Ravi Belagere
Welcome to my website
ಹೆಂಡತಿ ಮನೆಯಲ್ಲಿ ಇಲ್ಲದಿದ್ದರೆ ಅದೊಂದು ದಿವ್ಯ ಸಂತೋಷವಲ್ಲವೆ? ಆ ಸಂತೋಷವನ್ನು ಇಲ್ಲಿ ದಾಖಲಿಸಿ, ಓದುಗರೊಂದಿಗೆ ಹಂಚಿಕೊಳ್ಳಿ. ನನಗೆ ಥಾನುಗಟ್ಟಲೆ ಬರಹಗಳು ಬೇಕಾಗಿಲ್ಲ. ಇಡೀ ಕಾದಂಬರಿ ಬರೆದು ಕಳಿಸಬೇಡಿ. Just ಒಂದು in land letterನಲ್ಲಿ ಹಿಡಿಸುವಷ್ಟು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದರೆ ಸಾಕು. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ನಿಮ್ಮ ಹಾಗೂ ನಿಮ್ಮ ಪತ್ನಿಯ ಫೊಟೋ (ಇಬ್ಬರೂ ಜೊತೆಗಿರುವಂಥದ್ದು) ರೆಡಿ ಇದ್ದರೆ ತಪ್ಪದೆ ಪತ್ರದೊಂದಿಗೆ ಕಳಿಸಿ ಕೊಡಿ. ಓದುಗರಾದ ನೀವು ಬರಹಗಾರರೂ ಆದರೆ, ಅದು ಬೇರೆಯದೇ ಸಂತೋಷ.
Home About Us Gallery Books Feedback Prarthana Contact Us

Buy Ravi Belagere Books online

ಮಳೆ ಸೀಮೆಯಲ್ಲಿ ಕುಂತು ಪ್ರೇಮ-ತಬ್ಬುಗೆ ನೆನಪಿಸಿಕೊಂಡು!

“ಒಂದಷ್ಟು ದಿನ ಪ್ರವಾಸಕ್ಕೆ ಹೋಗಿ ಬನ್ನಿ. ಮನಸು ಮತ್ತೆ ಚಿಗಿತುಕೊಳ್ಳುತ್ತೆ" ಅಂತ ವೈದ್ಯರ ಸಲಹೆ. “ದಯವಿಟ್ಟು ಬನ್ನಿ: ಇಲ್ದಿದ್ರೆ ಜೈಲಿಗೆ ಕಳಿಸ್ತೀವಿ ಖಬಡ್‌ದಾರ್!" ಎಂಬುದು ಕೋರ್ಟುಗಳ ಗುಟುರು. ಪ್ರವಾಸ ಹಾಳು ಬಿದ್ದು ಹೋಗಲಿ ಅಂದುಕೊಂಡು, ಒಂದೇ ಉಸಿರಿಗೆ ಬಳ್ಳಾರಿಗೆ ಹೋದೆ. ಅಲ್ಲಿ ಅನಾಮತ್ತು ಆರು ಕೇಸು ಬಾಯ್ತೆರೆದುಕೊಂಡು ನಿಂತಿದ್ದವು. ಗಂಟಗಟ್ಲೆ ಆರೋಪಿಯ ಸ್ಥಾನದಲ್ಲಿ ನಿಂತು ನ್ಯಾಯಾಧೀಶರಿಗೆ ‘ಜೀಯಾ’ ಅಂದು ಅಲ್ಲಿಂದ ಹೊರಬಿದ್ದೆ. ನಿಂತೂ ನಿಂತೂ ನನ್ನ ಕಾಲು ಹುಣ್ಣು ನೋಯೋ ಹಾಗೆ ನೋಯುತ್ತಿವೆ. ಮುಂದಿನ ಸಲದಿಂದ ವಾಕಿಂಗ್ ಸ್ಟಿಕ್ ಇಲ್ಲದೆ ಖಂಡಿತಕ್ಕೂ ಕೋರ್ಟ್‌ಗೆ ಹೋಗಲ್ಲ.

ಅದಾಯ್ತಲ್ಲ? ಬಳ್ಳಾರಿಯಂಥ ಬಳ್ಳಾರಿಯಲ್ಲೂ ಒಂದು ಸುಖದಂಥ ಸುಖವಿದೆ. ಅದರ ಹೆಸರು ವಗ್ಗಣ್ಣಿ ಮೆಂಚಿನ್ಕಾಯ್! ಅದು ವಗ್ಗರಣೆ ಆಗುತ್ತಾ ಆಗುತ್ತಾ ವಗ್ಗಣ್ಣಿ ಆಗಿದೆ. ಅದರೊಂದಿಗೆ ಯಮ ಖಾರದ ಒಂದು ಐಟಂ: ಮಿರ್ಚಿ! ಇಲ್ಲಿನವರಿಗೆ ಮಾಡಲಿಕ್ಕೂ ಬರಲ್ಲ. ಮಾಡಿಟ್ಟರೆ ಇವರಿಗೆ ತಿನ್ನಲಿಕ್ಕೂ ಬರಲ್ಲ. ಮಧ್ಯದ ಮೆಣಸಿನ ಕಾಯಿ ಬಿಸಾಕಿ, ಸುತ್ತಲಿನ ಸಿಪ್ಪೆ ತಿಂತಾರೆ. Very bad. ತಿನ್ನಬೇಕಾದದ್ದೇ ಆ ಮೆಣಸಿನ ಕಾಯನ್ನ.

ಕೊಂಚವೂ ಸಿಗ್ಗು ಪಡದೆ ಮೂರೂ ಹೊತ್ತು ಅದೇ ವಗ್ಗಣ್ಣಿ-ಮೆಂಚಿನಕಾಯಿ ತಿಂದೆ. ಎಂಟು ಪ್ಲೇಟ್ ಮಂಡಕ್ಕಿ, ಮೂವತ್ತೆರಡು ಮಿರ್ಚಿ! ಅಲ್ಲಿ ನಾನು ಬೇರೆ ಏನನ್ನೂ ತಿನ್ನಲಿಲ್ಲ. ಅದು ನಮ್ಮ ‘ಬಳ್ಳಾರಿ ರಿಪಬ್ಲಿಕ್‌ನ ನ್ಯಾಷನಲ್ ಫುಡ್!" ಫೋನ್‌ನಲ್ಲಿ ಮಾತಿಗೆ ಜನಾರ‍್ದನ ರೆಡ್ಡಿ ಸಿಕ್ಕಿದ್ದರು. ತುಂಬ ಅನಿರೀಕ್ಷಿತವಾಗಿ ಆಂಧ್ರದ ಸುಂದರ ಗಾಯನಿ ಸುನೀತಗಾರು ಸಿಕ್ಕಿದ್ದರು.

ಅಲ್ಲಿಂದ ಮುಂದೆ ಹೊಟೇಲಿಗೆ ಹೋಗಿ pack ಮಾಡಿಕೊಂಡು ಬೆಂಗಳೂರಿಗೆ ಹೊರಟೆ. “ಸರ್, ಇನ್ನೊಂದೇ ಒಂದು ಕೇಸು ಚಿತ್ರದುರ್ಗದಲ್ಲಿ ಇದೆ. Just, ನ್ಯಾಯಾಲಯಕ್ಕೆ ಮುಖ ತೋರಿಸಿ ಹೊರಟು ಬಿಡಿ" ಅಂದ ವರದಿಗಾರ ಕಾಂತರಾಜ ಅರಸು. “ಆಯ್ತು, ಹೊರಡಿ" ಅಂದೆ. ಮರು ಬೆಳಿಗ್ಗೆ I was in Chitradurga ಕೋರ್ಟು ಬೇಗ ಮುಗಿಯಿತು. ಎಚ್ಚರಗೊಂಡದ್ದು ಬೆಂಗಳೂರಿನ ನನ್ನ ಆಫೀಸಿನ ಅಂಗಳದಲ್ಲಿ.

ಕೋರ್ಟುಗಳು ಕೊಂಚ ಅಹಿತವೆನ್ನಿಸಿದರೂ I like ತಿರುಗಾಟ. ನಾಳೆ ನಾಡಿದ್ದರಲ್ಲಿ ತೀರ್ಥಹಳ್ಳಿಗೆ ಹೋಗಬೇಕು: ಕೇವಲ ಮಳೆ ನೋಡಲಿಕ್ಕೆ! ಅಲ್ಲಿ ಕಡಿದಾಳು ಕುಟುಂಬದ ಕಾನೀನ, ‘ವಿಹಂಗಮ’ ಅಂತೊಂದು ರೆಸಾರ್ಟ್ ನಡೆಸುತ್ತಾನೆ. ಅಂಕಲ್, ನಿಮ್ಮ ರೂಮಿನ ಪಕ್ಕದಲ್ಲೇ ಹರಿಯುತ್ತಿದೆ ತುಂಗಾ ನದಿ. ಸುಮ್ಮನೆ ಛೇರು ಹಾಕ್ಕಂಡು ಮಳೆ ನೋಡುತ್ತಾ ಕೂತರೆ ಸಾಕು: ಎಂಥವನಿಗೂ ಬರೆಯಬೇಕು ಅನ್ನಿಸುತ್ತದೆ. Mostly, ಈ ಸಂಚಿಕೆ printಗೆ ಕಳಿಸಿ ಆ ಕಡೆಗೆ ಹೊರಡುತ್ತೇನೆ.

ನೀವು ಹೇಗಿದ್ದೀರಿ? ಭರ್ತಿ ಮಳೆಯಲ್ಲಿ ಸರ್ತಿಗೊಮ್ಮೆ ತೊಯ್ದಿರಾ? ಇಬ್ಬರೂ ಜೊತೆಗಿದ್ದಿರಾ? ಕೊಂಚ ನೆಗಡಿ-ಪಗಡಿ ಆದರೂ ಸರಿಯೇ, ಇದು ತೋಯುತ್ತಾ, ಕೈ ಕೈ ಹಿಡಿಯುತ್ತಾ, ಬೆಚ್ಚಗಾಗುತ್ತ ಬೆತ್ತಲೆಗೆ ಅನುವಾಗುವ ಸಮಯ. ನಿಮಗೆಲ್ಲ happy time. Have love, hugs kisses et...,

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 18 July, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books