Ravi Belagere
Welcome to my website
ಹೆಂಡತಿ ಮನೆಯಲ್ಲಿ ಇಲ್ಲದಿದ್ದರೆ ಅದೊಂದು ದಿವ್ಯ ಸಂತೋಷವಲ್ಲವೆ? ಆ ಸಂತೋಷವನ್ನು ಇಲ್ಲಿ ದಾಖಲಿಸಿ, ಓದುಗರೊಂದಿಗೆ ಹಂಚಿಕೊಳ್ಳಿ. ನನಗೆ ಥಾನುಗಟ್ಟಲೆ ಬರಹಗಳು ಬೇಕಾಗಿಲ್ಲ. ಇಡೀ ಕಾದಂಬರಿ ಬರೆದು ಕಳಿಸಬೇಡಿ. Just ಒಂದು in land letterನಲ್ಲಿ ಹಿಡಿಸುವಷ್ಟು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದರೆ ಸಾಕು. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ನಿಮ್ಮ ಹಾಗೂ ನಿಮ್ಮ ಪತ್ನಿಯ ಫೊಟೋ (ಇಬ್ಬರೂ ಜೊತೆಗಿರುವಂಥದ್ದು) ರೆಡಿ ಇದ್ದರೆ ತಪ್ಪದೆ ಪತ್ರದೊಂದಿಗೆ ಕಳಿಸಿ ಕೊಡಿ. ಓದುಗರಾದ ನೀವು ಬರಹಗಾರರೂ ಆದರೆ, ಅದು ಬೇರೆಯದೇ ಸಂತೋಷ.
Home About Us Gallery Books Feedback Prarthana Contact Us

Buy Ravi Belagere Books online

ಬರೀ ಮೂರೂವರೆ ರುಪಾಯಿಗೆ ಗಾಡಿ ಅಡವಿಟ್ಟು...

ಅದೊಂದು ಸಂಗತಿ ಫಕ್ಕನೆ ನೆನಪಾಯ್ತು. ಅವತ್ತು ಚೇತನಾಗೆ ಒಂದು ಕಂಪಾಸ್ ಬಾಕ್ಸ್ ಕೊಡಿಸೋದಿತ್ತು. ನನ್ನಲ್ಲಿ ಆ ಮೂರೂವರೆ ರುಪಾಯಿ ಇರಲಿಲ್ಲ. ಬಳ್ಳಾರಿಯ ‘ಸಂಗೀತಾ ಬಾರ್’ನಲ್ಲಿ ಕುಳಿತಿದ್ದೆ. ಒಂದಾದುಮೇಲೊಂದು ಗುಂಡು. ಗೆಳೆಯರ ಸಂತಸದ ಹೇಷಾರವ. ಅಲ್ಲಿ ಮಹಾ ಶ್ರೀಮಂತ ಅಜಯ್ ಕುಳಿತಿದ್ದ. ಅವನದು ಬೇಜಾನ್ ಧಾರವಾಹಿ, ಹಣದ ಚೆಲ್ಲಾಟ. ಹತ್ತು ರುಪಾಯಿ ಕೊಡೋ ಕಡೆ ಒಮ್ಮೊಮ್ಮೆ ನೂರರ ನೋಟು ಕೊಡುತ್ತಿದ್ದ. ಅವನದೇ ತರಹದ ಧಣಿಗಳು ಟೇಬಲ್ ಸುತ್ತ ಕುಳಿತಿದ್ದರು. ಅಲ್ಲಿ ನಗದಿ ಹರಿಪ್ರಸಾದ್ ಕೂಡ ಇದ್ದ. ಝೆರಾಕ್ಸ್ ಮಳಿಗೆ ಮಾಲೀಕನಿಗೆ ಎಣಿಸಿದಷ್ಟೂ ರೊಕ್ಕ.

“ಲೇ, ಯಾರಾದರೂ ಮೂರೂವರೆ ರುಪಾಯಿ ಕೊಡ್ರಲೇ..." ಅಂದೆ.

“....." ಅವರದು ಮಾತೇ ಇಲ್ಲ.

“ಅಲ್ಲಲೇ, ಇಸ್ಪೀಟಾಡಿ ಕಳೀತೀರಿ. ಕುಡುದು ಕಳೀತೀರಿ. ಒಂದು ಚಿಲ್ರೆ ಅಮೌಂಟ್ ಮೂರೂವರೆ ರುಪಾಯಿ ಇಲ್ವಾ? ನನ್ನ ಮಗಳಿಗೆ ಕಂಪಾಸ್ ಬಾಕ್ಸ್ ತಗೊಂಡು ಹೋಗಬೇಕು..." ಅಂತ ವಿನಂತಿಸಿದೆ. ಹಾಗೆ ಮೇಲಿಂದ ಮೇಲೆ ವಿನಂತಿಸಿ, ಕಡೆಗೆ ಅಳತೊಡಗಿದೆ. ಏನೋ ಮಗಳಿಗೇ ಅಂತ ಕೇಳ್ತದಾನ. ಕೊಡೋದು ಕೊಟ್ಟು ಬಿಡ್ರಲೇ ಎಂಬ ಮಾತು ಒಬ್ಬ ಬೋಳೀಮಗನ ಬಾಯಲ್ಲೂ ಬರಲಿಲ್ಲ. ಕೊನೆಗೆ I was drowned. ಕೇಳೋದು ನಿಲ್ಲಿಸಿಬಿಟ್ಟೆ. ಕಣ್ಣೆದುರಿಗೆ ಚೇತನಾಳದೇ ಚಿತ್ರ. ಬಾಕಿಯಿದ್ದ ಪೆಗ್ ಮುಗಿಸಿ ಮೇಲೆದ್ದೆ.

ನೆಟ್ಟಗೆ ಹೋಗಿ ಒಂದು ಮಾರವಾಡಿ ಅಂಗಡಿಯ ಮುಂದೆ ಗಾಡಿ ನಿಲ್ಲಿಸಿದೆ. “ಹೆಚ್ಚು ಬೇಡ, ಇದನ್ನಿಟ್ಟುಕೊಂಡು ಮೂರೂವರೆ ರುಪಾಯಿ ಕೊಡು" ಅಂದೆ. ಅವನು ಕೊಟ್ಟ. ಕೈಯಲ್ಲಿ ಕಂಪಾಸ್ ಬಾಕ್ಸ್ ಹಿಡಿದುಕೊಂಡು ಮನೆಗೆ ಹೋದೆ. ಕುಣಿದಾಡಿ ಬಿಟ್ಟಳು. “ಗಾಡಿ ಎಲ್ಲಪ್ಪಾ...?" ಅಂದಳು. “ಜ್ವರ ಬಂದಿದ್ದರಿಂದ ಡಾಕ್ಟರ ಹತ್ರ ಬಿಟ್ಟಿದ್ದೇನೆ. ನಾಳೆ ತರ‍್ತೇನೆ!" ಅಂದೆ. ನಾಳೆ ಮೂರೂವರೆ ರುಪಾಯಿ ಹೊಂದಿಸಿ ಗಾಡಿ ಬಿಡಿಸಿಕೊಂಡದ್ದೂ ಆಯಿತು.

ಎಂದಿನಂತೆ ಅವತ್ತು ‘ಸಂಗೀತಾ ಬಾರ್’ ಕಡೆಗೆ ಗಾಡಿ ಹೊರಳಲಿಲ್ಲ. ಮನೆಗೇ ಹೋದೆ. ಮಕ್ಕಳನ್ನು ಸುತ್ತ ಕೂಡಿಸಿಕೊಂಡು ತಿಥಿ, ವಾರ, ನಕ್ಷತ್ರ ಹೇಳಿಕೊಟ್ಟೆ. ಒಂದು ಕ್ರಾಂತಿ ಗೀತೆ ಹಾಡಿದೆ.

ಅವತ್ತು ಮನಸ್ಸಿಗೆ ಏನೋ ಶಾಂತಿ.

ಮೇಜಿನ ಸುತ್ತ ಕುಳಿತವರು miss ಮಾಡಿದರಾ? ಗೊತ್ತಿಲ್ಲ. ಅವರ‍್ಯಾರೊಂದಿಗೂ ನಾನು ಇವತ್ತಿನ ತನಕ ಕುಡಿದಿಲ್ಲ.

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 06 June, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books