾಕಿ ನೋಡಿದೆ. ಆನಂತರ ನನಗೆ ಪರಿಚಿತರಾದ ನನ್ನದೇ ಹೆಸರಿನ ಮಿತ್ರನೊಬ್ಬನನ್ನು ಕರೆಸಿದೆ. ಆತನಿಗೆ ಸಿ.ಡಿ.ಹಾಕಿ ತೋರಿಸಿದೆ. ``ಥೂ...ಇದೇನ್ಸಾರ್ ಇವನೂ? Blow job ಮಾಡೋಕೆ ಅವಳಾದರೂ ಅಷ್ಟು ದೂರದಿಂದ ಬರಬೇಕಾ? ಇದನ್ನ marf ಮಾಡಿಲ್ಲ, ಅಲ್ವಾ ಸಾರ್?" ಅಂತ ಮಿತ್ರ ಕೇಳಿದ. ಅಂದರೆ ಇಡೀ ದೃಶ್ಯ ಹಾಗೂ ಪಾತ್ರಧಾರಿಗಳನ್ನು ಪೂರ್ತಿ ಒರಿಜಿನಲ್ ಆಗಿ ಬದಲಿಸುವಂತೆ ಮಾಡಿ ನಕಲಿ ಸಿಡಿ ಬಿಟ್ಟಿರೋ chance ಇಲ್ಲ ಅಂತೀರಾ? ಎಂಬ ಅನುಮಾನ. ಅಂಥ ಯಾವ ಸುಡುಗಾಡೂ ಅದರಲ್ಲಿ ಆಗಿರಲಿಲ್ಲ. It was true C.D. ಅದಕ್ಕೆ ಮುನ್ನ ನಿತ್ಯಾನಂದನಿಗೆ ಇಲ್ಲಿ ಅಂಥಾ ದೊಡ್ಡ fallowing ಇರಲಿಲ್ಲ. Normal it was. ಅಮಾಯಕರು ಅಲ್ಲಿಗೆ ಹೋಗುತ್ತಿದ್ದರು: ಹರಿಕಥೆಗೆ ಹೋದಂತೆ. ಅಷ್ಟರಲ್ಲಿ ಬಿಡದಿಯಲ್ಲೂ ಗಲಾಟೆ ಆಯಿತಲ್ಲ? ರೇಗಿದ ಜನ ಒಳಕ್ಕೆ ನುಗ್ಗಿ ಕೈಗೆ ಸಿಕ್ಕದ್ದನ್ನೆಲ್ಲ ಹಾಳುಗೆಡವಿದರು. ಪತ್ರಿಕೆ, ಛಾನಲ್‌ಗಳು ಸುದ್ದಿ ಕುಟ್ಟತೊಡಗಿದವು. ನಿತ್ಯಾನಂದ ಸ್ವಾಮಿ ಓಡಿ ಹೋದ. ತಮಾಷೆ ಯೆಂದರೆ ಆಶ್ರಮದಲ್ಲಿ ನನ್ನೊಬ್ಬ ಸೋದರ ಮಾವನ ಮಗಳು (ಅತ್ತಿಗೆ) ಇದ್ದಳು. ಅವಳಿಗೆ ಏನೋ ಭಕುತಿ, ನಂಬಿಕೆ. ಇತ್ತೀಚೆಗೆ ಸಿಕ್ಕಿದ್ದಳು. ``ಏನತ್ತಿಗೇ ಆಶ್ರಮಕ್ಕೆ ಹೋಗ್ತಿದೀಯಾ?" ಅಂದೆ. ಎಪ್ಪತ್ತು ವರ್ಷ ಆಕೆಗೆ. ಎಲೈಸಿಯಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತಳಾಗಿದ್ದಾಳೆ. ಆಕೆಗೆ ಎದೆ ಎತ್ತರ ಬೆಳೆದ ಮೊಮ್ಮಕ್ಕಳಿದ್ದಾರೆ. ``ಇಲ್ಲ ಕಣೋ, I have lost hope ಅಂದಳು. ಆ ವಯಸ್ಸುಗಳೇ ಹಾಗೆ. ಅವರಿಗೆ ಈ ಸ್ವಾಮಿ, ಸನ್ಯಾಸಿಗಳು ನೀಡುವ hope ಬೇಕು. ತಮ್ಮಲ್ಲಿನ ಒಂಟಿತನಕ್ಕೆ ಉತ್ತರ ಬೇಕು.
ನನ್ನ ಅತ್ತಿಗೆಯೊಬ್ಬಳೇ ಅಲ್ಲ: ಅನೇಕರು ಅಲ್ಲಿಂದ ಹೊರಬಿದ್ದರು. ನಿತ್ಯಾನಂದನನ್ನು ಹುಡುಕಿ ತಂದ ಪೊಲೀಸರು ಅಜಮಾಸು ಎರಡು ತಿಂಗಳು ಜೈಲಲ್ಲಿ ಇರಿಸಿದರು. ಅವನ ಲೈಂಗಿಕ ಪರೀಕ್ಷೆ ಮಾಡಿದರು. ಅವನ ಪಂಚೆಗೆ ಹೈ ಹಾಕಿ ಕುಮ್ಮಣ್ಣಿ ಅದುಮಿದಾಗ ಸ್ವಾಮಿ ಖಂಯ್ಯಕ್ ಅಂದ. ``ಇವನು ಗಂಡಸೇ ಅಲ್ಲ" ಅಂತ ತುಂಬ ಹಿಂದೆಯೇ ಬರೆದಿದ್ದೆ. ನನಗೆ ಈ ಅನುಮಾನ ರವಿಶಂಕರ್ ಗುರೂಜಿ ಮೇಲೂ ಇದೆ. ಸರಿ, ಜೈಲಿಂದ ಹೊರಬಂದ ಸ್ವಾಮಿ ಯಥಾಪ್ರಕಾರ ಟವೆಲು ಹಾಸಿ, ಆಶ್ರಮದಲ್ಲಿ ಪಟ್ಟಂಗ ಶುರುವಿಟ್ಟ. ಅಲ್ಲೇ ಹೆಂಗಸರಿಗೆ `ಕುಂಡೆ ಡಾನ್ಸ್' ಹೇಳಿ ಕೊಟ್ಟ. ಇವತ್ತಿಗೆ ಮತ್ತೆ ಅಲ್ಲಿ crowd ನೆರೆದಿದೆ. ಅದರ ಮಧ್ಯೆಯೇ bottom Dance! ಯಾವುದೂ ಬದಲಾಗಿಲ್ಲ.

ಅಲ್ರೀ, ಗೋಸ್ವಾಮಿ ಅಥವಾ ಸೆಗಣಿ ಸ್ವಾಮಿ ಕುರಿತು ಯಾವ ಮುಖ್ಯಮಂತ್ರಿಯ ಬಗ್ಗೆ ಬರೆದು ದಕ್ಕಿಂತ ಜಾಸ್ತಿ ಬರೆದೆವು. ಅವನ ಮೇಲೆ ಮಾನಭಂಗದ ಕೇಸು ಆಯಿತು.

``ರಾಮಚಂದ್ರಾಪುರ ಮಠದ ಸ್ವಾಮಿ ಅತ್ಯಾಚಾರ ಮಾಡಿಲ್ಲ. ಪ್ರೇಮಲತಾಳೊಂದಿಗೆ ಆತ ಸ್ವಯಂ ಇಚ್ಛಿತ ಲೈಂಗಿಕ ಸಂಬಂಧ ಹೊಂದಿದ್ದಾನೆ" ಎಂಬ ತೀರ್ಪು ಬಂತು. ಅರೆ, ಸ್ವಯಂ ಇಚ್ಛಿತ ಲೈಂಗಿಕ ಸಂಬಂಧ ಅಂದರೇನು? ಗೋಸ್ವಾಮಿ ಕಾಲು ಮಡಚಿ ಮಲಗಿ ಸುಖ ಉಂಡಿದ್ದಾನೆ ಅಂತ ತಾನೆ? ಹೇಳಿ ಒಬ್ಬ ಹವ್ಯಕ ಜೀವಿಯಾದರೂ ಈ ಸ್ವಾಮಿಯನ್ನು ಧಿಕ್ಕರಿಸಿದನಾ? ಬಹಿರಂಗವಾಗಿ ದನಿ ಎತ್ತಿದನಾ? ನನಗೆ ಹವ್ಯಕ ಸಮುದಾಯದ ಬಗ್ಗೆ ತುಂಬ ಪ್ರೀತ್ಯಾದಾರಗಳಿವೆ. ಅಂಥದ್ದು ಇದೇನು ನಿಲುವು ತಳೆದು ಬಿಟ್ಟರು ಹವ್ಯಕರು. I am totally disappointed. ಒಬ್ಬ ಸ್ವಾಮಿ ಬ್ರಹ್ಮಚಾರಿಯಾಗಿರಬೇಕು. ಕಾಲು ಮಡಚಿ ಸ್ತ್ರೀ ಸೌಖ್ಯ ಹೊಂದಿದ ಅಪಾತ್ರ ಸೂಳೆ ಮಗನಿಗೆ ಮತ್ತದೇ ಬೆಂಬಲ ಕೊಡುವುದೇ? Non sense. ಈ ಪ್ರಕರಣದಲ್ಲಿ ಸರ್ಕಾರ, ಪೊಲೀಸು, ಕಚೇರಿ-ಎಲ್ಲವೂ ಬಿಸ್ಸಿ ಬಿಸಿ ಹೇಲು ತಿಂದವು.

ಈಗ ನನ್ನ ಬಳಿ ನಾಲ್ಕು ಕ್ಲಿಪಿಂಗ್‌ಗಳಿವೆ. ಮೊದಲ ಬಾರಿಗೆ ಬೋರಲಾಗಿದ್ದ ಆಂಕರ್, ಈ ಬಾರಿ ಅವನ ಮೇಲೆ ಜಂಬೂ ಸವಾರಿ ಮಾಡಿದ್ದಾಳೆ. Pen driver (!) ಕೊಡ್ತೀನಿ ಅಂದರೆ ಝಣ ಝಣ ದುಡ್ಡು! ಆ ಹೇಸಿಗೆ ಯಾವನಿಗೆ ಬೇಕು?

-ನಿಮ್ಮವನು, ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 02 August, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books