Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಅದನ್ನು ನಿಮಗಿಂತ ಹೆಚ್ಚು ನಾನು ಮಿಸ್ ಮಾಡ್ತೇನೆ!

With all sincerity. ನಿಜಕ್ಕೂ ತುಂಬ ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ಕೆಲವೇ ವಾರಗಳೊಳಗಾಗಿ ‘ಓಮನಸೇ...’ ಪುನರಾರಂಭಿಸುತ್ತಿದ್ದೇನೆ. ನಿಮಗಿಂತ ಹೆಚ್ಚಾಗಿ ಆ ಪಾಕ್ಷಿಕವನ್ನು ನಾನು miss ಮಾಡಿಕೊಳ್ಳುತ್ತಿದ್ದೇನೆ. ಅದು ಉಳಿದೆಲ್ಲ ಪತ್ರಿಕೆಗಳಂತಲ್ಲ. ನಿಜಕ್ಕೂ ಅದೊಂದು ಫ್ಯಾಮಿಲಿ ಮ್ಯಾಗಝೀನ್. “ನೀವು ಇದನ್ನು ಗುಟ್ಟಾಗಿ ಓದಿ..." ಅಂತ ಹೇಳುವಂಥ ಯಾವ ಅಂಶವೂ ಅದರಲ್ಲಿಲ್ಲ. ಎಲ್ಲ ವಯಸ್ಸಿನವರಿಗೂ, ಗಂಡಸರಿಗೂ, ಹೆಂಗಸರಿಗೂ, ಅದು ಆಪ್ತವಾಗುವ ಪತ್ರಿಕೆ. ನನಗೆ ಒಂದೇ ಸಮನೆ ಪತ್ರ ಬರುತ್ತವೆ; ಅಮೆರಿಕವೂ ಸೇರಿದಂತೆ ಅನೇಕ ದೇಶಗಳಿಂದ. ಎಲ್ಲ ವಯೋಮಾನದವರಿಂದ. ಅದೊಂದು total magazine. ಕಳೆದುಕೊಳ್ಳಲು ಖಂಡಿತ ನಾನು ಸಿದ್ಧನಿಲ್ಲ. ನಾಳೆ ‘ಹಾಯ್ ಬೆಂಗಳೂರ್!’ಗೆ ವಿರಾಮ ಕೊಟ್ಟರೆ, ನನಗಿನ್ನೇನಿದೆ ಕೆಲಸ? ಬೇರೆ ಬರೆಯಲಿಕ್ಕೆ ನೂರಿವೆ: ಪುಸ್ತಕ ಇತ್ಯಾದಿ. ಆದರೆ ಅಂಥ ಬರವಣಿಗೆಗಳು ತೀರ ಆರೋಗ್ಯ ಕೆಡಿಸುವುದಿಲ್ಲ. ವಿಪರೀತ time ಕೇಳುವುದೂ ಇಲ್ಲ.

‘ಓ ಮನಸೇ...’ ತುಂಬ ಶ್ರಮ ಕೇಳೋದು ನಿಜ. ಶ್ರಮ ಅನ್ನೋದಕ್ಕಿಂತ ತುಂಬ attention ಕೇಳುವುದು ನಿಜ. ಅದಕ್ಕೆ ಉದಯ ಮರಕಿಣಿ ಹೇಳಿ ಮಾಡಿಸಿದಂತಿದ್ದ. ಅವನು ಅಪ್ಪಿತಪ್ಪಿಯೂ ಕೆಲಸ neglect ಮಾಡುತ್ತಿರಲಿಲ್ಲ. ಮೊದಲಿಂದಲೂ ಅವನು magazine man. ಅವನೆಂದೂ ದಿನ ಪತ್ರಿಕೆಯ ವರದಿಗಾರಿಕೆ ಮಾಡಿದವನಲ್ಲ. ಸಿನೆಮಾ ವರದಿಗಾರಿಕೆ ಇತ್ತು. ಅದು ಕೂಡ ಮ್ಯಾಗಝೀನ್‌ಗೆ ಬರೆದಂತೆಯೇ ಅಲ್ವಾ? ಅದರಲ್ಲೂ ಅವನು ತುಂಬ ಎಚ್ಚರಿಕೆಯಿಂದ ಕೆಲಸ ನಿಭಾಯಿಸುತ್ತಿದ್ದ. ಅವನನ್ನ replace ಮಾಡೋದು ತುಂಬ ಕಷ್ಟ. ನಾನು ಕೆಲವು ಸ್ನೇಹಿತರನ್ನು ವಿಚಾರಿಸುತ್ತಿದ್ದೇನೆ, ‘ಬರುತ್ತೀರಾ’ ಅಂತ. ಏನಲ್ಲವೆಂದರೂ ಐದು ಜನ ಬೇಕು.

ಅದೆಲ್ಲಕ್ಕಿಂತ, ಮಾನಸಿಕವಾಗಿ ನಾನು ಸಜ್ಜಾಗಿದ್ದೇನೆ. ನನಗೆ ಬೇರೆ ಏನಿದೆ? ಏನು ಮಾಡಲಿಕ್ಕೂ ನನಗೆ ಬರುವುದಿಲ್ಲ. ಮಾಡೋದನ್ನೇ ತುಂಬ ವೈನಾಗಿ ಮಾಡಬೇಕು. ಅಲ್ಲದೆ, ನನಗೆ ಅನ್ನ ಮತ್ತು ಆತ್ಮ ಸಂತೋಷ ಅದೇ ಅಲ್ಲವೇ? ನೀವು ಬರವಣಿಗೆ ವಿಷಯದಲ್ಲಿ ನನ್ನನ್ನು ನಂಬುತ್ತೀರಿ. ಆ ಸಂಗತಿ ನನಗೆ ಗೊತ್ತಿದೆ. ನಂಬಿಕೆ ಹುಸಿ ಹೋಗಲಿಕ್ಕೆ ನಾನು ಬಿಡುವುದಿಲ್ಲ.

ಇವತ್ತಿನ ಮಟ್ಟಿಗೆ ಹೇಳುವುದಾದರೆ ಆ ‘ಪತ್ರಿಕೆ’ಯ ಪುಟ ಸಂಖ್ಯೆ ಮತ್ತು ಬೆಲೆ ಎರಡನ್ನೂ ಹೆಚ್ಚು ಮಾಡಲು ಸಾಧ್ಯವಿಲ್ಲ. Quality ದೃಷ್ಟಿಯಿಂದ ತೀರ ಕಚಡ ಎಂಬಂತಹ ನ್ಯೂಸ್ ಪ್ರಿಂಟ್ ಮಾರುಕಟ್ಟೆಯಲ್ಲಿದೆ. ಬೇರೆ ದಾರಿ ಇಲ್ಲ. ಅದನ್ನೇ ಹಾಕಬೇಕು. ತುಂಬ ಕೆಟ್ಟ ಹಾಳೆಯಲ್ಲಿ ಏನನ್ನು ಮುದ್ರಿಸಿದರೂ ಅದರ ‘ಚೆಂದ’ ಹೊರಟು ಹೋಗುತ್ತದೆ. ತೀರ ಇಂಗ್ಲಿಷಿನ ‘ಇಂಡಿಯಾ ಟುಡೆ’ ಪತ್ರಿಕೆಗೆ ಹಾಕುವಂಥ ಹಾಳೆ ಹಾಕಲು, ಕನ್ನಡ ಪತ್ರಿಕೋದ್ಯಮ ಶಕ್ತವಲ್ಲ. ಬಿಡಿ, ಊರಿಗೆ ಮುಂಚೆ ಬೆಲೆ-ಕ್ವಾಲಿಟಿ ಅಂತೆಲ್ಲ ಮಾತನಾಡೋದು ಸರಿಯಲ್ಲ. ಚೆಂದಗೆ ಬರೆದು ಕೊಟ್ಟರೆ ನೀವು ಸಂತೋಷದಿಂದ ರಿಸೀವ್ ಮಾಡುತ್ತೀರಿ. ಹಾಗೆ ಪ್ರಸಾರ ಸಂಖ್ಯೆ build up ಮಾಡೋದು ನನಗೆ ಗೊತ್ತಿರದ ಕಸುಬೇನಲ್ಲ. Let me do it.

ನಿಮ್ಮ ಮನಸುಗಳು ನನ್ನ ಮನಸಿನೊಂದಿಗಿರಲಿ.

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 30 March, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books