Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಈ ವ್ಯಕ್ತಿಗೆ ಒಂದು ಟೇಸ್ಟ್ ಇದೆ ಕಣ್ರೀ...!

ಹೆಗ್ಗಳಿಕೆ ನನ್ನದಾ? ಅದು ನಿಮ್ಮದಾ?

ಗೊತ್ತಿಲ್ಲ. ನನ್ನದೊಂದು ಪುಸ್ತಕ ಮಾರ್ಕೆಟ್‌ಗೆ ಬಿಟ್ಟು ಸಾಕಷ್ಟು ಕಾಲವಾಗಿತ್ತು. ಹೊಸ ಪುಸ್ತಕಗಳು ತುದಿಗಾಲ ಮೇಲೆ ನಿಂತಿವೆ: ಮಾರುಕಟ್ಟೆಗೆ ತಲುಪಲು. ಅದು ಅತ್ತಗಿರಲಿ. ‘ಉಡುಗೊರೆ’ ಪುಸ್ತಕದ ಸುದ್ದಿ ಕೇಳಿ. ನನ್ನ ಮಟ್ಟಿಗೆ ಅದು ನಿಜಕ್ಕೂ nice book. ಮೊದಲು ಅದು ಪ್ರಕಟವಾದ್ದು 2012ರಲ್ಲಿ. ಪುಸ್ತಕ ಕೊಂಚ ದುಬಾರಿ. ನಿಮಗಷ್ಟೆ ಅಲ್ಲ. ಅದು ನನಗೂ ದುಬಾರಿಯೇ. ಅದನ್ನು cost of production ಅಂತಾರೆ. ಅಂದರೆ ಪುಸ್ತಕದ ಪ್ರಿಂಟಿಂಗು-ಹಾಳುಮೂಳುಗಳ ಒಟ್ಟು ವೆಚ್ಚ. ಅದಕ್ಕಾಗಿ ಜಾಸ್ತಿ ಹಣ ಖರ್ಚಾದರೆ, ಪುಸ್ತಕದ ರೇಟೂ ಹೆಚ್ಚಾಗುತ್ತದೆ. ಬಿಲೀವ್ ಮಿ, ಕಳೆದ ಇಪ್ಪತ್ತು ವರ್ಷಗಳಲ್ಲಿ ನನ್ನ ಯಾವ ಪುಸ್ತಕಕ್ಕೂ ನಾನು ನಿಮ್ಮಿಂದ ಅತಿಯಾದ ಬೆಲೆ ಇಸಿದುಕೊಂಡಿಲ್ಲ. ಹೊರಗಿನ ಯಾವುದೇ ಪ್ರಕಾಶಕರಿಗೆ ಕೊಟ್ಟರೆ ನನ್ನ ಪುಸ್ತಕಕ್ಕೆ ಅವರು (ಅಕ್ಷರಶಃ) ಲಕ್ಷಗಟ್ಟಲೆ ರುಪಾಯಿ ಕೊಡುತ್ತಾರೆ. ಆದರೆ ಓದುಗರು ಅದನ್ನು ಓದಬೇಕು ಎಂಬ ತಪನೆ ಬಿಟ್ಟರೆ, ನಿಮ್ಮಿಂದ ಹಣ ಗುಂಜಬೇಕು ಎಂಬ ಹಪಹಪಿ ನನಗಿಲ್ಲ. ನನ್ನ ಪುಸ್ತಕಗಳ ಬೆಲೆ ಇನ್ನೂರು ರುಪಾಯಿಗಿಂತ ಜಾಸ್ತಿಯಾಗದೆ ನೋಡಿಕೊಂಡಿದ್ದೇನೆ. ನಿವೇದಿತಾಗೆ ಈ ಸಂಗತಿಯನ್ನು ನಾನು ಪದೇಪದೆ ಹೇಳುತ್ತಿದ್ದೆ. ಬೆಲೆ minimum ಆಗಿಡು. ಮಾರಾಟ ಸಹಜವಾಗೇ ಜಾಸ್ತಿಯಾಗುತ್ತೆ ಅಂತ. ನೀವು “ಅಮ್ಮ ಸಿಕ್ಕಿದ್ಲು" ಪುಸ್ತಕದ ಎಕನಾಮಿಕ್ಸ್ ಗಮನಿಸಿ. ಅದಕ್ಕೆ ಕೇವಲ 100/- ರುಪಾಯಿ fix ಮಾಡಿದೆ. ಇವತ್ತಿಗೆ ಆ ಪುಸ್ತಕದ ಎಷ್ಟು ಪ್ರತಿಗಳು ಖರ್ಚಾಗಿವೆ ಗೊತ್ತೆ? ಬರೋಬ್ಬರಿ ಮೂವತ್ತೈದು ಸಾವಿರ!

‘ಉಡುಗೊರೆ’ ಕೂಡ ಕಡಿಮೆ ಬೆಲೆಗೆ ಮಾರೋಣ.. ಅದು ಕಷ್ಟವೇನಲ್ಲ. ಆರ್ಡಿನರಿ ಪೇಪರ್ ಹಾಕೋಣ. Cover pageಗೆ ಮಾಮೂಲಿ ಖರ್ಚು ಮಾಡುವಂತೆಯೇ ಮಾಡೋಣ. ಸಹಜವಾಗಿಯೇ ನಮ್ಮ ಖರ್ಚು ಕಡಿಮೆಯಾಗುತ್ತದೆ: ಕಡಿಮೆ ಬೆಲೆಗೂ ಮಾರಬಹುದು ಅಂದರು ನಮ್ಮ ಸರ್ಕ್ಯುಲೇಷನ್ ವಿಭಾಗದವರು. ಅದೇಕೋ ನನಗೆ ಒಪ್ಪಿತವಾಗಲಿಲ್ಲ. I am possessive about it. ಉಳಿದ ಪುಸ್ತಕಗಳು ಹೇಗೇ ಇರಲಿ. ‘ಉಡುಗೊರೆ’ ಅಂದಮೇಲೆ ಅದೊಂದು gift ಥರಾ, presentation ಥರಾ ಇರಬೇಕು. ಇನ್ನೂರ ಐವತ್ತು ರುಪಾಯಿ ಕೊಟ್ಟು ಒಬ್ಬ ಗ್ರಾಹಕರು ಗಣೇಶನ ಮೂರ್ತಿ ಖರೀದಿಸಿ ನವದಂಪತಿಗಳಿಗೆ gift ಕೊಡುತ್ತಾರೆ. ಬರುವ ನೂರಾರು giftಗಳ ಮಧ್ಯೆ ಈ ಇನ್ನೂರ ಐವತ್ತು ರುಪಾಯಿಯ ಗಣೇಶ ಎಲ್ಲಿ ಕೂಡುತ್ತಾನೋ? ಆದರೆ ಒಂದು ಪುಸ್ತಕ ಅಂತ ಕೊಡಿ? ಅದರ ಮಜವೇ ಬೇರೆ. ಅದ್ಯಾಕೆ ಇವರು ವಿಶೇಷವಾಗಿ ಪುಸ್ತಕ ಕೊಡ್ತಿದಾರೆ-ಎಂಬ ಕುತೂಹಲ. ಅದರ ಮೇಲೆ, ಅಂದರೆ ಪುಸ್ತಕದ ಆರಂಭದಲ್ಲಿ ನೀವು ಸಹಿ ಮಾಡಿರುತ್ತೀರಿ. ಹಾರೈಕೆಯ ಮಾತು ಬರೆದಿರುತ್ತೀರಿ. That sounds really good.

ಇಂಥ ಅನೇಕ ಕಾರಣಗಳಿಂದಾಗಿ ‘ಉಡುಗೊರೆ’ ಒಂದು ವಿಶೇಷ ಕೃತಿ ಅನ್ನಿಸಿಕೊಳ್ಳುತ್ತದೆ. ಹಿಂದೆ 2012ರಲ್ಲಿ ಹಾಕಿದ ಅದೇ ಹಾಳೆ, ಅದೇ ತರಹದ ವಿಶೇಷ ಹಾಳೆಗಳು, ಅದೇ ಸಿಂಗಾರ-ಬಂಗಾರ ಈಗಲೂ ಹಾಕಿದ್ದೇನೆ. Just observe that. ಇಷ್ಟಾಗಿ, ನಿಮಗೆ ವಿಶೇಷವಾಗಿ ಹೇಳಬೇಕಿರುವ ಸಂಗತಿ ಅಂದರೆ ‘ಉಡುಗೊರೆ’ ಕೃತಿಯ ಮಾರಾಟದ ಭರಾಟೆ. ಅನೇಕ ಓದುಗರು ನಮ್ಮ ಆಫೀಸಿಗೇ ಬಂದು ಒಯ್ಯುತ್ತಿದ್ದಾರೆ. ಇಲ್ಲಿ ಖರೀದಿಸಿದರೆ ಕನ್ಸೆಷನ್ನೂ ಇದೆ. ನನ್ನ ಭೇಟಿಯೂ ಆಗುತ್ತದೆ.

ಈ ತನಕ ನೀವಿನ್ನೂ ಕೊಂಡಿಲ್ಲವಾದರೆ ದಯವಿಟ್ಟು ಖರೀದಿಸಿ. You will like it. “ಈ ವ್ಯಕ್ತಿಗೆ taste ಇದೆ ಕಣ್ರೀ!" ಅಂತ ನಿಮ್ಮ ಅಕ್ಕಪಕ್ಕದವರಿಂದ ಅನ್ನಿಸಿಕೊಳ್ಳುತ್ತೀರಿ! ಅದು ಮುಖ್ಯವಲ್ಲವೆ?

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 25 January, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books