Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಅಜಮಾಸು ಇಪ್ಪತ್ತು ಸಾವಿರ ಜನ ಸೇರಿದ್ದು ಜೋಕಾ?

“ಚೇತರಿಸಿಕೊಂಡಿದ್ದೀರಿ" ಅಂದಳು.

“ಬೇರೆ ದಾರಿ ಎಲ್ಲಿದೆ? ಕುಸಿದವನು ನಾನು. ನಾನೇ ಕೈಯ್ಯೂರಿ, ಬೆನ್ನು ನಿಟಾರಾಗಿಸಿಕೊಂಡು ಎದ್ದು ನಿಲ್ಲಬೇಕು ಅಲ್ವಾ? I did the same. ನನ್ನ ಮಗನನ್ನು ನೋಡಿ ಹದಿನೈದು ದಿನಗಳಾದವು. ಕಡೆಯ ಬಾರಿಗೆ ನೋಡಿದಾಗ ಕೊಂಚ ಕಪ್ಪಾಗಿದ್ದ. ತೆಳ್ಳಗೂ ಆಗಿದ್ದ. ಬೆಳೆಯೋ ಹುಡುಗರು ತೆಳ್ಳಗಾಗ್ತಾರೆ. ಅವನಿಗೆ ಕೊಡಲಿಕ್ಕೆಂದೇ ಒಂದು ಪುಟ್ಟ ‘ತಮಾಷಿ’ ತಂದಿಟ್ಟುಕೊಂಡಿದ್ದೇನೆ. ಆದರೆ ತುಂಬ ದಿನ ನೋಡಲಾಗಲಿಲ್ವಲ್ಲ? ಎಂಥದ್ದೋ ಸಿಡುಕು.

ಆದರೆ ಅದೆಲ್ಲ ಬದಲಿಸಿ, ಒಂದು ಸಮುದ್ರದ ಅಲೆಯಂತೆ ಬಂದದ್ದು, ಈ ಹುಡುಗಿ ಬಾನಿ. ಅವಳನ್ನು ನೋಡಿಯಂತೂ ತಿಂಗಳುಗಳೇ ಆಗಿದ್ದವು. ಅಲ್ಲೆಲ್ಲೋ ಹೋಗಿ Big Boss ಮನೇಲಿ lock ಆಗಿ ಬಿಟ್ಟಿದ್ದಳು. ನಾನು ಅದೇನನ್ನೂ ನೋಡಿಲ್ಲ. ನೋಡುವುದೂ ಇಲ್ಲ. ಈ ರವಿ ಮೂರೂರು ಎಂಬ ಚಿಕ್ಕ ಶರೀರವನ್ನು ಆ ಹುಚ್ಚ ವೆಂಕಟ್ ಹಿಡಿದು ಬಡಿದನಲ್ಲ? ಅದೊಂದು episode ನೋಡಿದ್ದೆ. ರವಿ ಮೂರೂರು ತುಂಬ ಒಳ್ಳೆ ಗಾಯಕ. ಅದನ್ನು ಇನ್ನೇನು ಮೆಚ್ಚಬೇಕು ಅನ್ನೋಷ್ಟರಲ್ಲಿ ಇವನು ಸಾಕಿದ ಕೋತಿಯಂತಾಡುತ್ತಾನೆ. ಆದರೆ ವೆಂಕಟ್ ಹಾಗೆ ಬಡಿಯಬಾರದಿತ್ತು. Sad.

ಭಾವನಾ ಬಗ್ಗೆ ನನಗೆ ಕೆಲವು ಸಂಗತಿಗಳಿಗೆ ಸಂಬಂಧಿಸಿದಂತೆ ತುಂಬ confidence ಇದೆ. ಅವಳು cheap ಅಲ್ಲ. ನನ್ನಂತೆಯೇ ಭಾವುಕಳು. ಅವಳಿಗೆ ಸುಳ್ಳೇ ಏನನ್ನಾದರೂ ಮಾಡುವ ಅಥವಾ ತಡೆಯುವ dirty ‘ವಿದ್ಯೆ’ ಗೊತ್ತಿಲ್ಲ. ಅಲ್ಲಿ Big Bossನಲ್ಲಿ ಸಾಕಷ್ಟು matured ಆಗಿ ನಡೆದುಕೊಂಡಳಂತೆ. ಅನೇಕರು ಹೊಗಳಿದರು. ಅವಳಿಗಿಂತ ದಿಟ್ಟವಾಗಿರುವ ಹುಡುಗಿ ಚೇತನಾ. ಯಾವ ಕ್ಷಣದಲ್ಲಾದರೂ ‘Get lost’ ಅಂತ ಯಾರಿಗೆ ಬೇಕಾದರೂ ಹೇಳಿ ಎದ್ದು ಬಿಡಬಲ್ಲಳು. ಆದರೆ ಭಾವನಾ ಹಾಗಲ್ಲ. ತುಂಬ ಬೇಗ ಹೊಂದಿಕೊಂಡು ಬಿಡಬಲ್ಲ, ಬೆರೆಯಬಲ್ಲ ಹುಡುಗಿ. ಈ ಸ್ವಭಾವವೇ ಅವಳನ್ನು popular ಮಾಡಿದೆ. ಆದರೆ ಈ ಸ್ವಭಾವವೇ ಅವಳನ್ನು ತೊಂದರೆಗೀಡಾಗಿಸುತ್ತದಾ ಎಂಬ ಆತಂಕ ನನ್ನದಿತ್ತು. ಆದರೆ Big Bossನಲ್ಲಿ she carried herself really well ಅಂದರು. ಅಲ್ಲಿಂದ ಬಂದವಳೇ ಕರಡಿ ಮರಿಯಂತೆ ತಬ್ಬಿಕೊಂಡು, ಮುತ್ತು ಕೊಟ್ಟು, ಒಂದು ಸಾವಿರ ಗಂಟೆಗಾಗುವಷ್ಟು ಮಾತುಗಳನ್ನ ಅರ್ಧ ಗಂಟೆಯಲ್ಲಿ ಆಡಿ ಮುಗಿಸಿದಳು. Lovely girl.

ಮಕ್ಕಳು ಕಣ್ಣೆದುರಿಗೇ ಬೆಳೆಯುವ, ಅರಳುವ, ಏನನ್ನೋ ಸಾಧಿಸುವ, ಜಗಳಕ್ಕೆ ಬೀಳುವದನ್ನೆಲ್ಲ ನೋಡುವ ಸೊಬಗೇ ಬೇರೆ. I am blessed. ಮೊನ್ನೆ ಪ್ರಾರ್ಥನಾದ gathering ಆಯ್ತು. ಅದು great show. ರಮೇಶ್ ಅರವಿಂದ್ ಅತಿಥಿಯಾಗಿದ್ದರು. “ಇದೇನ್ ಸರ್, ಈ ಪರಿ crowd!" ಅಂದರು. ನಾನು ಕಳೆದ ಇಪ್ಪತ್ತು ವರ್ಷಗಳಿಂದ crowd enjoy ಮಾಡುತ್ತಾ ಬಂದಿದ್ದೇನೆ. ಶಾಲೆಯಲ್ಲಿ ಎಂಟು ಸಾವಿರ ಮಕ್ಕಳು. ಅವರಿಗೆ ಅಮ್ಮ-ಅಪ್ಪ: ಇನ್ನು ಅಕ್ಕಪಕ್ಕದವರು-ಎಲ್ಲ ಸೇರಿದರೆ ಎಂಥ crowd ಇದ್ದಿರಬಹುದು ನೋಡಿ? ‘ಪ್ರಾರ್ಥನಾ’ ನನ್ನ ಬದುಕಿನ ನಿಜವಾದ ಸಾಧನೆ ಅಂತ ಸಾವಿರ ಸಲ ಅನ್ನಿಸಿದೆ. I love it.

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 11 January, 2016
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books