Ravi Belagere
Welcome to my website
ಹೆಂಡತಿ ಮನೆಯಲ್ಲಿ ಇಲ್ಲದಿದ್ದರೆ ಅದೊಂದು ದಿವ್ಯ ಸಂತೋಷವಲ್ಲವೆ? ಆ ಸಂತೋಷವನ್ನು ಇಲ್ಲಿ ದಾಖಲಿಸಿ, ಓದುಗರೊಂದಿಗೆ ಹಂಚಿಕೊಳ್ಳಿ. ನನಗೆ ಥಾನುಗಟ್ಟಲೆ ಬರಹಗಳು ಬೇಕಾಗಿಲ್ಲ. ಇಡೀ ಕಾದಂಬರಿ ಬರೆದು ಕಳಿಸಬೇಡಿ. Just ಒಂದು in land letterನಲ್ಲಿ ಹಿಡಿಸುವಷ್ಟು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದರೆ ಸಾಕು. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ನಿಮ್ಮ ಹಾಗೂ ನಿಮ್ಮ ಪತ್ನಿಯ ಫೊಟೋ (ಇಬ್ಬರೂ ಜೊತೆಗಿರುವಂಥದ್ದು) ರೆಡಿ ಇದ್ದರೆ ತಪ್ಪದೆ ಪತ್ರದೊಂದಿಗೆ ಕಳಿಸಿ ಕೊಡಿ. ಓದುಗರಾದ ನೀವು ಬರಹಗಾರರೂ ಆದರೆ, ಅದು ಬೇರೆಯದೇ ಸಂತೋಷ.
Home About Us Gallery Books Feedback Prarthana Contact Us

Buy Ravi Belagere Books online

ಖಾಸ್‌ಬಾತ್ : ನಿಗೂಢವಾಗಿ ಕಾಣೆಯಾದ ಆ ಡಾಕ್ಟರ್ ಕೊಲೆಯಾಗಿದ್ದಿರಬಹುದಾ?

“ನಾನು ಹೇಳಿದಂತೆಯೇ ಆಗಿದೆ: ಹಿಮ್ಲರನು ಆತ್ಮಹತ್ಯೆ (ಹಿಟ್ಲರ್ ಅಲ್ಲ!) ಮಾಡಿಕೊಂಡಿದ್ದಾನೆ..." ಎಂದು 1945ಕ್ಕೆ ಮುಂಚೆ ಬರೆದವರು ‘ಸಂಜಯ’ ಅಲಿಯಾಸ್ ಕಡಲಬಾಳು ಶಾಮರಾವ್. ಇಂಥದ್ದೊಂದು first person narracion ಸಾಧ್ಯ ಎಂಬುದನ್ನು ಕನ್ನಡದಲ್ಲಿ prove ಮಾಡಿದವರಲ್ಲಿ ಶಾಮರಾಯರು ಒಬ್ಬರು. ಉಳಿದವರನ್ನು ನಾನು ಓದಿಲ್ಲ. ಆ ತರಹದ ಬರವಣಿಗೆ ಸರಿಯಾ? ಪತ್ರಕರ್ತರಿಗೆ ಅದು ಸಾಧ್ಯವಾ? ಇದೆಂಥ ಉದ್ಧಟತನ? ಶಾಮರಾವ್ ತಮ್ಮ ತಾಕತ್ತಿಗೆ ನಿಲುಕದಿರುವುದನ್ನು ಮಾಡಿದ್ದಾರೆ. He is stupid ಎಂಬೆಲ್ಲ ಮಾತುಗಳು ಆಗ ಕೇಳಿ ಬಂದಿದ್ದವಂತೆ. ಮುಂದೆ ಐ.ಕೆ. ಜಹಗೀರದಾರ್ ಆ ಪ್ರಯತ್ನ ಮಾಡಿದರಾ? ಜಯಶೀಲರಾವ್ was against it. ಅವರ ತಾಕತ್ತು ಅಗಾಧ. ಅವರು ಸುಮ್ಮನೆ ನಡೆದು ಹೋಗಿ ವಿಧಾನಸಭೆಯಲ್ಲಿ ‘ನಿಲ್ಲುತ್ತಿದ್ದರು’. ಅವರು ಕೂಡುತ್ತಿರಲಿಲ್ಲ. ಸುಮ್ಮನೆ ತಲೆ ತಗ್ಗಿಸಿಕೊಂಡು ಆಲಿಸುತ್ತಿದ್ದರು. ಕಣ್ಣೆತ್ತಿ ನೋಡುತ್ತಲೂ ಇರಲಿಲ್ಲ. ಹಾಗೆ ಆಲಿಸಿದ್ದು ಸಾಕು ಅನ್ನಿಸಿದ ಮೇಲೆ ಹೊರಟು ಬಿಡುತ್ತಿದ್ದರು. ಜನ್ಮದಲ್ಲೇ ಅವರು notes ಮಾಡಿದವರಲ್ಲ. ಆಫೀಸಿಗೆ ಹೋಗಿ ತಮ್ಮ ಜಾಗದಲ್ಲಿ ಕುಳಿತರೆಂದರೆ, ಅದೊಂದು ಅದ್ಭುತ! ‘ಪ್ರಜಾವಾಣಿ’ಯನ್ನು ಬೇರೆಯದೇ ಎತ್ತರಕ್ಕೆ ಒಯ್ದು ನಿಲ್ಲಿಸಿದ ಭೀಷ್ಮ ಜಯಶೀಲರಾವ್, ಇತ್ತೀಚೆಗೆ ರಾಯರು ತೀರಿಕೊಂಡರು. ಅವರಿಗೆ ಸಂತಾನವಿರಲಿಲ್ಲ. ಆದರೆ ಅವರ ಮನೆಗೆ ಹೋದ ಪ್ರತಿ ಸಲವೂ ನಾನು ಗಮನಿಸುತ್ತಿದ್ದೆ. ಆಗ ಮನೆ ತುಂಬ ಮಕ್ಕಳು. ಅವರದೇ ಚಿಲಿಪಿಲಿ.. ಜಯಶೀಲರಾಯರಿಗೆ ಅದೇ ಆನಂದ. ಪ್ರೀತಿಸೋಕೆ ನಮಗೆ ಹುಟ್ಟಿದ ಮಕ್ಕಳೇ ಆಗಬೇಕೆ? ಜಯಶೀಲರಾಯರ ಪತ್ನಿಯದು ಸದಾ ತಾಯಿ ಮನಸು. ಅಕ್ಕಪಕ್ಕದ ಅಷ್ಟೂ ಮನೆಗಳ ಮಕ್ಕಳನ್ನು ಕರೆದು ಗುಡ್ಡೆ ಹಾಕಿಕೊಂಡು, ಅವರೆಲ್ಲರಿಗೂ ‘ತಮಾಷಿ’ ಉಣಬಡಿಸುವ ಆಕೆಯದು ಅನನ್ಯಪ್ರೇಮ. ಇನ್ನು ಮಕ್ಕಳಿಲ್ಲ ಎಂಬ ಕೊರಗು ಅದೆಲ್ಲಿಯದು? ಅವರು Golden Couple.

ಒಂದು ಕಥೆ ಇದೆ ಕೇಳಿ. ಆ ಕಾಲಕ್ಕೆ ಜಯಶೀಲರಾಯರಿಗೆ ದೊಡ್ಡ ‘ಕಂಪೆನಿ’ ಅಂದರೆ, ಅದು ಕೆ.ರಾಜಾರಾಯರದು. ಅವರು ಕಂಪೆನಿಯೂ ಹೌದು: ಕಾಂಪಿಟಿಟರೂ ಹೌದು. ಕುಡಿಯಲು ಕೂತರೆ ಅದು ರಣ ಕುಡಿತ. ಆ ಬಗ್ಗೆ ಸಾಕಷ್ಟು ಉಪ ಕಥೆಗಳಿವೆ, ಬಿಡಿ. ಕುಡಿತ ಅತೀ ಆದಾಗ ಒಂದು ನಿರ್ಧಾರಕ್ಕೆ ಬಂದರಂತೆ. “Raja Rao, ಕುಡಿಯೋದು ಬಿಡೋಕಂತೂ ಆಗಲ್ಲ ನಮ್ಮ ಕೈಲಿ. ಕುಡಿಯೋಣ. ಆದ್ರೆ not in Bangalore!" ಅಂದರಂತೆ. ಅದು ಸಿನ್ಸಿಯರ್ ಆದ ನಿರ್ಧಾರ. ಕಡೇಪಕ್ಷ ಕುಡಿತ ಕಡಿಮೆ ಮಾಡುವ ಪ್ರಯತ್ನವಂತೂ ಹೌದು. ಎರಡು ದಿನ ಅವರು ಕುಡಿಯಲೇ ಇಲ್ಲ. ಬೆಂಗಳೂರನ್ನೇನೂ ತೊರೆದಿರಲಿಲ್ಲ. ಹಾಗಾಗಿ ಕುಡಿತಕ್ಕೆ ಬ್ರೇಕ್. Full control. ಗೆಳೆಯರು ಅಭಿನಂದಿಸಲು ಹೊರಟರೆ ಅವರಿಬ್ಬರೂ ನಾಪತ್ತೆ. ಕಡೆಗೆ ಇಬ್ಬರೂ ಎಲ್ಲಿ ಸಿಕ್ಕರು ಗೊತ್ತೆ? ನೆಲಮಂಗಲದ ಒಂದು ಲಡಾಸ್ ಬಾರಿನಲ್ಲಿ. “ಬೆಂಗಳೂರಲ್ಲಿ ಕುಡಿಯಲ್ಲ. We are out of Bangalore. ಅಷ್ಟೆ!" ಜಯಶೀಲರಾವ್ ಗಹಗಹಿಸಿ ನಕ್ಕರಂತೆ.

ಒಂದರ್ಥದಲ್ಲಿ ನಾನು ಅದೃಷ್ಟವಂತ. ಅಂಥ ಜಯಶೀಲರಾವ್, ರಾಜಾರಾವ್, ನರಸಿಂಹ, ಕುಳ್ಳ ಸತ್ಯ, ನೇಮಿನಾಥ್, ಶಾಮರಾವ್, ವಡ್ಡರ್ಸೆ ರಘುರಾಮ ಶೆಟ್ಟರು, ಐ.ಕೆ. ಜಹಗೀರದಾರ್, ವೈಕುಂಠರಾಜು, ಲಂಕೇಶ್ ಮುಂತಾದವರನ್ನೆಲ್ಲ ತುಂಬ ಹತ್ತಿರದಿಂದ ನೋಡಿದೆ. ಈ ಪೈಕಿ ಕೆಲವರೊಂದಿಗೆ ನನಗೆ ಗಾಢ ಮೈತ್ರಿಯೂ ಇತ್ತು. ವೈಯೆನ್ಕೆ ಜೊತೆಗಂತೂ ಒಂದಾದ ಮೇಲೊಂದು ಪೆಗ್ಗು! ಈ ದಿಗ್ಗಜರ ಮಧ್ಯೆ ಕೆಲಬಾರಿ ವಿ.ಎನ್. ಸುಬ್ಬರಾವ್, ಮುಂಜಾನೆ ಸತ್ಯ ಮುಂತಾದ ಹುಳಗಳೂ ಇದ್ದವು. ಅದೊಮ್ಮೆ ಪ್ರೆಸ್‌ಕ್ಲಬ್‌ನಲ್ಲಿ ಜಹಗೀರದಾರ್ ಜೊತೆ ಗುಂಡೇರಿಸುತ್ತಾ ಕುಳಿತಿದ್ದೆ. ಅವರಾಗ ಪ್ರಜಾವಾಣಿಯಲ್ಲಿ ಇರಲಿಲ್ಲ. ಸ್ವತಂತ್ರವಾಗಿ (Mostly ಇಂಚರ) ಒಂದು ಪತ್ರಿಕೆ ಆರಂಭಿಸಿದ್ದರು. He wanted boys. ನನ್ನೊಂದಿಗೆ ಮಾತಾಡ್ತಾ ಅವರು ಎಷ್ಟು ಎಕ್ಸೈಟ್ ಆಗಿದ್ದರೆಂದರೆ, ಆಗಷ್ಟೆ ಕ್ಲಬ್ ಪ್ರವೇಶಿಸಿದ ರಾಜಾರಾವ್ ಅವರಿಗೆ, “ನೋಡೋ ರಾಜಾರಾವ್... ನನ್ನ Sure shot, black horse ರವಿ ಬೆಳಗೆರೆ ಸಿಕ್ಕಿದಾನೆ ಕಣೋ. ನಾಳೇನೇ ಕೆಲಸಕ್ಕೆ ಬಂದು ಬಿಡ್ತಾನೆ!" ಅಂದರು. ಅದಕ್ಕೆ ರಾಜಾರಾವ್ ಹೇಗೆ ಪ್ರತಿಕ್ರಿಯಿಸಿದರು ಗೊತ್ತೆ? “ಲೋ ಸಾಬಿ. He is my boy ಕಣೋ. Just, ಇವತ್ತಷ್ಟೇ he got appointed. ರವಿ ಬೆಳಗೆರೆ ‘ಸಂಯುಕ್ತ ಕರ್ನಾಟಕ’ಕ್ಕೆ ಬಂದೇ ಬಿಟ್ಟಿದ್ದಾನೇ. ಏನಂತೀಯ?" ಅಂದು ಗಹಗಹಿಸಿದರು. ಒಂದೇ ಸಲಕ್ಕೆ ಎರಡು ಅಪಾಯಿಂಟ್‌ಮೆಂಟ್ ಸಿಕ್ಕರೆ ನಾನು ಏನಾಗಿರಬೇಡ?" ಈ ತೆರನಾದ ವಾತಾವರಣವನ್ನು ನಾನು ಮತ್ತು ಶಾಮಿ (ಎಸ್ಕೆ ಶಾಮಸುಂದರ) ಅದೆಷ್ಟು ಅನುಭವಿಸಿದೆವೋ?

ಬೆಂಗಳೂರು ನನಗೆ ಒಂಥರಾ ಪ್ಯಾರಿಸ್. ಬಳ್ಳಾರಿಯಿಂದ ಇಲ್ಲಿಗೆ ವಿಪರೀತ ಸಂಕೋಚ ಹಾಗೂ ಭಯದೊಂದಿಗೆ ಬರುತ್ತಿದ್ದೆ. ಕೆಲಸ ಸಿಕ್ಕರೆ ಸಾಕು ಎಂಬ ಸ್ಥಿತಿ. ಬಸ್‌ಸ್ಟ್ಯಾಂಡ್‌ನಲ್ಲೇ ಮಲಗುತ್ತಿದ್ದೆ. ನಂಗೆ ಕೆಲಸ ಕೊಡಿಸಿ ಅಂತ ನಾನು ವಿಪರೀತವಾಗಿ ಅಂಗಲಾಚಿದ್ದು ನೇಮಿನಾಥರೆದುರು. ಅವರು ನನಗೆ ಒಂದು strange ಆದ ರೀತಿಯಲ್ಲಿ ಪರಿಚಿತರಾಗಿದ್ದರು. ಟೈಮ್ಸ್ ಆಫ್ ಇಂಡಿಯಾದ ಪ್ರಸರಣ ವಿಭಾಗದ ಅಧಿಕಾರಿಯೊಬ್ಬರ ಜೊತೆಯಲ್ಲಿ ಅವರು ನನ್ನ ಮನೆಗೆ ಬಂದಿದ್ದರು. ಅವರಿಗೊಬ್ಬ ಸೋದರ. Mostly ಡಾ.ರವೀಂದ್ರನಾಥ್ ಇರಬೇಕು. ಬಳ್ಳಾರಿಯಲ್ಲಿ ಅವರು ಮೆಡಿಕಲ್ ಕಾಲೇಜ್‌ನ ಡಾಕ್ಟರ್ ಅಂಡ್ ಪ್ರೊಫೆಸರ್. ಅಂಥ ಡಾ.ರವೀಂದ್ರನಾಥ್‌ಗೆ ಒಂದೇ ಒಂದು ಚಟವೂ ಇರಲಿಲ್ಲ. He was very pious. ಚೆಂದದ ಪುಟ್ಟ ಕುಟುಂಬವಿತ್ತು. ಅವರು ಮೂಲತಃ ಬಳ್ಳಾರಿ ಜಿಲ್ಲೆಯ ಕಂಬತ್ತ ಹಳ್ಳಿಯವರು. ಜಾತಿಯಿಂದ ಅವರು ಜೈನರು. ಏನೇನೂ ಸಮಸ್ಯೆಗಳಿರಲಿಲ್ಲ. ಹಾಗಿದ್ದ ಡಾ.ರವೀಂದ್ರನಾಥ್ ಅದೊಂದು ದಿನ ಇದ್ದಕ್ಕಿದ್ದಂತೆ ನಾಪತ್ತೆಯಾಗಿ ಬಿಟ್ಟರು. ಅವರನ್ನು ಹುಡುಕೋದಾದರೂ ಎಲ್ಲಿ? ಹುಡುಕಿದ್ದಂತೂ ನಿಜ. ಕೊನೆಗೆ ಮಾತು ಎಲ್ಲಿಗೆ ಬಂದು ನಿಂತಿತು ಅಂದರೆ, ಒಬ್ಬ ನರ್ಸ್ ಜೊತೆಗೆ ಅವರಿದ್ದಾರೆ. ಅವಳು ಇವರನ್ನು ಹೊರಬಿಡುತ್ತಿಲ್ಲ. ನರ್ಸ್ ಜೊತೆಯಲ್ಲೇ ಅವರಿದ್ದಿರಬಹುದು. ಆದರೆ ಶೋಧಿಸೋದು ಹೇಗೆ? ಆಗಲೇ ನೇಮಿನಾಥ್ ನನ್ನ ಮನೆಗೆ ಬಂದದ್ದು. ಅವರು ಕೈಮುಗಿದು ಕಣ್ಣೀರಿಟ್ಟುಬಿಟ್ಟರು. ಆಗ ನೇಮಿನಾಥ್ ‘ಟೈಮ್ಸ್ ಆಫ್ ಇಂಡಿಯಾ’ದ ಮುಖ್ಯಸ್ಥರು. ಅಲ್ಲಿ ಅವರ ಮಾತು ವೇದವಾಕ್ಯ. “ರವಿ ನಮ್ಮ ಹುಡುಗ. ಅವನಿಗೆ ಬಳ್ಳಾರಿಯ ಮೂಲೆ ಮೂಲೆ ಗೊತ್ತು. ನೀವು ಹೋಗಿ ಮಾತಾಡಿ. ನಿಮ್ಮ ಕೆಲಸ ಅವನು ಮಾಡಿಕೊಡ್ತಾನೆ"ಅಂತ ಹೇಳಿ ನನ್ನಲ್ಲಿಗೆ ಕಳಿಸಿದವರು ಜಯಶೀಲರಾವ್.

“ಅಷ್ಟೇನಾ? ಅವಳ ಮನೇಲಿ ಡಾ.ರವೀಂದ್ರನಾಥ್ ಇದ್ದಾರೆ. ನುಗ್ಗಿ ಹೊರಕ್ಕೆ ಕರೆ ತಂದು ಬಿಡಬೇಕು. ಅಷ್ಟೇ ತಾನೆ?" ಅಂದೆ. ಒಂದು ಚಿಟಿಗೆಯಲ್ಲಿ ಮುಗಿಯೋ ಕೆಲಸ. “Fine..." ಅಂದವನೇ ನಾನು ನೇರವಾಗಿ ಹೋದದ್ದು ಸೇಂಟ್ ಜಾನ್ಸ್ ಹೈಸ್ಕೂಲಿನ ಹತ್ತಿರದಲ್ಲಿದ್ದ ಒಂದು ಸಾರಾಯಿ ಅಂಗಡಿಗೆ. “ಒಂದಲ್ಲ ಎರಡು ದರಾಮ್ ಹಾಕು" ಅಂದವನೇ ಸಾರಾಯಿ ಹಾಕಿಸಿಕೊಂಡು ಗಟ್ಟಗಟ ಕುಡಿದು ಬಿಟ್ಟೆ. ಇನ್ನೇನು ಬೇಕು? ಅವಳ ಮನೆ ನನಗೆ ಗೊತ್ತಿತ್ತು. ನಡುರಾತ್ರಿ ಹನ್ನೆರಡಕ್ಕೆ ‘ನಿನ್ನಮ್ಮನ್’ ಅಂದವನೇ ಅವಳ ಮನೆಗೆ ನುಗ್ಗಿಬಿಟ್ಟೆ. ಕಂಗಾಲಾದ ನರ್ಸ್ ಥರಥರ ನಡುಗುತ್ತಿದ್ದಳು.“ಎಲ್ಲೇ ಡಾಕ್ಟ್ರು...ನಿನ್ನಮ್ಮನ್" ಅಂತ ಅಬ್ಬರಿಸಿದೆ. ಇಡೀ ಮನೆ ಗೂರಾಡಿಬಿಟ್ಟೆ. ಆತ ಎಲ್ಲೂ ಇರಲಿಲ್ಲ. “ಬೆಹನ್‌ಚೋದ್, ಎಲ್ಲಿಟ್ಟಿದೀಯಾ ಅವರನ್ನ? ಈಗ ಅಂದ್ರೆ ಈಗಲೇ ಬೇಕು ನಂಗೆ. ತೋರಿಸು ನಡಿ. ಇವರ‍್ಯಾರು ಗೊತ್ತಾ? ಬೆಂಗಳೂರಿಂದ ಬಂದಾರೆ. ಆಫೀಸರ‍್ಸ್. ಎತ್ತಿಕೊಂಡು ಹೋಗಿ ಸೀದಾ ಜೈಲಿನ್ಯಾಗೆ ಕೂಡಿಸ್ತಾರೆ!" ಅಂದೆ. ಅವಳು ಗೋಳೋ ಅಂತ ಅತ್ತಳು. ಡಾಕ್ಟರ್ ಮಾತ್ರ ಸಿಗಲಿಲ್ಲ. ಇದಾಗಿ ಸುಮಾರು ಮೂವತ್ತು ವರ್ಷಗಳಾದವೇನೋ? ಇತ್ತೀಚೆಗೆ ನೇಮಿನಾಥ್ ತೀರಿಕೊಂಡ ಸುದ್ದಿ ಓದಿದೆ. Mostly, ಅವರ ಸೋದರ ಡಾ. ರವೀಂದ್ರನಾಥ್ ಇವತ್ತಿಗೂ ಸಿಕ್ಕಿಲ್ಲ. ಅವರು ಆತ್ಮಹತ್ಯೆ ಮಾಡಿಕೊಂಡರಾ? ಅವರ ಕೊಲೆ ಆಗಿರಬಹುದಾ? ಹಿರಿಯ ಅಧಿಕಾರಿಯಾದ ಅವರು ಕೆಲಸದ ನಿಮಿತ್ತ ಹೈದರಾಬಾದಿಗೆ ಹೋಗಿದ್ದರು. ಅದನ್ನು ಮುಗಿಸಿ ವಾಪಸು ಬರಬೇಕಿತ್ತು. ಆದರೆ ಅವರು ಬರಲಿಲ್ಲ. Just disappeared. ಸತ್ತಿದ್ದರೆ ಕಡೇ ಪಕ್ಷ ಅವರ ದೇಹ ಸಿಗಬೇಕಿತ್ತಲ್ಲ? ನಿಜಕ್ಕೂ ಅದೊಂದು ವಿಚಿತ್ರ ಕಥೆ. ಇವತ್ತಿಗೂ ಅದು ನಿಗೂಢವೇ. ಆ ಕಥೆಯಲ್ಲಿ ನಾನೂ ಇದ್ದೇನೆ. ಆದರೆ ನನಗೆ ಅವರ ಬಗ್ಗೆ ಗೊತ್ತಿಲ್ಲ. ಅವರು ಬದುಕಿದ್ದಾರಾ? ಗೊತ್ತಿಲ್ಲ.

ಆ ನಂತರವೂ ನಾನು ಬೆಂಗಳೂರಿಗೆ ಬರುತ್ತಿದ್ದೆ. ತಣ್ಣೀರನ್ನೂ ಕೂಡ ಆರಿಸಿಕೊಂಡು ಕುಡೀಬೇಕು. ಅಂಥ ಜೀವ ನೇಮಿನಾಥ್. ಆಗಲೇ ಒಮ್ಮೆ ನಾನು, ನೇಮಿನಾಥ್ ಮತ್ತು ಜಯಶೀಲರಾವ್ ಒಟ್ಟಿಗೆ ಓಡಾಡುತ್ತಿದ್ದೆವು. ಅವರಿಬ್ಬರದೂ ಒಂದು team. ಕೆಲವೊಮ್ಮೆ ಅದಕ್ಕೆ ನರಸಿಂಹ join ಆಗುತ್ತಿದ್ದರು. ಅವರು ‘ಚಿತ್ರತಾರಾ’ ಎಂಬ ಪತ್ರಿಕೆಯ ಸಂಪಾದಕರು. Very affectionate. ಅವರೆಲ್ಲರಿಗೂ ಶಾಸ್ತ್ರ ಕೇಳೋದು, ಕಣಿ ಕೇಳೋದು, ನಾಡಿಗ್ರಂಥ, ಜಾತಕ ತೋರಿಸೋದು - ಇಂಥದ್ದೆಲ್ಲ ಗೊತ್ತು. ಅವರ‍್ಯಾರೂ ಚಿಲ್ರೆ ಪಲ್ರೆ ಜನರಲ್ಲ. ಅವರು ಗೌರವಯುತ ಪತ್ರಕರ್ತರು. ತಮಾಷೆಯೆಂದರೆ, ಈ ಗುಂಪಿಗೆ ವಿಚಿತ್ರ ರೀತಿಯಲ್ಲಿ hook ಆದವರು ಸನ್ಮಾನ್ಯ ದೇವೆಗೌಡರು! ಅವರಿಗೆ ತುಂಬ ಹತ್ತಿರದಲ್ಲಿದ್ದವರು ನೇಮಿನಾಥ್. ಅದೇನು ಋಣಾನುಬಂಧವೋ? ಇವತ್ತಿಗೂ ನನ್ನ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ತಮಾಷೆಯೆಂದರೆ ಒಮ್ಮೆ ಮಲ್ಲೇಶ್ವರಂಗೆ ಹೋಗೋ ಹಾದಿಯಲ್ಲಿ ನನಗೆ ಜಯಶೀಲರಾವ್ ಸಿಕ್ಕರು. ಅವರು ಸ್ಕೂಟರಿನಲ್ಲಿ ಬರುತ್ತಿದ್ದರು. ನಾನು ಬೈಕಿನಲ್ಲಿ ಅವರಿಗೆ ಇದಿರಾದೆ. “ಹೌದಾ, ಸ್ವಂತ ಪತ್ರಿಕೆ ಮಾಡ್ತಿದೀರಾ? ಒಳ್ಳೇದಾಗ್ಲಿ, ಒಳ್ಳೇದಾಗ್ಲಿ. ಶುರುಮಾಡೋಕೆ ಮುಂಚೆ ಒಂದು ಸಲ ಆ ಮುದುಕರನ್ನ meet ಮಾಡಿ. ಅವರು ಇಲ್ಲೇ slumನಲ್ಲಿ ಮನೆ ಮಾಡ್ಕೊಂಡಿದಾರೆ. ಅಸಾಧಾರಣ ಮನುಷ್ಯರು. Meet him. ನಿನ್ನ ಜಾತಕ ಇದ್ರೆ ತಗೊಂಡು ಹೋಗಿ. ಒಳ್ಳೇದಾಗುತ್ತೆ!" ಅಂದರು. ತಮಾಷೆಯೆಂದರೆ ನನ್ನಂಥ ನಾನು, ಆ ವೃದ್ಧರನ್ನ ಭೇಟಿಯಾದೆ. He was a great soul. ಚೆನ್ನಾಗಿ ಮಾತನಾಡಿದರು. ಸಲಹೆ ಕೊಟ್ಟರು. ಪತ್ರಿಕೆ ಯಾವಾಗ ಮಾಡಬೇಕು ಅಂತ dates ಕೂಡ ಕೊಟ್ಟರು. ಅವತ್ತು ಅವರು ಹೇಳಿದ್ದುದರಲ್ಲಿ ಯಾವುದೂ ಸುಳ್ಳಾಗಿಲ್ಲ.

ಅಂಥ teamನಲ್ಲಿ ಎಲ್ಲರಿಗೂ ತಮ್ಮವೇ ಆದ ಸಮಸ್ಯೆಗಳಿದ್ದವು. ಅವರೆಲ್ಲರಿಗೂ ಪರಿಹಾರ ಬೇಕು. ಉತ್ತರ ಬೇಕು. ನನಗೇನು ಬೇಕಿತ್ತು? ಸುಮ್ಮನೆ ಅವರೊಂದಿಗಿರುತ್ತಿದ್ದೆ. ಅವತ್ತು ನೇಮಿನಾಥ್ ನನ್ನನ್ನು ಕರೆದೊಯ್ದು ‘ಟೈಮ್ಸ್’ನ ಮುಖ್ಯಸ್ಥರಾದ ಸುನೀಲ್ ರಾಜಶೇಖರ್‌ರನ್ನ ಭೇಟಿ ಮಾಡಿಸಿದರು. “ಒಂದೇ ಒಂದು ವರದಿ ಇಂಗ್ಲೀಷಿನಲ್ಲಿ ಬರೆದಿದ್ದರೆ ಖಂಡಿತ ಅಪಾಯಿಂಟ್ ಮಾಡಿಕೊಳ್ತಿದ್ದೆ. I am really helpless and sorry" ಅಂದರಾತ. ನೇಮಿನಾಥ್ ಕೂಡ helpless. ಆಗಲೇ ‘ಟೈಮ್ಸ್' ಕನ್ನಡದಲ್ಲಿ ಬರುತ್ತೆ. ಅದಕ್ಕೆ ಜಯಶೀಲರಾಯರು ಸಂಪಾದಕರಾಗಿರ‍್ತಾರೆ ಎಂಬ ಮಾತು ದಟ್ಟವಾಗಿ ಅಲೆದಿತ್ತು. ಅದು ನಿಜವಾಗಲಿಲ್ಲ. ಇಷ್ಟಾಗಿ, ನನಗೆ ಇಡೀ ಟೀಮ್‌ನಲ್ಲಿ ಒಬ್ಬರೂ ಖೊಟ್ಟಿ ಅನ್ನಿಸಲಿಲ್ಲ. ಅದರಲ್ಲಿ ಜಯಶೀಲರಾವ್, ರಾಜಾರಾವ್, ನೇಮಿನಾಥ್, ನರಸಿಂಹ-ಯಾರೂ ಬದುಕಿಲ್ಲ. ಒಬ್ಬ ಅನಂತಮೂರ್ತಿ ಇದ್ದಾರೆ. ಅವರು ‘ಟೈಮ್ಸ್’ನ ಸರ್ಕುಲೇಷನ್ ವಿಭಾಗದಲ್ಲಿದ್ದರು. ಅದರಲ್ಲೇ ಅವರು ರಿಟೈರ್ ಕೂಡ ಆದರು. ಇತ್ತೀಚೆಗೆ ಅವರು ನನಗೆ ಸಿಕ್ಕಿಲ್ಲ. ಅವರೊಂದಿಗೆ ನಾನು ಬೀChiಯವರ ಮಗ ಟ್ರಿಮ್ಮಿಯನ್ನೂ ಒಯ್ದು ಈ ಇಂಪೀರಿಯಲ್ ಬಾರ್‌ನಲ್ಲಿ ಕಂಠಮಟ್ಟ ಕುಡಿಯುತ್ತಿದ್ದೆ. ಕೆಲ ವರ್ಷಗಳ ಹಿಂದೆ ಟ್ರಿಮ್ಮಿ ಕೂಡ ತೀರಿಹೋದ. ಬದುಕಿನ ಆ ತಿರುವಿನಲ್ಲಿ ನನಗೆ ಇವರೆಲ್ಲ ಸಿಕ್ಕರು. ಆದರೆ ಕೆಲಸ ಸಿಗಲಿಲ್ಲ. ಕಡೆಗೆ ನನಗೆ ಮೋಕ್ಷ ಕಾಣಿಸಿದವರು, ಅದೇ teamನ ರಾಜಾರಾಯರು. ಅವರೇ ಒಯ್ದು ‘ಸಂಯುಕ್ತ ಕರ್ನಾಟಕ’ದಲ್ಲಿ ನನಗೆ ನೌಕರಿ ಕೊಡಿಸಿದರು. ನಾನು ಉಳಿದೆಲ್ಲ ಬಿಟ್ಟು ಹುಬ್ಬಳ್ಳಿಗೆ ಹೋದೆ. ಆ ಮಟ್ಟಿಗೆ ಒಂದು ನೆಲೆ ಹುಡುಕಿಕೊಂಡೆ.

ಸುಮ್ಮನೆ ಕೂತು ನೆನಪು ಕೆದರಿಕೊಂಡರೆ ಅವೆಷ್ಟು ಚಿತ್ರಗಳು ಕದಲಿ ಮರೆಯಾಗುತ್ತವೆಯೋ?

ನಿಮ್ಮವನು
ಆರ್.ಬಿ.

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 01 June, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books