Ravi Belagere
Welcome to my website
ಹೆಂಡತಿ ಮನೆಯಲ್ಲಿ ಇಲ್ಲದಿದ್ದರೆ ಅದೊಂದು ದಿವ್ಯ ಸಂತೋಷವಲ್ಲವೆ? ಆ ಸಂತೋಷವನ್ನು ಇಲ್ಲಿ ದಾಖಲಿಸಿ, ಓದುಗರೊಂದಿಗೆ ಹಂಚಿಕೊಳ್ಳಿ. ನನಗೆ ಥಾನುಗಟ್ಟಲೆ ಬರಹಗಳು ಬೇಕಾಗಿಲ್ಲ. ಇಡೀ ಕಾದಂಬರಿ ಬರೆದು ಕಳಿಸಬೇಡಿ. Just ಒಂದು in land letterನಲ್ಲಿ ಹಿಡಿಸುವಷ್ಟು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದರೆ ಸಾಕು. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ನಿಮ್ಮ ಹಾಗೂ ನಿಮ್ಮ ಪತ್ನಿಯ ಫೊಟೋ (ಇಬ್ಬರೂ ಜೊತೆಗಿರುವಂಥದ್ದು) ರೆಡಿ ಇದ್ದರೆ ತಪ್ಪದೆ ಪತ್ರದೊಂದಿಗೆ ಕಳಿಸಿ ಕೊಡಿ. ಓದುಗರಾದ ನೀವು ಬರಹಗಾರರೂ ಆದರೆ, ಅದು ಬೇರೆಯದೇ ಸಂತೋಷ.
Home About Us Gallery Books Feedback Prarthana Contact Us

Buy Ravi Belagere Books online

ಸಿ.ಬಿ.ಐ ಪೊಲೀಸರು ಪತ್ರಿಕೆಯ ಅಂಗಳಕ್ಕೆ ಬಂದರು

“ಕೆಲವರಿರ‍್ತಾರೆ. ಭಾರತದಲ್ಲಿ ಯಾರೇ ಸತ್ರೂ, ಹ್ಞಾಂ ನನಗವರು ಫ್ರೆಂಡಾಗಿದ್ರು ಅಂತ ಬರೆದುಕೊಂಡು ಸುಳ್ಳೇ ಪ್ರಚಾರ ತಗೊಳ್ತಾರೆ" ಅಂತ ತಲೆಗೆ ಎಣ್ಣೆ ಕಾಣದ ಪತ್ರಕರ್ತನೊಬ್ಬ ಬರೆದಿದ್ದ. ಅವನು ಬರೆದದ್ದು ಮುಂಬಯಿಯ ಪತ್ರಕರ್ತ ಮತ್ತು ನನ್ನ ಗೆಳೆಯ ಜ್ಯೋತಿರ್ಮೊಯ್ ಡೇ ಸಾವಿಗೆ ಸಂಬಂಧಿಸಿದಂತೆ.

ಆತನನ್ನು ಹೆಚ್ಚೆಂದರೆ ನಾನು ಐದಾರು ಸಲ ಭೇಟಿಯಾಗಿದ್ದೆ. ಒಮ್ಮೆ ಮಾತ್ರ ಜೆ.ಡೇ ಬೆಂಗಳೂರಿನ ತಮ್ಮ ಪತ್ನಿಯ ಮನೆಗೆಂದು ಹತ್ತಿರದಲ್ಲೇ ಇರುವ ಜೆ.ಪಿ. ನಗರಕ್ಕೆ ಬಂದಿದ್ದರು. ಕಾರು ಕಳಿಸಿ ಆಫೀಸಿಗೆ ಕರೆಸಿಕೊಂಡಿದ್ದೆ. ಆತ ನನ್ನ ಪುಸ್ತಕಗಳನ್ನ ಹಾಗೂ ಪಬ್ಲಿಕೇಷನ್ಸ್‌ನ ವ್ಯಾಪ್ತಿ ನೋಡಿ ದಂಗಾಗಿದ್ದ. ತನ್ನದೂ ಒಂದು ಪುಸ್ತಕ ಪ್ರಕಟಿಸುವಂತೆ ಕೋರಿದ್ದ. ಆ ಹೊತ್ತಿಗೆ ಮುಂಬೈ ಅಂಡರ್‌ವರ್ಲ್ಡ್‌ಗೆ ಸಂಬಂಧಿಸಿದಂತೆ ಒಂದು ಪುಸ್ತಕ ಪ್ರಕಟಿಸಿದ್ದ. ಅದರ ಬೆನ್ನಲ್ಲೇ ಆತ Zero Dial ಪುಸ್ತಕ ಬಿಡುಗಡೆ ಮಾಡಿದ್ದ. ನಾನು ಪ್ರಕಟಿಸುತ್ತೇನೆ ಅಂದಾಗ ಆತ ಬರೆಯುತ್ತಿದ್ದ ಪುಸ್ತಕಕ್ಕೆ ‘ಚಿಂದಿ’ ಅಂತ ಹೆಸರಿಟ್ಟಿದ್ದ. ಅದನ್ನು ಪೂರ್ತಿ ಮುಗಿಸುವುದರೊಳಗಾಗಿ ಆತನ ಕೊಲೆಯಾಗಿತ್ತು. ಮುಂಬೈ ಮಟ್ಟಿಗೆ ಅದೊಂದು ಸಂಚಲನವುಂಟು ಮಾಡಿದ ಹತ್ಯೆ. ಮುಂಬೈ ಸ್ಪೆಷಲ್ ಬ್ರಾಂಚ್‌ನವರು ಸತೀಶ್ ಕಾಲಿಯಾ ಸೇರಿದಂತೆ ಹತ್ತು ಜನ ಷೂಟರ್‌ಗಳನ್ನು ಬಂಧಿಸಿದ್ದರು. ಆ ನಂತರ ಅವರು ‘ಏಷಿಯನ್ ಏಜ್’ನ ಕ್ರೈಂ ರಿಪೋರ್ಟರ್ ಜಿಗನಾ ವೋರಾ ಎಂಬಾಕೆಯನ್ನೂ ಬಂಧಿಸಿದ್ದರು.

ಅದೆಲ್ಲದರ ಪರಿಣಾಮವಾಗಿ ಜೆ.ಡೇ ಹತ್ಯೆಯನ್ನು ಛೋಟಾ ರಾಜನ್ ಮಾಡಿಸಿದ್ದಾನೆ, ಅದಕ್ಕೆ ಜಿಗನಾ ವೋರಾ ಕಾರಣಳು ಎಂಬ ತೀರ್ಮಾನಕ್ಕೆ ಮುಂಬೈ ಪೊಲೀಸರು ಬಂದಿದ್ದರು. ಆದರೆ ಕೇಸು ಅಲ್ಲಿಂದ ಮುಂದಕ್ಕೆ ಕದಲಿರಲಿಲ್ಲ. ಮುಖ್ಯವಾಗಿ, ಈ ಹತ್ಯೆಗೆ ಕಾರಣ (motive) ಆದರೂ ಏನಿತ್ತು ಎಂಬುದು ಬಯಲಾಗಲೇ ಇಲ್ಲ. ಇಡೀ ಕೇಸು ಮುಂದಕ್ಕೆ ಕದಲದೆ ನಿಂತು ಬಿಟ್ಟಿತ್ತು. ಆಗ ಮಹಾರಾಷ್ಟ್ರ ಸರ್ಕಾರ ಜೆ.ಡೇ ಹತ್ಯೆಯ ಕೇಸನ್ನು ಸಿ.ಬಿ.ಐಗೆ ವಹಿಸಿ ಕೈ ತೊಳೆದುಕೊಂಡಿತ್ತು. ಅವರಾದರೂ ಏನು ಮಾಡಿಯಾರು? ಹತ್ಯೆ ನಡೆದು ಯಾವುದೋ ಕಾಲವಾಗಿ ಹೋಗಿತ್ತು. ಹೆಜ್ಜೆ ಗುರುತುಗಳು ಅಳಸಿ ಹೋಗಿದ್ದವು. ಆದರೆ ಚಿಕ್ಕದೊಂದು thread ಕೂಡ ಬಿಡದೆ ತನಿಖೆ ನಡೆಸಿದ ಸಿ.ಬಿ.ಐ ಅದರ ಭಾಗವಾಗಿ ಎಲ್ಲಿಗೆ ಬಂದು ನಿಂತಿತ್ತು ಗೊತ್ತೆ? ಅದು ‘ಹಾಯ್ ಬೆಂಗಳೂರ್!’ ಕಚೇರಿಯ ಅಂಗಳಕ್ಕೆ! ನನ್ನ ಮತ್ತು ಜ್ಯೋತಿರ್ಮೊಯ್ ಡೇ ನಡುವೆ ಕೆಲವು mails ಬದಲಾವಣೆಗಳಾಗಿದ್ದವು. ಅವುಗಳನ್ನು ಅಧ್ಯಯನಕ್ಕೆ ತೆಗೆದುಕೊಂಡರೆ ಡೇ ಹತ್ಯೆಯ ಸುಳಿವುಗಳು ಸಿಗಬಹುದಾ ಎಂಬ ಆಸೆ ಸಿ.ಬಿ.ಐ ಅಧಿಕಾರಿಗಳಿಗಿದೆ.

ನಾನು ಜೇಯೊಂದಿಗೆ ನಡೆಸಿದ mail ವ್ಯವಹಾರದ ಪ್ರತಿಗಳನ್ನು ಒಬ್ಬ ಇನ್ಸ್‌ಪೆಕ್ಟರ್‌ರ ಕೈಗೆ ಕೊಟ್ಟೆ. ಅದಕ್ಕೆ ಅವರೊಂದು endorsement ಕೂಡ ಕೊಟ್ಟರು.

ಇರಲಿ, ಸತ್ತವರು ನನ್ನ ಮಿತ್ರರಾಗಿದ್ದರು ಅಂತ ಬರಕೊಂಡು ಪಬ್ಲಿಸಿಟಿ ಪಡೆಯುವ ಹುಚ್ಚು ನನಗಿದೆ ಎಂದು ಅಕರಾಳ ನರಿಯೊಂದು ಊಳಿಟ್ಟಿತ್ತಲ್ಲ? ಅದು ತನ್ನ ಆತ್ಮಕ್ಕೆ ಕೊಂಚ ನೀರು ಹನಿಸಿ, ತಣ್ಣಗಾಗಲಿ ಎಂದು ಇದಿಷ್ಟನ್ನೂ ಬರೆದಿದ್ದೇನೆ.

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 04 July, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books