Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಸಂಗೀತ ಜ್ಞಾನವೇ ಇಲ್ಲದ ಮಹಾನ್ ಸಂಗೀತ ನಿರ್ದೇಶಕ

ಆತ ಓ.ಪಿ.ನಯ್ಯರ್.

ಅಹಂಕಾರಕ್ಕೆ ಇನ್ನೊಂದು ಹೆಸರು. ವಿಪರೀತ ಶಿಸ್ತು. ತನ್ನದೇ ಆದ ನಿಯಮಗಳಿಗೆ ಬದ್ಧನಾಗಿ ಬದುಕಿದ ಹಿರಿಯ. ನಯ್ಯರ್ ಮೊದಲು ಗೀತಾದತ್‌ಳೊಂದಿಗೆ ಗೆಳೆತನವಿಟ್ಟುಕೊಂಡ. ಕಾರಣವೇ ಇಲ್ಲದೆ ಆಕೆಯನ್ನು ನಡುನೀರಿನಲ್ಲಿ ಬಿಟ್ಟ. ಆನಂತರ ನಯ್ಯರ್‌ನ ಸಾಂಗತ್ಯ ಹೊಂದಿದಾಕೆ ಆಶಾ ಭೋಂಸ್ಲೆ. “ಆಶಾಳನ್ನು ಯಾಕೆ ದೂರ ಮಾಡಿದೆ ಎಂಬುದಕ್ಕೆ ಕಾರಣಗಳಿವೆ. ಈ ಸಂಬಂಧ ಇಂಥ ತಾರೀಕಿನಂದು ಕೊನೆಗೊಳ್ಳಲಿದೆ ಎಂದು ಸಂಖ್ಯಾಶಾಸ್ತ್ರ ನನಗೆ ತಿಳಿಸಿತ್ತು. ಸರಿಯಾಗಿ ಅದೇ ದಿನದಂದು ಆಶಾ ಭೋಂಸ್ಲೆಯನ್ನು ಹೊರ ಹಾಕಿದೆ. ಆಕೆಯ ಅಕ್ಕ ಲತಾ ಮಂಗೇಶ್ಕರ್ ಕೈಲಿ ಜೀವಮಾನದಲ್ಲಿ ಎಂದೆಂದೂ ಹಾಡಿಸುವುದಿಲ್ಲ ಎಂದು ತುಂಬ ಹಿಂದೆಯೇ ನಿರ್ಧರಿಸಿದ್ದೆ. ಆದ್ದರಿಂದ ಹಾಡಿಸಲಿಲ್ಲ. ಇದಕ್ಕೂ ಆಶಾ ಭೋಂಸ್ಲೆಯೊಂದಿಗಿನ ಗೆಳೆತನಕ್ಕೂ ಸಂಬಂಧವಿಲ್ಲ. ಆಶಾ ಭೋಂಸ್ಲೆಯ talent ಬಗ್ಗೆ ನೀವು ಪ್ರಶ್ನೆ ಕೇಳಿದಿರಿ. ಅವಳು ಮೀನಿನ ಸಾರು ಚೆನ್ನಾಗಿ ಮಾಡ್ತಾಳೆ. ಇನ್ನು ಹಾಡೋ ವಿಷಯಕ್ಕೆ ಬಂದರೆ fine. ಹಾಗೆ ಯಾರು ಬೇಕಾದರೂ ಹಾಡುತ್ತಾರೆ. ಸಂಗೀತ ನಿರ್ದೇಶಕ ಯಾರೆಂಬುದು ಮುಖ್ಯ. ಹಾಡೋರು ಲಕ್ಷ ಜನ ಇದ್ದಾರೆ! ನೀವು ನನ್ನ ಕುರಿತು ಕೇಳಿದಿರಿ. Yes, ನಿಮ್ಮ ಅಭಿಪ್ರಾಯ ಸರಿಯೇ ಇರಬಹುದು. ಷರಾಬ್, ಕಬಾಬ್ ಮತ್ತು ಶಬಾಬ್‌ಗಳನ್ನು ನಾನು ಬಿಟ್ಟಿರಲಾರೆ..." ಅಂದಿದ್ದರು ನಯ್ಯರ್.

ಆತ ಹಿಂದಿ ಹಾಡುಗಳ ಅಘೋಷಿತ ಮಹಾರಾಜ. ಒಂದಾದ ಮೇಲೊಂದರಂತೆ super hitಗಳನ್ನು ನೀಡಿದ ಖದರ್‌ದಾರ್. ಉಳಿದೆಲ್ಲರಿಗಿಂತ ಹೆಚ್ಚು, ಅಂದರೆ ಒಂದು ಲಕ್ಷ ರುಪಾಯಿ ಸಂಭಾವನೆ ತೆಗೆದುಕೊಂಡ ‘ಶ್ರೀಮಂತ’. ಆತನಿಗಾಗಿ ಮುಹಮ್ಮದ್ ರಫಿ ಹಾಡಿದರು. ಆ ಹಸುವಿನಂಥ ರಫಿಯೊಂದಿಗೆ ಜಗಳವಾಡಿದ ನಯ್ಯರ್. ಅಪ್ರತಿಮ ಗೀತ ರಚನೆಕಾರ, ಕವಿ ಸಾಹಿರ್ ಲುಧಿಯಾನ್ವಿಯೊಂದಿಗೂ ನಯ್ಯರ್ ಜಗಳವಾಡಿದ. ಇವರೆಲ್ಲ ಬಿಡಿ, ಆತ ತನ್ನ ಹೆಂಡತಿ ಮಕ್ಕಳೊಂದಿಗೂ ಜಗಳವಾಡಿದ. ಮನೆಯನ್ನು ಶಾಶ್ವತವಾಗಿ ಕಳೆದುಕೊಂಡ. ತನ್ನ ಅಭಿಮಾನಿಯೊಬ್ಬರ ಮನೆಯಲ್ಲಿ ಒಂದು ಕೋಣೆ ಹಿಡಿದು paying guest ಆಗಿ ವಾಸ ಮಾಡಿದ. ಮುಂದೆ ಆ ಅಭಿಮಾನಿಯೊಂದಿಗೂ ಜಗಳವಾಡಿ ಬೇರೊಂದು ಮನೆಯಲ್ಲಿ paying guest ಆದ.

ಹ್ಞಾಂ, ಅದೊಂದು ಸಿನೆಮಾ. ಅದರಲ್ಲಿ ಹನ್ನೊಂದು ಹಾಡುಗಳಿದ್ದವು. ಅವೆಲ್ಲವೂ super hit ಹಾಡುಗಳೇ. ಅವನ್ನು ಕೇಳಿಸಿಕೊಂಡ ಹಿರಿಯ ಸಂಗೀತಗಾರರೊಬ್ಬರು “ನಯ್ಯರ್, ಒಂದೇ ಒಂದು ರಾಗ ಇಟ್ಟುಕೊಂಡು ಹನ್ನೊಂದು ಹಾಡು ಮಾಡಿ ಗೆದ್ದು ಬಿಟ್ಟೆಯಲ್ಲಾ?" ಅಂದರು. “ರಾಗ? I am sorry. ನನಗೆ ಯಾವ ರಾಗವೂ ಗೊತ್ತಿಲ್ಲ. ಹಾಗೆ ಸಂಗೀತಾಭ್ಯಾಸ ಮಾಡಿದವನೂ ನಾನಲ್ಲ. ಯಾವ ರಾಗ ಅದು?" ಎಂದು ಉತ್ತರಿಸಿದ್ದ ನಯ್ಯರ್. ಆತನ ಹನ್ನೊಂದೂ ಹಾಡುಗಳು ‘ಪೀಲೂ’ ರಾಗದ ನೆಲೆಯಲ್ಲಿ ರೂಪಿಸಲಾಗಿದ್ದವು.

ನಯ್ಯರ್ ಒಂದು peakನಲ್ಲಿದ್ದಾಗಲೇ “ಇನ್ನು ನಾನು ಸಿನೆಮಾಗಳಿಗೆ ಕೆಲಸ ಮಾಡೋದಿಲ್ಲ. I am retired!" ಅಂತ ಘೋಷಿಸಿದ್ದ. “ಯಾಕೆ?" ಅಂದರು ಜನ. “ನನ್ನ ಸಂಖ್ಯಾಶಾಸ್ತ್ರ ಹಾಗಂತ ಹೇಳುತ್ತಿದೆ" ಅಂದ ನಯ್ಯರ್. ಅಷ್ಟು ಕೀರ್ತಿ, ಮೆಚ್ಚುಗೆ, ಅಭಿಮಾನಿಗಳ ಹಿಂಡು-ಎಲ್ಲವನ್ನೂ ತ್ಯಜಿಸಿ ಚಿಕ್ಕದೊಂದು ಕೋಣೆಯಲ್ಲಿ ಇರತೊಡಗಿದ ನಯ್ಯರ್ ಹೊಟ್ಟೆಪಾಡಿಗೆ ಏನು ಮಾಡುತ್ತಿದ್ದ ಗೊತ್ತೆ? ಆತ ಹೋಮಿಯೋಪತಿ ವೈದ್ಯನಾಗಿದ್ದ! ಆತನಿಗೆ ಕೊನೆಗಾಲದಲ್ಲಿ ನೆಂಟರು, ಕುಟುಂಬ, ಗೆಳೆಯರು-ಯಾರೂ ಬೇಕಾಗಿರಲಿಲ್ಲ. ಅದು ಬೇಕಾಗಿಯೂ ಇರಲಿಲ್ಲ.He just lived that!''

ಈ ತೆರನಾದ ವಿಕ್ಷಿಪ್ತತೆ ಹೇಗೇ ಇರಲಿ: ನಯ್ಯರ್ ಸೃಷ್ಟಿಸಿದ ಗೀತೆಗಳು ಯಾವ ಸಂಖ್ಯಾಶಾಸ್ತ್ರದ ಅಪ್ಪಣೆಗಳಾಗಿರಲಿಲ್ಲ. He wanted that He got it. ಆತ ನನ್ನ ಫೇವರಿಟ್ ಸಂಗೀತ ನಿರ್ದೇಶಕ. ತೀರಿಕೊಂಡಾಗ ಆತ ಎಂಬತ್ತು ದಾಟಿದ್ದ. ಆತ ಅಮರ ಜೀವಿ.

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 22 December, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books