Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಇದು ನನ್ನ ಪ್ರಪಂಚದ ಓದೋ ಬರೆಯೋ ಆಟ!

ಇದೊಂಥರಾ ಮುಜುಗರವೇ.

ನಾನು ಒಳಗೆ ನನ್ನ ಮಂಚದ ಮೇಲೆ ಮಲಗಿರುತ್ತೇನೆ. ಅಲ್ಲಿ ಮಂಚ-ಬೆಡ್ಡು ಇರೋದರಿಂದಾಗಿಯೇ ಅದು ನನ್ನ ಬೆಡ್‌ರೂಮು. ಕೆಲವು ಸಲ ಅಲ್ಲೇ ಕುಳಿತು ಊಟ ಮಾಡುವುದರಿಂದಾಗಿ ಅದು ನನ್ನ ‘ಫುಡ್ ರೂಮು!’. ಅಲ್ಲೇ ನನ್ನ ಒಂದಷ್ಟು ಪುಸ್ತಕಗಳಿವೆ. ರಾಶಿ ಬಟ್ಟೆಗಳಿವೆ. ಮೊದಲು ಸಾಲು ಸಾಲಾಗಿ ಅಲ್ಲಿ ಬಾಟಲುಗಳಿರುತ್ತಿದ್ದುದರಿಂದ ಅದು ಆಗ ಬಾರ್ ಕೂಡ ಆಗಿತ್ತು. ಈಗ ಅವುಗಳಿರುತ್ತಿದ್ದ ಅಲಮಾರು ಖಾಲಿ. ಆ ರೂಮಿನಲ್ಲಿ ಟೀವಿ ಇದೆ. ನಾನೆಂದೂ ಅದನ್ನ on ಮಾಡೋದಿಲ್ಲ. ನನ್ನ ನಾಯಿಮರಿ ‘ಪ್ರೆಟ್ಟಿ’ ಅಲ್ಲಿ ಬಂದು ಖುಷಿಯಾಗಿ ಆಡುತ್ತಿರುತ್ತದೆ. ಅದಕ್ಕೀಗ ಎರಡು ವರ್ಷ ತುಂಬಿದೆ. ಒಂದೇ ಒಂದು ಇಂಚು ಬೆಳೆದಿಲ್ಲ. ಆ ಜಾತಿಯ ನಾಯಿಗಳೇ ಹಾಗೆ. I play with him. ಅಕಸ್ಮಾತ್ ನನ್ನ ಮಗ ಹಿಮವಂತ್ ಬಂದಾಗ ಅದೂ ಇದ್ದು ಬಿಟ್ಟರೆ ಮಾತ್ರ ಗಲಾಟೆಯೋ ಗಲಾಟೆ.

“ರವೀ, you look unhappy. ಈ ಉಸಿರುಗಟ್ಟೋ ಕೋಣೆಯಿಂದ ಹೊರಕ್ಕೆ ಬಾ. This room sucks you" ಅಂದಿದ್ದಳು. ಅದೇ ಆರಡಿ-ಮೂರಡಿ ಕೋಣೆಗೆ ನನ್ನ ಅಸಂಖ್ಯ ಸ್ನೇಹಿತರು ಬಂದಿದ್ದಾರೆ. ಅಪರಿಚಿತರು ಬಂದಿದ್ದಾರೆ. ಅಧಿಕಾರಿಗಳು ಬಂದಿದ್ದಾರೆ. ಚುನಾಯಿತರು ಬಂದಿದ್ದಾರೆ. ಸೋತು ಹೋದವರು ಕೂಡ! ಇಷ್ಟಕ್ಕೂ ಒಂದು ಜಾಗ ಯಾರಿಗಾದರೂ ಒಳ್ಳೆಯದನ್ನ ಅಥವಾ ಕೆಟ್ಟದ್ದನ್ನ ಮಾಡಬಹುದು ಅಂತ ನಾನು ಭಾವಿಸೋದಿಲ್ಲ. ಆದರೆ ಒಂದು ಮಾತ್ರ ನಿಜ: ನನ್ನ ಬದುಕಿನ ಸುಮಾರು ಆರು ನೂರು ಭಯಾನಕ ಹಾಗೂ ಬರ್ಬರ ದಿನಗಳನ್ನು ಅದೇ ಆರಡಿ-ಮೂರಡಿ ಕೋಣೆಯಲ್ಲಿ ಕಳೆದಿದ್ದೇನೆ. Those days were horrible.

ಅಂಥ ಕೋಣೆಗೆ ಬರೋ ಹುಡುಗರು-ಹುಡುಗಿಯರು ಹೊರಡುವ ಮುನ್ನ ಜೇಬಿನಿಂದ ಛಕ್ಕನೆ ಹಿರಿದು “ಸರ್, ಒಂದೇ ಒಂದ್ ಫೊಟೋ ಸರ್..." ಅಂದು ತಮ್ಮ ಮೊಬೈಲ್ ಝಳಪಿಸುತ್ತಾರೆ. ಮೊದಲೆಲ್ಲ ಆಟೋಗ್ರಾಫ್ ಇತ್ತು. ಈಗ ಫೊಟೋಗ್ರಾಫ್ ಬಂದಿದೆ. ನಾನು ಫೊಟೋಗೆ ಪೋಸ್ ಕೊಡುವಾಗ ತಲೆ ಕೂಡ ಬಾಚಿಕೊಳ್ಳುವುದಿಲ್ಲ. “ಇದು ನಿಮ್ ಕರ್ಮ, ತೆಕ್ಕೊಂಡ್ಹೋಗಿ" ಎಂಬಂತೆ ಕುಳಿತಿರುತ್ತೇನೆ. ಅವರಾದರೂ ಫೊಟೋ ತಮ್ಮೊಂದಿಗೆ ಇರಿಸಿಕೋ ಬಾರದಾ? ಒಯ್ದು ಫೇಸ್‌ಬುಕ್‌ಗೆ ಹಾಕ್ಕೊಳ್ತಾರೆ. ಶುರುವಲ್ಲ ಪ್ರಶ್ನಾವಳಿ? “ಯಾಕೋ, ತೆಳ್ಳಗಾಗಿದೀರಲ್ಲ? ಹುಶಾರಿಲ್ವಾ? ನಿದ್ರೆ ಮಾಡೋದಿಲ್ವಾ...?" ಎಂಬ ಪ್ರಶ್ನಾಘಾತಗಳು. ಒಂದೆರಡಾದರೆ ಸರಿ. ಉತ್ತರಿಸುತ್ತಾ ಕುಳಿತರೆ ನಾನು ಬರ್ಬಾದ್. ಫೊಟೋಗಳು ತಂದಿಡೋ ಫಜೀತಿಗಳು ಒಂದೆರಡಲ್ಲ.

ಹೊರಗಿನ ಕೋಣೆಯಲ್ಲಿ, ಅಂದರೆ ನನ್ನ main chamberನಲ್ಲಿ ಕುಳಿತರೆ ಈ ಕಾಟವಿರಲ್ಲ. ನಾನೂ ಮರ್ಯಾದಸ್ತನಂತೆ ತಲೆ ಬಾಚಿಕೊಂಡು ಕುಳಿತಿರುತ್ತೇನೆ. ಈ ಕೋಣೆ ಬರೆಯಲಿಕ್ಕೂ ಚೆಂದ. ಬೆಡ್‌ರೂಮಿನಲ್ಲಿ ಬಿದ್ದುಕೊಂಡು ಇಡೀ ಪುಸ್ತಕ ಓದಬಹುದು. ಆದರೆ ಬರೆಯಲಿಕ್ಕೆ ಇದೇ ಸರಿ. ಹಿಂದಿಯಲ್ಲಿ ಅದನ್ನ “mood ಬನ್‌ನಾ" ಅಂತಾರೆ. ನಿಜಕ್ಕೂ ಇಲ್ಲಿ ಬೇಗನೇ mood set ಆಗುತ್ತದೆ. Mood ಸರಿಯಿದ್ದರೆ ಸಾಕಲ್ಲ? ಅದೆಷ್ಟು ಪುಟ ಬೇಕು? ನೋಡ ನೋಡುತ್ತ ನಾಲ್ಕು ದಿನಗಳಲ್ಲಿ ಸುಮಾರು ಇನ್ನೂರ ಐವತ್ತು ಪುಟ ಬರೆದೆದ್ದು ಬಿಡುತ್ತೇನೆ.

ಅದಿರಲಿ, ಈ ಓದೋ-ಬರೆಯೋ ಆಟದಲ್ಲಿ ಸಕತ್ ಮಜಾ ಇರುತ್ತೆ ಅನ್ನೋದು ಹೌದು. ನಾನಾದರೂ ತುಂಬ laborious ಅನ್ನುವಂಥದ್ದೇನನ್ನೂ ಇತ್ತೀಚೆಗೆ ಬರೆದಿಲ್ಲ. ಸ್ವಲ್ಪ time ಕೊಡಿ.

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 25 April, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books