Ravi Belagere
Welcome to my website
ಹೆಂಡತಿ ಮನೆಯಲ್ಲಿ ಇಲ್ಲದಿದ್ದರೆ ಅದೊಂದು ದಿವ್ಯ ಸಂತೋಷವಲ್ಲವೆ? ಆ ಸಂತೋಷವನ್ನು ಇಲ್ಲಿ ದಾಖಲಿಸಿ, ಓದುಗರೊಂದಿಗೆ ಹಂಚಿಕೊಳ್ಳಿ. ನನಗೆ ಥಾನುಗಟ್ಟಲೆ ಬರಹಗಳು ಬೇಕಾಗಿಲ್ಲ. ಇಡೀ ಕಾದಂಬರಿ ಬರೆದು ಕಳಿಸಬೇಡಿ. Just ಒಂದು in land letterನಲ್ಲಿ ಹಿಡಿಸುವಷ್ಟು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದರೆ ಸಾಕು. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ನಿಮ್ಮ ಹಾಗೂ ನಿಮ್ಮ ಪತ್ನಿಯ ಫೊಟೋ (ಇಬ್ಬರೂ ಜೊತೆಗಿರುವಂಥದ್ದು) ರೆಡಿ ಇದ್ದರೆ ತಪ್ಪದೆ ಪತ್ರದೊಂದಿಗೆ ಕಳಿಸಿ ಕೊಡಿ. ಓದುಗರಾದ ನೀವು ಬರಹಗಾರರೂ ಆದರೆ, ಅದು ಬೇರೆಯದೇ ಸಂತೋಷ.
Home About Us Gallery Books Feedback Prarthana Contact Us

Buy Ravi Belagere Books online

ಯಾರಿಗಾದರೂ ಅದು ಸಿಗಲಿ ಎಂಬಾಸೆ ಇತ್ತಾ?

“ನೀವು ಡೈರಿ ಬರೀತೀರಾ?"

ಅವರು ಕೇಳಿದರು.

“ಯಾತರದು? ಹಾಲಿನ ಡೇರಿಯ ಲೆಕ್ಕ ಕೂಡ ನಾನು ಬರೆದಿಡೋಲ್ಲ. ನೀವು ಯಾವುದರದು ಕೇಳ್ತಿದೀರಿ?" ಅಂದೆ.

ಅವರು ಸರಿಯಾದುದನ್ನೇ ಕೇಳುತ್ತಿದ್ದರು. ಅದು ಹಾಲಿನ ಡೇರಿಯದಲ್ಲ. ಬದುಕಿನ ಆಗು ಹೋಗುಗಳ ದಿನನಿತ್ಯದ ಡೈರಿ. ಅಂಥದ್ದನ್ನ ನಾನು ಬರೆದಿಲ್ಲ. ಬರೆಯೋದಿಲ್ಲ. ಎಲ್ಲೋ ಹದಿನಾಲ್ಕನೇ ವಯಸ್ಸಿನವನಾಗಿದ್ದಾಗ ‘ಇವತ್ತು ಹೈಸ್ಕೂಲಿನ ಕಡೆಯ ದಿನ’ ‘ಮನೇಲಿ ಉಪ್ಪಿಟ್ಟು ಮಾಡಿದ್ದರು’ ಎಂಬಂತಹ ಎಳಸು ಬರಹಗಳನ್ನು ದಾಖಲಿಸಿದ್ದು ಬಿಟ್ಟರೆ ಉಳಿದದ್ದೇನನ್ನೂ ನಾನು ಬರೆದಿಲ್ಲ. ಅದಕ್ಕೆ ಕಾರಣವೂ ಇರಬಹುದು. ತುಂಬ ಚಿಕ್ಕವಯಸ್ಸಿನಲ್ಲೇ ನನ್ನ ಕತೆಗಳು ಪ್ರಕಟವಾಗಲಾರಂಭಿಸಿದ್ದವು. ಮೊದಲನೇ ಪ್ರಕಟಣೆಯ thrill ಅಂದರೆ ಬಳ್ಳಾರಿ ಜಿಲ್ಲೆಯ ಕಂಪ್ಲಿಯಿಂದ ಹೊರಡುತ್ತಿದ್ದ ‘ಚಿಲುಮೆ’ ಪತ್ರಿಕೆಯಲ್ಲಿ ನನ್ನದೊಂದು ಕಥೆ ಪ್ರಿಂಟಾಗಿತ್ತು. ಲೇಖಕರು: ಬಿ. ರವಿ ಅಂತಲೂ ಅಚ್ಚಾಗಿತ್ತು. ನನಗಾಗ ಹೆಚ್ಚೆಂದರೆ ಹದಿಮೂರರ ವಯಸ್ಸು. ಆಮೇಲೆ ಬಿಡಿ, ಪೋಲಿ ಬಿದ್ದು ಹೋದೆ. ಮುಂದೆ ಬಿ.ಎ., ಮುಗಿಸಿ ಎಂ.ಎ., ಮಾಡಲು ಧಾರವಾಡಕ್ಕೆ ಹೋದೆ. ಅಲ್ಲಿ ನಿಜಕ್ಕೂ ಬರವಣಿಗೆ ಕುದುರತೊಡಗಿತ್ತು. ಅಲ್ಲಿ ನನ್ನ ಮೊದಲ ಕಥೆ ‘ರವಿ ಬೆಳಗೆರೆ’ ಎಂಬ ಹೆಸರಿನೊಂದಿಗೆ ವಿದ್ಯಾರ್ಥಿ ವಿಶೇಷಾಂಕದಲ್ಲಿ ಪ್ರಕಟವಾಯಿತು. ಆದರೆ ಒಬ್ಬ perfect ಕತೆಗಾರ ಅನ್ನಿಸಿಕೊಂಡದ್ದು 1979ರಲ್ಲಿ ನನ್ನ ‘ಶಾಲಿನಿ’ ಕಥೆ ‘ಮಯೂರ’ ಪತ್ರಿಕೆಯಲ್ಲಿ ಪ್ರಕಟವಾದಾಗ. ಹಾಗೆ ಶುರುವಾದ ಬರೆಯೋ ಬ್ಯಾಸಾಯ ಈ ತನಕ ಬಂದಿದೆ. ಇವೆಲ್ಲ ಸಡಗರಗಳ ಮಧ್ಯೆ ನಾನೆಲ್ಲಿ ಡೈರಿ ಬರೆಯುತ್ತ ಕೂಡಲಿ?

ಆದರೆ ಒಬ್ಬಾಕೆ ಬರೆಯುತ್ತ ಕುಳಿತಳು. ಆಕೆ ಕೊಂಚ ಹಿಂದಿನಿಂದಲೇ ಬರೀತಿದ್ಲು ಅಂತ ಕಾಣುತ್ತದೆ. She was not very young. ಮೂವತ್ತೈದರ ಆಸುಪಾಸಿನಲ್ಲಿದ್ದವಳು. ಎಲ್ಲ ಬಿಟ್ಟು, ಅಲ್ಲಿ ತಿರುಗಿ-ಇಲ್ಲಿ ತಿರುಗಿ ನನ್ನ ಕೈಗೆ ಬೀಳಬೇಕೆ? ಬದುಕಿದ್ದಿದ್ದರೆ ಆಕೆ ಏನನ್ನುತ್ತಿದ್ದಳೋ? ಆಕೆ ಬದುಕಿಲ್ಲ. ನಂಬಲಿಕ್ಕಾಗದಷ್ಟು ನಿಗೂಢ ಹಾಗೂ ವಿಚಿತ್ರವಾಗಿ ಸತ್ತು ಹೋಗಿದ್ದಾಳೆ. ನೀವು ಬಿಲ್‌ಕುಲ್ ಅನುಮಾನಿಸಬೇಕಿಲ್ಲ: ಅಷ್ಟು ಸುಂದರಿ. ಅಷ್ಟು ಬುದ್ಧಿವಂತೆ. Street smart ಅಂತೀವಲ್ಲ? ಆ ತರಹದ ಜಾಣತನಕ್ಕೂ ಆಕೆಯಲ್ಲಿ ಕೊರತೆಯಿರಲಿಲ್ಲ.Infact, ಆಕೆ ಬದುಕಿರುವಾಗಲೇ ಆಕೆಯ ಈ ಡೈರಿ ನನ್ನ ಕೈಗೆ ಸಿಕ್ಕಿದ್ದಿದ್ದರೆ ನೇರವಾಗಿ ಹೋಗಿ ‘ಮೇಡಂ... ಐ ಲವ್ ಯೂ...’ ಅಂದಿರುತ್ತಿದ್ದೆನೇನೋ? ಆ ಪರಿ brilliant ಆದ ಗೆಳತಿ ಎಲ್ಲರಿಗೂ ಸಿಕ್ಕುವುದಿಲ್ಲ.

ಹೋಗೀ ಹೋಗಿ, ತನ್ನ ಡೈರಿ ನನ್ನ ಕೈಗೆ ಸಿಗಬಹುದು ಎಂಬ ಕಲ್ಪನೆ ಆಕೆಗಿದ್ದಿರಲಾರದು. ಚಿಕ್ಕದೊಂದು evidence ಕೂಡ ಬಿಡದೆ ತನ್ನ ಅಂತ್ಯ ಕಂಡುಕೊಂಡವಳಿಗೆ after all, ತನ್ನ ಡೈರಿ ಮತ್ತೊಬ್ಬರ ಕೈಗೆ ಸಿಗದಂತೆ ನೋಡಿಕೊಳ್ಳಬೇಕು ಅಂತ ಗೊತ್ತಿರದೆ ಹೋದೀತೆ?

ಅಥವಾ ಯಾರ ಕೈಗಾದರೂ ಸಿಗಲಿ ಎಂಬ ಗುಪ್ತ ಆಸೆಯಿದ್ದೀತೇ? God knows. ನಾನಂತೂ ಮೇಲಿಂದ ಮೇಲೆ ಅದನ್ನು ಓದಿದ್ದೇನೆ. I am sure: ನಿಮಗೂ ಓದಿಸುತ್ತೇನೆ. ಚೂರು ಟೈಮ್ಕೊಡಿ.

ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 28 June, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books