Ravi Belagere
Welcome to my website
ಹೆಂಡತಿ ಮನೆಯಲ್ಲಿ ಇಲ್ಲದಿದ್ದರೆ ಅದೊಂದು ದಿವ್ಯ ಸಂತೋಷವಲ್ಲವೆ? ಆ ಸಂತೋಷವನ್ನು ಇಲ್ಲಿ ದಾಖಲಿಸಿ, ಓದುಗರೊಂದಿಗೆ ಹಂಚಿಕೊಳ್ಳಿ. ನನಗೆ ಥಾನುಗಟ್ಟಲೆ ಬರಹಗಳು ಬೇಕಾಗಿಲ್ಲ. ಇಡೀ ಕಾದಂಬರಿ ಬರೆದು ಕಳಿಸಬೇಡಿ. Just ಒಂದು in land letterನಲ್ಲಿ ಹಿಡಿಸುವಷ್ಟು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದರೆ ಸಾಕು. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ನಿಮ್ಮ ಹಾಗೂ ನಿಮ್ಮ ಪತ್ನಿಯ ಫೊಟೋ (ಇಬ್ಬರೂ ಜೊತೆಗಿರುವಂಥದ್ದು) ರೆಡಿ ಇದ್ದರೆ ತಪ್ಪದೆ ಪತ್ರದೊಂದಿಗೆ ಕಳಿಸಿ ಕೊಡಿ. ಓದುಗರಾದ ನೀವು ಬರಹಗಾರರೂ ಆದರೆ, ಅದು ಬೇರೆಯದೇ ಸಂತೋಷ.
Home About Us Gallery Books Feedback Prarthana Contact Us

Buy Ravi Belagere Books online

ಆಯ್ತು : ಸಾಯಲಿ ಸತೀಶ ಎನ್ನಿಸಿದ ಬಗ್ಗೆ

ಶಬ್ದ ಭಯಂಕರವಾಗೇ ಇತ್ತು. Big bang. ಆ ಬಿರುಸಿಗೆ ನಮ್ಮ ಆಫೀಸಿನ ಕಟ್ಟಡವೇ ಒಮ್ಮೆ ನಡುಗಿದಂತಾಯಿತು. ಆಫೀಸ್‌ಗೆ ಅಂಟಿಕೊಂಡೇ ಒಂದು ಅಪಾರ್ಟ್‌ಮೆಂಟ್ ಕಟ್ಟುತ್ತಿದ್ದಾರೆ. ಅದರ ಸೆಂಟ್ರಿಂಗ್ ಥರದ್ದೇನಾದರೂ ಕಳಚಿತಾ ಅಂದುಕೊಂಡೆ. ಆಗಷ್ಟೆ ಒಂದು ದೊಡ್ಡ ಮಳೆ ಬಂದು ನಿಂತಿತ್ತು. ಕಡೆಗೆ ನೋಡಿದರೆ ಭೀಕರ ಸದ್ದಿನೊಂದಿಗೆ ಕುಸಿದು ಬಿದ್ದದ್ದು ನಮ್ಮ ಆಫೀಸ್ ಹಿಂದಿನ ದೊಡ್ಡ ಕಲ್ಲು ಗೋಡೆ. ಗೋಡೆ ಬಿದ್ದು, ಅದರ ಒಂದು ಕಲ್ಲೋ-ಮತ್ತೊಂದೋ, ಚಿಮ್ಮಿ ಬಂದು ನಮ್ಮ ಕೆಳಮನೆಯ ಗಾಜಿನ ಕಿಟಕಿಗೆ ಬಡಿದು, ಅದರ ಗ್ಲಾಸ್ ಒಡೆದು ಹಾಕಿದೆ. ಆಫೀಸಿನ ಕೆಳಮನೆಯಲ್ಲಿ ಶಾಲೆಯ ಅಡ್ಮಿನಿಸ್ಟ್ರೇಷನ್ ಸೆಕ್ಷನ್ ಇದೆ. ಗೋಡೆಯ ಆಚೆ ಅದೆಷ್ಟು ಗ್ಯಾಲನ್ ನೀರು ಶೇಖರಣೆಯಾಗಿತ್ತೋ ಕಾಣೆ: ಗಾಜು ಒಡೆದ ತಕ್ಷಣ ನುಗ್ಗಿ ಬಂದದ್ದು ಅಪ್ಪಟ ಪ್ರವಾಹ. ಪಾಪ, ಶಾಲೆಯ ಅಡ್ಮಿನಿಸ್ಟ್ರೇಷನ್ ಸಿಬ್ಬಂದಿಯವರು ಅದೇನೇನು ಫೈಲು-ರೆಕಾರ್ಡು ಪೇರಿಸಿಕೊಂಡಿಟ್ಟಿದ್ದರೋ ಗೊತ್ತಿಲ್ಲ: ಎಲ್ಲವೂ ತೊಯ್ದು ತಂಬುಳಿ!

ನಮ್ಮ ಉಮೇಶ ನೆಲ-ಮುಗಿಲು ಒಂದು ಮಾಡಿ ಚೀರುತ್ತಾ ಅವೆಲ್ಲ ದಾಖಲೆ ತೆಗೆದಿರಿಸುತ್ತಿದ್ದ. ನಾನೆದ್ದು ಮೆಟ್ಟಿಲು ಇಳಿದು ಹೋಗಿ ಏನು ಮಾಡಲಿ? ಅದನ್ನೇ ನನ್ನ ಜಾಗದಿಂದ ಅಲುಗದೆ ಶ್ರದ್ಧೆಯಿಂದೆ ಮಾಡಿದೆ: I started hearing music! ಏಕೆಂದರೆ, ಕೆಳಮನೆಗೆ ನೀರು ನುಗ್ಗಿ, ಅದು ಅಂಗಳಕ್ಕೆಲ್ಲ ಹರಿದು, ಶಾಲೆಯ ಸೆಲ್ಲರ್‌ನೊಳಕ್ಕೂ ನುಗ್ಗಿ ಏನೇನು ಅನಾಹುತ ಸೃಷ್ಟಿಸಿರಬಹುದು ಎಂಬುದರ ಸ್ಪಷ್ಟ ಕಲ್ಪನೆ ನನಗಿತ್ತು. ಏಕೆಂದರೆ ಥೇಟ್ ಇದೇ ತರಹದ ಅವಘಡ ಹಿಂದೊಮ್ಮೆ ನಡೆದಿತ್ತು. ಇನ್ನು ಇಳಿದು ಹೋಗಿ ನೋಡೋದೇನಿದೆ?

ಒಂದೇ ಮಾತಿನಲ್ಲಿ ಹೇಳೋದಾದರೆ, ಬೆಂಗಳೂರು ಅಸಲು ಎಂಥ ಚಿಕ್ಕ ಮಳೆಗೂ ಸಿದ್ಧವಾಗಿಲ್ಲ. ಪಾಲಿಕೆಯ ಅಧಿಕಾರಿಗಳು, ಇಂಜನೀರ್‌ಗಳು ಅದೇನು ಕತ್ತೆ ಮೇಯಿಸುತ್ತಾರೋ? ಗೊತ್ತಿಲ್ಲ. ಪ್ರತೀ ಮಳೆಗೂ ಅವಘಡಗಳೇ. ಕೆಲವೆಡೆ ತೆಗ್ಗಿನಲ್ಲಿ ಮನೆ ಕಟ್ಟಿಕೊಂಡಿದ್ದಾರೆ ಜನ. ಆ ಪೈಕಿ ಮುಕ್ಕಾಲು ಪಾಲು ಅಕ್ರಮ ಕಟ್ಟಡಗಳು. ಚಿಕ್ಕ ಮಳೆ ಬಿದ್ದರೂ ಆ ಮನೆಗಳೊಳಕ್ಕೆ ನೀರು ನುಗ್ಗುತ್ತದೆ. ಮನೆಗಳಲ್ಲಿನ ಜನ ಅಂಬೋ! ಹಳೇ ಬೆಂಗಳೂರು ಅದಿನ್ನೆಷ್ಟು ಕೆರೆ-ಕುಂಟೆಗಳನ್ನು ಹೊಂದಿತ್ತೊ? ಅಲ್ಲೆಲ್ಲ ಈಗ ಮನೆಗಳು. ಒತ್ತುವರಿ ಮಾಡಿಕೊಂಡವನು ಅಲ್ಲೇ ಮನೆ ಕಟ್ಟಿಕೊಂಡು ವಾಸವಿರುತ್ತಾನಾ? ಬಂದ ರೊಕ್ಕ ಎಣಿಸಿಕೊಂಡು ಅವನು ಹೋಗಿ, ಆ ನಂತರ ತಲೆಮಾರುಗಳೇ ಸರಿದು ಹೋಗಿರುತ್ತವೆ. ಇದು ಪಾಲಿಕೆಯವರಿಗೂ ಗೊತ್ತು. ಅವರೇಕೆ ತಲೆ ಕೆಡಿಸಿಕೊಂಡಾರು?

''ಬಾಸ್... ಇವನೇನು ಸಾಯೋಕೆ ಮುಂಚೆ ನಿಮಗೆ ಮುಖ ತೋರಿಸೋಕೇ ಬಂದಿದ್ನಾ, ಸತೀಶ?'' ಅಂತ ಕೇಳಿದ ಲೋಕೇಶ್ ಕೊಪ್ಪದ್. ಅವನು ಅದೇ ಎಂ.ಎಸ್. ಸತೀಶ್‌ನ ಬಗ್ಗೆ ಕೇಳುತ್ತಿದ್ದ. ಸತೀಶ್ ಬಗ್ಗೆ ನನಗೆ ಹಿಂದೊಮ್ಮೆ ಸಿಟ್ಟು ಬಂದಿದ್ದುದು ಹೌದು. ಆದರೆ ಅದಕ್ಕಿಂತ ಅವನೆಡೆಗೆ ಒಂದು ಕಡು ಅಸಹ್ಯ ಬಂದು ಬಿಟ್ಟಿತ್ತು. ಒಂದು ಕ್ರಿಮಿಯಂತೆ ಅವನನ್ನು ನೋಡುತ್ತಿದ್ದೆ. ಆಗ 'ಸುವರ್ಣ ನ್ಯೂಸ್‌'ನಲ್ಲಿ ನನ್ನ ವಿರುದ್ಧ ಒಂದು ಸತ್ಪುರುಷರ ಅಭಿಯಾನವೇ ನಡೀತಲ್ಲ? ಎಲ್ಲಿ ಕುಡಿದು ಬಿದ್ದಿದ್ದನೋ ಈ ಸತೀಶ್? ಅವನಿಗೊಂದು ಅಂಗಿ ತೊಡಿಸಿ ಕರೆದುಕೊಂಡು ಬಂದು ಪ್ಯಾನಲ್ ಡಿಸ್ಕಷನ್‌ಗೆ ಕೂಡಿಸಿಬಿಟ್ಟರು. ನಾನೊಬ್ಬ ನಾನಾ ರೀತಿಯ ಮನೋವಿಕಾರಗಳನ್ನುಳ್ಳ ಸೈಕೋಪಾತ್ ಎಂಬಂತೆ ಚಿತ್ರಿಸಿ ಎಲ್ಲರೂ ಮಾತನಾಡುವವರೇ. ಇವನು ಮಾತ್ರ ''ರವಿ ಬೆಳಗೆರೇಗೂ ಅವರ ತಾಯಿಗೂ ಅನೈತಿಕ ಸಂಬಂಧ ಇತ್ತು'' ಅಂದುಬಿಟ್ಟ. ''ಅಣ್ಣಾ, ನೀನು ಸುಮ್ನಿರು. ಇವನನ್ನ ನಾವು ತೆಗೆದೇ ಬಿಡ್ತೀವಿ!'' ಅಂತ ಹಟಕ್ಕೆ ಬಿದ್ದ ನಮ್ಮ ಹುಡುಗರನ್ನು ಗದರಿಸಿ ಕೂಡಿಸಿದ್ದೆ. ನನಗೆ ಮರ್ಡರುಗಳ ಖಯಾಲಿ ಇಲ್ಲ. ಅದರ ಶೋಕಿಯೂ ಇಲ್ಲ. ಅದೇ ಶನಿ ಸಂತಾನಿ ಸತೀಶ್ ಇತ್ತೀಚೆಗೊಂದು ಫೇಸ್‌ಬುಕ್ ಮೆಸೇಜ್ ಕೊಟ್ಟಿದ್ದ: ''ನಿಮ್ಮನ್ನ ಕಾಣಬಹುದೇ?'' ಅಂತ. ''ಆಯ್ತು ಬಾ'' ಎಂದು ಉತ್ತರಿಸಿದ್ದೆ. ಅವನು ಬಂದು ತುಸು ಹೊತ್ತು ಕುಳಿತಿದ್ದ. ''ಈಗ ಪೂರ್ತಿಯಾಗಿ ಕುಡಿತ ಬಿಟ್ಟಿದ್ದೇನೆ. ಅದಕ್ಕಾಗಿ ಮಾತ್ರೆ ತಗೊಳ್ತಿದೀನಿ'' ಅಂದ. ಕುಡಿತ ಬಿಡುವುದಕ್ಕಾಗಿ ಕೊಡೋ ಮಾತ್ರೆಯಿಂದ ಒಂದು ಅಪಾಯವಿದೆ. ಆ ಮಾತ್ರೆ ತೆಗೆದುಕೊಂಡು, ಅಕಸ್ಮಾತ್ ಕುಡಿದು ಬಿಟ್ಟರೆ ಸಾವೇ ಸಾವು! ಅನೇಕರು ಅದರಿಂದಾಗಿ ಸತ್ತು ಹೋಗಿದ್ದಾರೆ. ''ನೀವು ಕುಡಿದು ಸತ್ತರೆ ಪರವಾಗಿಲ್ಲ: ಈ ಮಾತ್ರೆ ತಗೊಂಡು ಅದರ ಮೇಲೆ ಕುಡಿದು ಅನಾಹುತ ಮಾಡಿಕೊಂಡು ಸಾಯೋದು ಬೇಡ'' ಎಂಬ ಧಾಟಿಯಲ್ಲಿ ಮಾತಾಡುತ್ತಾರೆ ವೈದ್ಯರು.

ಬಿಡಿ: ಅವನಿಂದ ಆಗಬೇಕಾದದ್ದು ಮತ್ತು ಆಗಲೇ ಬೇಕಾದಂಥದ್ದು ಏನು ಸುಡುಗಾಡೂ ಇಲ್ಲ. ಸಾಯಲಿ ಸತೀಶ.

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 14 June, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books