Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಅದೇನೇ ಇರಲಿ, ನಮ್ಮ ಮಗು ನಮಗೇ ಹುಟ್ಟಬೇಕು!

ಅದು imitation!

ಇಲ್ಲಿ ಪ್ರತಿಯೊಂದೂ ಇಮಿಟೇಶನ್ನೇ. ಮನೆಯಲ್ಲಿ ನನ್ನ ಮೊಮ್ಮಗ ಚಿಂಟು ಪೈಜಾಮಾ ಜುಬ್ಬಾ ಹಾಕಿಕೊಂಡು, ಒಂದು ಶಾಲು ಹೊದ್ದುಕೊಂಡು ಛೇರ್ ಮೇಲೆ ಕುಳಿತು ಸೀರಿಯಸ್ಸಾಗಿ ಏನನ್ನೋ ಬರೆಯುತ್ತ ಕೂಡುತ್ತಾನೆ. “ಏನೋ ಅದೂ" ಅಂತ ಲಲಿತ ಕೇಳಿದರೆ, “ಅಜ್ಜಿ ನಾನು ದಾದೂ ಥರಾ ಕತೆ ಬರೀತಿದೀನಿ. ನನ್ನನ್ನ disturb ಮಾಡಬೇಡ!" ಅನ್ನುತ್ತಾನೆ. ಅವನಿಗೆ ದಾದೂ ಇಷ್ಟ. ದಾದೂ ನಾನೇ. ಕುವೆಂಪು ಮಗ ತೇಜಸ್ವಿ, ಹಿರಿಯ ಜೀವಿ-ಆಯುರ್ವೇದ ಪಿತಾಮಹ ತಾರಾನಾಥ್‌ರ ವಾರಸುದಾರ ಪ್ರಖ್ಯಾತರಾದ ರಾಜೀವ್ ತಾರಾನಾಥ್ - ಹೀಗೆ ಅನೇಕರಿದ್ದಾರೆ. ಅವರು by birth genius ಅನ್ನೋರಿದ್ದಾರೆ. May be true. ಆದರೆ ಅವರು ಆ ಮಹಾನ್ ಜೀವಿಗಳ ರಕ್ತಕ್ಕೆ ಹುಟ್ಟದೆ ಹೋಗಿದ್ದರೆ, ಇವತ್ತು ಹೀಗೆ ಪ್ರಖರಿಸುತ್ತಿರಲಿಲ್ಲ ಅಂತ ನೀವಂದರೆ, I am sorry. ನಾನು ಒಪ್ಪೋದಿಲ್ಲ. ಅಂತರ್ಗತವಾಗಿ, gene poolನಿಂದಾಗಿ ಜಾಣರ ಮಕ್ಕಳು ಜಾಣರಾಗೋದು ಕೆಲಮಟ್ಟಿಗೆ ಹೌದು. ಆದರೆ not always. ಅಂಥ ಯಾವ gene pool ಇಲ್ಲದೆ ನೂರಾರು ಮಂದಿ ಲೇಖಕರು, ಕಲಾವಿದರು, ಹೋರಾಟಗಾರರು ನಮ್ಮ ಸುತ್ತಮುತ್ತಲೇ ಇದ್ದಾರೆ. ರಕ್ತಗತವಾಗಿ ಆ ಪ್ರಖರ ಗುಣ ಹರಿದು ಬರುವುದೇ ನಿಜವಾದರೆ ವಾಲ್ಮೀಕಿ ಮಗ ಯಾಕೆ ವಾಲ್ಮೀಕಿಯಂತೆ ಆಗಲಿಲ್ಲ? ಕುಮಾರವ್ಯಾಸನ ಮಗ?

ಆದರೆ ಮೊದಲು ಹೇಳಿದೆನಲ್ಲ; imitation? ಅದು ಮಾತ್ರ ಹಂಡ್ರೆಡ್ ಪರ್ಸೆಂಟ್ ನಿಜ. ಅಮ್ಮನ ಕೆಲವು ಗುಣಗಳನ್ನು ಬಿಟ್ಟರೆ, ನನಗೆ ಯಾವ ಸುಡುಗಾಡು ಗಾಡ್‌ಫಾದರು, ಜೀನ್ಸು , ಹೆರಿಡಿಟಿ - ಇದ್ಯಾವುದೂ ಇಲ್ಲ. I am just something. ಹೀಗೆ ಬರೆದು ಬೆಳೆದಿದ್ದೀನಲ್ಲ? ಇದಕ್ಕೆ ಕಾರಣ, ಪುರಾವೆ ಎಲ್ಲಿಂದ ತರಲಿ?

ಇಮಿಟೇಶನ್ ಅಥವಾ ಅನುಕರಣೆ ಎಂಬುದು ಎಲ್ಲದಕ್ಕಿಂತ ಹೆಚ್ಚು ಕೆಲಸ ಮಾಡುತ್ತದೆ. ಮಗುವಿಗೆ ತಂದೆ ಅಥವಾ ತಾಯಿಯ ಅನುಕರಣೆ ಕೆಲಸ ಮಾಡಿರುತ್ತದೆ. ಅವರು ತಂದೆ-ತಾಯಿಯನ್ನೇ ನೋಡುತ್ತಾ ಬೆಳೆಯುತ್ತಿರುತ್ತಾರೆ. “ಇವನು ನೋಡಿ, ನೂರಕ್ಕೆ ನೂರು ಪರ್ಸೆಂಟ್ ಅಪ್ಪನ ಮಗನೇ. ಪೂರ್ತಿ ಅದೇ ಸ್ವಭಾವ" ಅನ್ನುತ್ತಿರುತ್ತಾರೆ ಹಿಮವಂತನ ಬಗ್ಗೆ. ಅದಕ್ಕೆ ಹೆರಿಡಿಟಿ ಕಾರಣವಾ? ಇಮಿಟೇಶನ್ ಕಾರಣವಾ? ನನಗೆ ಗೊತ್ತಿಲ್ಲ. ಮಕ್ಕಳು ಹಾಗೆ ಇಮಿಟೇಟ್ ಮಾಡುತ್ತಾರೆ ಎಂಬುದೇ ಕೆಲವು ಬಾರಿ ಹೆದರಿ, ಥರಗುಡುವಂತೆ ಮಾಡುತ್ತದೆ. ಹಿಮವಂತ್ ಕೈಗೆ ಸಿಕ್ಕದೆ ತಪ್ಪಿಸಿಕೊಂಡು ಅರ್ಧ ಸಿಗರೇಟಿನಷ್ಟು ಜುರಿಕೆ ಎಳೆಯುವಷ್ಟರಲ್ಲಿ ನಾನು ಹೈರಾಣ. ಮೊದಲು ಕುಡಿಯುವಾಗ ಈ ಸಮಸ್ಯೆ ಇನ್ನೂ ತೀವ್ರವಾಗುತ್ತಿತ್ತು. “ಅಪ್ಪಾ ...ನೀವು cool drinks ತಗೋಬೇಡಿ" ಅಂತ ಅವನು ಮೊದಲ ಸಲ ಹೇಳಿದಾಗ ಧರೆಗಿಳಿದು ಹೋಗಿದ್ದೆ. ಎರಡನೇ ಸಲ ಹೇಳುವ ಅವಕಾಶವನ್ನು ಅವನಿಗೆ ನಾನು ಕೊಡಲಿಲ್ಲ.

ನೆನಪಿರಲಿ, ಇದು ಮಕ್ಕಳ ಇಮಿಟೇಶನ್‌ಗೆ ಮುಗಿದು ಹೋಗುವ ಸಂಗತಿ ಅಲ್ಲ. ನಾನು ಸ್ವತಂತ್ರವಾಗಿ ‘ಪತ್ರಿಕೆ’ ಆರಂಭಿಸುವ ಮುನ್ನ ‘ಲಂಕೇಶ್ ಪತ್ರಿಕೆ’ಯಲ್ಲಿ ಕೆಲಸ ಮಾಡುತ್ತಿದ್ದೆ. ಆದರೆ ಲಂಕೇಶರ ಸ್ನೇಹ, ಸಾನ್ನಿಧ್ಯ ನನಗೆ ಸಿಗಲಿಲ್ಲ. ಯಾರೋ ದೊಡ್ಡವರ ನೆರಳಿನಲ್ಲಿ ನಾನಿರಬೇಕು ಅಂತ ನನಗೆ ಅನ್ನಿಸಿಯೇ ಇಲ್ಲ. ಆಫೀಸಿಗೆ ಹೋದರೆ ಲಂಕೇಶರ ಆಳು ಬಸವರಾಜ್ ಸಿಗುತ್ತಿದ್ದ. ''ಆ ವಿಷಯದ ಕುರಿತು ವರದಿ ಕೊಡಬೇಕಂತೆ" ಎಂದು ಹೇಳುತ್ತಿದ್ದ. ನನ್ನಿಂದ ಅದನ್ನು ಬರೆಸಬೇಕು ಅಂತ ಲಂಕೇಶ್‌ಗೆ ಅನ್ನಿಸಿ ಅವರು ತಮ್ಮ ಆಳು ಬಸವರಾಜನಿಗೆ instruct ಮಾಡಿರುತ್ತಿದ್ದರು. ಎಲ್ಲೋ ಒಂದೆರಡು ಸಂದರ್ಭಗಳಲ್ಲಿ ಲಂಕೇಶ್ ಜೊತೆ ಮುಖಾಮುಖಿಯಾದದ್ದು ಬಿಟ್ಟರೆ ಉಹುಂ, ಅವರನ್ನು ನಾನು imitate ಮಾಡುವಷ್ಟು ಹತ್ತಿರದವನಾಗಲೇ ಇಲ್ಲ. Fine, ಅದೊಂದು ಉಪಕಾರ ಅವರದು.

ಆದರೆ ಬರಹದ ಇಮಿಟೇಷನ್? ನನ್ನನ್ನು ಹೆದರಿಸುತ್ತಿದ್ದುದೇ ಅದು. ಲಂಕೇಶ್ ಆ ವಿಷಯದಲ್ಲಿ ತಮ್ಮ peakನಲ್ಲಿ ಇದಿರಾದ ಯಾರನ್ನೂ ಏಳಲು ಬಿಡಲಿಲ್ಲ. ಸದೆ ಬಡಿದು ಹಾಕಿದ್ದರು. ಅವರದೇ ಖಾಸಾ ಖಾಸಾ ಶಿಷ್ಯರು ಅತ್ಯಂತ ಉತ್ಸಾಹದಿಂದ ಮಾಡಿದ ‘ಈ ವಾರ’ ಪತ್ರಿಕೆ ಬರಕತ್ತಾಗಲಿಲ್ಲ. ಇನ್ನೊಬ್ಬ ಶಿಷ್ಯ (ಹೆಸರು ಮರೆತಿದೆ) ಮಾಡಿದ ಪತ್ರಿಕೆಯಾದರೂ ಬೋಲ್ತಾ ಹೊಡೆಯಿತು. ಮತ್ತೊಬ್ಬ ಶಿಷ್ಯ ಚಂದ್ರಶೇಖರ ತಗಡೂರು ಕೊಂಚ ಭರವಸೆ ಮೂಡಿಸಿ, ಅಷ್ಟರಲ್ಲೇ ಬಿತ್ತಿ ಹೋಗಿಬಿಟ್ಟ. ಲಂಕೇಶ್‌ರನ್ನು ಹಾಗೆ ಅನುಕರಿಸಿದವರು ಸಾಕಷ್ಟಿದ್ದಾರೆ. ಯಾರೂ ಬರಕತ್ತಾಗಲಿಲ್ಲ. ಆ ದಿನಗಳಲ್ಲಿ ನನಗಿದ್ದ ಸವಾಲೇ ಅದು. ಅವರ imitation ಮಾಡಲೇಬಾರದು. ಹಾಗಾದರೆ ಏನು ಮಾಡಬೇಕು? ಹಾಗೆ ನಾನು ದಿನಗಟ್ಟಲೆ, ವಾರಗಟ್ಟಲೆ ತಿಂಗಳುಗಟ್ಟಲೆ ಯೋಚಿಸಿದ್ದೇನೆ. ಪುಟ ವಿನ್ಯಾಸದಿಂದ ಹಿಡಿದು ಸುದ್ದಿಯ ತನಕ ಎಲ್ಲೆಲ್ಲೂ ಅವರ ಅನುಕರಣೆ ಮಾಡದೆ ಇದೊಂದು ‘ಹಾಯ್ ಬೆಂಗಳೂರ್!’ ಎಂಬ ಕೈ ಬಾಂಬು ಎಸೆದು ಬಿಟ್ಟೆ. And I was successful. ಮುಂದೆ ನನ್ನನ್ನು ಇಮಿಟೇಟ್ ಮಾಡಿದವರು ನೂರಾರು ಜನ! ಅವರಲ್ಲಿ ಕೆಲವರು ಇವತ್ತಿಗೂ ಏದುಸಿರು ಬಿಡುತ್ತಿದ್ದಾರೆ. ಉಹುಂ, ಅವರಿಗೆ ಭವಿಷ್ಯವಿಲ್ಲ. ಅವರು ಅನುಕರಣೆಯಿಂದ ತಪ್ಪಿಸಿಕೊಳ್ಳಲೇಬೇಕು. ಇಲ್ಲದಿದ್ದರೆ ಸೈನೇಡ್ ಗುಳಿಗೆ ತಪ್ಪದು. At least, ನನ್ನ ಶೈಲಿಯಿಂದ ಬಚಾವಾಗಬೇಕು.

ನಾನು ‘ಓ ಮನಸೇ’ ಮಾಡಿದೆನಲ್ಲ? ಕನ್ನಡದ ಮಟ್ಟಿಗೆ ಅಂಥ ಪತ್ರಿಕೆ ಇನ್ನೊಂದಿಲ್ಲ. ಅದು first of its kind. ಆದರೆ ಆ ಪತ್ರಿಕೆ ಕೂಡ ಒಂದು ಇಮಿಟೇಶನ್ ಎಂಬುದು ಗೊತ್ತೆ? Yes, ಅದು ತೆಲುಗಿನ ‘ರೇಪು’ ಎಂಬ ಪತ್ರಿಕೆಯ simple imitation! ಅದನ್ನು ನಾನು ಮುಚ್ಚಿಟ್ಟುಕೊಳ್ಳುವುದಿಲ್ಲ. ಮೂವತ್ತು ವರ್ಷಗಳ ಹಿಂದಿನ ಪತ್ರಿಕೆ ಅದು. ಅದರ ಹಳೇ ಪ್ರತಿಗಳನ್ನು ಇವತ್ತಿಗೂ ಸ್ವಂತ ಆಸ್ತಿಯೇನೋ ಎಂಬಂತೆ ಇರಿಸಿಕೊಂಡಿದ್ದೇನೆ. ಅನುಕರಣೆ ಎಂಬುದನ್ನು ನಾನು ಪೆದ್ದನಂತೆ ‘ಡಿಟೋ ಡಿಟೋ’ ಮಾಡಲಿಲ್ಲ. 'ಓ ಮನಸೇ’ಯಲ್ಲಿ ಸಾಕಷ್ಟು ಪ್ರತಿಭೆ ನನ್ನದಿದೆ.

ಒಟ್ಟಾರೆ ನಾನು ಹೇಳುವುದೇನೆಂದರೆ, ಅನುಕರಣೆ ಎಂಬುದು ಅನಿವಾರ್ಯ. ಆದರೆ ಅದರಲ್ಲಿ ನಮ್ಮ ಸ್ವಂತಿಕೆ ಇರಬೇಕು. ನಮ್ಮ ಮಗು ನಮಗೇ ಹುಟ್ಟಬೇಕು. ಅಷ್ಟೆ.

-ರವೀ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 09 March, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books