Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಇದೇನಿದು, ನನ್ನ ಕುರಿತು ಡಾಕ್ಟರೇಟ್ ಪದವಿ?

ಮೊನ್ನೆ ನನ್ನ ಛೇಂಬರಿನಿಂದ ಹೊರ ಬಂದವನು ತಲೆಯೆತ್ತಿ ನೋಡಿದೆ. ಜನ ತುಂಬ ಇದ್ದರು. ಅವರೆಲ್ಲ ನನ್ನ ಓದುಗರು, ಕೆಲವು ಸ್ನೇಹಿತರು, ನಮ್ಮ ಸಿಬ್ಬಂದಿ ಮಿತ್ರರು ಅವರೆಲ್ಲ ನನ್ನ birthdayಗೆ ಶುಭ ಕೋರಲು ಬಂದವರು. ಅವರ ಮಧ್ಯೆ ಅದೊಂದು ಮುಖ ಫಕ್ಕನೆ ಕಣ್ಸೆಳೆಯಿತು. ಅಷ್ಟರಲ್ಲಿ ನಮ್ಮ ಲೋಕೇಶ್ ಕೊಪ್ಪದ್ ಓಡಿ ಬಂದು “ಬಾಸ್, ಇವರಿಗೆ ಮೊನ್ನೆಯಷ್ಟೆ ಡಾಕ್ಟರೇಟ್ ಸಿಕ್ಕಿದೆ!" ಅಂದ. ತಕ್ಷಣ ನೆನಪಾಯಿತು. ಈ ಹುಡುಗ ಬಸವರಾಜನಲ್ಲವೇ? Yes, ಬಸವರಾಜ ಅಯ್ಯಪ್ಪ ಅಂತ. ನನ್ನ ಬಳ್ಳಾರಿ ಜಿಲ್ಲೆಯ ಪಕ್ಕದ ರಾಯಚೂರು ಜಿಲ್ಲೆಯವನು. ಅವನದು ಮಾನ್ವಿ ತಾಲೂಕು-ಹಿಂದೆ ಒಂದೆರಡು ಸಲ ಬಂದಿದ್ದ. ‘ಏನ್ ತಮ್ಮಾ’ ಅಂದೆ.

ಹಾಗೆ ಅನೇಕರು ಬರುತ್ತಿರುತ್ತಾರೆ. ‘ನಾನು ನಿಮ್ಮ ಬಗ್ಗೆ ರಿಸರ್ಚ್ ಮಾಡ್ತೇನೆ’ ಅನ್ನುತ್ತಾರೆ. ನಾನು ಅಷ್ಟಾಗಿ ಕಿವಿಯ ಮೇಲೆ ಹಾಕಿಕೊಳ್ಳುವುದಿಲ್ಲ. ಮೊದಲು ನಿವೇದಿತಾಳ ಕಡೆಗೆ ಬೆರಳು ತೋರಿಸಿ ಸುಮ್ಮನಾಗಿ ಬಿಡುತ್ತಿದ್ದೆ. ಈಗಲಾದರೂ ಅಷ್ಟೆ. ಆದರೆ ಬಸವರಾಜನ ಕೈಯಲ್ಲಿ ಒಂದು ರೆಟ್ಟೆ ಗಾತ್ರದ ಪುಸ್ತಕವಿತ್ತು. ಅದು ಅವನಿಗೆ ಪಿ.ಎಚ್.ಡಿ. ತಂದುಕೊಟ್ಟ ಮಹಾಪ್ರಬಂಧ. ಅಂದರೆ, ಥೀಸಿಸ್. ಫಕ್ಕನೆ ನನಗೆ ಕಣ್ಣು ತುಂಬಿ ಬಂದವು. ಅದರ ಮೇಲೆ ಸ್ಪಷ್ಟ ಅಕ್ಷರಗಳಲ್ಲಿ “ರವಿ ಬೆಳಗೆರೆಯವರ ಸಾಹಿತ್ಯ ಮತ್ತು ಭಾಷೆ" ಅಂತ ಬರೆಯಲಾಗಿತ್ತು. ನಾನು ಡಾ.ಬಸವರಾಜ ಅಯ್ಯಪ್ಪ ಎಂಬ ಮಿತ್ರನ ಹೆಗಲ ಮೇಲೆ ಸುಮ್ಮನೆ ಕೈ ಇರಿಸಿದೆ.

ಒಂದು ಡಾಕ್ಟರೇಟ್ ಪಡೆಯಬೇಕು ಎಂಬುದು ನನ್ನ ಮಹದಾಸೆ. ಆದರೆ ಅದಕ್ಕೆ ಟೈಮೆಲ್ಲಿಯದು? ಗೌರವ ಡಾಕ್ಟರೇಟ್ ಪಡೆಯುವುದೆಂದರೆ ಅದು ಬಕೀಟು ವ್ಯವಹಾರವೇ. ಮಹಾ ಕವಿ ಬೇಂದ್ರೆಯವರಿಗೆ ಡಾಕ್ಟರೇಟ್ ದೊರೆಯುವುದಕ್ಕೆ ಮುಂಚೆ ಅನೇಕರು ಬೇಂದ್ರೆಯವರ ಮೇಲೆ ರಿಸರ್ಚ್ ಮಾಡಿ ಡಾಕ್ಟರೇಟ್‌ಗಳನ್ನು ಪಡೆದಿದ್ದರು. “ನೀವೇನು ಡಾಕ್ಟರೇಟ್ ಕೊಡ್ತೀರೋ? ನಾನು ಹುಟ್ಟಾ ಈ.. ಇದ್ದೀನಿ. ದತ್ತಾತ್ರೇಯ ರಾಮಚಂದ್ರ ಬೇಂದ್ರೆ ನಾನು!" ಅಂದಿದ್ದರು ಬೇಂದ್ರೆ. ನಾನು ಅವರಿಗೆ ನನ್ನನ್ನು ಹೋಲಿಸಿಕೊಳ್ಳುವ ಚೀಪ್ ಕೆಲಸಕ್ಕೆ ಖಂಡಿತ ಹೋಗುತ್ತಿಲ್ಲ.

ಆದರೆ ಒಂದು ಡಾಕ್ಟರೇಟ್ ಪಡೆಯುವುದು ನನ್ನ ಅತಿ ದೊಡ್ಡ ಕನಸು. ಈ ಹುಡುಗ ಕಷ್ಟಪಟ್ಟು ಕೆಲಸ ಮಾಡಿ, ರಿಸರ್ಚ್ ಮಾಡಿ ಡಾಕ್ಟರೇಟ್ ಪಡೆದಿದ್ದಾನೆ. I congratulate him. ರಿಸರ್ಚ್ ಮಾಡೋದು ಕಡಿಮೆ ಮಾತಲ್ಲ. ಸುಲಭವೂ ಅಲ್ಲ. ಈ ಹುಡುಗ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದಿದ್ದಾನೆ. ಅವನಿಗೆ ಈ ರವಿ ಎಂಬ ಬೆಳಗೆರೆಯ ಕುರಿತು ರಿಸರ್ಚ್ ಮಾಡಬೇಕು ಅನ್ನಿಸಿತಲ್ಲ? ಅವನಿಗೆ ಋಣಿ. ಅದೇ ಹಂಪಿಯಲ್ಲಿ ನಾನು ರಿಸರ್ಚ್ ಹೆಸರಿನಲ್ಲಿ ಎಂಟು ತಿಂಗಳು ಕಳೆದೆ. ಮಾಡಿದ್ದು ಬೇರೆಯದೇ ಕಾಮಗಾರಿ: ಅದು ಹಾಗಿರಲಿ. ಆಗಿನ್ನೂ ಅಲ್ಲಿ ವಿಶ್ವವಿದ್ಯಾಲಯವಿರಲಿಲ್ಲ. ಈ ಹುಡುಗ ಏನೆಲ್ಲ ಕಷ್ಟಪಟ್ಟನೋ, ಕಾಣೆ. ನನ್ನ ಸಾಹಿತ್ಯ ಮತ್ತು ನನ್ನ ಭಾಷೆ ಅವನಿಗೆ ಹೇಗೆ ಸಿಕ್ಕವೋ? ಹೇಗೆ ದಕ್ಕಿದವೋ? ನಾನಿನ್ನೂ ಅವನ ಮಹಾಪ್ರಬಂಧವನ್ನು ಓದಿಲ್ಲ.

ಅವನಿಗೆ ನಾನು ಋಣಿ. ರಿಸರ್ಚ್‌ಗೆ guidance ನೀಡಿದ್ದು ಅವನ ಪ್ರೊಫೆಸರರಾದ ಡಾ.ಸಾಂಬಮೂರ್ತಿಯವರು. ಅವರಿಗೂ ನನ್ನ ನಮಸ್ಕಾರಗಳು. ಹೀಗೆ ಕೊಂಚ ವಯಸ್ಸಾದ ಮೇಲೆ ಸಂತಸಗಳು ಹುಡುಕಿಕೊಂಡು ಬಂದಾಗ ಖುಷಿಯಾಗುತ್ತದೆ. It gives a thrill.

ಅದನ್ನು ನಿಮಗೆ ತಿಳಿಸಬೇಕಿತ್ತು.

ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 22 March, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books