Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಪುಟ್ಟ ಹೊಟೇಲಿನ ಚಹ ಕಪ್ಪುಗಳ ಕಿಂಕಿಣಿಯಲ್ಲಿ

ಬರೆಯುತ್ತಿರುವ ಲೇಟೆಸ್ಟ್ ಪುಸ್ತಕ. ಅದರೊಂದಿಗೇ ಬಿಡುಗಡೆ ಕಾಣಬೇಕಾಗಿರುವ ಇನ್ನಿತರೆ ಪುಸ್ತಕಗಳು ಮೈಕೈ ಹಣ್ಣು ಮಾಡುತ್ತಿವೆ. ಈಗ ನಿವೇದಿತಾ ಕೂಡ ಇಲ್ಲ. ಅವಳಿದ್ದರೆ ಅರ್ಧ ಜವಾಬ್ದಾರಿ ಹೊರುತ್ತಿದ್ದಳು. ಈಗ ಜೊತೆಯಲ್ಲಿರೋ ಹುಡುಗ-ಹುಡುಗಿಯರು ಕೂಡ ಚೆನ್ನಾಗಿಯೇ ಕೆಲಸ ಮಾಡುತ್ತಿದ್ದಾರೆ.

ಮೊನ್ನೆ ಒಂದು ಫೈಲ್ ಹಿಡಿದು ಕುಳಿತವನು ಇಲ್ಲಿಯ ತನಕ ಪ್ರಪಂಚ ವ್ಯಾಪ್ತಿಯ ಪ್ರಕಾಶನ ಸಂಸ್ಥೆಯಾದ ಪೆಂಗ್ವಿನ್ ಇಂಡಿಯಾದೊಂದಿಗಿನ ನನ್ನ ಕೊಡು-ಕೊಳ್ಳುವಿಕೆಯ ಕಾಗದ ಪತ್ರಗಳನ್ನು ನೋಡುತ್ತಿದ್ದೆ. ದಿಲ್ಲಿಯಲ್ಲಿದ್ದ ‘ಪೆಂಗ್ವಿನ್ ಇಂಡಿಯಾ’ ಆಫೀಸು ಈಗ ಗುಡಗಾಂವ್‌ಗೆ shift ಆಗಿದೆ. ಅಷ್ಟೇ ಅಲ್ಲ, ಅದು ತನ್ನಷ್ಟೇ ತೂಕದ ರ‍್ಯಾಂಡಮ್ ಹೌಸ್ ಎಂಬ ಪ್ರಕಾಶನ ಸಂಸ್ಥೆಯೊಂದಿಗೆ merge ಆಗಿದೆ. ಪೆಂಗ್ವಿನ್ ಜೊತೆಗೆ ನನ್ನ ವ್ಯವಹಾರ ಇಂದು ನಿನ್ನೆಯದಲ್ಲ. ಒಂದು ಪುಸ್ತಕದ ಟ್ರಾನ್ಸ್‌ಲೇಷನ್ ಹಕ್ಕುಗಳನ್ನು ಪಡೆಯಬೇಕೆಂದರೆ ಸಾವಿರಗಟ್ಲೆ ಹಣ ಕೊಡಬೇಕು. ಈ ವಿಷಯದಲ್ಲಿ ‘ರೋಲಿ ಬುಕ್ಸ್’ ಪ್ರಕಾಶನವೂ ಅಷ್ಟೇ. ಪುಸ್ತಕ ಪ್ರಕಟಿಸೋದು ಒಂದಾದರೆ, ಅದರ ಹಕ್ಕುಗಳನ್ನು ಭಾರತೀಯ ಭಾಷೆಗಳಿಗೆ ಮಾರುವುದು ಇನ್ನೊಂದು ಲಾಭದಾಯಕ ವ್ಯವಹಾರ. ಅದನ್ನು ಪೆಂಗ್ವಿನ್, ರೋಲಿ, ರೂಪಾ ಮುಂತಾದ ಎಲ್ಲ ಪಬ್ಲಿಷಿಂಗ್ ಹೌಸ್‌ಗಳೂ ಮಾಡುತ್ತವೆ. ಅಮೆರಿಕ-ಇಂಗ್ಲಂಡ್ ಮುಂತಾದ ಕಡೆ ಈ ಹಕ್ಕುಗಳನ್ನು ಕೊಡಿಸೋ ಏಜೆಂಟರು ಬೇರೆ ಇರುತ್ತಾರೆ. ಅವರಿಗೇ ಅಂತ ಒಂದಷ್ಟು ಹಣ ಕೊಡಬೇಕು. ಈ ದಂಧೆಯ ಆಸುಪಾಸುಗಳ ಕುರಿತು ಓದುತ್ತ ಕುಳಿತಾಗಲೇ ನನ್ನ ಕಣ್ಣಿಗೆ ಬಿದ್ದದ್ದು ‘Dial d for Don’ ಎಂಬ ಪುಸ್ತಕ ಮೊನ್ನೆ ತಾನೇ ಅದು ಬಿಡುಗಡೆಯಾಗಿದೆ. ತುಂಬ ಪ್ರಾಮಾಣಿಕರಾದ C.B.Iನ ಅತಿ ಮುಖ್ಯ ಸ್ಥಾನದಲ್ಲೂ ಇದ್ದ ನೀರಜ್ ಕುಮಾರ್‌ರವರು ಬರೆದ ಪುಸ್ತಕವದು. ಅವರು ದಾವೂದ್ ಇಬ್ರಾಹಿಂನೊಂದಿಗೆ ನೇರಾನೇರ ಹದಿಮೂರು ನಿಮಿಷ ಫೋನ್‌ನಲ್ಲಿ ಮಾತನಾಡಿದವರು. ಒಬ್ಬ C.B.I. ಅಧಿಕಾರಿಯಾಗಿ he was a terror. ಹಾಗೆ ಮಾತನಾಡೋ ಹೊತ್ತಿಗೆ ದಾವೂದ್ ಇಬ್ರಾಹಿಂ ಪಾಕಿಸ್ತಾನ್ ತಲುಪಿಕೊಂಡಿದ್ದ. ನೀರಜ್ ಕುಮಾರ್ ಸೇವೆಯಲ್ಲಿರುವ ತನಕ ಉಗ್ರಗಾಮಿ ಸಂಸ್ಥೆಗಳು ಭಾರತದಲ್ಲಿ ನೆಲೆಯೂರುವ ಯೋಚನೆಯನ್ನೂ ಮಾಡುತ್ತಿರಲಿಲ್ಲ. ಅಂಥ ಅಧಿಕಾರಿ, ನಿವೃತ್ತಿಯ ನಂತರ Dial D for Don ಬರೆದಿದ್ದಾರೆ. ಅದರ ಹಕ್ಕುಗಳನ್ನು ನಾನು ಕೊಳ್ಳಬೇಕು. ಅದನ್ನು ಪ್ರಕಟಿಸಿದ್ದು ಪೆಂಗ್ವಿನ್. ಲಕ್ಷಗಟ್ಟಲೆ ಕೇಳುತ್ತದೆ ಪೆಂಗ್ವಿನ್. ಅನಿವಾರ್ಯ.

ಸರಿ, ಹಕ್ಕು ಖರೀದಿ ಮಾಡಿ, ಬೆನ್ನು ಬಾಗಿಸಿ ಕೂತು ಬರೆದು, ಅದರ ಕರಡು ನೋಡಿ, ಪ್ರಿಂಟು ಮಾಡಿಸಿ, ಮೊದಲ ಪ್ರತಿ ಕೈಗೆ ಬಂದಾಗ ಅದೊಂಥರಾ ಸುಖ ಸ್ಖಲನ ಸಂತೋಷ. ಆನಂತರದ್ದು ಅಪ್ಪಟ ಮೈ ಕೈ ನೋವಿನ ಬಾಣಂತಿತನ! ಅದು, ಪುಸ್ತಕ ಬಿಡುಗಡೆಯದು. ಅದಕ್ಕೇನು ಕಡಿಮೆ ಖರ್ಚಾಗುತ್ತದೆ ಅಂದುಕೊಂಡಿದ್ದೀರಾ? My God. Hall Book ಮಾಡೋದರಿಂದ ಹಿಡಿದು ಅತಿಥಿಗಳಿಗೆ flight book ಮಾಡೋ ತನಕ - ಅಷ್ಟೂ ಜವಾಬ್ದಾರಿ ಹಾಗೂ ಖರ್ಚು ಭರಿಸಬೇಕು. ofcourse, ನೀವು ಉದಾರಿಗಳು. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ನೂರಾರು ಪ್ರತಿ ಖರೀದಿಸಿ ಬಿಡುತ್ತೀರಿ. ಅದರಲ್ಲಿ ನನ್ನ ಖರ್ಚೆಲ್ಲ ಹುಟ್ಟಿ ಹೋಗುತ್ತದೆ.

ಆದರೆ ಇದೆಲ್ಲ ಬೇಕಾ? ಕೊಂಚ ಬದಲಾಯಿಸಿ ನೋಡೋಣ. ಒಂದು ಚಿಕ್ಕ ಹೋಟೇಲಿನಲ್ಲಿ, ಚಹ ಕಪ್ಪುಗಳ ಕಿಂಕಿಣಿಯಲ್ಲಿ ನಾವೇ ನಾಲ್ಕೆಂಟು ಜನ ಸೇರಿ ಪುಸ್ತಕ ಬಿಡುಗಡೆ ಮಾಡಿದರೆ ಹೇಗಿರುತ್ತೆ? No ಭಾಷಣ, No ಭೀಷಣ! ಜೋಗಿ ದಯ ಪಾಲಿಸಿದ ಐಡಿಯಾ ಇದು. ಪುಸ್ತಕ ಬಿಡುಗಡೆಯಾದ ಸಂಗತಿ, ನಿಮಗೆ ‘ಪತ್ರಿಕೆ’ ಮೂಲಕ ಗೊತ್ತಾಗುತ್ತದೆ. ಉಳಿದಂತೆ ಬುಕ್‌ಸ್ಟಾಲ್‌ಗಳಲ್ಲಿ ಪುಸ್ತಕ ಸಿಕ್ಕೇ ಸಿಗುತ್ತದೆ. Why not? ಒಂದು try ಕೊಡೋಣ ಅಂದುಕೊಂಡಿದ್ದೇನೆ. ಏನಂತೀರಿ?

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 27 February, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books