Ravi Belagere
Welcome to my website
ಮೊದಲು ನಾನು ಚಿಕ್ಕ ನೌಕರಿಯಲ್ಲಿದ್ದೆ. ಆದರೆ ಅಲ್ಲಿ ರಗಳೆ ಆಯ್ತು. ಆಗ ‘ಪತ್ರಿಕೆ’ ಮಾಡಿದೆ. ಚೆನ್ನಾಗಿತ್ತು. ಆದರೆ ‘ಪತ್ರಿಕೆ’ಗೋಸ್ಕರ ಪ್ರಿಂಟಿಂಗ್ ಪ್ರೆಸ್ ಮಾಡಿಬಿಟ್ಟೆ. ಅದನ್ನೇ ನಾನು ‘ಬೆಂಕಿಗೆ ಬೀಳೋದು’ ಅಂತೀನಿ. ನಿಮಗೆ ತೀರ ಇಷ್ಟು ಸಿವಿಯರ್ ಆದ ಕಷ್ಟ ಆಗಿರಬೇಕು ಅಂತೇನಿಲ್ಲ. ಆದರೂ ಒಮ್ಮೆ light ಆಗಿ ಬೆಂಕಿಗೆ ಧುಮುಕಿದ ಅನುಭವ ಆಗೇ ಆಗಿರುತ್ತದೆ. ನೀವು ಮುಖ್ಯವಾಗಿ, ನಿಮ್ಮ ಸಂಕೋಚ ಬಿಡಿ. ಬಾಣಲೆ ಚೆನ್ನಾಗಿತ್ತಾ? ಬೆಂಕಿ ಹಿತವಾಗಿತ್ತಾ? ದಯವಿಟ್ಟು ಈ ಬರಹ ಓದಿದ ಹದಿನೈದು ದಿನದೊಳಗಾಗಿ ‘ದಿಲ್ ನೇ ಫಿರ್ ಯಾದ್ ಕಿಯಾ’ ಅಂಕಣಕ್ಕೆ ಬರೆದು ಕಳುಹಿಸಿ. Emailನಲ್ಲಿ ಕಳುಹಿಸುವವರು [email protected]ಗೆ ಕಳುಹಿಸಿ.
Home About Us Gallery Books Feedback Prarthana Contact Us

Buy Ravi Belagere Books online

ಈ ಗಂಟೆ ಪೂಜಾರಿಗೆ ಅಂಥ ಸೂಕ್ಷ್ಮ ಹೇಗೆ ತಿಳಿದೀತು?

ಅವು ನಿದ್ದೆ ಮಾಡಗೊಡುತ್ತಿಲ್ಲ.

ಮೊದಲನೆಯದು ನ್ಯಾನ್ಸಿ ಪ್ರೈಸ್ ಬರೆದ “ಸ್ಲೀಪಿಂಗ್ ವಿಥ್ ದಿ ಎನಿಮಿ" ಎಂಬ ಕಾದಂಬರಿ. ನನಗೆ ಅದರ ಕಥೆ ಗೊತ್ತು. ಅದೇ ಹೆಸರಿನ ಸಿನೆಮಾ ಕೂಡ ನೋಡಿದ್ದೇನೆ. ಅದು ಚೆನ್ನಾಗಿದೆ. ತೀರ Great ಅಂತ ಅಲ್ಲದಿದ್ದರೂ ಅದೊಂದು good subject. ಪುಸ್ತಕ ಸಿಗುತ್ತಿಲ್ಲ.

ಇದಾಯ್ತ? ಎರಡನೆಯದು ರಷಿಯನ್ನರ ವಲಸೆಗೆ ಸಂಬಂಧಪಟ್ಟ ಪುಸ್ತಕ. ರಷಿಯನ್ನರು ಬಡಪಟ್ಟಿಗೆ ಬಗ್ಗುವವರಲ್ಲ. ಶುದ್ಧ ಜಿಗುಟರು. ಅವರು ದೈಹಿಕವಾಗಿ ತುಂಬ ಗಟ್ಟಿ: ಗಂಡು-ಹೆಣ್ಣು ಕೂಡ. ಜಗತ್ತಿನ ಅಷ್ಟೂ ಸರ್ಕಸ್ ಕಂಪೆನಿಗಳು ರೂಪುಗೊಂಡದ್ದೇ ರಷಿಯನ್ನರ ಇಶಾರೆಯ ಮೇಲೆ. ಅವರ ನೃತ್ಯವಿನ್ನೇನು? ಬ್ಯಾಲೆ ಎಂಬ ನೃತ್ಯ ನಿಂತು ನಿಬ್ಬೆರಗಾಗಿ ನೋಡುವಂಥದ್ದು. ಇನ್ನು ರಷಿಯನ್ ಮಾಫಿಯಾದ ಸಂಗತಿ. ಈಗಾಗಲೇ ಗೋವೆಯಲ್ಲಿ ರಷಿಯನ್ನರ ಲ್ಯಾಂಡ್ ಮಾಫಿಯಾ ಗೋವೆಯ ಜಮೀನನ್ನೆಲ್ಲ ನುಂಗಿ ಕುಳಿತಿದೆ. ಆದರೆ ಬೆಂಗಳೂರಿಗೆ ಅವರು ಕಳಿಸಿ ಕೊಟ್ಟಿರುವುದು ಕೇವಲ ಹುಡುಗಿಯರನ್ನ. ಬೆಂಗಳೂರಿನ ವೇಶ್ಯಾ ಗೃಹಗಳಲ್ಲಿ ಆ ಯುವತಿಯರು ಗಿಜಿಗುಡುತ್ತಿದ್ದಾರೆ. ದುಬೈನ ಸುದ್ದಿ ಕೇಳಲೇ ಬೇಡಿ. ಅಲ್ಲಿರುವ ಗಂಡು ರಷಿಯನ್ನರೆಲ್ಲ ಮಾಫಿಯಾ ಧೀರರು. ಹುಡುಗಿಯರೆಲ್ಲ ಅಭಿಸಾರಿಕೆಯರು!

ಇಷ್ಟಾದರೂ ರಷಿಯನ್ ರಾಜಕಾರಣಿಗಳಲ್ಲಿ ಕೆಲವರು ಸ್ಮರಣೀಯರು. ನೀವು ಲೆನಿನ್ ಕಾಲದ ಮಾತು ಆಡಲೇ ಬೇಡಿ. ನಿನ್ನೆ ಮೊನ್ನೆಯ (1990) ಮಿಖೈಲ್ ಗೊರ್ಬಚೇವ್‌ನನ್ನು ನೆನಪು ಮಾಡಿಕೊಳ್ಳಿ. ಜಗತ್ತೇ ನಿಬ್ಬೆರಗಾಗುವಂತೆ ರಷಿಯಾ ಮತ್ತು ಅಮೆರಿಕದ ನಡುವಿನ ಆ ತಣ್ಣನೆಯ ಅಂತರ್ ಯುದ್ಧವನ್ನು ಒಂದೇ ಹೊಡೆತಕ್ಕೆ ಮುಗಿಸಿ ಶಾಂತಿ ನೆಲೆಗೊಳ್ಳುವಂತೆ ಮಾಡಿದ ಮುತ್ಸದ್ದಿ ಆತ. ಆತನಿಗೆ ನೊಬೆಲ್ ಶಾಂತಿ ಪಾರಿತೋಷಕ ಕೊಡ ಮಾಡಲಾಯಿತು. He deserved it. ಈಗ ನಡೆಯುತ್ತಿರುವುದು ಪುಟಿನ್ ಯುಗ. ಕೇಳೋರೇ ಇಲ್ಲ ಎಂಬಂತೆ ಭರ್ತಿ ಕ್ರೌರ್ಯ, ಹಿಂಸೆ, ದೌರ್ಜನ್ಯ ಮೆರೆಯುತ್ತಿದ್ದ ISISನ ಮುಸಲ್ಮಾನರ ಮೇಲೆ ಹಠಾತ್ತನೆ ಕವುಚಿ ಬಿದ್ದ ಪುಟಿನ್ ಮುಸ್ಲಿಂ ಉಗ್ರರ ಮುಕಳಿಗೆ ಒದ್ದು ಪಾಠ ಹೇಳಿದ್ದಾನೆ.

ಇಂಥ ಗಟ್ಟಿಗರ ನಾಡಾದ ರಷಿಯಾದಿಂದ ಅವರು ಸಾವಿರಗಟ್ಟಲೆ ಸಂಖ್ಯೆಯಲ್ಲಿ ಹೊರಬಿದ್ದರು. ಅವತ್ತು ಅಜಮಾಸು ನಾಲ್ಕೂವರೆ ಸಾವಿರ ಕಿಲೋ ಮೀಟರ್ ಗತಿಸಿ ತಮ್ಮ ಗಮ್ಯ ಸೇರಿಕೊಂಡರು. ರಷಿಯದಿಂದ ಅವರು ಹೊರಬಿದ್ದರು ಎಂಬುದು ಆಶ್ಚರ್ಯಕರ ಸಂಗತಿಯೇ ಹೊರತು ತಮ್ಮ ಗಮ್ಯ ತಲುಪಿಕೊಂಡರು ಎಂಬುದರಲ್ಲಿ ಏನೇನೂ ಅಚ್ಚರಿಯಿಲ್ಲ. They are that strong!

ಅದರ ವಿವರಗಳಿರುವ ಪುಸ್ತಕ ಬೇಕು. ಹುಡುಕಿ ಹೈರಾಣ ಆಗುತ್ತಿದ್ದೇನೆ. ನನಗಿದು ಹೊಸತಲ್ಲ. ಅದರಲ್ಲೊಂದು ಮಜಾ ಇದೆ.

ಈ ಮನುಷ್ಯ ವಿಶ್ವೇಶ್ವರ ಭಟ್ಟ, “ಪತ್ರಕರ್ತರೊಬ್ಬರು ನಮ್ಮ ಜೊತೆಯಲ್ಲೇ ಬಂದಿದ್ದರು. ಆದರೆ ಅವರು ಆ ದೇಶಗಳ ಬಗ್ಗೆ ಏನು ಬರೆದರೋ? ಈತನಕ ನಾನಂತೂ ಓದಿಲ್ಲ" ಎಂದು ಬರೆದ. ಮಿನಿಸ್ಟರ್ ಹಿಂದೆ ಅಥವಾ ಅವರು ಕಲ್ಪಿಸಿದ ಅನುಕೂಲ ಪಡೆದು ಅದ್ಯಾವುದೋ ದೇಶಕ್ಕೆ ಹೋಗಿ “ಹ್ಞಾಂ... ಇಲ್ಲಿ ಜಯನಗರದ ಹೋಟ್ಲು ಸುಬ್ಬಮ್ಮನ ಮಗಳು ರಾಧಿ ಬೆಂಗಳೂರಿನಿಂದ ವಲಸೆ ಬಂದು ದೋಸೆ ಕ್ಯಾಂಪ್ ನಡೆಸುತ್ತಿದ್ದಾಳೆ. ಅವಳ ದೋಸೆ, ಆ ಚಟ್ನಿ, ಅದರ ಘಮ, ಅವಳ ಬೆವರ ವಾಸನೆ-ಎಲ್ಲವೂ ಬೆಸ್ಟು ಬೆಸ್ಟು. ಇದನ್ನೆಲ್ಲ ನೋಡಿ ನಮ್ಮ ಇಡ್ಲಿ ಗಾತ್ರದ ಮಯ್ಯಾ ಮಾಮ ಪಾಠ ಕಲಿಯಬೇಕು..." ಎಂದು ಬರೆಯಲಿಕ್ಕೆ ನಾನೇನು ಸಗಣಿ ಸ್ವಾಮಿಯ ಗಿಂಡಿ ಮಾಣಿಯೇ? ಅಫಘನಿಸ್ತಾನದ ಯಾತ್ರೆ ಮುಗಿಸಿ ಬಂದವನು ‘ಮುಸ್ಲಿಂ’ ಎಂಬ ಪುಸ್ತಕ ಬರೆದೆ. ಅದನ್ನು ಗಿಂಡಿ ಮಾಣಿ ಒಮ್ಮೆ ಓದಿದರೂ ಸಾಕು. ಬರಹವೆಂದರೆ ಏನೆಂಬುದು ಅರ್ಥವಾದೀತು.

ಬರೆಯುವವನು ಒಂದು subject ಅಂತ ಆಯ್ದುಕೊಳ್ಳುತ್ತಾನೆ. ಮೊದಲಿಗೆ ಒಂದು ಅಸ್ಪಷ್ಟ frame ಮಾತ್ರ ಮೂಡುತ್ತದೆ. ಸಟಕ್ಕನೆ ಕುಳಿತು ಬರೀ ಬಾರದು. ರೂಪುಗೊಂಡ ಕಸುಗಾಯಿಯಂಥ subjectನ ‘ಅಡ’ ಹಾಕಬೇಕು. ಬತ್ತದ ಹುಲ್ಲಿನಲ್ಲಿ ಮಾವಿನ ಕಾಯಿ ‘ಅಡ’ ಹಾಕುತ್ತಾರಲ್ಲ? ಹಾಗೆ. ಅದು ಮಾಗಿ, ಹಣ್ಣಾಗಿ ಮನೆ ತುಂಬ ಘಮ್ಮೆನ್ನತೊಡಗುತ್ತದಲ್ಲ? ಅದು eating time. ಗಂಟೆ ಪೂಜಾರಿಯಂಥ ಭಟ್ಟನಿಗೆ ಇದೆಲ್ಲ ತಿಳಿದೀತಾ?

-ಬೆಳಗೆರೆ

Feedback on this article

Fields marked (*) are compulsory

Name *  
E-Mail Address *  
Comments *  
Enter the code as it is shown:*  
 
Read Archieves of 14 December, 2015
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.
Privacy Policy

My Books