Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಸಿಟ್ಟು ಬಂದರೆ ಬರಲಿ: ತೀರ hurt ಆದರೆ...?

ಭಯಂಕರ ಸಿಟ್ಟು!

ನಲ್ಮೆಯ ಗೆಳೆಯನಿಗೆ ನನ್ನ ಮೇಲೆ ಭಯಂಕರ ಸಿಟ್ಟು. ಗೆಳೆಯನ ಹೆಸರು ನಾಗತಿಹಳ್ಳಿ ಚಂದ್ರಶೇಖರ! ಅದಕ್ಕೆ ಕಾರಣಗಳೂ ಇವೆ. ಮೊದಲನೆಯದಾಗಿ, ಅವನ ಕ್ಷಮೆ ಕೇಳಬೇಕು. ನಿಮ್ಮ ಸಮಕ್ಷಮದಲ್ಲೇ ಕೇಳುತ್ತಿದ್ದೇನೆ.

ಮೊದಲನೆಯ ತಪ್ಪು ಅಂದರೆ, ಅವನ ಮಗಳ ಮದುವೆಗೆ ಹೋಗದೆ ಇದ್ದದ್ದು. ಆ ಮಗು ಕನಸು ನನ್ನ ಕಣ್ಣೆದುರಿನಲ್ಲೇ ದೊಡ್ಡವಳಾದವಳು. ಕನಸು ಪುಟ್ಟಿ ತುಂಬ ಚೆಲುವೆ. ಅದಕ್ಕಿಂತ ಮಿಗಿಲಾಗಿ ಅವಳು ಜಾಣೆ. ಕಡು ಜಾಣೆ. ಅವಳು ವಿದೇಶದಲ್ಲಿ ಓದಿದವಳು. ನಾಗ್ತಿ ಕೈಯಲ್ಲಿ ಮದುವೆ ಪತ್ರಿಕೆ ಹಿಡಿದು ಖುದ್ದಾಗಿ ಬಂದು ಆಮಂತ್ರಿಸಿದ. ನನಗಿರೋ ಹಳೇ ಖಾಯಿಲೆ ನಿಮಗೆ ಗೊತ್ತಿದೆ. ನಾನು ಮದುವೆ-ಮುಂಜಿಗಳಿಗೆ ಹೋಗುವವನಲ್ಲ. ಆ ಸಾವಿರಾರು ಜನರಲ್ಲಿ ನಾನೊಬ್ಬನು ಹೋಗದಿದ್ದರೆ ಏನಂತೆ? ಕರೆದವರಿಗೆ ನನ್ನ absense ಗೊತ್ತೂ ಆಗುವುದಿಲ್ಲ ಎಂಬ ಉಡಾಫೆ. ಆದರೆ ಕನಸು ವಿಷಯದಲ್ಲಿ ಹಾಗಾಗಲಿಲ್ಲ. ಅವಳ ಮದುವೆಯನ್ನು ನಾಗ್ತಿ ಬೆಂಗಳೂರಿನಲ್ಲೇ ಮಾಡಿದ. ಮರುದಿನ ಸ್ವಗ್ರಾಮವಾದ ನಾಗತಿಹಳ್ಳಿಯಲ್ಲಿ ಒಂದು ಸವಿಸ್ತಾರ ಕಾರ್ಯಕ್ರಮ ಇಟ್ಟುಕೊಂಡ. ಸರಿ, ನಾಗತಿಹಳ್ಳಿಗಂತೂ ಹೋಗಲಾರೆ. ಇಲ್ಲೇ ಬೆಂಗಳೂರಿನ ಸಮಾರಂಭಕ್ಕೆ ಹೋಗ್ತೀನಿ ಅಂದುಕೊಂಡು ಒಂದು ಪುಟ್ಟ gift ಕೂಡ ತಂದಿಟ್ಟುಕೊಂಡೆ. ಇನ್ನೇನು ಮದುವೆಗೆ ಹೊರಡಬೇಕು: “ಇದೇನಿದು? ನಿನ್ನೇನೇ ಬೆಂಗಳೂರಿನಲ್ಲಿ ಮದುವೆ ಮುಗೀತು. ಇವಾಗ ನಾಗತಿಹಳ್ಳಿಯಲ್ಲಿ ಶಾಸ್ತ್ರ ಆರಂಭವಾಗಿರುತ್ತೆ" ಅಂದಳು ಲಲಿತಾ. ಸಂಜೆ ಏಳೂವರೆ ಆಗ. ಹೋಗೋಣವೆಂದರೆ, ನಾಗತಿಹಳ್ಳಿಯ ತನಕ travel ಮಾಡೋ ಸ್ಥಿತಿಯಲ್ಲಿ ನಾನಿರಲಿಲ್ಲ. ಮನಸ್ಸಿಗೆ ತುಂಬ ಹಳಹಳಿಯಾಯಿತು. ಆದರೆ ಏನು ಮಾಡಲಿ? ಫೋನ್‌ನಲ್ಲಿ ಕ್ಷಮೆ ಕೇಳಿದರೆ ಅವನು ಉಗೀತಾನೆ. ಖುದ್ದಾಗಿ ಹೋಗಿ ಕಾಣೋಣ ಅಂದುಕೊಂಡೆ. ಹೋಗಲೇ ಇಲ್ಲ.

ನಂತರದ್ದು ಕರ್ಣನ ಮದುವೆ. ಅದಕ್ಕೆ ಎಲ್ಲರನ್ನೂ ಕರೆದವಳು ಲಲಿತ. ಉಳಿದಂತೆ ಚೇತನಾ-ಭಾವನಾ ಹೋಗಿ ಎಲ್ಲರನ್ನೂ invite ಮಾಡಿದರು. ನಾಗ್ತಿಯ ಮನೆ ನಾವಿದ್ದ ಮನೆಯ ಮುಂದಿನ ರಸ್ತೆಯಲ್ಲೇ ಇದೆ. ಕರೆಯಲು ಹೋಗದಿದ್ದುದು ನನ್ನ ಅಪರಾಧ. ನನಗೆ ಅದೇನು ಮಂಕು ಕವಿದಿತ್ತೋ ಕಾಣೆ. ಅನೇಕರನ್ನು ನಾನು ಖುದ್ದಾಗಿ ಹೋಗಿ ಕರೆಯಲಿಲ್ಲ. Especially, ನಾಗ್ತಿಯಷ್ಟು ಆತ್ಮೀಯರನ್ನೂ.

ಉಳಿದ ಗೆಳೆಯರಂತೆ ನಾಗ್ತಿ ನನ್ನನ್ನು ಕ್ಷಮಿಸೋನಲ್ಲ. ಸಿಟ್ಟು ಬಂದಿದೆ ಎಂಬುದಕ್ಕಿಂತ, ಅವನು hurt ಆಗಿದ್ದಾನೆ. ಅಫಘನಿಸ್ತಾನದಂಥ ಹಾಳು ಕೊಂಪೆಗೆ, ವಿಪರೀತ ರಿಸ್ಕ್ ಇರುವ ದೇಶಕ್ಕೆ ಹೋದಾಗ ಅವನು ಫೋನ್ ಮಾಡಿ “ಒಬ್ನೇ ಹೋಗಿದೀಯಲ್ಲೋ? ನಾನು ಬರ‍್ಲಾ?" ಅಂದವನು ನಾಗ್ತಿ. ತುಂಬ ಅಂತಃಕರಣದ ಮನುಷ್ಯ ಅವನು. ಗೆಳೆತನವನ್ನ ತುಂಬ ಪರ್ಸನಲ್ ಆಗಿ ತೆಗೆದುಕೊಳ್ಳುವವನು. ನಾನು ಆಸ್ಪತ್ರೆಯಲ್ಲಿದ್ದಾಗಲೂ ಅವನು ಬಂದು ನೋಡಿದ. ಅವನು ಅದೆಲ್ಲ ಮಾಡಿದ ಎಂಬ ಕಾರಣಕ್ಕೆ ನಾನು ಈ ಮಾತು ಬರೆಯುತ್ತಿಲ್ಲ: he is a warm hearted friend. ಅವನಿಗೆ hurt ಆಗಿದೆ ಎಂಬುದು ಚೆನ್ನಾಗಿ ಗೊತ್ತು ನನಗೆ.

ಇದು ಸುಲಭಕ್ಕೆ ಬಗೆ ಹರಿಯುವುದಲ್ಲ. ಅವನ ಮನೆಗೇ ಹೋಗಬೇಕು. ಅವನು ಉಗಿಯುತ್ತಾನೆ. ಮುಖವೊಡ್ಡಬೇಕು. ಆಗಲಿ. ಗೆಳೆತನ ಕಳೆದುಕೊಳ್ಳಲಾರೆ. ಯಾವುದಕ್ಕೂ ಒಂದು ಮಾತಿರಲಿ ಅಂತ ಇದನ್ನು ಬರೆದೆ.

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 14 March, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books