Ravi Belagere
Welcome to my website
ಹೆಂಡತಿ ಮನೆಯಲ್ಲಿ ಇಲ್ಲದಿದ್ದರೆ ಅದೊಂದು ದಿವ್ಯ ಸಂತೋಷವಲ್ಲವೆ? ಆ ಸಂತೋಷವನ್ನು ಇಲ್ಲಿ ದಾಖಲಿಸಿ, ಓದುಗರೊಂದಿಗೆ ಹಂಚಿಕೊಳ್ಳಿ. ನನಗೆ ಥಾನುಗಟ್ಟಲೆ ಬರಹಗಳು ಬೇಕಾಗಿಲ್ಲ. ಇಡೀ ಕಾದಂಬರಿ ಬರೆದು ಕಳಿಸಬೇಡಿ. Just ಒಂದು in land letterನಲ್ಲಿ ಹಿಡಿಸುವಷ್ಟು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದರೆ ಸಾಕು. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ನಿಮ್ಮ ಹಾಗೂ ನಿಮ್ಮ ಪತ್ನಿಯ ಫೊಟೋ (ಇಬ್ಬರೂ ಜೊತೆಗಿರುವಂಥದ್ದು) ರೆಡಿ ಇದ್ದರೆ ತಪ್ಪದೆ ಪತ್ರದೊಂದಿಗೆ ಕಳಿಸಿ ಕೊಡಿ. ಓದುಗರಾದ ನೀವು ಬರಹಗಾರರೂ ಆದರೆ, ಅದು ಬೇರೆಯದೇ ಸಂತೋಷ.
Home About Us Gallery Books Feedback Prarthana Contact Us

Buy Ravi Belagere Books online

ಮಟ್ಟಸ ಎಂಬುದೊಂದು ಬಾಲ್ಯದ ಹ್ಯಾಬಿಟ್ಟು!

‘ಸರಿಯಾಗಿ ಕೂತ್ಕೋ’ ಅಂತ ಅಮ್ಮಂದಿರು ಹುಡುಗಿಯರನ್ನು ಗದರುತ್ತಿರುತ್ತಾರೆ ಗಮನಿಸಿದ್ದೀರಾ? ಅದು ಕೇವಲ ಹುಡುಗಿ ಕೂಡುವ ಭಂಗಿಗೆ ಸಂಬಂಧಿಸಿದ್ದಲ್ಲ. ಯಾತರದೋ ಕಂಡುಬಿಡುವಂತೆ ಅಡಸಾ ಬಡಸಾ ಕೂಡುತ್ತಾಳೆಂಬ ತಕರಾರಲ್ಲ ಅದು. ಹುಡುಗಿಯ ವ್ಯಕ್ತಿತ್ವದಲ್ಲಿನ ಒಟ್ಟಾರೆ ಮಟ್ಟಸಕ್ಕೆ ಸಂಬಂಧಿಸಿದ ಮಾತದು.

‘ಮಟ್ಟಸ’ ಎಂಬ ಶಬ್ದವೇ ಹಾಗೆ. ಅದರ ವೈಶಾಲ್ಯ ನಮ್ಮ ವ್ಯಕ್ತಿತ್ವಕ್ಕೇನೇ ಅನ್ವಯಿಸಿಬಿಡುತ್ತದೆ. ಓಡಾಡುವ, ಮಾತಾಡುವ, ವ್ಯವಹರಿಸುವ, ಬರೆಯುವ, ಮನೆ ಓರಣವಾಗಿಟ್ಟುಕೊಳ್ಳುವ, ಬಟ್ಟೆ ಮಟ್ಟಸವಾಗಿ ಧರಿಸುವ, ಸಂಬಂಧಗಳನ್ನು ಅಚ್ಚುಕಟ್ಚಾಗಿಟ್ಟುಕೊಳ್ಳುವ, ಬದುಕನ್ನು ಕರಾರುವಾಕ್ಕಾಗಿ ರೂಪಿಸಿಕೊಳ್ಳುವ-ಹೀಗೆ ಪ್ರತಿಯೊಂದರಲ್ಲೂ ಮಟ್ಟಸ ಕಾಣಬಹುದು. ಅಂತೆಯೇ ಮಟ್ಟಸದ absenceನ್ನೂ ಕಾಣಬಹುದು.

ಗಮನಿಸಿ ನೋಡಿ. ಕೆಲವು ಹೆಂಗಸರ ಭುಜದಿಂದ ಬ್ರಾ strip ಹೊರಬಿದ್ದಿರುತ್ತದೆ. ರವಿಕೆಯ ಬೆನ್ನ ಕೆಳಗಿಂದ ಇಣುಕುವ ಇನ್ನೊಂದು ಸ್ಟ್ರಿಪ್ಪು. ಬಲಗೈಗಾಗಿದ್ದ ಕಿವುಚಿದ ಬೇಳೆಯನ್ನು ಹಾಗೇ ನೈಟಿಯ ಬಲಸೊಂಟಕ್ಕೆ ಒರೆಸಿಕೊಂಡು ಮಗುವನ್ನು ಶಾಲೆಗೆ ಬಿಟ್ಟುಬರಲು ಬಂದುಬಿಟ್ಟಿರುತ್ತಾರೆ. ಹೆರಳೆಲ್ಲೋ, ಮುಡಿದ ಹೂವೆಲ್ಲೋ, ಅವರ ಸೆರಗೆಲ್ಲೋ? ಅದರಲ್ಲೂ ಮದುವೆಯಾಗಿ ಒಂದೆರಡು ಮಕ್ಕಳಾಗಿ ಬಿಟ್ಟಮೇಲಂತೂ ಯಾವ ಪರಿ ಮಟ್ಟಸ ತಪ್ಪಿಹೋಗಿರುತ್ತದೆಂದರೆ, ಪೆಟ್ಟಿಕೋಟಿನ ಮೇಲೊಂದು ಚೂಡಿಯ ಟಾಪು ಹಾಕಿಕೊಂಡು ಮನೆಗೆ ಬಂದ ಅತಿಥಿಗಳೆದುರಿನಲ್ಲೇ ಧಿಗ್ಗಧಿಗ್ಗ ಅಂತ ಓಡಾಡತೊಡಗಿರುತ್ತಾರೆ.

ಇದರ ಬಗ್ಗೆ ಯಾರದೂ ತಕರಾರಿಲ್ಲ. ಕಂಪ್ಲೇಂಟಿಲ್ಲ. ಹೀಗೇಕಿದೀಯ ಅಂತ ಯಾರೂ ಕೇಳಲಿಕ್ಕೂ ಇಲ್ಲ. ಈ ಹೆಂಗಸಿಗೆ ಮಟ್ಟಸವಿಲ್ಲ ಅಂತ ಒಂದು ನಿರ್ಣಯಕ್ಕೆ ಬಂದು ಸುಮ್ಮನಾಗುತ್ತಾರೆ. ನನ್ನಂಥ ತರಲೆಯವನ್ಯಾವನೋ ಇದ್ದರೆ, ಈಕೆಯನ್ನು ಸಾಕಿದವರು ಕೂಡ ಅಚ್ಚುಕಟ್ಟಿನವರಿರಲಿಕ್ಕಿಲ್ಲ ಎಂಬ ಅಧಿಕ ಪ್ರಸಂಗಿ ನಿರ್ಧಾರಕ್ಕೆ ಬಂದುಬಿಟ್ಟಿರುತ್ತಾನೆ. ಏಕೆಂದರೆ, ಮಟ್ಟಸ ಮತ್ತು ಅಚ್ಚುಕಟ್ಟುತನಗಳು ನಮ್ಮ ಬಾಲ್ಯದ ರೂಢಿಗಳು. ಅಪ್ಪ-ಅಮ್ಮ ಹಾಕಬೇಕಾದ ಮೊದಲ ಫೌಂಡೇಷನ್ನುಗಳು. ಮಗುವಿಗೆ ಟಾಯ್ಲೆಟರೀಸ್ ಹೇಳಿಕೊಟ್ಟಂತೆಯೇ, ಅಆಇಈ ಬರೆಯುವುದು ಹೇಳಿಕೊಟ್ಟಂತೆಯೇ ಅದರ ನಡಿಗೆ, ಹಾವಭಾವ, ಕೈಕಾಲು ಕದಲಿಸುವಿಕೆ, ಕೂಡುವ ವಿಧಾನ, ಯೋಚನಾ ಶೈಲಿ, ಬಟ್ಟೆ-ಪುಸ್ತಕ ಜೋಡಿಸಿಟ್ಟುಕೊಳ್ಳುವಿಕೆ, ಅಪಿಯರೆನ್ಸು, ಸ್ವಚ್ಛವಾಗಿರುವಿಕೆ ಇವೆಲ್ಲವನ್ನೂ ತಂದೆ ತಾಯಿ ಹೇಳಿಕೊಡಬೇಕಾಗುತ್ತದೆ. ತಿದ್ದಬೇಕಾಗುತ್ತದೆ. Infact, ಗದರಿಸಿ ಒಂದೇಟು ಕೊಟ್ಟಾದರೂ ಕಲಿಸಬೇಕಾಗಿರುತ್ತದೆ.

ಅದನ್ನು ನನಗೆ ಕಲಿಸಿಲ್ಲವೋ, ನಾನೇ ಕಲಿಯಲಿಲ್ಲವೋ-ಗೊತ್ತಿಲ್ಲ. ಇವತ್ತಿಗೂ ನಾನು ಅಂಥ neat fellow ಅಲ್ಲ. ಮೊನ್ನೆ ಬಂದಿದ್ದ ನನ್ನ ಹಳೆಯ ವಿದ್ಯಾರ್ಥಿನಿಯೊಬ್ಬಾಕೆ, ‘ಅವತ್ತು ಬಳ್ಳಾರಿ ಮನೇಲಿ ನೀವು ಮಂಚದ ಮೇಲೆ ಹೀಗೇ ಪುಸ್ತಕ ಹರವಿಕೊಳ್ತಿದ್ರಿ. ಈಗ ಟೇಬಲ್ ತುಂಬ ಹರವಿಕೊಂಡಿದೀರಿ’ ಅಂದಳು. ಅಷ್ಟೇ ಅಲ್ಲ: ನಾನು ಬಟ್ಟೆಗಳ ವಿಷಯದಲ್ಲೂ ಸ್ವಲ್ಪ ಹರಕಾ ಪರಕ. ತುಂಬ ಮ್ಯಾಚಿಂಗ್ ಅನ್ನಿಸುವಂಥ, ಡ್ರೆಸ್ ಸೆನ್ಸ್ ಇದೆ ಎಂಬುದನ್ನು prove ಮಾಡುವಂತಹ ಉಡುಪುಗಾರನಲ್ಲ. ಬಟ್ಟೆ ಸ್ವಚ್ಛವಾಗಿರಬೇಕು, ಇಸ್ತ್ರಿಯಾಗಿರಬೇಕು, ಅದರ texture ಮೈಗೆ ಹಿತವೆನ್ನಿಸುವಂತಿರಬೇಕು, ಕೊಂಚ ದೊಗಳೆಯಾಗಿರಬೇಕು ಅಷ್ಟೆ. ಒರಟು ಜೀನ್ಸು, ಕಾಟನ್ ಷರಟು ಇದ್ದುಬಿಟ್ಟರೆ ನಾನು ಖುಷ್. ಆದರೆ ಕೆಲವು ಮಟ್ಟಸಗಳು ನನಗೇ ಗೊತ್ತಿಲ್ಲದಂತೆ ಬಂದುಬಿಟ್ಟಿವೆ. ನಾನು ನಿರಂತರವಾಗಿ ಒಂದು ಸಾವಿರ ಪುಟ ಬರೆದರೂ ಮೊದಲ ಪುಟ ಇದ್ದಷ್ಟೇ ಮುದ್ದಾಗಿ ಕೊನೆಯ ಪುಟವೂ ಇರುತ್ತದೆ. ಒಂದೇ ಥರದ ಇಂಕು. ಒಂದೇ ಥರದ ಹಾಳೆ. ಅಪ್ಪಿತಪ್ಪಿ ಕೂಡ ಚಿತ್ತು ಕಾಟು ಇಲ್ಲದ ಬರಹ.

ಇದನ್ನೇಕೆ ಹೇಳಿದೆನೆಂದರೆ, ನಮಗೆ ಯಾವುದಿಷ್ಟವಾಗುತ್ತದೋ ಅದನ್ನು ನಾವು ತುಂಬ ಮಟ್ಟಸವಾಗಿರುವಂತೆ ಮಾಡಿಕೊಳ್ಳುತ್ತೇವೆ. ರಾಜಕಾರಣಿಗಳನ್ನೇ ನೋಡಿ? ಅವರು ಏನೇ ಕೊಳಕರಾಗಿದ್ದರೂ ಬಟ್ಟೆ ಮಾತ್ರ ಫಳಫಳ, ಗರಿಗರಿ. ಏಕೆಂದರೆ, ಅದು ಅವರ ಕಸುಬಿನ ಒಂದು ಭಾಗ. ಜನರನ್ನು ಆಕರ್ಷಿಸಬೇಕು. ಚಿತ್ರನಟ funny ಆಗಿ dress ಮಾಡಿಕೊಂಡಷ್ಟೂ ಜನರ ಕಣ್ಣಿಗೆ ಬೀಳುತ್ತಾನೆ. ಅವನಲ್ಲಿ ಅದು ವಿಕರ್ಷಣೆ ಅನ್ನಿಸುವುದಿಲ್ಲ. ಒಬ್ಬ ಜೋಕರ್ ಅಡಸಾ ಬಡಸಾ ನಡೆಯುವುದನ್ನ, ಎಕಿಲಿ ಎಕಿಲಿ ನಗುವುದನ್ನು ಬೇಕೆಂತಲೇ ರೂಢಿಸಿಕೊಂಡಿರುತ್ತಾನೆ. ಮಠಾಧೀಶ ವಿನಾಕಾರಣ ಗಂಭೀರವಾಗಿ ನಡೆಯುವುದನ್ನ, ಕೂತೇ ಮಾತಾಡುವುದನ್ನ, ತನ್ನನ್ನು ತಾನು ‘ನಾವು’ ಅನ್ನೋದನ್ನ ರೂಢಿ ಮಾಡಿಕೊಂಡಿರುತ್ತಾನೆ. ಆದರೆ ನಾವಿದೇವಲ್ಲ, common people? ನಮಗೆ ಫಳಫಳ ಗರಿಗರಿ ಬೇಕಿಲ್ಲ ಮತ್ತು ಸಾಧ್ಯವಿಲ್ಲ. ಆದರೆ ಮಟ್ಟಸ ಮತ್ತು ಚೊಕ್ಕಟ ಸಾಧ್ಯವಲ್ಲವೆ? ನಾವು ಎಕಿಲಿ ಎಕಿಲಿ ನಗುವುದು, ಒಂದೇ ಮಾತನ್ನು ಪದೇಪದೆ repeat ಮಾಡುವುದು, ಧಡಾರಂತ ತೇಗಿ ಬಿಡುವುದು, ಪಿಚಕ್ಕನೆ ಉಗುಳುವುದು-ಇದನ್ನೆಲ್ಲ ನಾವೇ ಪ್ರಯತ್ನಪೂರ್ವಕವಾಗಿ control ಮಾಡಿಕೊಳ್ಳಬಹುದಲ್ಲವೆ?

ಕೆಲ ಹೆಣ್ಣುಮಕ್ಕಳು ಎಷ್ಟೇ ವಯಸ್ಸಾದರೂ ತುಂಬ ಮಟ್ಟಸವಾಗಿ, attractive ಆಗಿ ದಿರಿಸು ಧರಿಸುತ್ತಾರೆ. ಮನೆಗೆ ಬಂದವರಿಗೆ ಕಾಫಿ ತಿಂಡಿ ಕೊಡುವುದರಲ್ಲೇ ಈಕೆಯ ಅಚ್ಚುಕಟ್ಟು-ಮಟ್ಟಸ ಎಂಥದೆಂಬುದು ಗೊತ್ತಾಗಿ ಹೋಗುತ್ತದೆ. ಕೆಲವರ ಮಾತಿನಲ್ಲಿ ಅಂಥದೊಂದು ಮಟ್ಟಸವಿರುತ್ತದೆ. ಸುಮ್ಮನೆ ಕುಳಿತಿದ್ದರೂ ಆಕರ್ಷಕವಾಗಿ ಕಾಣುವುದು ಹೇಗೆ ಅಂತ ಗೊತ್ತು ಮಾಡಿಕೊಂಡಿರುತ್ತಾರೆ. ಇವೆಲ್ಲವೂ ಸೌಂದರ್ಯಕ್ಕೆ ಸಂಬಂಧಿಸಿದಂಥವಲ್ಲ. ತೀರ ಸರಳವಾಗಿರುವ ಆರ್ಡಿನರಿ ರೂಪಿನ ಜನ ಕೂಡ ತಮ್ಮ ಮಟ್ಟಸ ಮತ್ತು ಅಚ್ಚುಕಟ್ಟಿನಿಂದಾಗಿ ಇಷ್ಟವಾಗಿ ಬಿಡುತ್ತಾರೆ. ಅವೆರಡೂ ಇಲ್ಲದ ಅನೇಕ ಸೌಂದರ್ಯವತಿಯರು ಸ್ವಲ್ಪ ಹೊತ್ತಿಗೇ ‘ಕೊಳಕು’ ಅನ್ನಿಸಿಬಿಡುತ್ತಾರೆ.

Once again, ಇವೆಲ್ಲವೂ ಬಾಲ್ಯದ ರೂಢಿಗಳು. ಪ್ರಾರ್ಥನಾ ಶಾಲೆಗೆ ಬರುವ ಮಕ್ಕಳ ಯೂನಿಫಾರ‍್ಮು, ತಿಂಡಿ ಡಬ್ಬಿ, ಬೆರಳು ಉಗುರು ಇತ್ಯಾದಿಗಳನ್ನು ನೋಡುತ್ತಿದ್ದ ಹಾಗೆಯೇ ಅವರ ತಂದೆ ತಾಯಿ ಹೇಗಿದ್ದಿರಬಹುದು ಅಂತ ಊಹಿಸಿಕೊಂಡಿರುತ್ತೇವೆ. ನನ್ನ ಊಹೆ ತಪ್ಪಾಗಿರುವುದಿಲ್ಲ. ಮಕ್ಕಳಲ್ಲಿ ಇಂಥದೊಂದು ಮಟ್ಟಸ ರೂಢಿಸುವುದಕ್ಕೆ ಕೊಂಚ ಕಷ್ಟ ಪಡಲೇ ಬೇಕು. ಎಷ್ಟು ಚೆಂದಗೆ ಡ್ರೆಸ್ ಮಾಡಿ ಕಳಿಸಿದರೂ ಅವು ಹತ್ತೇ ನಿಮಿಷದಲ್ಲಿ ಮಣ್ಣಲ್ಲಿ ಆಡಿ ಮೈಯೆಲ್ಲ ಗಲೀಜು ಮಾಡಿಕೊಂಡು ಬಿಟ್ಟಿರುತ್ತವೆ. That's fine. ಅವುಗಳ ಮೇಲೆ ರೇಗಬೇಕಿಲ್ಲ. ಮಣ್ಣಲ್ಲಿ ಆಡಲಿಕ್ಕೇ ಒಂದು ಟೈಮು, ಒಂದು ಡ್ರೆಸ್ಸು ಇರುತ್ತೆ ಅಂತ ಮನವರಿಕೆ ಮಾಡಿಕೊಡುವುದೇ ಮಟ್ಟಸದ ಮೊದಲ ಪಾಠ. ಇಂಥ ಪಾಠಗಳನ್ನು ಚಿಕ್ಕಂದಿನಿಂದ ಹಾಕಿಕೊಟ್ಟು ಬಿಟ್ಟರೆ, ಅವು ಕಟ್ಟ ಕಡೆಯ ದಿನದ ತನಕ ಮಗುವಿನೊಂದಿಗೆ ಉಳಿದುಕೊಳ್ಳುತ್ತವೆ.

ಬಹಿರಂಗ ಜಾಗಗಳಲ್ಲಿ ಅಂತರಂಗಗಳನ್ನು ಅಸಹ್ಯವಾಗಿ ಕೆರೆದುಕೊಳ್ಳುವವರು, ಎಗ್ಗಿಲ್ಲದ ವಿಸರ್ಜಕರು, ಬಾಯಿ ವಾಸನೆಯವರು, ವಾಸನೆ ಬಟ್ಟೆಯವರು, ಇಣುಕು ಬ್ರಾಗಳವರು, ಹರುಕು ಪಾಯಜಾಮದವರು, ಅಶುದ್ಧ ಮಾತಿನವರು, ಸರ್ರೋ ಅಂತ ಶಬ್ದ ಮಾಡಿಕೊಂಡು ಕಾಫಿ-ಸಾರನ್ನ ಜುರುಕುವವರು, ವಿನಾಕಾರಣ ಗಂಟಲು ಕ್ಯಾಕರಿಸುವವರು, ಅಳುವ ಮಗುವನ್ನು ಬೀದಿಯಲ್ಲಿ ‘ಅಳ್ತೀಯಾ ಅಳ್ತೀಯಾ’ ಅಂತ ಹೊಡೆಯುವವರು, ಮಾತಿಗೊಮ್ಮೆ ಅಶ್ಲೀಲವಾಗಿ ಮಾತನಾಡುವವರು, ಪದೇಪದೆ ಎಡವಿಕೊಳ್ಳುವವರು, ಪಾತ್ರೆ-ಗ್ಲಾಸು ಎತ್ತಿ ಹಾಕುವವರು, ಮಾತಿಗೊಮ್ಮೆ ‘ಸ್ಲೀ’ ಅಂತ ಬಾಯಲ್ಲಿನ ಜೊಲ್ಲನ್ನು ವಾಪಸು ಎಳೆದುಕೊಳ್ಳುವವರು, ಬಾಯಿಯ ಎರಡೂ ಅಂಚಿನಲ್ಲಿ ಉಗುಳ ನೊರೆಗಟ್ಟಿಸಿಕೊಂಡು ಮಾತನಾಡುವವರು, ಮಾತನಾಡುವಾಗ ವಾಲಿಕೊಂಡು ನಿಲ್ಲುವವರು, ಫೋನಿನಲ್ಲಿ ಯಾರೊಂದಿಗೋ ‘ಹೋ’ ಅಂತ ದೊಡ್ಡದನಿಯಲ್ಲಿ ಮಾತನಾಡುವವರು, ವಿನಾಕಾರಣ ಹ್ಹೆಹ್ಹೆಹ್ಹೆ ನಗುವವರು...

ಇವರನ್ನು ಯಾರು ತಾನೆ ಇಷ್ಟಪಡುತ್ತಾರೆ? ಇಷ್ಟಪಟ್ಟಿದ್ದ ಅಮ್ಮ ಅಪ್ಪ ಇವುಗಳನ್ನೆಲ್ಲ ತಿದ್ದಬೇಕಾಗಿತ್ತು, ಅಲ್ಲವೆ?

-ರವೀ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 06 July, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books