Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಆ ಪರಿಯ ಶಿಸ್ತು ನಮಗೂ ಇದ್ದು ಬಿಟ್ಟಿದ್ದಿದ್ದರೆ

ಒಂದೆರಡು ವರ್ಷಗಳ ಮಾತಲ್ಲ. ಇವತ್ತಿಗೆ ಇಪ್ಪತ್ತು ವರ್ಷಗಳೇ ಆದವೇನೋ! ನಮ್ಮ ರಾಜಕೀಯ ವರದಿಗಳ ಮುಖ್ಯ ವರದಿಗಾರ ಆರ್.ಟಿ.ವಿಠ್ಠಲಮೂರ್ತಿ ‘ಪತ್ರಿಕೆ’ ಆರಂಭವಾದ ದಿನಗಳಿಂದ ವರದಿ ಮಾಡುತ್ತಿದ್ದಾನೆ. ಅವನೂ, ಸೀತಾನದಿ ಸುರೇಂದ್ರ ಒಂದು ಓರಗೆಯವರು. ಅವರಿಬ್ಬರಿಗಿಂತ ನಾನು ಕೆಲವು ತಿಂಗಳುಗಳ ಮಟ್ಟಿಗೆ ಹಿರಿಯ. ಸುರೇಂದ್ರ ನನ್ನನ್ನು ಏಕವಚನದಲ್ಲೇ ಮಾತನಾಡಿಸುತ್ತಿದ್ದ. ಅವನು ನನಗೆ ‘ಗ್ಲಾಸ್ ಮೇಟ್’ ಅವತ್ತಿಗೂ ವಿಠ್ಠಲಮೂರ್ತಿ ವಿಪರೀತವೆಂಬಂತೆ ಕುಡಿಯುತ್ತಿರಲಿಲ್ಲ. ಅವನು ಕುಡಿದುದನ್ನು ನಾನು ನೋಡಿಯೂ ಇಲ್ಲ. ಆದರೆ ಸುರೇಂದ್ರ ಕುಡಿಯುತ್ತಿದ್ದ. ಅವನಿಗೆ ಕೇಳೋರು-ಹೇಳೋರು ಇರಲೇ ಇಲ್ಲ. ಕೆಲವು ಸಲ ಕುಡಿತ ಅತಿರೇಕಕ್ಕೆ ಹೋಗಿ ಬೆಳಿಗ್ಗೆಯಿಂದಲೇ ಕುಡಿಯಲಾರಂಭಿಸುತ್ತಿದ್ದ. ಅವನ ಎರಡುಪಟ್ಟು ಗುಂಡು ಮಾಸ್ಟರ್ ನಾನು. ಆದರೆ ‘ಪತ್ರಿಕೆ’ ಆರಂಭಿಸಿದ ವರ್ಷಗಳಲ್ಲಿ ಒಂದೇ ಒಂದು ಹನಿಯಷ್ಟೂ ಕುಡಿಯುತ್ತಿರಲಿಲ್ಲ. ಹೀಗಾಗಿ ಗೆಳೆಯರಿಬ್ಬರ ಮೇಲೂ ಪದೇ ಪದೆ ಹರಿಹಾಯುತ್ತಿದ್ದೆ. ಬೇರೆ ದಾರಿಯೆಲ್ಲಿ? ವರದಿಗಾರರು ಅಂತ ಇದ್ದವರೇ ಅವರಿಬ್ಬರು. ಅವರು ಬರೆದರೆ ಉಂಟು. ಉಳಿದ ಅಷ್ಟೂ ಪುಟಗಳನ್ನು ನಾನೇ ತುಂಬಿಸುತ್ತಿದ್ದೆ. ಇವತ್ತು, ಇಪ್ಪತ್ತು ವರ್ಷಗಳ ನಂತರ ಆ ಸತ್ಯ ಹೇಳ್ತೀನಿ ಕೇಳಿ: ‘ಪತ್ರಿಕೆ’ಯ ಅಷ್ಟೂ ಪುಟಗಳಿಗೆ ನಾನು ‘ಒಬ್ಬನೇ’ ಬರೆಯುತ್ತಿದ್ದೆ. ಆಗ ‘ಪತ್ರಿಕೆ’ಗೆ ಹದಿನಾರೇ ಪುಟ. ಆದರೂ ವಾರಕ್ಕೆ ಹದಿನಾರು ಪುಟ ತುಂಬಿಸುವುದು ಹೇಗೆ? Not a joke. ಇವರಿಬ್ಬರೂ ಕೈ ಕೊಟ್ಟಾಗ ಇಬ್ಬರೊಂದಿಗೂ ಜಗಳಕ್ಕೆ ಬೀಳುತ್ತಿದ್ದೆ. ಕೆಲವು ಸಂಚಿಕೆಗಳಾಗಿ, ಪತ್ರಿಕೆ ಮಾರುಕಟ್ಟೆಯಲ್ಲಿ ಕಚ್ಚಿಕೊಳ್ಳುತ್ತದೆ ಅಂತ ಖಚಿತವಾಗುವ ಹೊತ್ತಿಗೆ ವಿಠ್ಠಲಮೂರ್ತಿ ಮತ್ತು ಸುರೇಂದ್ರ ನೆಟ್ಟಗಾಗಿ ಬಿಟ್ಟರು. ನಿಗದಿತವಾಗಿ ಬರೆಯಲಾರಂಭಿಸಿದ್ದರು. ಅವತ್ತು ಬರೆಯಲಾರಂಭಿಸಿದ ವಿಠ್ಠಲಮೂರ್ತಿ ಇವತ್ತಿನ ಈ ಘಳಿಗೆಯ ತನಕ ಒಂದೇ ಹದದಲ್ಲಿ, ನಿಯಮ ತಪ್ಪದೆ, ತಡ ಮಾಡದೆ, ಉಡಾಫೆ ಕೆಲಸ ಮಾಡದೆ ನನ್ನೊಂದಿಗೆ ಹೆಜ್ಜೆ ಹಾಕುತ್ತಿದ್ದಾನೆ. ಅದೇ ಸಾಲಿಗೆ ನಿಲ್ಲುವವರ ಪೈಕಿ ಶೃಂಗೇಶ್ ಕೂಡ ಒಬ್ಬ. He is a committed journalist.

ಈ ಹುಡುಗರನ್ನು ಬಿಟ್ಟರೆ ನನಗೆ ಬೇರೇನಿದೆ. ಪ್ರತೀ ಮಂಗಳ ಮತ್ತು ಬುಧವಾರಗಳಂದು ನನ್ನಷ್ಟೇ ತನ್ಮಯತೆಯಿಂದ ಪುಟಗಳನ್ನು ಸಜ್ಜು ಮಾಡುತ್ತಿರುವವನು ಲೋಕೇಶ್ ಕೊಪ್ಪದ್. ಅವನು ಶ್ರಮಜೀವಿ. ತುಂಬ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾನೆ. ಹೀಗಿರುವ ವ್ಯವಸ್ಥೆಯಲ್ಲಿ ಒಬ್ಬರು ಕೈಕೊಟ್ಟರೂ ತುಂಬ ತೊಂದರೆಯಾಗುತ್ತದೆ. ನಾನಂತೂ ಚಡಾಬಡಾ ರೇಗಿ ಬಿಡುತ್ತೇನೆ. ಅಜಮಾಸು ಮೂರು ವರ್ಷಗಳಾದವೇನೋ? ನಾನು ರೇಗೋದನ್ನು ನಿಲ್ಲಿಸಿದ್ದೇನೆ. ರೇಗೋದರ ನಿಷ್ಪ್ರಯೋಜಕತೆ ನನಗೆ ಗೊತ್ತಾಗಿದೆ. ಅದು ನಮ್ಮ ಎನರ್ಜಿ ಖಾಲಿ ಮಾಡುತ್ತದೆಯೇ ಹೊರತು, ಅದರಿಂದ ಉಪಯೋಗವಾಗುವುದಿಲ್ಲ. ತೀರ ಇತ್ತೀಚೆಗೆ ಸೇರಿಕೊಂಡ ಹುಡುಗನೊಬ್ಬನ ಮೇಲೆ ಒಮ್ಮೆ ಭಯಂಕರ ಸಿಟ್ಟು ಬಂದಿತ್ತು. ವರದಿ ತರಲು ಇಲ್ಲೇ ಹತ್ತಿರದ ಊರೊಂದಕ್ಕೆ ಕಳಿಸಿದರೆ, ಈ ಪ್ರಾಣಿ ಮುಂದಿನ ಸಂಚಿಕೆ ಮಾರ‍್ಕೆಟ್ಟಿಗೆ ಹೋಗುವ ದಿನ ಬಂದರೂ ನಾಪತ್ತೆ! “ಅವನನ್ನು ನನ್ನ ಕೈಗೆ ಸಿಗದ ಹಾಗೆ ನೋಡಿಕೊಳ್ಳಿ. ವಿಪರೀತ ಸಿಟ್ಟು ಬಂದಿದೆ. ಹತ್ತಿರಕ್ಕೆ ಬಂದರೆ ಕೆನ್ನೆ ಚೆದುರಿಹೋದೀತು. ಮೊದಲೇ ಅವನು ಚಕ್ಕಳ-ಮಕ್ಕಳ. ಕಡೆಗೆ ಅವನು ನನ್ನ ಕೈಗೆ ಸಿಗುವುದರೊಳಗಾಗಿ ಕೆಲಸ ಬಿಟ್ಟು ನಡೆದಿದ್ದ. “ಏನ್ರೀ ಅವನ ಸಮಸ್ಯೆ" ಅಂತ ಕೇಳಿದ್ದಕ್ಕೆ ನಮ್ಮ ಲೋಕೇಶ “ಬಾಸ್, ಅವನು ಗುಂಡೋಪಂತರ ಗ್ರೂಪಿನವನು" ಅಂದ.

ಆದರೂ ಮೊದಲಿಗೆ ಹೋಲಿಸಿದರೆ ಈಗ ಪರಿಸ್ಥಿತಿ ವಾಸಿ. ಕೆಲವರನ್ನು ತೆಗೆದು ಹಾಕಿದೆ. ಕೆಲವರು ತಾವೇ ಹೋದರು. ಇರುವ ಚಿಕ್ಕ staff ‘ಪತ್ರಿಕೆ"ಗೆ ಏನೆಲ್ಲ ಬೇಕೋ ಅದನ್ನು ಮಾಡುತ್ತಿದೆ. Actually, ನಾನು ಬರೆಯ ಹೊರಟದ್ದು ವಿಠ್ಠಲಮೂರ್ತಿಯ ಬಗ್ಗೆ. ಅವನಿಗಿರುವ ಶಿಸ್ತು (ನನ್ನನ್ನೂ ಸೇರಿ) ಎಲ್ಲರಿಗೂ ಇದ್ದಿದ್ದರೆ ಅದು ultimate! Thanks to him.


-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 02 February, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books