Ravi Belagere
Welcome to my website
ಹೆಂಡತಿ ಮನೆಯಲ್ಲಿ ಇಲ್ಲದಿದ್ದರೆ ಅದೊಂದು ದಿವ್ಯ ಸಂತೋಷವಲ್ಲವೆ? ಆ ಸಂತೋಷವನ್ನು ಇಲ್ಲಿ ದಾಖಲಿಸಿ, ಓದುಗರೊಂದಿಗೆ ಹಂಚಿಕೊಳ್ಳಿ. ನನಗೆ ಥಾನುಗಟ್ಟಲೆ ಬರಹಗಳು ಬೇಕಾಗಿಲ್ಲ. ಇಡೀ ಕಾದಂಬರಿ ಬರೆದು ಕಳಿಸಬೇಡಿ. Just ಒಂದು in land letterನಲ್ಲಿ ಹಿಡಿಸುವಷ್ಟು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದರೆ ಸಾಕು. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ನಿಮ್ಮ ಹಾಗೂ ನಿಮ್ಮ ಪತ್ನಿಯ ಫೊಟೋ (ಇಬ್ಬರೂ ಜೊತೆಗಿರುವಂಥದ್ದು) ರೆಡಿ ಇದ್ದರೆ ತಪ್ಪದೆ ಪತ್ರದೊಂದಿಗೆ ಕಳಿಸಿ ಕೊಡಿ. ಓದುಗರಾದ ನೀವು ಬರಹಗಾರರೂ ಆದರೆ, ಅದು ಬೇರೆಯದೇ ಸಂತೋಷ.
Home About Us Gallery Books Feedback Prarthana Contact Us

Buy Ravi Belagere Books online

ಆಹಾ ಜೈಲೇ... ನನ್ನೊಳಗಿನ ರೈಲೇ!

‘ನಾಯಗನ್!’

ತುಂಬ ಹೊತ್ತು ನೋಡುತ್ತಿದ್ದೆ. ಯಾವುದಕ್ಕೆ ಅಳಲಿ? ಬಿಡಲಿ? ತುಂಬ ಸಲ ನೋಡಿದ್ದೇನೆ: ಒಳ್ಳೆಯವರ‍್ಯಾರು ಅಂತ ನಿರ್ಧರಿಸಲು ಆಗೇ ಇಲ್ಲ. ಮತ್ತೆ ನೂರು ಸಲ ನೋಡುತ್ತೇನೆ. ನಿರ್ಧರಿಸಲು ಆಗುವುದಿಲ್ಲ. ಒಳಿತು ಎಂಬುದೇ ಹಾಗೆ. ಸರಿಸಮಕ್ಕೆ ಇದ್ದರೂ, ಕೆಟ್ಟದಕ್ಕೆ ಅದು ಸಮವಾಗುವುದಿಲ್ಲ. ಒಳ್ಳೆಯದು ಕೆಟ್ಟದ್ದಕ್ಕೆ ಎಂದಿಗೂ ಸಮವಲ್ಲ. ಆದರೆ ಕೆಟ್ಟದ್ದು ಅದನ್ನು ಮೀರಿ ಬೆಳೆದುಬಿಡುತ್ತದೆ: ಭಯವಾಗುತ್ತದೆ.

ಮೊನ್ನೆ ‘ಮೀಗಿ’ಗೆ ಫೋನ್ ಮಾಡಿದ್ದೆ. ತುಂಬ ಬೈದಳು. ಏಕೆ ಬಯ್ಯುತ್ತಿದ್ದಾಳೆ ಎಂಬುದು ಗೊತ್ತೇ ಆಗಲಿಲ್ಲ. Bastard ಅನ್ನಲಿಲ್ಲ. Scoundrel ಅನ್ನಲಿಲ್ಲ. ನಾನೂ ಅಷ್ಟೆ bitch ಅನ್ನಲಿಲ್ಲ. Witch ಅನ್ನಲಿಲ್ಲ. Swine ಅಂತ ಅಂದೇ ಇಲ್ಲ. I was good to her. ಇಷ್ಟಾಗಿಯೂ ನನ್ನದು ತಪ್ಪಾಗಿರಬಹುದು. ‘ಮೀಗಿ’ ಅದು ಅರ್ಥವಾಗುವಷ್ಟು peaceful ಆಗಿರಲಿಲ್ಲ. It's okay.

ನಾನು ಕೆಟ್ಟದ್ದರ ಮತ್ತು ಒಳ್ಳೆಯದರ ಮಧ್ಯೆ ತಕ್ಕಡಿ ಹಿಡಿದು ಕುಳಿತಿದ್ದೇನೆ. ನನ್ನೊಂದಿಗೆ ಕೆಲಸ ಮಾಡಿದ ವಿಭಿನ್ನ ಚೈತನ್ಯ ಮುಗ್ಧನೊಬ್ಬ ಮೆಸೇಜ್ ಕಳಿಸಿದ್ದಾನೆ. “ನಿಮ್ಮಿಂದ ಕೆಲಸ ಕಲಿತೆ. ಅನ್ನ ದುಡೀತಿದ್ದೇನೆ: ನನಗೆ, ಅವಳಿಗೆ ಮತ್ತು ಮಗುವಿಗೆ, ಸಾಕಾಗುವಷ್ಟು. ಗುರುಪೂರ್ಣಿಮೆಯ ನಮಸ್ಕಾರಗಳು ಅಂತ.

ಅತ್ತ ವಿಧಾನಸೌಧ ಗುಡುಗಿದೆ. ನನ್ನದು ತಪ್ಪಂತೆ. ಒಂದು ವರ್ಷದ ಜೈಲು, ಅಲ್ಲ ಅಲ್ಲ. ಹತ್ತು ಸಾವಿರ ದಂಡದ ಸಮೇತ ಜೈಲು. ಹ್ಞಾಂ, ಹತ್ತು ವರ್ಷ. ಇನ್ನೂ ದೊಡ್ಡ ಅಮೌಂಟು. ನನಗೆ ನೂರೆಂಟು ಜನರ ಗಾಬರಿಯ ಮೆಸೇಜುಗಳು. ಜೈಲಿಗೆ ಹೋಗುತ್ತೇನೆ. ಆರು ತಿಂಗಳಾದರೆ ಐದು ಪುಸ್ತಕ. ಒಂದು ವರ್ಷ? ಹತ್ತು ಪುಸ್ತಕ!

ಬದುಕಿನಲ್ಲಿ ಒಂದು ಕೆಲಸ ಸರಿಯಾ? ತಪ್ಪಾ? ತೀರ್ಮಾನಿಸಿ ಕೊಂಡವನಿಗೆ ಗೊಂದಲಗಳಿರುವುದಿಲ್ಲ. I am clear in my mind. ಬರೆಯಲು ತುಂಬ ಇದೆ. ಈಗ ‘ಮೀಗಿ’ಯ ತಿಕ್ಕಡಿ. ಅವಳು ಬಯ್ಯುತ್ತಿಲ್ಲ. ಅಥವಾ ಅವಳ ಮಾತಿನ ಹಿಂದೆ ಬೈಗುಳವಿಲ್ಲ: seriously.

ಈ ಸಂಚಿಕೆ ಮುಗಿಸಿ ಕರಾವಳಿಗೆ ಹೋಗಬೇಕು. ಮಳೆಗೆ ನೆತ್ತಿಯೊಡ್ಡುವ ಖುಷಿ. ಅಲ್ಲಿ ಜೊಯಿಡಾದಲ್ಲಿ ಮುಸಲಧಾರೆಯಂತೆ. ನನ್ನ ಎರಡೂ ಹೊಲ ಗದ್ದೆಗಳಿಗೆ ಭೇಟಿ ಕೊಟ್ಟು ಬಂದರೆ ಅದೇ ದೊಡ್ಡ ಕಸರತ್ತು. ಈ ಬಾರಿ ಜೊಯಿಡಾ ದಾಟಿ ಜಗಲಪೇಟದ ಬಳಿ ಮಹಾಗುರು ಮಳಗಾಂವಕರರ ಕಾಡ ನಡುವಿನ ಬಂಗಲೆ ಮುಟ್ಟಿ ಬರಬೇಕು. ಯಾರಿಗೆ ಗೊತ್ತು: ಒಂದು ನೆಮ್ಮದಿಯ ಸಾವು ಅಲ್ಲೇ ಬರೆದಿದೆಯೋ ಏನೋ?

ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 26 July, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books