Ravi Belagere
Welcome to my website
“ಇವತ್ತೇ ಫಸ್ಟ್ ಟೈಮ್!" ಡೇಟು, ಜಾಗ ಇತ್ಯಾದಿಗಳು ನೆನಪಿರಬಹುದು. ಅಷ್ಟೇ ಹೊರತು ಜೀವನದಲ್ಲಿ ಅವೆಷ್ಟೋ ಸಂಗತಿಗಳಿರುತ್ತವೆ: ‘ಇದು ಫಸ್ಟ್ ಟೈಮ್’ ಎಂದು ನೆನಪಿಟ್ಟುಕೊಳ್ಳುವಂತಹವು. ಹಾಗೆ ಅನೇಕ ಫಸ್ಟ್ ಟೈಮ್‌ಗಳು, ಮೊಟ್ಟ ಮೊದಲ ಸಿಗರೇಟು, ಮೊದಲ ಪೆಗ್, ಕೊಟ್ಟ ಮೊದಲ ಮುತ್ತು, ಮೊದಲ ಮೈಥುನ ಇತ್ಯಾದಿಗಳಿಂದ ಹಿಡಿದು, ಮೊದಲ ಫಸ್ಟ್ ಕ್ಲಾಸ್, ಮೊದಲ ಪ್ರಕಟಿತ ಕಥೆ, ಮೊದಲ ಕಾದಂಬರಿ, ಮೊದಲ ಆಕ್ಸಿಡೆಂಟ್-ಇತ್ಯಾದಿಗಳ ಸಾಲೇ ಇದೆ. ಅದೆಲ್ಲ ಇರಲಿ: ನಿಮ್ಮ ಬದುಕಿನ ‘ಫಸ್ಟ್ ಟೈಮ್’ಗಳ ಬಗ್ಗೆ ನೀವೇ ಹೇಳಿ. ಒಂದು ನೆನಪನ್ನು ‘ದಿಲ್ ನೇ ಫಿರ್ ಯಾದ್’ ಅಂಕಣಕ್ಕೆ ಕಳಿಸುತ್ತೀರಾ? Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ಜಾಸ್ತಿ ಟೈಮಿಲ್ಲ ದೊರೆ: ಬೇಗ ಬರೆದು ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಹೆಂಡತಿಯೊಬ್ಬಳು ಮನೆಯಲ್ಲಿದ್ದರೆ ಕೋಟಿ ರುಪಾಯಿ

ಇನ್ನೇನು ಹೊರಡುವ ಘಳಿಗೆ. ಎಂಥದ್ದೋ ಎಕೈಟ್‌ಮೆಂಟು. ಹದಿನೈದು ದಿನ ಬರೋದಿಲ್ಲವಂತೆ. ತಂಗಿ ಮಗನ ಬದುಕು ಸ್ಥಿರಗೊಳಿಸಲು ಹೊರಟಿದ್ದಾಳೆ. ಅವನಿಗೂ ಆಯ್ತಲ್ಲ ಮೂವತ್ತು. ಅವನು ಮದುವೆಯಾಗದಿದ್ದರೆ ಹೇಗೆ? ಒಳ್ಳೆ ನೌಕರಿ ಇದೆ: ಸಾಫ್ಟ್‌ವೇರ್. ಆ ಸಂಭ್ರಮದ ಜೊತೆಗೆ, ಇವಳಿಗೂ ತವರ ಮನೆಯಲ್ಲಿ ಓಡಾಡುವ, ನೆಂಟರಿಷ್ಟರನ್ನು ಕಾಣುವ ಸಂತಸ. “ಇಲ್ಲಿ ನೋಡಿ, ಗ್ಯಾಸ್ ಲೈಟರ್ ಇಲ್ಲಿಟ್ಟಿದ್ದೇನೆ. ಗ್ಯಾಸ್ ಆಫ್ ಮಾಡದೆ ಮಲಗಿ ಬಿಡಬೇಡಿ. ಸುಮ್ಮನೆ ಎಲ್ಲ ಸ್ನೇಹಿತರನ್ನೂ ಗುಡ್ಡೆ ಹಾಕಿಕೊಂಡು ಹರಟೆಗೆ ಕೂತು ಬಿಡಬೇಡಿ. ಮರೀದೆ ಬಿ.ಪಿ. ಮಾತ್ರೆ ತಗೊಳ್ಳಿ. ಹ್ಞಾಂ, ಉಪ್ಪಿನ ಜಾಡಿ ಇಲ್ಲೇ ಇದೆ..." ಅನ್ನುತ್ತಾಳೆ. ಅದು ಯಥಾಪ್ರಕಾರದ ಪ್ರವಚನ.

Yes, ಅವಳನ್ನು ವಿಮಾನ ಹತ್ತಿಸಿದ್ದಾಯಿತು. ಬಾಂಬೆ ಯಾವ ಮಹಾ ದೂರ. ಇತ್ತ ನಾನು ಹೊರಟು ಬೆಂಗಳೂರಿನ ಈ ದರಿದ್ರ ಟ್ರ್ಯಾಫಿಕ್‌ನಲ್ಲೇ ಕೊಂಚ ಜಾಗ ಮಾಡಿಕೊಂಡು ಮನೆ ಸೇರುವ ಹೊತ್ತಿಗೆ ಅವಳಾಗಲೇ ಬಾಂಬೆಯಲ್ಲಿ land ಆಗಿರ‍್ತಾಳೆ. ಇಳಿದವಳೇ ಫೋನು. ರಿಸೀವ್ ಮಾಡೋದಕ್ಕೆ ತಮ್ಮ ಬಂದಿರುತ್ತಾನೆ. She has gone.

ನಿಜವಾದ ಸುಖ ಆರಂಭವಾಗೋದೇ ಆ ಕ್ಷಣದಿಂದ. ಹದಿನೈದು ದಿನದ ಸುಖ. ಹೆಂಡತಿ ಊರಿಗೆ ಹೋಗಿದ್ದಾಳೆ ಎಂಬುದು ಸುಳ್ಳೇ ಸಂಭ್ರಮದ ಮಾತಲ್ಲ: ಅದರಲ್ಲೂ at this age. ಇವತ್ತಿನಿಂದ ಏನೇನು ಆಗಬೇಕು? ಆ ಪಟ್ಟಿ ಮನಸ್ಸಿನಲ್ಲೇ ಇದೆ. “ಹೆಂಡತಿಯೊಬ್ಬಳು ಮನೆಯಲ್ಲಿದ್ದರೆ ನನಗದೆ ಕೋಟಿ ರುಪಾಯಿ..." ಅದು ಕವಿ ನುಡಿ. ಹೆಂಡತಿಯೊಬ್ಬಳು ತವರಿಗೆ ಹೋದರೆ ಅದೆಷ್ಟು ನೂರು ಕೋಟಿ ರುಪಾಯಿ? ಯಾಕೋ ಕವಿಗಳು ಆ ಬಗ್ಗೆ ಬರೆದಿಲ್ಲ. ಇವತ್ತು ನೀವು ಬರೆಯಿರಿ.

ಇನ್ನೂ ನೀವು ಮದುವೇನೇ ಆಗಿಲ್ವ? Sorry, ನಿಮಗಿಲ್ಲಿ ಕೆಲಸವಿಲ್ಲ. ಮದುವೆಯಾಗಿರುವವರಿಗೆ ಮಾತ್ರ ಇಲ್ಲಿ ಪ್ರವೇಶ. ಮತ್ತೇನಿಲ್ಲ: ಹೆಂಡತಿ ಮನೆಯಲ್ಲಿ ಇಲ್ಲದಿದ್ದರೆ ಅದೊಂದು ದಿವ್ಯ ಸಂತೋಷವಲ್ಲವೆ? ಆ ಸಂತೋಷವನ್ನು ಇಲ್ಲಿ ದಾಖಲಿಸಿ, ಓದುಗರೊಂದಿಗೆ ಹಂಚಿಕೊಳ್ಳಿ. ನನಗೆ ಥಾನುಗಟ್ಟಲೆ ಬರಹಗಳು ಬೇಕಾಗಿಲ್ಲ. ಇಡೀ ಕಾದಂಬರಿ ಬರೆದು ಕಳಿಸಬೇಡಿ. Just ಒಂದು in land letterನಲ್ಲಿ ಹಿಡಿಸುವಷ್ಟು ‘ದಿಲ್ ನೆ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದರೆ ಸಾಕು. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ನಿಮ್ಮ ಹಾಗೂ ನಿಮ್ಮ ಪತ್ನಿಯ ಫೊಟೋ (ಇಬ್ಬರೂ ಜೊತೆಗಿರುವಂಥದ್ದು) ರೆಡಿ ಇದ್ದರೆ ತಪ್ಪದೆ ಪತ್ರದೊಂದಿಗೆ ಕಳಿಸಿ ಕೊಡಿ. ಓದುಗರಾದ ನೀವು ಬರಹಗಾರರೂ ಆದರೆ, ಅದು ಬೇರೆಯದೇ ಸಂತೋಷ. ನಿಮಗೆ ಹದಿನೈದು ದಿನಗಳಷ್ಟು ಟೈಮಿದೆ. Please write.

ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 17 May, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books