Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಅದು ದೈವಾಂಶ ಸಂಭೂತರು ಮಾತ್ರ ತಿನ್ನೋ ಹಣ್ಣು

ಮಾವು!

ಇನ್ನು ಶುರುವಾಗಲಿರೋದು mango mood. ಅದರಲ್ಲೂ ಇನ್ನೊಂದೆರಡು ವಾರ ಬಿಟ್ಟು ದಿಲ್ಲಿಗೆ ಹೋದರೆ, great excitement. ಒಂದೆರಡಾ ಅವು? ನಾನಾ ತರಹದ ಮಾವಿನಹಣ್ಣು. ಯಾವುದು ತಿನ್ಲಿ ಯಾವುದು ಬಿಡ್ಲಿ ಎಂಬ ಆಸೆಯಾಗುವ ಹಣ್ಣ ಸಾಲು. ಒಂದು ವಿಷಯ ನಿಮಗೆ ಗೊತ್ತಿರಲಿ: ಜಗತ್ತಿನ ಅತ್ಯಂತ ಸಮೃದ್ಧ ಹಾಗೂ ರುಚಿಯುಕ್ತ ಮಾವಿನ ಹಣ್ಣು ಬೆಳೆಯೋದು ಪಾಕಿಸ್ತಾನದಲ್ಲಿ. ಆ ಹಣ್ಣಿನ ಗಾತ್ರವೇ ಸಾಕು: ಗರ ಬಡಿದು ನೋಡುತ್ತೇವೆ. ಅದರ ವಾಸನೆಯಂತೂ ಸ್ವರ್ಗ ಸಮಾನ. ನಾನು ಅಲ್ಲಿಗೆ ಹೋದದ್ದು ಪಕ್ಕಾ ಮಾವಿನ ಬೆಳಸು ಬರುವ ಕಾಲದಲ್ಲಿ. ಒಬ್ಬನೇ ರೂಮಿನಲ್ಲಿ ಕುಳಿತು ಸಮಾ ತಿಂದು ತೇಗಿದೆ.

ನೀವೇ ನೋಡಿ: ಮಾವಿನ ಹಣ್ಣಿಗೆ ಸಮನಾದ ಈ temptationನ ಇನ್ಯಾವ ಹಣ್ಣೂ ಉಂಟು ಮಾಡಲಾರದು. ಈ ಸೇಬು ಹಣ್ಣು: ನನಗದು ಇಷ್ಟವಾಗೋದೇ ಇಲ್ಲ. I enjoy ಕಿತ್ತಳೆ, ಸಪೋಟ. ಒಂದಷ್ಟು ಪೈನಾಪಲ್. ಇವುಗಳನ್ನು ಕೂಡ ತೀರ ಮುಗಿಬಿದ್ದು ತಿನ್ನೋನೇನಲ್ಲ ನಾನು. ಮಾವಿಗೆ ಸರಿಸಮನಾದ ಇನ್ಯಾವುದೇ ಹಣ್ಣು ನಾನು ನೋಡಿಲ್ಲ. ಈ ಸೀಝನ್ನಿನ ಆರಂಭವಾಗೋದು ಮಾವಿನಕಾಯಿಂದ. ನನಗೆ ನನ್ನ ಅಮ್ಮ ನೆನಪಾಗುತ್ತಾಳೆ. ಕಸುಗಾಯಿ ಮಾವು ಕೈಲಿ ಹಿಡಿದು ಶ್ರದ್ಧೆಯಿಂದ ಒಬ್ಬಳೇ ತುರಿಯುತ್ತಿದ್ದಳು. ಅದು ಅನ್ನಕ್ಕೆ ಬಿದ್ದು, ಕೊಂಚ ವಗ್ಗರಣೆಯ ಹದ ಸೇರಿಕೊಂಡರೆ ಸಿದ್ಧವಾಗೋ ಚಿತ್ರಾನ್ನಕ್ಕೆ ಇನ್ನೊಂದು ಸಮನುಂಟೆ? ಅಮ್ಮ ತುಂಬ ರುಚಿಯಾದ ಒಂದು instant ಉಪ್ಪಿನಕಾಯಿ ಮಾಡುತ್ತಿದ್ದಳು. ಅದು ‘ಬಿಸಿಯುಪ್ಪಿನ ಕಾಯಿ’. ಅದೊಂದು ವಾರ-ಹತ್ತು ದಿನಗಳ ಮಟ್ಟಿಗೆ ಕೆಡದೆ ಉಳಿದೀತು. ಅದನ್ನು ಬಿಸಿ ಅನ್ನಕ್ಕೆ ಬೆರೆಸಿ ತಿನ್ನದವನೇ ಪಾಪಿ.

ಅದಾದ ನಂತರವೇ ಶುರು: ಅಮ್ಮನ ಉಪ್ಪಿನಕಾಯಿ factory. ವಿಪರೀತ ಶ್ರಮ ಅದು. ಮೂರ‍್ನಾಲ್ಕು ಮನೆಯ ಹೆಣ್ಣುಮಕ್ಕಳು ಸೇರಿ ಮಾವಿನಕಾಯಿ ಉಪ್ಪಿನಕಾಯಿ ಮಾಡೋರು. ಅದಕ್ಕೆ ಸರಿ ಹೋಗುವ ಮಾವಿನಕಾಯಿ ತಾನೇ ಹುಡುಕಾಡಿ ತರೋಳು ಅಮ್ಮ. ಅದರ ಖ್ಯಾತಿ ಎಷ್ಟಿತ್ತೆಂದರೆ ಅಮೆರಿಕದಲ್ಲಿ ನೆಲೆಗೊಂಡಿರುವ ನನ್ನ ಅಣ್ಣನ ಮಗ ‘ಅಜ್ಜಿ ಮಾಡಿದ ಉಪ್ಪಿನಕಾಯಿ’ ಅಂತ ಆಸೆಯಿಂದ ಅಮೆರಿಕಕ್ಕೆ ಒಯ್ಯುತ್ತಿದ್ದ. ಆ ಉಪ್ಪಿನಕಾಯನ್ನು ಇಡೀ ವರ್ಷ ತಿನ್ನಬಹುದು. ಒಂದೇನೆಂದರೆ ಆ ಉಪ್ಪಿನಕಾಯಿ stock ಮಾಡಿಡುವ ‘ಜಾಡಿ’ಗೆ ನೀರು ಮುಟ್ಟಿಸಬಾರದು. ಆ ಉಪ್ಪಿನಕಾಯಿಗೆ ಯಥಾಪ್ರಕಾರ ಬಿಸಿ ಅನ್ನ ಮತ್ತು ಕಡ್ಲೇಕಾಯಿಯ ಎಣ್ಣೆ ಬೆರೆಯಬೇಕು. ಕಚ್ಚಿಕೊಳ್ಳಲಿಕ್ಕೆ ಒಂದು ಈರುಳ್ಳಿ! ದೈವಾಂಶ ಸಂಭೂತರು ಮಾತ್ರ ಅಂಥ ಉಪ್ಪಿನಕಾಯಿಯನ್ನು ತಿನ್ನಲು ಸಾಧ್ಯ.

ನಾವು ಬಡವರು ನಿಜ. ಆದರೆ ಈ ತೆರನಾದ ಖುಷಿಗಳಿಗೆ ಯಾವ ಶ್ರೀಮಂತಿಕೆಯ ಹಂಗು? ಈಗ ಬೇಸರವಾಗುತ್ತೆ. ಒಂದು ಡಯಾಬಿಟಿಸ್ ಸಾಲದು ಅಂತ, ಅದಕ್ಕೆ ಬಿ.ಪಿ. ಜೊತೆಯಾಗಿದೆ. ಉಪ್ಪಿನಕಾಯಿ ಮುಟ್ಟಲೇ ಬೇಡಿ ಅನ್ನುತ್ತಾರೆ ಡಾಕ್ಟರ್. ಅವರ ನಿರ್ದಯತೆಗೆ ಸಮಾನವಾದದ್ದು ಬೇರೆ ಯಾವುದಿದೆ? ನಮಗೆ ಯಾವುದು ತುಂಬ ಇಷ್ಟವೋ, ಅದನ್ನೇ ತಿನ್ನಬಾರದೆಂಬ ಪಥ್ಯ. ಕೆಲವು ಸಲ ತೊಡೆ ತಟ್ಟಿ ‘ಆಗಿದ್ದಾಗಿ ಬಿಡ್ಲಿ’ ಅಂತ ಪಥ್ಯ ಬದಿಗಿಟ್ಟು ಉಪ್ಪಿನಕಾಯಿ ತಿಂದುಬಿಡುತ್ತೇನೆ. ಪತ್ರೀ ವರ್ಷ ಹಿಂದೂಪುರದಿಂದ ನನಗೆ ಉಪ್ಪಿನಕಾಯಿ ತಂದು ಕೊಡುತ್ತಾಳೆ ನನ್ನ ಲೀಲಕ್ಕ. ಅವಳಿಗಿನ್ನೂ ಉಪ್ಪಿನಕಾಯಿ, ಉದ್ದಿನ ಹಪ್ಪಳ ಮುಂತಾದವುಗಳನ್ನು ಮಾಡೋ ಸಹನೆ ಮತ್ತು ಶಕ್ತಿ ಉಳಿದಿದೆ. ನಾನು ಅದೃಷ್ಟವಂತ.

“ಈ ಸಲದ ಮಾವಿನ ಹಣ್ಣು ಮಾರ್ಕೆಟ್ಟಿಗೆ ಬರಲಿ!" ಎಂದು ನನಗೆ ನಾನೇ ಹೇಳಿಕೊಳ್ಳುತ್ತಿದ್ದೇನೆ. ಆ ಸಿಹಿ ಮಾವು ತಿಂದರೆ ಕೊಂಚ ಷುಗರು ತಲೆ ಎತ್ತೋದು ನಿಜ. ಅದು ‘ಹೆಚ್ಚಾದರೆ ಹೆಚ್ಚಾಗಲಿ ಬಿಡಿ’ ಅಂದುಕೊಂಡು ಮಟ್ಟಸವಾಗಿ ಕುಳಿತು ತಿಂದು ಬಿಡುತ್ತೇನೆ. ನನ್ನ care taker ರಾಮರೆಡ್ಡಿ ತನ್ನ ಊರಿನಿಂದ ಹಣ್ಣು ತರುತ್ತಾನೆ. ಅದು ಗೊಬ್ಬರ ಹಾಕದೆ, ಬಣ್ಣ ಹಾಕದೆ, ಮರದಲ್ಲೇ ಹಣ್ಣಾಗಲು ಬಿಟ್ಟಂಥ ಹಣ್ಣು. ಅವನಿಗೋಸ್ಕರ ಕಾಯ್ದು ಕೂತು ಆ ಹಣ್ಣು ಸವಿಯುತ್ತೇನೆ.

ಇದಕ್ಕಿಂತ ಸಂತಸ ಇನ್ನೇನಿದೆ? I enjoy. ನೀವೂ ಬನ್ನಿ. ಮನೆಯ ಮುಂದೆ ಇಳಿಸಂಜೆ ಹೊತ್ತಲ್ಲಿ ಸಾಲಾಗಿ ಜಗುಲಿಯ ಮೇಲೆ ಕುಳಿತು ಮೊಸರನ್ನ ತಿಂದು, ಮಾವಿನ ಹಣ್ಣು ಸವಿಯೋಣ. ಬರ್ತೀರಾ?

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 06 April, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books