Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಫಸ್ಟ್ ಟೈಮ್ ನೆನಪು!

“ಇವತ್ತೇ ಫಸ್ಟ್ ಟೈಮ್!"

ಹಾಗಂತ ಉದ್ಗರಿಸುವ ಅವಕಾಶ ಬದುಕಿನಲ್ಲಿ ತುಂಬ ಸಲವೇನೂ ಬರುವುದಿಲ್ಲ. ತೀರ ನನ್ನಂತೆ ರಾಕ್ಷಸಗಾತ್ರದ ನೆನಪಿನ ಶಕ್ತಿ ನಿಮಗೆ ಇದ್ದಿದ್ದೇ ಆದರೆ ಅಂಥ ಉದ್ಗಾರಗಳ ಸಂದರ್ಭ, ಡೇಟು, ಜಾಗ ಇತ್ಯಾದಿಗಳು ನೆನಪಿರಬಹುದು. ಅಷ್ಟೇ ಹೊರತು ಜೀವನದಲ್ಲಿ ಅವೆಷ್ಟೋ ಸಂಗತಿಗಳಿರುತ್ತವೆ: ‘ಇದು ಫಸ್ಟ್ ಟೈಮ್’ ಎಂದು ನೆನಪಿಟ್ಟುಕೊಳ್ಳುವಂತಹವು.

ಒಂದು ಚಿಕ್ಕ ಉದಾಹರಣೆ ಹೇಳ್ತೀನಿ ಕೇಳಿ. ನಾನು ಮಿಲಿಟರಿಯಲ್ಲಿದ್ದ ಕ್ಯಾಪ್ಟನ್ ಮುರಳಿಯ ಬಾಲ ಹಿಡಿದುಕೊಂಡು ಚೀನಾ ಗಡಿಯ ಅರುಣಾಚಲ ಪ್ರದೇಶ್‌ಗೆ ಹೋದೆ. ಅಲ್ಲಿಂದ ಅರುಣಾಚಲದ ರಾಜಧಾನಿ ಇಟಾ ನಗರಕ್ಕೆ ಬಂದೆ. ಅಲ್ಲಿನ ಮುಖ್ಯಮಂತ್ರಿ ಗೆಗಾಂಗ್ ಅಪಾಂಗ್ ನನಗೆ ಪರಿಚಿತರು. ಮುಂದೆ ಅವರದೇ ಕಾರಿನಲ್ಲಿ ಅಸ್ಸಾಮದ ಗಡಿಯ ತೇಜ್‌ಪುರಕ್ಕೆ ಬಂದೆ. ತೇಜ್‌ಪುರದಿಂದ ವಿಮಾನದಲ್ಲಿ ಕಲ್ಕತ್ತಾಗೆ ಬಂದೆ. ನೆನಪಿರಲಿ: ಅದು ನನ್ನ ಮೊಟ್ಟಮೊದಲ ವಿಮಾನಯಾನ! ಅದಕ್ಕೂ ಮುಂಚೆ ಹೆಲಿಕಾಪ್ಟರ್ ಹತ್ತಿದ್ದೆ. ವಿಮಾನ ಅಂತ ಹತ್ತಿದ್ದು ಮಾತ್ರ ತೇಜ್‌ಪುರದಲ್ಲೇ. ಅದು ಫಸ್ಟ್ ಟೈಮ್!

ಹಾಗೆ ಅನೇಕ ಫಸ್ಟ್ ಟೈಮ್‌ಗಳು ನನಗೆ ನೆನಪಿವೆ. ಮೊಟ್ಟ ಮೊದಲ ಸಿಗರೇಟು, ಮೊದಲ ಪೆಗ್, ಕೊಟ್ಟ ಮೊದಲ ಮುತ್ತು, ಮೊದಲ ಮೈಥುನ ಇತ್ಯಾದಿಗಳಿಂದ ಹಿಡಿದು, ಮೊದಲ ಫಸ್ಟ್ ಕ್ಲಾಸ್, ಮೊದಲ ಪ್ರಕಟಿತ ಕಥೆ, ಮೊದಲ ಕಾದಂಬರಿ, ಮೊದಲ ಆಕ್ಸಿಡೆಂಟ್-ಇತ್ಯಾದಿಗಳ ಸಾಲೇ ಇದೆ. ಅದೆಲ್ಲ ಇರಲಿ: ನಿಮ್ಮ ಬದುಕಿನ ‘ಫಸ್ಟ್ ಟೈಮ್’ಗಳ ಬಗ್ಗೆ ನೀವೇ ಹೇಳಿ. It may be anything. ನನಗೆ ಜೀವನದಲ್ಲಿ ಮೊದಲ ಬಾರಿಗೆ Tv ನೋಡಿದ್ದು ನೆನಪಿದೆ: ಅವತ್ತು ಇಂದಿರಾಗಾಂಧಿಯ ಕೊಲೆಯಾಗಿತ್ತು. ಹಾಗೆ ನಿಮಗೂ ಕೆಲವು ಫಸ್ಟ್ ಟೈಮ್‌ಗಳು ನೆನಪಿದ್ದಾವು. ಆ ಪೈಕಿ ಒಂದು ನೆನಪನ್ನು, ನಿಮ್ಮ ಕೈಯಲ್ಲಿನ ಒಂದು ಇನ್‌ಲ್ಯಾಂಡ್ ಲೆಟರ್‌ನಲ್ಲಿ ಚೂಟಿಯಾಗಿ ಬರೆದು, ಹದಿನೈದು ದಿನಗಳೊಳಗಾಗಿ ‘ದಿಲ್ ನೇ ಫಿರ್ ಯಾದ್’ ಅಂಕಣಕ್ಕೆ ಕಳಿಸುತ್ತೀರಾ?

Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ. ಜಾಸ್ತಿ ಟೈಮಿಲ್ಲ ದೊರೆ: ಬೇಗ ಬರೆದು ಕಳಿಸಿ.
ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 15 February, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books