Ravi Belagere
Welcome to my website
ಹೆಂಡತಿ ಮನೆಯಲ್ಲಿ ಇಲ್ಲದಿದ್ದರೆ ಅದೊಂದು ದಿವ್ಯ ಸಂತೋಷವಲ್ಲವೆ? ಆ ಸಂತೋಷವನ್ನು ಇಲ್ಲಿ ದಾಖಲಿಸಿ, ಓದುಗರೊಂದಿಗೆ ಹಂಚಿಕೊಳ್ಳಿ. ನನಗೆ ಥಾನುಗಟ್ಟಲೆ ಬರಹಗಳು ಬೇಕಾಗಿಲ್ಲ. ಇಡೀ ಕಾದಂಬರಿ ಬರೆದು ಕಳಿಸಬೇಡಿ. Just ಒಂದು in land letterನಲ್ಲಿ ಹಿಡಿಸುವಷ್ಟು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದರೆ ಸಾಕು. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ನಿಮ್ಮ ಹಾಗೂ ನಿಮ್ಮ ಪತ್ನಿಯ ಫೊಟೋ (ಇಬ್ಬರೂ ಜೊತೆಗಿರುವಂಥದ್ದು) ರೆಡಿ ಇದ್ದರೆ ತಪ್ಪದೆ ಪತ್ರದೊಂದಿಗೆ ಕಳಿಸಿ ಕೊಡಿ. ಓದುಗರಾದ ನೀವು ಬರಹಗಾರರೂ ಆದರೆ, ಅದು ಬೇರೆಯದೇ ಸಂತೋಷ.
Home About Us Gallery Books Feedback Prarthana Contact Us

Buy Ravi Belagere Books online

ಜಿಟಿ ಜಿಟಿ ಮಳೆ ಹೊತ್ತು ಕರೆಯುತ್ತಿದೆ ಜೊಯಿಡಾ

ಮಳೆ ನೋಡಲು ಗಾವುದ ಗಾವುದ ದೂರ ಡ್ರೈವ್ ಮಾಡಿಕೊಂಡು ಹೋಗೋಣ ಅಂತ ಆಸೆ. ನಾನು drive ಮಾಡಿ ಹದಿನಾಲ್ಕು ಹದಿನೈದು ವರ್ಷಗಳೇ ಆದುವೇನೋ? ಮುಷ್ಕರದಿಂದ ಖಾಲಿ ಬಿದ್ದ ಮಳೆಯ ರಸ್ತೆಯ ಮೇಲೆ ಕಾರು ಓಡಿಸೋದು ಚಂದದ ಅನುಭವ. ``ಆದರೆ ನಿನ್ನ ಜೊಯಿಡಾದ ಕಾಡುಗಳಲ್ಲಿ ಮಳೆ ಹುಡುಕಿಕೊಂಡು ಯಾಕೆ ಒದ್ದಾಡ್ತೀಯ? ಇಲ್ಲೇ ಕೊಡ್ತೀನಿ. ನೋಡು ಕುಂಭ ದ್ರೋಣ" ಎಂಬಂತೆ ಬೆಂಗಳೂರಿನಲ್ಲಿ ಮಳೆ ಕರೆಯಿತು. ನಿನ್ನೆಯಂತೂ ರಾತ್ರಿಯಿಡೀ ಮಳೆಯ ಝಮಕ-ಝಮಕ. ಆದರೂ ಸುತ್ತಾಡಿ ಬರಲು ಕಾರು ಈಚೆಗೆಳೆಯುತ್ತಿದ್ದೇನೆ. One long drive is refreshing ಪೆಟ್ಟಿಗೆಯೊಳಗೆ ಅಡಗಿ ಕೊಂಡು ಮುಖೇಶ್, ರಫಿ, ಕಿಶೋರ್, ಅಬೀದಾ, ಗುಲಾಮ್ ಅಲಿ, ಪಾಕಿಸ್ತಾನದ ಲಾಹೋರಿ- ಎಲ್ಲರನ್ನೂ ತುಂಬಿಕೊಂಡು ಹೊರಟಿದ್ದೇನೆ.

But, ಎಲ್ಲಿಗೆ? ಆ ಕಡೆ ದಾಂಡೇಲಿಯ ಪಾಲಾಗಲಾ? ಈ ಮಡಿಕೇರಿ ದಿಕ್ಕಿಗೆ ದೌಡಲಾ? ತೋಚುತ್ತಿಲ್ಲ. ಎಲ್ಲ ಕಡೆಗೂ ಸ್ನೇಹಿತರಿದ್ದಾರೆ. ಅಲ್ಲದೆ, ನಾನು ಉಪದ್ರವದ ಗಿರಾಕಿಯಲ್ಲ. ಒಂದು ಕುರ್ಚಿ, ಟೇಬಲ್ಲು, ಮಲಗಲೊಂದು ಮಂಚ, ರಾತ್ರಿಗೆ ಮೀನುಸಾರು, ಅನ್ನ- thats all ಮೊದಲಿನಂತೆ ಕುಡಿತವೂ ಇಲ್ಲವಾದ್ದರಿಂದ ನಾನು ಸ್ನೇಹಿತರ ಪಾಲಿಗೆ ಮುದ್ದು ಬಂಗಾರ. ಕುಳಿತು ಬರೆಯುತ್ತೇನೆ. ಕೆಲವೆಲ್ಲ ಕಾದಂಬರಿಗಳು- ಪುಸ್ತಕಗಳು ದಾಂಡೇಲಿ ಹತ್ತಿರದ ದಟ್ಟ ಕಾಡಿನ ನಡುವೆ ಐ.ಬಿ.ಯಲ್ಲಿ ಕುಳಿತು ಬರೆದೆ. ``ಅದು ನಿಮ್ಮ ಆನೆ ಆಫೀಸ್" ಅಂತ ನಿವೇದಿತಾ ಅನ್ನುತ್ತಿದ್ದಳು. ಆನೆ, ಹುಲಿ, ಚಿರತೆ, ಕಡವೆ, ಕೆಂದಳಿಲು- ಎಲ್ಲವುಗಳೊಂದಿಗೆ ನಮ್ಮ ವಾಸ. I enjoyed. ಕೂತು ಬರೆಯೋದೇ ಕೆಲಸ. ಸತತ ನಾಲ್ಕು ಐದು ದಿನ ಬರೆಯುತ್ತಿದ್ದೆ. It was a bliss. ಈಗ ಅಂಥ ತಾಣಗಳಿಲ್ಲ ಅಂದುಕೊಂಡಿದ್ದೆ. ಆದರೆ ನನ್ನ ಪೋರು ತಡೆಯಲಾಗದ ಗೆಳೆಯರು ಇನ್ನೊಂದಿಷ್ಟು hideouts ಹುಡುಕಿಟ್ಟಿದ್ದಾರೆ. ಸೋಪು, ಸಿಗರೇಟು, ಔಷಧ- ಎಲ್ಲವನ್ನೂ ಸಹಾಯಕಿ ವೀಣಾ ಜೋಡಿಸಿದ್ದಾಳೆ. ಪತ್ರಿಕೆಯನ್ನು ಪ್ರಿಂಟಿಗೆ ಕಳಿಸಿ ಎದ್ದು ಓಡುವುದೊಂದೇ ಕೆಲಸ. ಗೆಳೆಯರೂ ಅದನ್ನು ಹಾಗೇ ಸೂಚಿಸಿದ್ದಾರೆ.
ನಮ್ಮ ಸತ್ಯಕಾಮರದೇ ಮಜಾ. ಅವರು ಅದೆಲ್ಲೋ ಹಿಮಬಂಡೆಯ ಜಾರಿನಲ್ಲಿ ಗುಡಿಸಲು ಹಾಕಿಕೊಂಡು ಅಲ್ಲಿ ಬರೆಯುತ್ತಿದ್ದರು. ಒಬ್ಬ ಇಂಗ್ಲಿಷ್ ಲೇಖಕ ತನ್ನ ಊರಿನ ಸಿಟಿ-ಸೆಂಟರ್ ಸರ್ಕಲಿನಲ್ಲಿ ಕುರ್ಚಿ, ಟೇಬಲ್ಲು ಹಾಕಿಕೊಂಡು ಕುಳಿತು ಬರೆಯುತ್ತಿದ್ದ. ಮೊನ್ನೆ ಮೊನ್ನೆ ತೀರಿಕೊಂಡ ಸಸ್ಪೆನ್ಸ್-ಇನ್ವೆಷ್ಟಿಗೇಷನ್‌ಗಳ ಕುರಿತು ಬರೆಯುತ್ತಿದ್ದ ಕಾದಂಬರಿಕಾರ ಎನ್. ನರಸಿಂಹಯ್ಯನವರಿಗೆ ತಾವು ಬರೆಯುವಾಗ ಯಾರೂ ಪರ್ರನೆ ಪೇಪರು ಹರಿದರೆ ಸಿಟ್ಟು ಬರುತ್ತಿತ್ತು. ಇದೊಂಥರ ಲೋಕೋಭಿನ್ನ ರುಚಿ.

ಸಾಧ್ಯವಾದಷ್ಟೂ ಕಡಿಮೆ ಲಗೇಜ್ ತಗೊಂಡು ಪ್ರವಾಸ ಹೊರಟಿದ್ದೇನೆ. ಮುದುಡಿ ಹೋದ ಮನಸ್ಸಿನ ಚೇತರಿಕೆಗೆ ಅದು ಬೇಕು. ನೀವು ಬರ್‍ತೀರೇನೋ ನೋಡಿ!
-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 01 August, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books