Ravi Belagere
Welcome to my website
“ಇವತ್ತೇ ಫಸ್ಟ್ ಟೈಮ್!" ಡೇಟು, ಜಾಗ ಇತ್ಯಾದಿಗಳು ನೆನಪಿರಬಹುದು. ಅಷ್ಟೇ ಹೊರತು ಜೀವನದಲ್ಲಿ ಅವೆಷ್ಟೋ ಸಂಗತಿಗಳಿರುತ್ತವೆ: ‘ಇದು ಫಸ್ಟ್ ಟೈಮ್’ ಎಂದು ನೆನಪಿಟ್ಟುಕೊಳ್ಳುವಂತಹವು. ಹಾಗೆ ಅನೇಕ ಫಸ್ಟ್ ಟೈಮ್‌ಗಳು, ಮೊಟ್ಟ ಮೊದಲ ಸಿಗರೇಟು, ಮೊದಲ ಪೆಗ್, ಕೊಟ್ಟ ಮೊದಲ ಮುತ್ತು, ಮೊದಲ ಮೈಥುನ ಇತ್ಯಾದಿಗಳಿಂದ ಹಿಡಿದು, ಮೊದಲ ಫಸ್ಟ್ ಕ್ಲಾಸ್, ಮೊದಲ ಪ್ರಕಟಿತ ಕಥೆ, ಮೊದಲ ಕಾದಂಬರಿ, ಮೊದಲ ಆಕ್ಸಿಡೆಂಟ್-ಇತ್ಯಾದಿಗಳ ಸಾಲೇ ಇದೆ. ಅದೆಲ್ಲ ಇರಲಿ: ನಿಮ್ಮ ಬದುಕಿನ ‘ಫಸ್ಟ್ ಟೈಮ್’ಗಳ ಬಗ್ಗೆ ನೀವೇ ಹೇಳಿ. ಒಂದು ನೆನಪನ್ನು ‘ದಿಲ್ ನೇ ಫಿರ್ ಯಾದ್’ ಅಂಕಣಕ್ಕೆ ಕಳಿಸುತ್ತೀರಾ? Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ಜಾಸ್ತಿ ಟೈಮಿಲ್ಲ ದೊರೆ: ಬೇಗ ಬರೆದು ಕಳಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಹೆಂಗಿತ್ತು ಧಣಿಗಳೇ ಗಾರ್ಮೆಂಟ್ ಸೋದರಿಯರ ಏಟು?

ಅಷ್ಟಿಷ್ಟು ಅನಾನುಕೂಲ ಪ್ರಜೆಗಳಿಗಾಯಿತು. ಟ್ರಾಫಿಕ್ ಪೂರ್ತಿ ಕಂಟ್ರೋಲ್ ತಪ್ಪಿತ್ತು. ಬಸುರಿ, ಬಾಣಂತಿಯರು, ರೋಗ ಪೀಡಿತರು, ಪರೀಕ್ಷೆಗಳಿಗೆ ಹೋಗೋ ವಿದ್ಯಾರ್ಥಿಗಳು ಕೊಂಚ ತೊಂದರೆ ಅನುಭವಿಸಿದರೆನ್ನೋದೂ ನಿಜವೇ. ಬೆಂಗಳೂರಿನ ಸಾವಿರಾರು ಗಾರ್ಮೆಂಟ್ ನೌಕರರಾದ ಹೆಣ್ಣುಮಕ್ಕಳು ಪೊಲೀಸರ ಲಾಠಿಗೆ ಬೆನ್ನು ನೀಡಿದ್ದಾಯಿತು. ಹಾಗಂತ ಅವರೇನು ಸುಮ್ಮನಿದ್ದರಾ? ತಿರುಗಿಕೊಂಡು ಬಲವಾಗಿ ಕಲ್ಲು ಬೀಸಿ ಪೊಲೀಸರದೂ ತಲೆ ಬುರುಡೆ ಒಡೆದರು.

ಇದರಲ್ಲಿ nothing is unexpected. ಹಿಂದಿನ ರಾತ್ರಿಯಿಂದಲೇ ಪೊಲೀಸರು alert ಆಗಿ ಬಂದೋಬಸ್ತ್ ಮಾಡೋ ಪ್ರಯತ್ನ ಮಾಡಿದರು. ಹಿರಿಯ ಅಧಿಕಾರಿಗಳೂ ಬೀದಿಗಿಳಿದು ಸೂಕ್ಷ್ಮ ಪ್ರದೇಶಗಳಲ್ಲಿ ಹೊಂಚಿ ಕುಳಿತರು.

ಆದರೆ ಗಾರ್ಮೆಂಟ್ ಫ್ಯಾಕ್ಟರಿಗಳಿಂದ ಹೊರಬಿದ್ದುದು ಕ್ರುದ್ಧ, ನೊಂದ, ಆವೇಶ ಭರಿತ ಸ್ತ್ರೀ ಕಾರ್ಮಿಕ ಸಮೂಹ. ಅವರನ್ನು ತಡೆಯಲುಂಟೆ? ಪೊಲೀಸರ ಲಾಠಿ, ಟಿಯರ್ ಗ್ಯಾಸು, ಹಾಳು ಮೂಳು ಯಾವುದೂ ಕೆಲಸಕ್ಕೆ ಬರಲಿಲ್ಲ. ಅವತ್ತು ಬೀದಿಗಿಳಿದ ಪ್ರತೀ ಗಾರ್ಮೆಂಟ್ ಉದ್ಯೋಗಿಯೂ ರಣ ದುರ್ಗೆ. ‘'ನಮ್ಮ ಪಿ.ಎಫ್., ನಮಗೆ ಸಿಗಲ್ವಂತೆ. ನಮಗೆ ಬೇಕಾದಾಗ ಅದನ್ನ ಎತ್ತಿಕೊಳ್ಳಲು ಇನ್ನು ಮೇಲೆ ಅವಕಾಶವಿಲ್ಲವಂತೆ!" ಎಂದು ಮಾತಾಡಿಕೊಂಡು ಸುನಾಮಿ ಅಲೆಯಂತೆ ಬೀದಿಗಿಳಿದ ಅವರನ್ನು ಯಾರೂ organise ಮಾಡಿ, train up ಮಾಡಿ ಬೀದಿಗಳಿಗೆ ಇಳಿಸಲಿಲ್ಲ. ಎಲ್ಲ ಕಾರ್ಮಿಕ ಸಂಘಟನೆಗಳೂ ಹೆಚ್ಚು ಕಡಿಮೆ ಕಮ್ಯುನಿಸ್ಟರ ಕೈಯಲ್ಲಿವೆ. ಆದರೆ ಆ ವೀರ ವನಿತೆಯರಿಗೆ ಯಾವ ಟ್ರೈನಿಂಗೂ ಬೇಕಾಗಿರಲಿಲ್ಲ. ಸಿಟ್ಟು ಮತ್ತು ಹಸಿವು ಕೊಡುವುದಕ್ಕಿಂತ ಹೆಚ್ಚಿನ ಟ್ರೈನಿಂಗು ಮತ್ಯಾವುದೂ ನೀಡಲಾರದು.

ಹೀಗೆ ಬೆಂಗಳೂರಿನಲ್ಲಿ ರಣೋತ್ಸಾಹದ ರಣರಂಗ ಎದ್ದು ಕುಳಿತಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಅಲ್ಲಿ ಭಕ್ತ ಸಂರಕ್ಷಕ ನರೇಂದರ್ ಮೋದಿ ಭಾಯಿ ಪತರಗುಟ್ಟಿ ಹೋದರು. ಅದರ ಹಿಂದೆಯೇ ಆದೇಶವೂ ಹೊರಬಿತ್ತು. ಕೇಂದ್ರ ಸರ್ಕಾರ ಪಿ.ಎಫ್ ನಿಯಮಾವಳಿಯನ್ನು ಕೂಡಲೆ ಬದಲಿಸಿ ಮೊದಲಿನ ಸ್ಥಿತಿಯೇ ಮುಂದುವರೆಸಲಾಗಿದೆ ಎಂದು ಘೋಷಿಸಿತು. ''ಪ್ರಧಾನಿ ಮೋದಿಯವರಿಗೆ ನಿಮ್ಮ ಸಂಕಟವೇನೆಂದು ನಾನು ಖುದ್ದಾಗಿ ಹೇಳ್ತೀನಿ'' ಎಂದು ಮಂತ್ರಿ ಅನಂತ್ ಕುಮಾರ್ ಅನ್ನಕ್ಕೆ ಮಜ್ಜಿಗೆ ಪಳದ್ಯ ಕಲೆಸಿ ಕೊಳ್ಳುವುದರೊಳಗಾಗಿ, ಅವರ ಬಾಸ್ ಮೋದಿ ಎಲ್ಲವನ್ನೂ ಸರಿ ಮಾಡಿದ್ದರು.

ಗಾರ್ಮೆಂಟ್‌ನಲ್ಲಿ ದುಡಿಯುವ, ಮೊನ್ನೆ ಬೀದಿಗಿಳಿದು ಬಡಿದಾಡಿದ ಎಲ್ಲ ಅಕ್ಕ ತಂಗಿಯರಿಗೂ ‘ಪತ್ರಿಕೆ’ ವಿನಮ್ರ ಬೆಂಬಲ ನೀಡುತ್ತದೆ.

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 03 May, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books